ನೆಹೆಮೀಯ
7 ಗೋಡೆ ಕಟ್ಟಿಮುಗಿಸಿದ+ ಕೂಡ್ಲೇ ನಾನು ಅದಕ್ಕೆ ಬಾಗಿಲುಗಳನ್ನ ಇಟ್ಟೆ.+ ಬಾಗಿಲು ಕಾಯೋರನ್ನ+ ಗಾಯಕರನ್ನ+ ಲೇವಿಯರನ್ನ+ ನೇಮಿಸಿದೆ. 2 ಆಮೇಲೆ ನನ್ನ ಸಹೋದರ ಹನಾನಿ+ ಜೊತೆ ಕೋಟೆಯ+ ಅಧಿಪತಿಯಾಗಿದ್ದ ಹನನ್ಯನ ಯೆರೂಸಲೇಮಿನ ಮೇಲೆ ಮೇಲ್ವಿಚಾರಕನಾಗಿ ನೇಮಿಸಿದೆ. ಯಾಕಂದ್ರೆ ಹನನ್ಯ ನಂಬಿಗಸ್ತನಾಗಿದ್ದ. ಬೇರೆಯವ್ರಿಗಿಂತ ಅವನಿಗೆ ಸತ್ಯ ದೇವರ ಮೇಲೆ ಜಾಸ್ತಿ ಭಯ ಇತ್ತು.+ 3 ನಾನು ಅವರಿಬ್ರಿಗೆ “ಯೆರೂಸಲೇಮಿನ ಬಾಗಿಲುಗಳನ್ನ ಮಧ್ಯಾಹ್ನದ ಬಿಸಿಲು ಬರೋ ತನಕ ತೆರಿಬಾರದು, ಕಾವಲುಗಾರರು ಇನ್ನೂ ಕಾವಲು ಕಾಯ್ತಾ ಇರುವಾಗ್ಲೇ ಅದ್ರ ಬಾಗಿಲನ್ನ ಮುಚ್ಚಿ ಅದಕ್ಕೆ ಚಿಲಕ ಹಾಕಬೇಕು. ಯೆರೂಸಲೇಮಿನ ಜನ್ರನ್ನ ಕಾವಲುಗಾರರಾಗಿ ಇಡಬೇಕು. ಕೆಲವ್ರನ್ನ ಅವ್ರಿಗೆ ನೇಮಿಸಿದ ಸ್ಥಾನದಲ್ಲಿ, ಬೇರೆಯವ್ರನ್ನ ಅವ್ರವ್ರ ಮನೆ ಮುಂದೆ ನಿಲ್ಲಿಸಬೇಕು” ಅಂದೆ. 4 ಯೆರೂಸಲೇಮ್ ವಿಶಾಲವಾದ ಒಂದು ದೊಡ್ಡ ಪಟ್ಟಣವಾಗಿತ್ತು. ಅಲ್ಲಿ ತುಂಬ ಕಮ್ಮಿ ಜನ್ರಿದ್ರು.+ ಅಷ್ಟೇ ಅಲ್ಲ ಮನೆಗಳೂ ಜಾಸ್ತಿ ಇರಲಿಲ್ಲ.
5 ಆಗ ಪ್ರಧಾನರನ್ನ, ಉಪಾಧಿಪತಿಗಳನ್ನ ಜನ್ರನ್ನ ಸೇರಿಸಿ, ಅವ್ರ ಹೆಸ್ರುಗಳನ್ನ ವಂಶಾವಳಿ ಪಟ್ಟಿಯಲ್ಲಿ ಬರೀಬೇಕು ಅಂತ+ ನನ್ನ ದೇವರು ನನ್ನ ಮನಸ್ಸಿಗೆ* ಹಾಕಿದನು. ಆ ಸಮಯದಲ್ಲಿ ನನಗೆ ವಂಶಾವಳಿ ಪುಸ್ತಕ ಸಿಕ್ತು. ಯೆರೂಸಲೇಮಿಗೆ ಮೊದ್ಲು ಬಂದವ್ರ ಹೆಸ್ರು ಅದ್ರಲ್ಲಿ ಇತ್ತು. ಅದ್ರಲ್ಲಿ ಹೀಗೆ ಬರೆದಿತ್ತು:
6 “ಬಾಬೆಲಿನ ರಾಜ ನೆಬೂಕದ್ನೆಚ್ಚರ+ ಬಾಬೆಲಿಗೆ ಹಿಡ್ಕೊಂಡು ಹೋಗಿದ್ದ+ ಜನ್ರಲ್ಲಿ ಯೆರೂಸಲೇಮಿಗೆ ಮತ್ತು ಯೆಹೂದದ ತಮ್ಮತಮ್ಮ ಪಟ್ಟಣಗಳಿಗೆ ವಾಪಸ್ ಬಂದ ಜನ್ರ ಪಟ್ಟಿ.+ 7 ಇವರು ಜೆರುಬ್ಬಾಬೆಲ್,+ ಯೇಷೂವ,+ ನೆಹೆಮೀಯ, ಅಜರ್ಯ, ರಗಮ್ಯ, ನಹಮಾನೀ, ಮೊರ್ದೆಕೈ, ಬಿಲ್ಷಾನ್, ಮಿಸ್ಪೆರೆತ್, ಬಿಗ್ವೈ, ನೆಹೂಮ್ ಮತ್ತು ಬಾಣ ಅನ್ನೋರ ಜೊತೆ ವಾಪಸ್ ಬಂದ್ರು.
ವಾಪಸ್ ಬಂದ ಇಸ್ರಾಯೇಲ್ ಗಂಡಸ್ರ ಸಂಖ್ಯೆ:+ 8 ಪರೋಷನ ವಂಶದವರು 2,172, 9 ಶೆಫಟ್ಯನ ವಂಶದವರು 372, 10 ಆರಹನ+ ವಂಶದವರು 652, 11 ಪಹತ್-ಮೋವಾಬನ ವಂಶದವರಾದ+ ಯೆಷೂವ ಮತ್ತು ಯೋವಾಬನ ಮನೆತನದವರು+ 2,818, 12 ಏಲಾಮನ ವಂಶದವರು+ 1,254, 13 ಜತ್ತೂನ ವಂಶದವರು 845, 14 ಜಕೈಯ ವಂಶದವರು 760, 15 ಬಿನ್ನೂಯನ ವಂಶದವರು 648, 16 ಬೇಬೈಯ ವಂಶದವರು 628, 17 ಅಜ್ಗಾದನ ವಂಶದವರು 2,322, 18 ಅದೋನೀಕಾಮನ ವಂಶದವರು 667, 19 ಬಿಗ್ವೈಯ ವಂಶದವರು 2,067, 20 ಆದೀನನ ವಂಶದವರು 655, 21 ಹಿಜ್ಕೀಯನ ಮನೆತನಕ್ಕೆ ಸೇರಿದ ಆಟೇರನ ವಂಶದವರು 98, 22 ಹಾಷುಮನ ವಂಶದವರು 328, 23 ಬೇಚೈಯ ವಂಶದವರು 324, 24 ಹಾರೀಫನ ವಂಶದವರು 112, 25 ಗಿಬ್ಯೋನನ+ ವಂಶದವರು 95, 26 ಬೆತ್ಲೆಹೇಮಿನ ಮತ್ತು ನೆಟೋಫದ ಗಂಡಸ್ರು 188, 27 ಅನಾತೋತಿನ+ ಗಂಡಸ್ರು 128, 28 ಬೇತ್-ಅಜ್ಮಾವೇತಿನ ಗಂಡಸ್ರು 42, 29 ಕಿರ್ಯತ್-ಯಾರೀಮಿನ,+ ಕೆಫೀರಾದ ಮತ್ತು ಬೇರೋತಿನ+ ಗಂಡಸ್ರು 743, 30 ರಾಮದ ಮತ್ತು ಗೆಬದ+ ಗಂಡಸ್ರು 621, 31 ಮಿಕ್ಮಾಸಿನ+ ಗಂಡಸ್ರು 122, 32 ಬೆತೆಲ್+ ಮತ್ತು ಆಯಿಯ+ ಗಂಡಸ್ರು 123, 33 ಇನ್ನೊಂದು ನೆಬೋವಿನ ಗಂಡಸ್ರು 52, 34 ಮತ್ತೊಬ್ಬ ಏಲಾಮನ ವಂಶದವರು 1,254, 35 ಹಾರಿಮನ ವಂಶದವರು 320, 36 ಯೆರಿಕೋನ ವಂಶದವರು 345, 37 ಲೋದ್, ಹಾದೀದ್ ಮತ್ತು ಓನೋನ+ ವಂಶದವರು 721, 38 ಸೆನಾಹನ ವಂಶದವರು 3,930.
39 ವಾಪಸ್ ಬಂದ ಪುರೋಹಿತರ ಸಂಖ್ಯೆ:+ ಯೆಷೂವನ ಮನೆತನಕ್ಕೆ ಸೇರಿದ ಯೆದಾಯನ ವಂಶದವರು 973, 40 ಇಮ್ಮೇರನ ವಂಶದವರು 1,052, 41 ಪಷ್ಹೂರನ ವಂಶದವರು+ 1,247, 42 ಹಾರಿಮನ+ ವಂಶದವರು 1,017.
43 ವಾಪಸ್ ಬಂದ ಲೇವಿಯರ ಸಂಖ್ಯೆ ಹೀಗಿತ್ತು:+ ಹೋದೆವನ ಕುಟುಂಬಕ್ಕೆ ಸೇರಿದ ಯೆಷೂವನ, ಕದ್ಮೀಯೇಲನ ವಂಶದವರು+ 74, 44 ಗಾಯಕರಲ್ಲಿ+ ಆಸಾಫನ+ ವಂಶದವರು 148, 45 ಬಾಗಿಲು ಕಾಯೋರಲ್ಲಿ+ ಶಲ್ಲೂಮನ ವಂಶದವರು, ಆಟೇರನ ವಂಶದವರು, ಟಲ್ಮೋನನ ವಂಶದವರು, ಅಕ್ಕೂಬನ+ ವಂಶದವರು, ಹಟೀಟನ ವಂಶದವರು ಮತ್ತು ಶೋಬೈಯ ವಂಶದವರು 138.
46 ಆಲಯದ ಸೇವಕರಲ್ಲಿ*+ ವಾಪಸ್ ಬಂದವರು ಯಾರಂದ್ರೆ: ಜೀಹನ ವಂಶದವರು, ಹಸೂಫನ ವಂಶದವರು, ಟಬ್ಬಾವೋತನ ವಂಶದವರು, 47 ಕೇರೋಸನ ವಂಶದವರು, ಸೀಯನ ವಂಶದವರು, ಪಾದೋನನ ವಂಶದವರು, 48 ಲೆಬಾನನ ವಂಶದವರು, ಹಗಾಬನ ವಂಶದವರು, ಸಲ್ಮೈಯ ವಂಶದವರು, 49 ಹಾನಾನನ ವಂಶದವರು, ಗಿದ್ದೇಲನ ವಂಶದವರು, ಗಹರನ ವಂಶದವರು, 50 ರೆವಾಯನ ವಂಶದವರು, ರೆಚೀನನ ವಂಶದವರು, ನೆಕೋದನ ವಂಶದವರು, 51 ಗಜ್ಜಾಮನ ವಂಶದವರು, ಉಜ್ಜನ ವಂಶದವರು, ಪಾಸೇಹನ ವಂಶದವರು 52 ಬೇಸೈಯ ವಂಶದವರು, ಮೆಯನೀಮನ ವಂಶದವರು, ನೆಫೀಸೀಮನ ವಂಶದವರು, 53 ಬಕ್ಬೂಕನ ವಂಶದವರು, ಹಕ್ಕೂಫನ ವಂಶದವರು, ಹರ್ಹೂರನ ವಂಶದವರು, 54 ಬಚ್ಲಿತನ ವಂಶದವರು, ಮೆಹೀದನ ವಂಶದವರು, ಹರ್ಷನ ವಂಶದವರು, 55 ಬರ್ಕೋಸನ ವಂಶದವರು, ಸಿಸೆರನ ವಂಶದವರು, ತೆಮಹನ ವಂಶದವರು, 56 ನೆಚೀಹನ ವಂಶದವರು, ಹಟೀಫನ ವಂಶದವರು.
57 ಸೊಲೊಮೋನನ ಸೇವಕರಲ್ಲಿ ವಾಪಸ್ ಬಂದ ವಂಶದವರು+ ಯಾರಂದ್ರೆ: ಸೋಟೈಯ ವಂಶದವರು, ಸೋಫೆರೆತನ ವಂಶದವರು, ಪೆರೀದನ ವಂಶದವರು, 58 ಯಾಲನ ವಂಶದವರು, ದರ್ಕೋನನ ವಂಶದವರು, ಗಿದ್ದೇಲನ ವಂಶದವರು, 59 ಶೆಫಟ್ಯನ ವಂಶದವರು, ಹಟ್ಟೀಲನ ವಂಶದವರು, ಪೋಕೆರೆತ್-ಹಚ್ಚೆಬಾಯೀಮನ ವಂಶದವರು, ಆಮೋನನ ವಂಶದವರು. 60 ಆಲಯದ ಎಲ್ಲ ಸೇವಕರು*+ ಮತ್ತು ಸೊಲೊಮೋನನ ಸೇವಕರ ವಂಶದವರು ಸೇರಿ 392.
61 ತೇಲ್-ಮೆಲಹ, ತೇಲ್-ಹರ್ಷ, ಕೆರೂಬ, ಅದ್ದೊನ್ ಮತ್ತು ಇಮ್ಮೇರ ಅನ್ನೋ ಊರುಗಳಿಂದ ಬಂದವ್ರಿಗೆ ತಾವು ಯಾವ ಮನೆತನಕ್ಕೆ ಸೇರಿದವರು, ತಮ್ಮ ಮೂಲ ಯಾವುದು ಅಂತ ಗೊತ್ತಿರಲಿಲ್ಲ. ಹಾಗಾಗಿ ತಾವು ಇಸ್ರಾಯೇಲ್ಯರು ಅಂತ ಅವ್ರಿಂದ ಸಾಬೀತು ಮಾಡೋಕೆ ಆಗಲಿಲ್ಲ. ಅವರು ಯಾರಂದ್ರೆ:+ 62 ದೆಲಾಯನ ವಂಶದವರು, ಟೋಬೀಯ ವಂಶದವರು, ನೆಕೋದನ ವಂಶದವರು 642. 63 ಪುರೋಹಿತರಲ್ಲಿ: ಹಬಯ್ಯನ ವಂಶದವರು, ಹಕ್ಕೋಚನ ವಂಶದವರು,+ ಬರ್ಜಿಲೈಯ ವಂಶದವರು. ಈ ಬರ್ಜಿಲೈ ಗಿಲ್ಯಾದ್ಯನಾಗಿದ್ದ ಬರ್ಜಿಲೈಯ+ ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನ ಮದುವೆಯಾಗಿದ್ದ. ಅವನ ಹೆಸ್ರನ್ನೇ ಇವನೂ ಇಟ್ಕೊಂಡಿದ್ದ. 64 ವಂಶಾವಳಿ ಪಟ್ಟಿಯಲ್ಲಿ ಇವರ ಹೆಸ್ರುಗಳನ್ನ ಹುಡುಕಿದ್ರೂ ಸಿಗದಿದ್ದ ಕಾರಣ ಪುರೋಹಿತ ಸೇವೆಗೆ ಇವರು ಅರ್ಹರಾಗಿರಲಿಲ್ಲ.*+ 65 ಊರೀಮ್ ಮತ್ತು ತುಮ್ಮೀಮಿನ+ ಸಹಾಯದಿಂದ ಈ ವಿಷ್ಯದ ಬಗ್ಗೆ ವಿಚಾರಿಸೋ ಒಬ್ಬ ಪುರೋಹಿತ ಬರೋ ತನಕ ಇವ್ರಲ್ಲಿ ಯಾರೂ ಅತಿ ಪವಿತ್ರವಾದವುಗಳಲ್ಲಿ+ ಯಾವುದನ್ನೂ ತಿನ್ನಬಾರದಂತ ರಾಜ್ಯಪಾಲ*+ ಹೇಳಿದ.
66 ಇಡೀ ಸಭೆಯ ಒಟ್ಟು ಸಂಖ್ಯೆ 42,360.+ 67 ಇದಲ್ಲದೆ ಅವ್ರ ಜೊತೆ 7,337 ದಾಸದಾಸಿಯರು,+ 245 ಗಾಯಕ ಗಾಯಕಿಯರು ಇದ್ರು.+ 68 ಅವ್ರ ಹತ್ರ 736 ಕುದುರೆ, 245 ಹೇಸರಗತ್ತೆ, 69 435 ಒಂಟೆ, 6,720 ಕತ್ತೆ ಇತ್ತು.
70 ಕುಲದ ಮುಖ್ಯಸ್ಥರಲ್ಲಿ ಕೆಲವರು ಕೆಲಸಕ್ಕಾಗಿ ಕಾಣಿಕೆ ಕೊಟ್ರು.+ ರಾಜ್ಯಪಾಲ* ಖಜಾನೆಗೆ 1,000 ಬಂಗಾರದ ದ್ರಾಕ್ಮಾಗಳನ್ನ,* 50 ಬಟ್ಟಲುಗಳನ್ನ 530 ಪುರೋಹಿತರ ಬಟ್ಟೆಗಳನ್ನ+ ಕೊಟ್ಟ. 71 ಕುಲದ ಮುಖ್ಯಸ್ಥರಲ್ಲಿ ಕೆಲವ್ರು 20,000 ಬಂಗಾರದ ದ್ರಾಕ್ಮಾಗಳನ್ನ 2,200 ಬೆಳ್ಳಿಯ ಮೈನಾಗಳನ್ನ* ಕಟ್ಟೋ ಕೆಲ್ಸದ ಖಜಾನೆಗೆ ಕೊಟ್ರು. 72 ಉಳಿದವ್ರು 20,000 ಬಂಗಾರದ ದ್ರಾಕ್ಮಾಗಳನ್ನ, 2,000 ಬೆಳ್ಳಿಯ ಮೈನಾಗಳನ್ನ* ಮತ್ತು 67 ಪುರೋಹಿತರ ಬಟ್ಟೆಗಳನ್ನ ಕೊಟ್ರು.
73 ಪುರೋಹಿತರು, ಲೇವಿಯರು, ಬಾಗಿಲು ಕಾಯೋರು, ಗಾಯಕರು,+ ಕೆಲವು ಜನ್ರು, ದೇವಾಲಯದ ಸೇವಕರು* ಮತ್ತು ಉಳಿದ ಇಸ್ರಾಯೇಲ್ಯರು* ತಮ್ಮತಮ್ಮ ಪಟ್ಟಣಗಳಲ್ಲಿ ವಾಸ ಮಾಡಿದ್ರು.+ ಹೀಗೆ ಏಳನೇ ತಿಂಗಳಷ್ಟಕ್ಕೆ+ ಇಸ್ರಾಯೇಲ್ಯರೆಲ್ಲ ತಮ್ಮತಮ್ಮ ಪಟ್ಟಣಗಳಲ್ಲಿ ವಾಸ ಮಾಡಿದ್ರು.”+