12 ಸಹೋದರರೇ, ನಿಮ್ಮಲ್ಲಿ ಯಾರೂ ಜೀವ ಇರೋ ದೇವರಿಂದ ದೂರ ಹೋಗದೆ ಇರೋ ತರ ಹುಷಾರಾಗಿರಿ! ಹಾಗೆ ಹೋದ್ರೆ ನಂಬಿಕೆ ಇಲ್ಲದ ಕೆಟ್ಟ ಹೃದಯ ನಿಮ್ಮಲ್ಲಿ ಬೆಳಿಯುತ್ತೆ.+ 13 “ಇವತ್ತು”+ ಅನ್ನೋ ದಿನ ಇರೋ ತನಕ ನಾವು ಪ್ರತಿದಿನ ಒಬ್ರನ್ನೊಬ್ರು ಪ್ರೋತ್ಸಾಹಿಸ್ತಾ ಇರೋಣ. ಆಗ ನಿಮ್ಮಲ್ಲಿ ಯಾರ ಹೃದಯನೂ ಪಾಪಕ್ಕಿರೋ ಮೋಸದ ಶಕ್ತಿಯಿಂದ ಕಲ್ಲಾಗಲ್ಲ.