-
ಮತ್ತಾಯ 21:33-41ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
33 ಇನ್ನೊಂದು ಉದಾಹರಣೆ ಹೇಳ್ತೀನಿ ಕೇಳಿ: ಒಬ್ಬ ಯಜಮಾನ ದ್ರಾಕ್ಷಿ ತೋಟ ಮಾಡಿ+ ಸುತ್ತಲೂ ಬೇಲಿ ಹಾಕಿಸಿದ. ದ್ರಾಕ್ಷಾರಸ ತೆಗೆಯೋಕೆ ದೊಡ್ಡ ತೊಟ್ಟಿ ಮಾಡಿಸಿದ. ಕಾವಲುಗೋಪುರ ಕಟ್ಟಿಸಿದ.+ ಆಮೇಲೆ ತೋಟವನ್ನ ರೈತರಿಗೆ ಗುತ್ತಿಗೆಗೆ ಕೊಟ್ಟು ವಿದೇಶಕ್ಕೆ ಹೋದ.+ 34 ದ್ರಾಕ್ಷಿಹಣ್ಣು ಕೀಳೋ ಸಮಯ ಬಂದಾಗ ಯಜಮಾನ ತನ್ನ ಪಾಲನ್ನ ತಗೊಂಡು ಬರೋಕೆ ಆ ರೈತರ ಹತ್ರ ಸೇವಕರನ್ನ ಕಳಿಸಿದ. 35 ಆ ರೈತರು ಆ ಸೇವಕರನ್ನ ಹಿಡ್ಕೊಂಡು ಒಬ್ಬನನ್ನ ಹೊಡೆದ್ರು, ಇನ್ನೊಬ್ಬನನ್ನ ಕೊಂದ್ರು, ಮತ್ತೊಬ್ಬನನ್ನ ಕಲ್ಲು ಹೊಡೆದು ಸಾಯಿಸಿದ್ರು.+ 36 ಯಜಮಾನ ಈ ಸಾರಿ ಹೆಚ್ಚು ಸೇವಕರನ್ನ ಕಳ್ಸಿದ. ಅವರನ್ನೂ ಆ ರೈತರು ಬಿಡಲಿಲ್ಲ.+ 37 ಕೊನೆಗೆ ಯಜಮಾನ ‘ಕಡೆಪಕ್ಷ ಅವರು ನನ್ನ ಮಗನಿಗೆ ಗೌರವ ಕೊಡಬಹುದು’ ಅಂದ್ಕೊಂಡು ಮಗನನ್ನ ಅವ್ರ ಹತ್ರ ಕಳಿಸಿದ. 38 ಆದ್ರೆ ಆ ರೈತರು ಅವನನ್ನ ನೋಡಿ ಅವ್ರಲ್ಲೇ ‘ಇವನೇ ವಾರಸುದಾರ.+ ಬನ್ನಿ, ಇವನನ್ನ ಕೊಂದುಹಾಕೋಣ. ಆಗ ಆಸ್ತಿಯೆಲ್ಲಾ ನಮ್ಮದೇ ಆಗುತ್ತೆ’ ಅಂತ ಮಾತಾಡ್ಕೊಂಡ್ರು. 39 ಅವರು ಅವನನ್ನ ಹಿಡ್ಕೊಂಡು ದ್ರಾಕ್ಷಿತೋಟದಿಂದ ಹೊರಗೆ ಎಳ್ಕೊಂಡು ಹೋಗಿ ಕೊಂದುಬಿಟ್ರು.+ 40 ದ್ರಾಕ್ಷಿತೋಟದ ಯಜಮಾನ ಬಂದಾಗ ಆ ರೈತರನ್ನ ಏನು ಮಾಡ್ತಾನೆ?” ಅಂದನು. 41 ಅದಕ್ಕೆ ಅವರು “ಆ ರೈತರು ತುಂಬ ಕೆಟ್ಟವರು. ಹಾಗಾಗಿ ಯಜಮಾನ ಅವ್ರನ್ನ ಸುಮ್ಮನೆ ಬಿಡಲ್ಲ. ಖಂಡಿತ ಕೊಂದುಹಾಕ್ತಾನೆ. ದ್ರಾಕ್ಷಿಹಣ್ಣು ಕೀಳೋ ಸಮಯ ಬಂದಾಗ ತನ್ನ ಪಾಲನ್ನ ಸರಿಯಾಗಿ ಕೊಡೋ ಬೇರೆ ರೈತರ ಕೈಗೆ ದ್ರಾಕ್ಷಿತೋಟ ಕೊಡ್ತಾನೆ” ಅಂದ್ರು.
-
-
ಲೂಕ 20:9-16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಆಮೇಲೆ ಯೇಸು ಜನ್ರಿಗೆ ಈ ಉದಾಹರಣೆ ಹೇಳಿದನು “ಒಬ್ಬ ಯಜಮಾನ ದ್ರಾಕ್ಷಿ ತೋಟ+ ಮಾಡಿದ. ಅದನ್ನ ರೈತರಿಗೆ ಗುತ್ತಿಗೆಗೆ ಕೊಟ್ಟು ವಿದೇಶಕ್ಕೆ ಹೋದ. ಅಲ್ಲೇ ತುಂಬ ಸಮಯದವರೆಗೆ ಇದ್ದ.+ 10 ದ್ರಾಕ್ಷಿಹಣ್ಣು ಕೀಳೋ ಸಮಯ ಬಂದಾಗ ಯಜಮಾನ ತನ್ನ ಪಾಲು ತಗೊಂಡು ಬರೋಕೆ ಸೇವಕನನ್ನ ಆ ರೈತರ ಹತ್ರ ಕಳಿಸಿದ. ರೈತರು ಅವನನ್ನ ಹೊಡೆದು ಬರಿಗೈಯಲ್ಲಿ ಕಳಿಸಿಬಿಟ್ರು.+ 11 ಯಜಮಾನ ಇನ್ನೊಬ್ಬ ಸೇವಕನನ್ನ ಕಳಿಸಿದ. ಅವರು ಅವನಿಗೂ ಹೊಡೆದು ಅವಮಾನಮಾಡಿ ಬರಿಗೈಯಲ್ಲಿ ಕಳಿಸಿಬಿಟ್ರು. 12 ಯಜಮಾನ ಮೂರನೆಯವನನ್ನ ಕಳಿಸಿದ. ಅವನನ್ನೂ ಹೊಡೆದು ಓಡಿಸಿಬಿಟ್ರು. 13 ಆಗ ದ್ರಾಕ್ಷಿ ತೋಟದ ಯಜಮಾನ ‘ನಾನೇನು ಮಾಡಲಿ? ನನ್ನ ಪ್ರೀತಿಯ ಮಗನನ್ನ+ ಕಳಿಸ್ತೀನಿ. ಅವರು ನನ್ನ ಮಗನಿಗೆ ಗೌರವ ಕೊಡಬಹುದು’ ಅಂದ್ಕೊಂಡ. 14 ಆದ್ರೆ ಆ ರೈತರು ಅವನನ್ನ ನೋಡಿ ‘ಇವನೇ ವಾರಸುದಾರ. ಬನ್ನಿ, ಇವನನ್ನ ಕೊಂದು ಹಾಕೋಣ. ಆಗ ಆಸ್ತಿಯೆಲ್ಲಾ ನಮ್ಮದೇ ಆಗುತ್ತೆ’ ಅಂತ ಮಾತಾಡ್ಕೊಂಡ್ರು. 15 ಹಾಗಾಗಿ ಅವನನ್ನ ದ್ರಾಕ್ಷಿ ತೋಟದಿಂದ ಎಳ್ಕೊಂಡು ಹೋಗಿ ಕೊಂದುಬಿಟ್ರು.+ ದ್ರಾಕ್ಷಿ ತೋಟದ ಯಜಮಾನ ಬಂದಾಗ ಆ ರೈತರಿಗೆ ಏನು ಮಾಡ್ತಾನೆ? 16 ಆ ರೈತರನ್ನ ಕೊಂದು ದ್ರಾಕ್ಷಿ ತೋಟವನ್ನ ಬೇರೆಯವ್ರಿಗೆ ಕೊಡ್ತಾನೆ.”
ಜನ ಇದನ್ನ ಕೇಳಿಸ್ಕೊಂಡು “ಹೀಗೆ ಯಾವತ್ತೂ ಆಗಬಾರದು” ಅಂದ್ರು.
-