12 ಆದ್ರೆ ಫಿಲಿಪ್ಪ ಅವ್ರಿಗೆ ದೇವ್ರ ಆಳ್ವಿಕೆ+ ಬಗ್ಗೆ, ಯೇಸು ಕ್ರಿಸ್ತನ ಬಗ್ಗೆ ಸಿಹಿಸುದ್ದಿ ಹೇಳಿದ ಮೇಲೆ ಅವರು ಅವನನ್ನ ನಂಬಿ ದೀಕ್ಷಾಸ್ನಾನ ಮಾಡಿಸ್ಕೊಳ್ಳೋಕೆ ಆರಂಭಿಸಿದ್ರು.+ ಅವ್ರಲ್ಲಿ ಸ್ತ್ರೀಯರು ಪುರುಷರು ಇದ್ರು.
8 ಸಭಾಮಂದಿರದ ಅಧಿಕಾರಿ ಕ್ರಿಸ್ಪ+ ಮತ್ತು ಅವನ ಕುಟುಂಬದವರು ಯೇಸು ಕ್ರಿಸ್ತನ ಶಿಷ್ಯರಾದ್ರು. ಕೊರಿಂಥದಲ್ಲಿದ್ದ ತುಂಬ ಜನ್ರೂ ಸಿಹಿಸುದ್ದಿ ಕೇಳಿಸ್ಕೊಂಡು ನಂಬಿ ದೀಕ್ಷಾಸ್ನಾನ ತಗೊಂಡ್ರು.