23 ಹಾಗಾಗಿ ನೀವು ನಂಬಿಕೆಯನ್ನ ಬಿಟ್ಟುಬಿಡಬೇಡಿ,+ ನಂಬಿಕೆಯ ಅಡಿಪಾಯದ ಮೇಲೆ ದೃಢವಾಗಿ,+ ಕದಲದೆ ನಿಲ್ಲಿ.+ ನೀವು ಕೇಳಿಸ್ಕೊಂಡ ಸಿಹಿಸುದ್ದಿಯಿಂದ ಸಿಕ್ಕಿದ ನಿರೀಕ್ಷೆಯನ್ನ ಬಿಟ್ಟುಬಿಡಬೇಡಿ. ಆ ಸುದ್ದಿ ಭೂಮಿಯಲ್ಲೆಲ್ಲ ಮುಟ್ಟಿದೆ.+ ಆ ಸುದ್ದಿ ಸಾರೋಕೆ ಅಂತಾನೇ ಪೌಲನಾದ ನನ್ನನ್ನ ನೇಮಿಸಲಾಗಿದೆ.+
17 ಹಾಗಾಗಿ ಪ್ರೀತಿಯ ಸಹೋದರ ಸಹೋದರಿಯರೇ, ಈ ವಿಷ್ಯಗಳನ್ನ ನೀವು ಮೊದ್ಲೇ ತಿಳ್ಕೊಂಡಿದ್ದೀರ. ಅದಕ್ಕೇ ಅವ್ರ ಸುಳ್ಳು ಬೋಧನೆಗಳ ಹಿಂದೆ ಹೋಗಿ ಕೆಟ್ಟ ಜನ್ರ ತರ ದಾರಿ ತಪ್ಪಬೇಡಿ. ಅವ್ರ ಜೊತೆ ಹೋದ್ರೆ ಅವರು ನಿಮ್ಮ ನಂಬಿಕೆಯನ್ನ ಅಲ್ಲಾಡಿಸಿ ಬಿಡ್ತಾರೆ. ಹಾಗಾಗಿ ಎಚ್ಚರವಾಗಿರಿ.+