21 ಹೌದು, ನಾನಿನ್ನೂ ಪ್ರಾರ್ಥನೆ ಮಾಡ್ತಾ ಇರುವಾಗ್ಲೆ ಈ ಮುಂಚೆ ದರ್ಶನದಲ್ಲಿ+ ನನಗೆ ಮನುಷ್ಯನ ರೂಪದಲ್ಲಿ ಕಾಣಿಸ್ಕೊಂಡಿದ್ದ ಗಬ್ರಿಯೇಲ+ ನನ್ನ ಹತ್ರ ಬಂದ. ಆಗ ನನಗೆ ತುಂಬ ಸುಸ್ತಾಗಿತ್ತು. ಅದು ಸುಮಾರು ಸಂಜೆಯ ಉಡುಗೊರೆ ಅರ್ಪಣೆಯ ಸಮಯ ಆಗಿತ್ತು.
26 ಅವಳಿಗೆ ಆರು ತಿಂಗಳಾದಾಗ ದೇವರು ಗಬ್ರಿಯೇಲ+ ದೂತನನ್ನ ಗಲಿಲಾಯದ ನಜರೇತ್ ಪಟ್ಟಣಕ್ಕೆ ಕಳಿಸಿದ. 27 ಅಲ್ಲಿ ಮರಿಯ ಅನ್ನೋ ಕನ್ಯೆ+ ಇದ್ದಳು. ಅವಳಿಗೆ ದಾವೀದ ವಂಶದ ಯೋಸೇಫನ ಜೊತೆ ನಿಶ್ಚಿತಾರ್ಥ ಆಗಿತ್ತು.+