5ಹಿರಿಯರೇ, ನಾನೂ ನಿಮ್ಮ ತರ ಒಬ್ಬ ಹಿರಿಯ ಆಗಿರೋದ್ರಿಂದ, ಕ್ರಿಸ್ತ ಅನುಭವಿಸಿದ ಕಷ್ಟಗಳನ್ನ ನೋಡಿದ್ರಿಂದ, ಮುಂದೆ ನಿಮ್ಮೆಲ್ಲರಿಗೆ ಸಿಗೋ ಗೌರವದಲ್ಲಿ ನನಗೂ ಪಾಲು ಸಿಗೋದ್ರಿಂದ+ ನಿಮ್ಮ ಹತ್ರ ಒಂದು ವಿಷ್ಯ ಕೇಳ್ಕೊಳ್ತೀನಿ. ಅದೇನಂದ್ರೆ:
16 ನಮ್ಮ ಪ್ರಭು ಯೇಸು ಕ್ರಿಸ್ತನ ಶಕ್ತಿ ಬಗ್ಗೆ, ಆತನ ಸಾನಿಧ್ಯದ ಸಮಯದ ಬಗ್ಗೆ ನಿಮಗೆ ಹೇಳಿದ್ದೆಲ್ಲ ನಾವೇ ಹುಟ್ಟುಹಾಕಿದ ಕಟ್ಟುಕಥೆ ಅಲ್ಲ. ಆತನು ಎಷ್ಟು ಮಹಾನ್ ವ್ಯಕ್ತಿ ಅಂತ ನಾವು ಕಣ್ಣಾರೆ ನೋಡಿದ್ವಿ.+