25 ಕ್ರಿಸ್ತನ ರಕ್ತದಲ್ಲಿ+ ನಂಬಿಕೆ ಇಟ್ಟು ಮನುಷ್ಯರು ತನ್ನ ಜೊತೆ ಸಮಾಧಾನ ಮಾಡ್ಕೊಬೇಕು ಅಂತ ದೇವರು ಕ್ರಿಸ್ತನನ್ನ ಪ್ರಾಯಶ್ಚಿತ್ತ ಬಲಿಯಾಗಿ ಕೊಟ್ಟನು.+ ದೇವರು ತನ್ನ ನೀತಿಯನ್ನ ತೋರಿಸೋಕೆ ಈ ಏರ್ಪಾಡು ಮಾಡಿದನು. ಯಾಕಂದ್ರೆ ಹಿಂದಿನ ಕಾಲದಲ್ಲಿ ಆತನು ತಾಳ್ಮೆ ತೋರಿಸ್ತಾ ಜನ ಮಾಡಿದ ಪಾಪಗಳನ್ನ ಕ್ಷಮಿಸ್ತಿದ್ದನು.