ಪರಮಗೀತ
4 “ಓ ನನ್ನ ಒಲವೇ, ನೀನೆಷ್ಟೋ ಚೆಲುವೆ.
ನೀನು ಲಾವಣ್ಯವತಿ.
ಮುಸುಕಿನ ಮರೆಯಲ್ಲಿರೋ ನಿನ್ನ ಕಣ್ಗಳು ಪಾರಿವಾಳದ ಕಣ್ಗಳ ತರ ಇವೆ,
ನಿನ್ನ ಕೇಶರಾಶಿ ಗಿಲ್ಯಾದಿನ+ ಬೆಟ್ಟಗಳಿಂದ ಇಳಿದು ಬರೋ ಆಡುಗಳ ಹಿಂಡಿನ ತರ ಇದೆ.
2 ನಿನ್ನ ಹಲ್ಲುಗಳು ಈಗಷ್ಟೇ ಉಣ್ಣೆ ಕತ್ತರಿಸಿಕೊಂಡು ಮಿಂದು ಬಂದಿರೋ ಕುರಿಗಳ ಹಿಂಡಿನ ತರ ಇವೆ.
ಎಲ್ಲವೂ ಜೋಡಿಜೋಡಿಯಾಗಿವೆ,
ಯಾವುದೂ ಒಂಟಿಯಾಗಿಲ್ಲ.
3 ನಿನ್ನ ತುಟಿಗಳು ಕಡುಗೆಂಪು ಬಣ್ಣದ ನೂಲಿನ ತರ ಇವೆ,
ನಿನ್ನ ಮಾತು ಮಧುರ.
ಮುಸುಕಿನೊಳಗಿರೋ ನಿನ್ನ ಕೆನ್ನೆಗಳು ದಾಳಿಂಬೆ ಹಣ್ಣಿನ ಎರಡು ಹೋಳುಗಳ ತರ ಇವೆ.
4 ನಿನ್ನ ಕೊರಳು+ ದಾವೀದನ ಬುರುಜಿನ+ ತರ ಇದೆ,
ಒಂದರ ಮೇಲೊಂದು ಕಲ್ಲುಗಳನ್ನಿಟ್ಟು ಕಟ್ಟಿರೋ,
ಸಾವಿರ ಗುರಾಣಿಗಳನ್ನ, ರಣವೀರರ ಎಲ್ಲ ವೃತ್ತಾಕಾರ ಗುರಾಣಿಗಳನ್ನ+ ನೇತುಹಾಕಿರೋ ಬುರುಜಿನ ತರ ಇದೆ.
5 ನಿನ್ನ ಎರಡು ಸ್ತನಗಳು ಜಿಂಕೆಯ ಎರಡು ಮರಿಗಳ ತರ ಇವೆ,
ಲಿಲಿ ಹೂಗಳ ಮಧ್ಯೆ ಮೇಯೋ ಜಿಂಕೆಯ ಅವಳಿ ಮರಿಗಳ ತರ ಇವೆ.”+
8 ನನ್ನ ವಧುವೇ, ನನ್ನ ಜೊತೆ ಬಾ,
ಲೆಬನೋನಿಂದ ಹೋಗೋಣ ಬಾ,+
ಅಮಾನದ* ತುದಿಯಿಂದ ಇಳಿದು ಬಾ,
ಸೆನೀರಿನ ತುದಿಯಿಂದ, ಹೆರ್ಮೋನಿನ+ ತುದಿಯಿಂದ ಇಳಿದು ಬಾ,
ಸಿಂಹಗಳ ಗುಹೆಗಳಿಂದ, ಚಿರತೆಗಳಿರೋ ಬೆಟ್ಟಗಳಿಂದ ಹೊರಟು ಬಾ.
9 ನನ್ನ ಅರಗಿಣಿಯೇ, ನೀ ನನ್ನ ಹೃದಯ ಕದ್ದಿದ್ದೀಯ,+
ನನ್ನ ವಧುವೇ, ನಿನ್ನ ಒಂದೇ ನೋಟದಿ ನನ್ನ ಮನ ಗೆದ್ದಿದ್ದೀಯ,
ನಿನ್ನ ಕೊರಳ ಸರದ ಒಂದೇ ಎಳೆ ನನ್ನ ಎದೆಬಡಿತ ಜೋರಾಗಿಸಿದೆ!
10 ನನ್ನ ಮುದ್ದಿನ ವಧುವೇ, ನಿನ್ನ ಪ್ರೇಮಧಾರೆ ಹಿತಕರ,+
ನೀ ತೋರಿಸೋ ಒಲುಮೆ ದ್ರಾಕ್ಷಾಮದ್ಯಕ್ಕಿಂತ ಸುಮಧುರ,+
ನಿನ್ನ ಸುಗಂಧ ತೈಲದ ಪರಿಮಳ ಎಲ್ಲ ಸುಗಂಧ ದ್ರವ್ಯಗಳಿಗಿಂತ ಆಹ್ಲಾದಕರ.+
11 ನನ್ನ ಕೈಹಿಡಿಯೋ ಸಂಗಾತಿಯೇ, ನಿನ್ನ ತುಟಿಗಳಿಂದ ಜೇನು ತೊಟ್ಟಿಕ್ಕುತ್ತೆ.+
ನಿನ್ನ ನಾಲಿಗೆಯಿಂದ ಹಾಲೂ ಜೇನೂ ಹರಿಯುತ್ತೆ,+
ನಿನ್ನ ಉಡುಪಿನಿಂದ ಲೆಬನೋನಿನ ಮರಗಳ ಸುವಾಸನೆ ಹೊಮ್ಮುತ್ತೆ.
12 ನನ್ನ ಪ್ರಿಯಳು, ಬೀಗ ಹಾಕಿರೋ ತೋಟದ ತರ, ಕದ ಹಾಕಿರೋ ಉದ್ಯಾನದ ತರ ಇದ್ದಾಳೆ,
ನನ್ನ ಜೊತೆಗಾರ್ತಿ, ಮುಚ್ಚಿ ಭದ್ರವಾಗಿ ಇಟ್ಟಿರೋ ಬುಗ್ಗೆ ತರ ಇದ್ದಾಳೆ.
13 ನಿನ್ನ ಕೊಂಬೆಗಳಲ್ಲೆಲ್ಲಾ* ಗೊಂಚಲು ಗೊಂಚಲು ದಾಳಿಂಬೆಗಳಿವೆ,
ಒಳ್ಳೊಳ್ಳೆ ಫಲಗಳು ಆ ತೋಟದಲ್ಲಿ ಸಿಗ್ತವೆ,
ಗೋರಂಟಿ, ಜಟಮಾಂಸಿ ಗಿಡಗಳು ಅಲ್ಲಿವೆ,
14 ಜಟಮಾಂಸಿ,+ ಕೇಸರಿ, ಪರಿಮಳಭರಿತ ಹುಲ್ಲು,+ ದಾಲ್ಚಿನ್ನಿ,+
ಎಲ್ಲ ವಿಧದ ಸಾಂಬ್ರಾಣಿ ಮರಗಳು, ಗಂಧರಸ, ಅಗರು,*+
ಅತ್ಯುತ್ತಮ ಸುಗಂಧಭರಿತ ಗಿಡಗಳೆಲ್ಲ ಅಲ್ಲಿ ಬೆಳಿತವೆ.+
16 ಉತ್ತರದ ಗಾಳಿಯೇ ಏಳು,
ದಕ್ಷಿಣದ ಗಾಳಿಯೇ ಬಾ,
ನನ್ನ ತೋಟದಲ್ಲಿ ನವಿರಾಗಿ ಬೀಸು.
ಅದರ ಕಂಪನ್ನ ಎಲ್ಲೆಡೆ ಹರಡು.”
“ನನ್ನ ಇನಿಯ ತನ್ನ ತೋಟದೊಳಗೆ ಬರಲಿ,
ಅಲ್ಲಿನ ಅತ್ಯುತ್ತಮ ಫಲಗಳನ್ನ ಸವಿಯಲಿ.”