12 ಯಾರೆಲ್ಲ ಆತನನ್ನ ಒಪ್ಪಿಕೊಂಡ್ರೋ ಅವ್ರಿಗೆಲ್ಲ ಆತನು ದೇವರ ಮಕ್ಕಳಾಗೋ ಅಧಿಕಾರ ಕೊಟ್ಟನು.+ ಯಾಕಂದ್ರೆ ಅವರು ಆತನ ಹೆಸ್ರಲ್ಲಿ ನಂಬಿಕೆ ಇಟ್ರು.+13 ಅವರು ರಕ್ತದಿಂದ, ಹೆತ್ತವರ ಆಸೆಯಿಂದ, ತಂದೆಯ ಇಷ್ಟದಿಂದ ಹುಟ್ಟಲಿಲ್ಲ. ದೇವರ ಇಷ್ಟದಿಂದ ಹುಟ್ಟಿದ್ರು.+
3 ನಮ್ಮ ಪ್ರಭು ಯೇಸು ಕ್ರಿಸ್ತನ ದೇವರು ಮತ್ತು ತಂದೆ ಆಗಿರೋ ಆತನಿಗೆ ಹೊಗಳಿಕೆ ಸಿಗ್ಲಿ. ದೇವರು ನಮ್ಮ ಕಡೆ ಮಹಾ ಕರುಣೆ ತೋರಿಸಿದ್ದಾನೆ. ಯೇಸು ಕ್ರಿಸ್ತನಿಗೆ ಮತ್ತೆ ಜೀವ ಕೊಟ್ಟು+ ನಮಗೆ ಒಂದು ಹೊಸ ಬದುಕು+ ಕೊಟ್ಟಿದ್ದಾನೆ. ಇದ್ರಿಂದ ನಮಗೊಂದು ನಿರೀಕ್ಷೆ+ ಇದೆ.