3 ಆದ್ರೆ ಯೆಹೋವನೇ, ನೀನು ನನ್ನನ್ನ ಚೆನ್ನಾಗಿ ತಿಳ್ಕೊಂಡಿದ್ದೀಯ,+ ನೀನು ನನ್ನನ್ನ ನೋಡ್ತಿದ್ದೀಯ,
ನನ್ನ ಹೃದಯ ಪರೀಕ್ಷಿಸ್ತಾ ಇದ್ದೀಯ, ನಿನ್ನ ಮೇಲೆ ನನಗೆ ಎಷ್ಟು ಭಕ್ತಿ ಇದೆ ಅಂತ ತಿಳ್ಕೊಂಡಿದ್ದಿಯ.+
ಬಲಿಕೊಡೋಕೆ ತಗೊಂಡು ಹೋಗೋ ಕುರಿಗಳ ತರ ನೀನು ಅವ್ರನ್ನ ಬೇರೆ ಮಾಡು,
ಕೊಲ್ಲೋ ದಿನಕ್ಕಾಗಿ ಅವ್ರನ್ನ ಬೇರೆ ಇಡು.