7 ದೇವರ ಮೇಲೆ ತಪ್ಪುಹೊರಿಸೋ ಸುಳ್ಳು ಕಥೆಗಳನ್ನ ಅಂದ್ರೆ ಅಜ್ಜಿ ಕಥೆಗಳ ತರ ಇರೋ ಕಟ್ಟುಕಥೆಗಳನ್ನ ಕೇಳಿಸ್ಕೊಬೇಡ.+ ದೇವರ ಮೇಲೆ ಭಕ್ತಿ ತೋರಿಸೋದನ್ನ ಗುರಿಯಾಗಿ ಇಟ್ಕೊಂಡು ನಿನ್ನನ್ನ ನೀನೇ ತರಬೇತಿ ಮಾಡ್ಕೊ.
20 ತಿಮೊತಿ, ನಿನಗೆ ಒಪ್ಪಿಸಿರೋದನ್ನ ಕಾಪಾಡ್ಕೊ.+ ಪವಿತ್ರವಾದದ್ದನ್ನ ಕೆಡಿಸೋ ಸುಳ್ಳು ಮಾತುಗಳನ್ನ ಮತ್ತು ತಮಗೆ ತುಂಬ ಜ್ಞಾನ ಇದೆ ಅಂತ ನೆನಸೋ ಜನ್ರ ಯೋಚನೆಗಳನ್ನ ಕೇಳಿಸ್ಕೊಬೇಡ. ಯಾಕಂದ್ರೆ ಅವ್ರ ಆಲೋಚನೆ ಯಾವುದು ನಿಜಾನೋ ಅದಕ್ಕೆ ವಿರುದ್ಧವಾಗಿದೆ.+