-
2 ತಿಮೊತಿ 4:7, 8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ನಾನು ಚೆನ್ನಾಗಿ ಹೋರಾಡಿದ್ದೀನಿ,+ ನಾನು ನನ್ನ ಓಟವನ್ನ ಓಡಿ ಮುಗಿಸಿದ್ದೀನಿ,+ ನಾನು ನಂಬಿಕೆಗೆ ತಕ್ಕ ಹಾಗೆ ಜೀವನ ಮಾಡಿದ್ದೀನಿ. 8 ನೀತಿಯಿಂದ ತೀರ್ಪು ಮಾಡೋ ಒಡೆಯ+ ನನಗಾಗಿ ಒಂದು ಕಿರೀಟ ಇಟ್ಟಿದ್ದಾನೆ.+ ಅದು ನೀತಿವಂತರಿಗೆ ಕೊಡೋ ಕಿರೀಟ. ಆತನು ಅದನ್ನ ತೀರ್ಪಿನ ದಿನದಲ್ಲಿ ನನಗೆ ಬಹುಮಾನವಾಗಿ ಕೊಡ್ತಾನೆ.+ ನನಗೆ ಮಾತ್ರ ಅಲ್ಲ ಆತನು ರಾಜನಾಗಿ ಬರೋದನ್ನ ಆಸೆಯಿಂದ ಕಾಯ್ತಾ ಇರೋ ಎಲ್ರಿಗೆ ಅದನ್ನ ಕೊಡ್ತಾನೆ.
-
-
ಪ್ರಕಟನೆ 20:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಆಮೇಲೆ ನಾನು ಸಿಂಹಾಸನಗಳನ್ನ ನೋಡ್ದೆ. ಅದ್ರ ಮೇಲೆ ಕೂತಿದ್ದವ್ರಿಗೆ ದೇವರು ನ್ಯಾಯತೀರ್ಪು ಮಾಡೋ ಅಧಿಕಾರ ಕೊಟ್ಟಿದ್ದ. ಅಷ್ಟೇ ಅಲ್ಲ ಯೇಸು ಬಗ್ಗೆ ಮಾತಾಡಿದ್ದಕ್ಕೆ, ದೇವರ ಬಗ್ಗೆ ಮಾತಾಡಿದ್ದಕ್ಕೆ ಕೊಲೆ* ಆದವ್ರನ್ನ ನೋಡ್ದೆ. ಕಾಡುಪ್ರಾಣಿಯನ್ನ ಅದ್ರ ಮೂರ್ತಿಯನ್ನ ಆರಾಧಿಸದೇ ಇದ್ದವ್ರನ್ನ ಮತ್ತು ತಮ್ಮ ಹಣೆ ಮೇಲೆ, ಕೈ ಮೇಲೆ ಅದ್ರ ಗುರುತು ಹಾಕಿಸ್ಕೊಳ್ಳದೇ ಇದ್ದವ್ರನ್ನೂ ನಾನು ನೋಡ್ದೆ.+ ಅವ್ರಿಗೆ ಮತ್ತೆ ಜೀವ ಸಿಕ್ತು. ಅವರು ಕ್ರಿಸ್ತನ ಜೊತೆ 1,000 ವರ್ಷ ರಾಜರಾಗಿ ಆಳಿದ್ರು.+
-