21 ಅವತ್ತಿಂದ ಯೇಸು ಶಿಷ್ಯರಿಗೆ ‘ನಾನು ಯೆರೂಸಲೇಮಿಗೆ ಹೋಗಿ ಅಧಿಕಾರಿಗಳಿಂದ ಮುಖ್ಯ ಪುರೋಹಿತರಿಂದ ಪಂಡಿತರಿಂದ ತುಂಬ ಕಷ್ಟ ಅನುಭವಿಸಿ ಸಾಯಬೇಕಾಗುತ್ತೆ. ಆದ್ರೆ ಮೂರನೇ ದಿನ ಮತ್ತೆ ಬದುಕಿ ಬರ್ತಿನಿ’+ ಅಂತ ಹೇಳ್ತಿದ್ದನು.
22 ಯೇಸು ಮತ್ತು ಶಿಷ್ಯರು ಗಲಿಲಾಯಕ್ಕೆ ಬಂದಾಗ ಯೇಸು “ಮನುಷ್ಯಕುಮಾರನಿಗೆ ಮೋಸ ಮಾಡಿ ಶತ್ರುಗಳ ಕೈಗೆ ಒಪ್ಪಿಸ್ತಾರೆ.+23 ಅವರು ಅವನನ್ನ ಕೊಲ್ತಾರೆ. ಆದ್ರೆ ಮೂರನೇ ದಿನ ಅವನು ಬದುಕಿ ಬರ್ತಾನೆ”+ ಅಂದನು. ಇದನ್ನ ಕೇಳಿ ಶಿಷ್ಯರಿಗೆ ತುಂಬ ಬೇಜಾರಾಯ್ತು.
31 ಅಷ್ಟೇ ಅಲ್ಲ ಮನುಷ್ಯಕುಮಾರ ತುಂಬ ಕಷ್ಟಪಡಬೇಕಾಗುತ್ತೆ. ಅಧಿಕಾರಿಗಳು, ಮುಖ್ಯ ಪುರೋಹಿತರು, ಪಂಡಿತರು ಅವನನ್ನ ಒಪ್ಕೊಳ್ಳದೆ ಕೊಂದುಹಾಕ್ತಾರೆ.+ ಮೂರು ದಿನ ಆದಮೇಲೆ ಮತ್ತೆ ಬದುಕಿ ಬರ್ತಾನೆ ಅಂತ ಶಿಷ್ಯರಿಗೆ ಕಲಿಸೋಕೆ ಶುರುಮಾಡಿದನು.+
44 “ಈ ಮಾತನ್ನ ಚೆನ್ನಾಗಿ ಕೇಳಿಸ್ಕೊಂಡು ನೆನಪಿಟ್ಕೊಳ್ಳಿ. ಮನುಷ್ಯಕುಮಾರನಿಗೆ ಮೋಸ ಮಾಡಿ ಶತ್ರುಗಳ ಕೈಗೆ ಒಪ್ಪಿಸ್ತಾರೆ”+ ಅಂದನು. 45 ಆದ್ರೆ ಅವ್ರಿಗೆ ಅದು ಅರ್ಥ ಆಗಲಿಲ್ಲ. ನಿಜ ಹೇಳಬೇಕಂದ್ರೆ ಅವ್ರಿಗೆ ಅರ್ಥ ಆಗದ ಹಾಗೆ ಆ ಮಾತನ್ನ ರಹಸ್ಯವಾಗಿ ಇಡಲಾಗಿತ್ತು. ಅವರು ಸಹ ಇದ್ರ ಬಗ್ಗೆ ಆತನ ಹತ್ರ ಕೇಳೋಕೆ ಭಯಪಟ್ರು.