-
ಯಾಜಕಕಾಂಡ 11:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಮೆಲುಕು ಹಾಕಿದ್ರೂ ಕಾಲಿನ ಗೊರಸು ಸೀಳಿರದ ಪ್ರಾಣಿಯನ್ನ ಅಥವಾ ಕಾಲಿನ ಗೊರಸು ಸೀಳಿದ್ರೂ ಮೆಲುಕು ಹಾಕದೆ ಇರೋ ಪ್ರಾಣಿಯನ್ನ ತಿನ್ನಬಾರದು. ಒಂಟೆ ಮೆಲುಕು ಹಾಕುತ್ತೆ, ಆದ್ರೆ ಕಾಲಿನ ಗೊರಸು ಸೀಳಿರಲ್ಲ. ಹಾಗಾಗಿ ಅದು ನಿಮಗೆ ಅಶುದ್ಧ.+
-
-
ಯಾಜಕಕಾಂಡ 11:13-20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ನೀವು ತಿನ್ನಬಾರದ ಮತ್ತು ಅಶುದ್ಧವಾಗಿ ನೋಡಬೇಕಾದ ಪಕ್ಷಿಗಳು ಯಾವುದಂದ್ರೆ ಹದ್ದು,+ ಕಡಲ ಗಿಡುಗ, ಕಪ್ಪು ರಣಹದ್ದು,+ 14 ಕೆಂಪು ಗಿಡುಗ, ಎಲ್ಲ ಜಾತಿಯ ಕಪ್ಪು ಗಿಡುಗಗಳು, 15 ಎಲ್ಲ ಜಾತಿಯ ಕಾಗೆಗಳು, 16 ಉಷ್ಟ್ರಪಕ್ಷಿ, ಗೂಬೆ, ಕಡಲ ಹಕ್ಕಿ, ಎಲ್ಲ ಜಾತಿಯ ಗಿಡುಗಗಳು, 17 ಚಿಕ್ಕ ಗೂಬೆ, ನೀರುಕಾಗೆ, ಉದ್ದ ಕಿವಿಯ ಗೂಬೆ, 18 ಹಂಸ, ನೇರೆಹಕ್ಕಿ,* ರಣಹದ್ದು, 19 ಕೊಕ್ಕರೆ, ಎಲ್ಲ ಜಾತಿಯ ಕ್ರೌಂಚ, ಚಂದ್ರಮುಕುಟ ಹಕ್ಕಿ ಮತ್ತು ಬಾವಲಿ. 20 ರೆಕ್ಕೆ ಇದ್ದು ನಾಲ್ಕು ಕಾಲಿಂದ ಹರಿದಾಡೋ ಗುಂಪುಗುಂಪಾಗಿರೋ ಎಲ್ಲ ಕೀಟಗಳು ನಿಮಗೆ ಅಶುದ್ಧ.
-
-
ಧರ್ಮೋಪದೇಶಕಾಂಡ 14:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಅಸಹ್ಯವಾದ ಯಾವುದನ್ನೂ ನೀವು ತಿನ್ನಬಾರದು.+
-
-
ಧರ್ಮೋಪದೇಶಕಾಂಡ 14:19ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
19 ರೆಕ್ಕೆ ಇರೋ ಗುಂಪು ಗುಂಪಾಗಿರೋ ಕೀಟಗಳೂ ನಿಮಗೆ ಅಶುದ್ಧ, ಅದನ್ನ ತಿನ್ನಬಾರದು.
-