15 ಆಮೇಲೆ ಯೇಸು ಯೆರೂಸಲೇಮಿಗೆ ಬಂದನು. ಆಲಯಕ್ಕೆ ಹೋಗಿ ಅಲ್ಲಿದ್ದ ವ್ಯಾಪಾರಿಗಳನ್ನ, ಗಿರಾಕಿಗಳನ್ನ ಹೊರಗೆ ಓಡಿಸಿದನು. ಹಣ ಬದಲಾಯಿಸ್ತಿದ್ದ ಜನ್ರ ಮೇಜುಗಳನ್ನ, ಪಾರಿವಾಳ ಮಾರ್ತಿದ್ದ ಜನ್ರ ಕುರ್ಚಿಗಳನ್ನ ಎತ್ತಿ ಬಿಸಾಡಿದನು.+ 16 ದೇವಾಲಯದ ಒಳಗಿಂದ ವಸ್ತುಗಳನ್ನ ಹೊತ್ಕೊಂಡು ಹೋಗೋಕೆ ಯಾರಿಗೂ ಆತನು ಬಿಡಲಿಲ್ಲ.