45 ಆಗ ನೀವು ಸ್ವರ್ಗದಲ್ಲಿರೋ ತಂದೆಯ ಮಕ್ಕಳು+ ಅಂತ ತೋರಿಸ್ತೀರ. ಯಾಕಂದ್ರೆ ಆತನು ಕೆಟ್ಟವರ ಮೇಲೂ ಒಳ್ಳೆಯವರ ಮೇಲೂ ಸೂರ್ಯ ಹುಟ್ಟೋ ತರ ಮಾಡ್ತಾನೆ. ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆ ಸುರಿಸ್ತಾನೆ.+
17 ಆದ್ರೆ ಒಳ್ಳೇದನ್ನ ಮಾಡ್ತಾ ತಾನು ಎಂಥವನು ಅಂತ ತೋರಿಸ್ತಾ ಬಂದನು.+ ಹೇಗಂದ್ರೆ, ಆತನು ನಿಮಗೆ ಆಕಾಶದಿಂದ ಮಳೆ ಸುರಿಸಿದನು. ಚೆನ್ನಾಗಿ ಬೆಳೆ ಬರೋ ತರ ಬೇರೆಬೇರೆ ಕಾಲಗಳನ್ನ ಕೊಟ್ಟನು.+ ತೃಪ್ತಿಯಾಗುವಷ್ಟು ಆಹಾರ ಕೊಡ್ತಾ ನಿಮ್ಮ ಮನಸ್ಸನ್ನ ಖುಷಿಪಡಿಸಿದನು.”+