9 ಅದಕ್ಕೇ ನಿಮ್ಮ ಬಗ್ಗೆ ಕೇಳಿಸ್ಕೊಂಡ ದಿನದಿಂದ ನಿಮಗಾಗಿ ಪ್ರಾರ್ಥನೆ ಮಾಡ್ತಾ ಇದ್ದೀವಿ.+ ನೀವು ದೇವರ ಇಷ್ಟ ಏನು ಅಂತ ಸರಿಯಾಗಿ ತಿಳ್ಕೊಬೇಕು,+ ಎಲ್ಲ ವಿವೇಕವನ್ನ, ದೇವರ ಪವಿತ್ರಶಕ್ತಿಯಿಂದ ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯವನ್ನ ಪಡಿಬೇಕು ಅಂತ ಪ್ರಾರ್ಥಿಸ್ತಾ ಇದ್ದೀವಿ.+
3 ಆ ತರ ಬೇಡೋದು ನಮ್ಮ ರಕ್ಷಕನಾದ ದೇವರ ದೃಷ್ಟಿಯಲ್ಲಿ ಸರಿಯಾಗಿದೆ, ಆತನು ಇದನ್ನ ಮೆಚ್ತಾನೆ.+4 ಎಲ್ಲ ತರದ ಜನ್ರು ರಕ್ಷಣೆ ಪಡಿಬೇಕು,+ ಸತ್ಯದ ಬಗ್ಗೆ ಸರಿಯಾದ ಜ್ಞಾನ ಪಡ್ಕೊಬೇಕು ಅನ್ನೋದೇ ಆತನ ಇಷ್ಟ.