32 ಆದ್ರೆ ನಾನು ನಿಮಗೆ ಹೇಳ್ತೀನಿ, ಲೈಂಗಿಕ ಅನೈತಿಕತೆ ಕಾರಣ ಅಲ್ಲದೆ ಬೇರೆ ಯಾವ ಕಾರಣಕ್ಕಾದ್ರೂ ಹೆಂಡತಿಗೆ ವಿಚ್ಛೇದನ ಕೊಟ್ರೆ ಅವನು ಅವಳನ್ನ ವ್ಯಭಿಚಾರ ಮಾಡೋ ಅಪಾಯಕ್ಕೆ ತಳ್ಳುತ್ತಾನೆ. ಅಷ್ಟೇ ಅಲ್ಲ ಈ ತರ ವಿಚ್ಛೇದನ ಆಗಿರೋ ಸ್ತ್ರೀಯನ್ನ ಮದುವೆ ಆಗುವವನು ಸಹ ವ್ಯಭಿಚಾರಿ ಆಗ್ತಾನೆ.+
9 ಲೈಂಗಿಕ ಅನೈತಿಕತೆ* ಕಾರಣ ಬಿಟ್ಟು ಬೇರೆ ಯಾವುದೇ ಕಾರಣಕ್ಕೆ ಹೆಂಡತಿಗೆ ವಿಚ್ಛೇದನ ಕೊಟ್ಟು ಇನ್ನೊಬ್ಬಳನ್ನ ಮದುವೆ ಆಗುವವನು ವ್ಯಭಿಚಾರಿ ಆಗಿದ್ದಾನೆ ಅಂತ ನಿಮಗೆ ಹೇಳ್ತೀನಿ”+ ಅಂದನು.
11 ಆತನು “ಹೆಂಡತಿಗೆ ವಿಚ್ಛೇದನ ಕೊಟ್ಟು ಇನ್ನೊಬ್ಬಳನ್ನ ಮದುವೆ ಆಗುವವನು ವ್ಯಭಿಚಾರಿ ಆಗಿದ್ದಾನೆ.+ ಹೀಗೆ ಮೊದಲ ಹೆಂಡತಿಗೆ ದ್ರೋಹ ಮಾಡ್ತಾನೆ. 12 ಅದೇ ತರ ಹೆಂಡತಿ ತನ್ನ ಗಂಡನಿಗೆ ವಿಚ್ಛೇದನ ಕೊಟ್ಟು ಇನ್ನೊಬ್ಬನನ್ನ ಮದುವೆ ಆದ್ರೆ ಅವಳು ವ್ಯಭಿಚಾರ ಮಾಡಿದ ಹಾಗೆ”+ ಅಂದನು.