20 ತಿಮೊತಿ, ನಿನಗೆ ಒಪ್ಪಿಸಿರೋದನ್ನ ಕಾಪಾಡ್ಕೊ.+ ಪವಿತ್ರವಾದದ್ದನ್ನ ಕೆಡಿಸೋ ಸುಳ್ಳು ಮಾತುಗಳನ್ನ ಮತ್ತು ತಮಗೆ ತುಂಬ ಜ್ಞಾನ ಇದೆ ಅಂತ ನೆನಸೋ ಜನ್ರ ಯೋಚನೆಗಳನ್ನ ಕೇಳಿಸ್ಕೊಬೇಡ. ಯಾಕಂದ್ರೆ ಅವ್ರ ಆಲೋಚನೆ ಯಾವುದು ನಿಜಾನೋ ಅದಕ್ಕೆ ವಿರುದ್ಧವಾಗಿದೆ.+
14 ಈ ವಿಷ್ಯಗಳನ್ನ ಅವ್ರಿಗೆ ನೆನಪಿಸ್ತಾ ಇರು. ಪದಗಳ ಬಗ್ಗೆ ಜಗಳ ಮಾಡಬಾರದು ಅಂತ ದೇವರ ಮುಂದೆ ಅವ್ರಿಗೆ ಹೇಳು.* ಅಂಥ ಜಗಳದಿಂದ ಕೇಳುವವ್ರಿಗೆ ನಷ್ಟ ಆಗುತ್ತೆ* ಬಿಟ್ರೆ ಪ್ರಯೋಜನ ಅಂತೂ ಆಗಲ್ಲ.