13 ಸಹೋದರರೇ, ನನಗೆ ಆ ಬಹುಮಾನ ಈಗಾಗ್ಲೇ ಸಿಕ್ಕಿದೆ ಅಂತ ನೆನಸ್ತಿಲ್ಲ. ಆದ್ರೆ ಒಂದು ಮಾತ್ರ ನಿಜ, ನಾನು ಹಿಂದಿನದ್ದನ್ನ ಮರೆತು+ ನನ್ನ ಮುಂದೆ ಇಟ್ಟಿರೋ ವಿಷ್ಯಗಳನ್ನ ಹಿಡಿಯೋಕೆ ಓಡ್ತಿದ್ದೀನಿ.+ 14 ಆ ಬಹುಮಾನ ಪಡಿಯೋಕೆ ನಾನು ತುಂಬ ಶ್ರಮ ಹಾಕ್ತಿದ್ದೀನಿ.+ ದೇವರು ಕ್ರಿಸ್ತ ಯೇಸುವಿನ ಮೂಲಕ ಕರೆದವ್ರಿಗೆ ಕೊಡೋ ಸ್ವರ್ಗದ ಜೀವನನೇ+ ಆ ಬಹುಮಾನ.