24 ಅದೇ ಸಮಯದಲ್ಲಿ ಯಾರು ದೊಡ್ಡವರು ಅನ್ನೋ ವಿಷ್ಯದಲ್ಲಿ ಶಿಷ್ಯರ ಮಧ್ಯ ದೊಡ್ಡ ಜಗಳನೂ ಆಯ್ತು.+ 25 ಆಗ ಯೇಸು “ದೇಶಗಳನ್ನ ಆಳೋ ರಾಜರು ಅಧಿಕಾರ ಚಲಾಯಿಸ್ತಾರೆ, ಅಧಿಕಾರ ಇರೋರನ್ನ ಜನ ‘ಪ್ರಜಾಸೇವಕರು’+ ಅಂತ ಕರಿತಾರೆ. 26 ಆದ್ರೆ ನೀವು ಅವ್ರ ತರ ಇರಬಾರದು.+ ನಿಮ್ಮಲ್ಲಿ ದೊಡ್ಡವರು ಎಲ್ರಿಗಿಂತ ಚಿಕ್ಕವರಾಗಿ+ ಇರಬೇಕು. ಮೇಲ್ವಿಚಾರಕರು ಬೇರೆಯವರ ಸೇವೆ ಮಾಡಬೇಕು.