-
ಅ. ಕಾರ್ಯ 18:26-28ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
26 ಅವನು ಸಭಾಮಂದಿರದಲ್ಲಿ ಧೈರ್ಯವಾಗಿ ಮಾತಾಡೋಕೆ ಶುರುಮಾಡಿದ. ಪ್ರಿಸ್ಕಿಲ್ಲ ಮತ್ತು ಅಕ್ವಿಲ+ ಅವನು ಹೇಳೋದನ್ನ ಕೇಳಿಸ್ಕೊಂಡಾಗ ಅವನನ್ನ ತಮ್ಮ ಜೊತೆ ಕರ್ಕೊಂಡು ಹೋಗಿ ದೇವ್ರ ಮಾರ್ಗದ ಬಗ್ಗೆ ಇನ್ನೂ ಸರಿಯಾಗಿ ವಿವರಿಸಿದ್ರು. 27 ಆಮೇಲೆ ಅಪೊಲ್ಲೋಸ ಸಮುದ್ರ ದಾಟಿ ಅಖಾಯಕ್ಕೆ ಹೋಗಬೇಕಂತ ಅಂದ್ಕೊಂಡ. ಹಾಗಾಗಿ ಸಹೋದರರು ಅಲ್ಲಿದ್ದ ಶಿಷ್ಯರಿಗೆ ಪತ್ರ ಬರೆದು ಇವನನ್ನ ಪ್ರೀತಿಯಿಂದ ಸ್ವಾಗತಿಸೋಕೆ ಪ್ರೋತ್ಸಾಹಿಸಿದ್ರು. ಅವನು ಅಲ್ಲಿಗೆ ಹೋದಾಗ ದೇವ್ರ ಅಪಾರ ಕೃಪೆಯಿಂದ ಶಿಷ್ಯರಿಗೆ ತುಂಬ ಸಹಾಯ ಮಾಡಿದ. 28 ಯೇಸುನೇ ಕ್ರಿಸ್ತ ಅಂತ ವಚನಗಳಿಂದ ಸ್ಪಷ್ಟವಾಗಿ ತೋರಿಸಿದ. ಹೀಗೆ ಯೆಹೂದ್ಯರು ಕಲಿಸ್ತಾ ಇರೋದು ತಪ್ಪು ಅಂತ ಎಲ್ರ ಮುಂದೆ ಧೈರ್ಯವಾಗಿ ಮಾತಾಡಿದ.+
-