3 ಸೌಲ ಪ್ರಯಾಣ ಮಾಡ್ತಾ ದಮಸ್ಕದ ಹತ್ರ ಬಂದಾಗ ಇದ್ದಕ್ಕಿದ್ದ ಹಾಗೆ ಆಕಾಶದಿಂದ ಒಂದು ಬೆಳಕು ಅವನ ಸುತ್ತ ಮಿಂಚಿತು.+ 4 ಅವನು ನೆಲಕ್ಕೆ ಬಿದ್ದುಬಿಟ್ಟ. “ಸೌಲ, ಸೌಲ, ನನ್ನನ್ನ ಯಾಕೆ ಹಿಂಸಿಸ್ತಿದ್ದೀಯಾ?” ಅನ್ನೋ ಧ್ವನಿಯನ್ನ ಅವನು ಕೇಳಿಸ್ಕೊಂಡ. 5 ಆಗ ಸೌಲ “ಪ್ರಭು, ನೀನು ಯಾರು?” ಅಂತ ಕೇಳಿದ. ಅದಕ್ಕೆ ಆತನು “ನೀನು ಹಿಂಸೆ ಕೊಡ್ತಿರೋ+ ಯೇಸುನೇ+ ನಾನು.