6 ಆಗ ಸ್ತ್ರೀ ಆ ಮರದ ಹಣ್ಣು ನೋಡಿದಳು. ಆಗ ಅವಳಿಗೆ ಆ ಹಣ್ಣು ತಿನ್ನೋಕೆ ಚೆನ್ನಾಗಿದೆ ಅಂತನಿಸ್ತು. ಅದು ಅವಳ ಕಣ್ಣಿಗೆ ಆಕರ್ಷಕವಾಗಿ, ಸುಂದರವಾಗಿ ಕಾಣಿಸ್ತು. ಹಾಗಾಗಿ ಅವಳು ಆ ಮರದ ಹಣ್ಣು ಕಿತ್ತು ತಿಂದಳು.+ ಗಂಡ ಬಂದ ಮೇಲೆ ಅವನಿಗೂ ಕೊಟ್ಟಳು. ಅವನೂ ತಿಂದ.+
19 ಹೊಟ್ಟೆಪಾಡಿಗಾಗಿ ಇಡೀ ಜೀವನ ಬೆವರು ಸುರಿಸಿ ದುಡಿಬೇಕು. ಕೊನೆಗೆ ನೀನು ಮಣ್ಣಿಗೆ ಹೋಗ್ತಿಯ.+ ಯಾಕಂದ್ರೆ ನಿನ್ನನ್ನ ಮಾಡಿದ್ದು ಮಣ್ಣಿಂದಾನೇ. ನೀನು ಮಣ್ಣೇ, ಮತ್ತೆ ಮಣ್ಣಿಗೇ ಹೋಗ್ತಿಯ” ಅಂದನು.+