-
ಮತ್ತಾಯ 7:24-27ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
24 ಹಾಗಾಗಿ ನನ್ನ ಈ ಮಾತು ಕೇಳಿ ಅದೇ ತರ ನಡೆಯುವವನು ಬಂಡೆ ಮೇಲೆ ಮನೆ ಕಟ್ಟಿದ ಬುದ್ಧಿವಂತನ ತರ ಇರ್ತಾನೆ.+ 25 ಮಳೆ ಸುರಿತು, ನೆರೆ ಬಂತು, ಗಾಳಿ ಜೋರಾಗಿ ಬೀಸಿತು. ಆದ್ರೆ ಅದು ಕುಸಿಲಿಲ್ಲ. ಯಾಕಂದ್ರೆ ಅಡಿಪಾಯ ಬಂಡೆ ಮೇಲಿತ್ತು. 26 ಆದ್ರೆ ನನ್ನ ಈ ಮಾತು ಕೇಳಿ ಅದ್ರ ತರ ನಡೆಯದವನು ಮರಳಿನ ಮೇಲೆ ಮನೆ ಕಟ್ಟಿದ ಮೂರ್ಖನ ತರ ಇರ್ತಾನೆ.+ 27 ಮಳೆ ಸುರಿತು, ನೆರೆ ಬಂತು, ಗಾಳಿ ಜೋರಾಗಿ ಬೀಸಿತು.+ ಆ ಮನೆ ಕುಸಿದು ನೆಲಸಮ ಆಯ್ತು.”
-