-
1 ಪೂರ್ವಕಾಲವೃತ್ತಾಂತ 24:19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ಈ ಲೇವಿಯರು ತಮಗೆ ಕೊಟ್ಟ ಕ್ರಮದಲ್ಲೇ ಬಂದು ಯೆಹೋವನ ಆಲಯದಲ್ಲಿ ಸೇವೆ ಮಾಡ್ತಿದ್ರು.+ ಅವರ ಪೂರ್ವಜನಾದ ಆರೋನ ಮಾಡಿದ್ದ ಏರ್ಪಾಡಿನ ಪ್ರಕಾರ ಅಂದ್ರೆ ಇಸ್ರಾಯೇಲ್ ದೇವರಾದ ಯೆಹೋವ ಆರೋನನಿಗೆ ಹೇಳಿದ ಹಾಗೇ ಅವರು ಸೇವೆ ಮಾಡಿದ್ರು.
-
-
2 ಪೂರ್ವಕಾಲವೃತ್ತಾಂತ 8:14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ಅಷ್ಟೇ ಅಲ್ಲ ಅವನು ತನ್ನ ಅಪ್ಪ ದಾವೀದ ಕೊಟ್ಟ ನಿಯಮದ ಪ್ರಕಾರ ಪುರೋಹಿತರ ಸೇವೆಗಾಗಿ ಬೇರೆಬೇರೆ ದಳಗಳನ್ನ+ ನೇಮಿಸಿದ. ಪ್ರತಿದಿನದ ಪದ್ಧತಿ ಪ್ರಕಾರ ದೇವರನ್ನ ಹೊಗಳೋಕೆ+ ಮತ್ತು ಪುರೋಹಿತರ ಮುಂದೆ ಸೇವೆ ಮಾಡೋಕೆ ಲೇವಿಯರಿಗೆ ಅವರವರ ಕೆಲಸಗಳನ್ನ ವಹಿಸಿಕೊಟ್ಟ. ಬಾಗಿಲು ಕಾಯೋರನ್ನ ಅವರವರ ದಳಗಳ+ ಪ್ರಕಾರ ಬೇರೆಬೇರೆ ಬಾಗಿಲ ಹತ್ರ ನೇಮಿಸಿದ. ಯಾಕಂದ್ರೆ ಇದು ಸತ್ಯ ದೇವರ ಸೇವಕ ದಾವೀದನ ಆಜ್ಞೆ ಆಗಿತ್ತು.
-
-
2 ಪೂರ್ವಕಾಲವೃತ್ತಾಂತ 31:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಹಿಜ್ಕೀಯ ಪುರೋಹಿತರನ್ನ ಮತ್ತು ಲೇವಿಯರನ್ನ ಅವ್ರವ್ರ ದಳಗಳ+ ಪ್ರಕಾರ ಸೇವೆಗಾಗಿ ನೇಮಿಸಿದ. ಪ್ರತಿಯೊಬ್ಬ ಪುರೋಹಿತನಿಗೂ ಲೇವಿಗೂ ನೇಮಿಸಲಾಗಿದ್ದ ಕೆಲಸವನ್ನ ಅವ್ರಿಗೆ ಒಪ್ಪಿಸಲಾಯ್ತು.+ ಅವ್ರ ಕೆಲಸ ಏನಾಗಿತ್ತಂದ್ರೆ, ಸರ್ವಾಂಗಹೋಮ ಬಲಿಗಳನ್ನ, ಸಮಾಧಾನ ಬಲಿಗಳನ್ನ ಅರ್ಪಿಸೋದು, ಆಲಯದಲ್ಲಿ ಸೇವೆಮಾಡೋದು ಮತ್ತು ಯೆಹೋವನ ಆಲಯದ ಅಂಗಳಗಳ* ಬಾಗಿಲುಗಳ ಹತ್ರ ದೇವರಿಗೆ ಕೃತಜ್ಞತೆಗಳನ್ನ ಹೇಳೋದು ಮತ್ತು ಆತನಿಗೆ ಸ್ತುತಿ ಸಲ್ಲಿಸೋದು.+
-