ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 25
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯಾಜಕಕಾಂಡ ಮುಖ್ಯಾಂಶಗಳು

      • ಸಬ್ಬತ್‌ ವರ್ಷ (1-7)

      • ಬಿಡುಗಡೆಯ ವರ್ಷ (8-22)

      • ಜಮೀನು ವಾಪಸ್‌ ಪಡಿಯೋದು (23-34)

      • ಬಡವರ ಜೊತೆ ಹೇಗೆ ನಡ್ಕೊಬೇಕು (35-38)

      • ದಾಸದಾಸಿಯರ ವಿಷ್ಯದಲ್ಲಿ ನಿಯಮಗಳು (39-55)

ಯಾಜಕಕಾಂಡ 25:2

ಮಾರ್ಜಿನಲ್ ರೆಫರೆನ್ಸ್

  • +ಆದಿ 15:16
  • +ಯಾಜ 26:34; 2ಪೂರ್ವ 36:20, 21

ಯಾಜಕಕಾಂಡ 25:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:10, 11

ಯಾಜಕಕಾಂಡ 25:6

ಪಾದಟಿಪ್ಪಣಿ

  • *

    ಕೊಯ್ಲು ಮಾಡಬಾರದಿತ್ತು. ಆದ್ರೆ ಯಾರ ಹತ್ರ ಆಹಾರ ಇಲ್ವೊ ಅವರು ಹೋಗಿ ತಮಗೆ ಬೇಕಾಗಿರೋದನ್ನ ತಗೊಬಹುದಿತ್ತು.

ಯಾಜಕಕಾಂಡ 25:9

ಮಾರ್ಜಿನಲ್ ರೆಫರೆನ್ಸ್

  • +ಯಾಜ 16:30; 23:27, 28

ಯಾಜಕಕಾಂಡ 25:10

ಪಾದಟಿಪ್ಪಣಿ

  • *

    ಅಥವಾ “ಜೂಬಿಲಿ ವರ್ಷ.” ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 61:1, 2; ಲೂಕ 4:18, 19; ರೋಮ 8:20, 21
  • +ಯಾಜ 27:24; ಅರ 36:4; ಧರ್ಮೋ 15:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    12/2019, ಪು. 8-9

    ಹೊಸ ಲೋಕ ಭಾಷಾಂತರ, ಪು. 2654

ಯಾಜಕಕಾಂಡ 25:11

ಮಾರ್ಜಿನಲ್ ರೆಫರೆನ್ಸ್

  • +ಯಾಜ 25:5

ಯಾಜಕಕಾಂಡ 25:12

ಪಾದಟಿಪ್ಪಣಿ

  • *

    ಕೊಯ್ಲು ಮಾಡಬಾರದಿತ್ತು. ಆದ್ರೆ ಯಾರ ಹತ್ರ ಆಹಾರ ಇಲ್ವೊ ಅವರು ಹೋಗಿ ತಮಗೆ ಬೇಕಾಗಿರೋದನ್ನ ತಗೊಬಹುದಿತ್ತು.

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:11; ಯಾಜ 25:6

ಯಾಜಕಕಾಂಡ 25:13

ಮಾರ್ಜಿನಲ್ ರೆಫರೆನ್ಸ್

  • +ಯಾಜ 25:29, 30; 27:24

ಯಾಜಕಕಾಂಡ 25:14

ಮಾರ್ಜಿನಲ್ ರೆಫರೆನ್ಸ್

  • +1ಸಮು 12:3; ಜ್ಞಾನೋ 14:31

ಯಾಜಕಕಾಂಡ 25:15

ಮಾರ್ಜಿನಲ್ ರೆಫರೆನ್ಸ್

  • +ಯಾಜ 27:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 1/2021, ಪು. 5-6

ಯಾಜಕಕಾಂಡ 25:17

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:13; ಜ್ಞಾನೋ 22:22
  • +ಯಾಜ 25:43; ಜ್ಞಾನೋ 1:7; 8:13
  • +ಯೆಶಾ 33:22

ಯಾಜಕಕಾಂಡ 25:18

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:10; ಕೀರ್ತ 4:8; ಜ್ಞಾನೋ 1:33

ಯಾಜಕಕಾಂಡ 25:19

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 67:6
  • +ಯಾಜ 26:3-5

ಯಾಜಕಕಾಂಡ 25:20

ಮಾರ್ಜಿನಲ್ ರೆಫರೆನ್ಸ್

  • +ಯಾಜ 25:4, 5; ಮತ್ತಾ 6:25

ಯಾಜಕಕಾಂಡ 25:21

ಮಾರ್ಜಿನಲ್ ರೆಫರೆನ್ಸ್

  • +ಆದಿ 26:12; ಧರ್ಮೋ 28:8; ಮಲಾ 3:10

ಯಾಜಕಕಾಂಡ 25:23

ಮಾರ್ಜಿನಲ್ ರೆಫರೆನ್ಸ್

  • +1ಅರ 21:3
  • +ಕೀರ್ತ 24:1
  • +1ಪೂರ್ವ 29:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/2011, ಪು. 17

ಯಾಜಕಕಾಂಡ 25:25

ಮಾರ್ಜಿನಲ್ ರೆಫರೆನ್ಸ್

  • +ರೂತ್‌ 2:20; 4:4-6

ಯಾಜಕಕಾಂಡ 25:27

ಮಾರ್ಜಿನಲ್ ರೆಫರೆನ್ಸ್

  • +ಯಾಜ 25:50

ಯಾಜಕಕಾಂಡ 25:28

ಮಾರ್ಜಿನಲ್ ರೆಫರೆನ್ಸ್

  • +ಯಾಜ 27:24
  • +ಯಾಜ 25:10, 13

ಯಾಜಕಕಾಂಡ 25:29

ಮಾರ್ಜಿನಲ್ ರೆಫರೆನ್ಸ್

  • +ಯಾಜ 25:25-27

ಯಾಜಕಕಾಂಡ 25:32

ಮಾರ್ಜಿನಲ್ ರೆಫರೆನ್ಸ್

  • +ಅರ 35:2, 8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 1/2021, ಪು. 5-6

ಯಾಜಕಕಾಂಡ 25:33

ಮಾರ್ಜಿನಲ್ ರೆಫರೆನ್ಸ್

  • +ಯಾಜ 25:28
  • +ಅರ 18:20; 35:2, 4; ಧರ್ಮೋ 18:1

ಯಾಜಕಕಾಂಡ 25:34

ಮಾರ್ಜಿನಲ್ ರೆಫರೆನ್ಸ್

  • +ಅರ 35:7; ಯೆಹೋ 14:4

ಯಾಜಕಕಾಂಡ 25:35

ಮಾರ್ಜಿನಲ್ ರೆಫರೆನ್ಸ್

  • +ವಿಮೋ 22:21; 23:9; ಯಾಜ 19:34; ಧರ್ಮೋ 10:18; 15:7; ಕೀರ್ತ 41:1; 112:5; ಜ್ಞಾನೋ 3:27; 19:17; ಮಾರ್ಕ 14:7; ಅಕಾ 11:29; 1ತಿಮೊ 6:18; 1ಯೋಹಾ 3:17

ಯಾಜಕಕಾಂಡ 25:36

ಪಾದಟಿಪ್ಪಣಿ

  • *

    ಅಥವಾ “ದುಬಾರಿ ಬಡ್ಡಿ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 22:25; ಧರ್ಮೋ 23:19; ಕೀರ್ತ 15:5; ಜ್ಞಾನೋ 28:8
  • +ಜ್ಞಾನೋ 8:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2004, ಪು. 24

ಯಾಜಕಕಾಂಡ 25:37

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 23:20; ಲೂಕ 6:34, 35

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2004, ಪು. 24

ಯಾಜಕಕಾಂಡ 25:38

ಮಾರ್ಜಿನಲ್ ರೆಫರೆನ್ಸ್

  • +ವಿಮೋ 6:7
  • +ವಿಮೋ 20:2; 1ಅರ 8:51

ಯಾಜಕಕಾಂಡ 25:39

ಮಾರ್ಜಿನಲ್ ರೆಫರೆನ್ಸ್

  • +ವಿಮೋ 21:2; ಧರ್ಮೋ 15:12
  • +1ಅರ 9:22

ಯಾಜಕಕಾಂಡ 25:40

ಮಾರ್ಜಿನಲ್ ರೆಫರೆನ್ಸ್

  • +ಯಾಜ 25:53

ಯಾಜಕಕಾಂಡ 25:41

ಮಾರ್ಜಿನಲ್ ರೆಫರೆನ್ಸ್

  • +ವಿಮೋ 21:3; ಯಾಜ 25:10

ಯಾಜಕಕಾಂಡ 25:42

ಮಾರ್ಜಿನಲ್ ರೆಫರೆನ್ಸ್

  • +ವಿಮೋ 1:13, 14; 19:5; ಯಾಜ 25:55

ಯಾಜಕಕಾಂಡ 25:43

ಮಾರ್ಜಿನಲ್ ರೆಫರೆನ್ಸ್

  • +ವಿಮೋ 3:7; ಎಫೆ 6:9; ಕೊಲೊ 4:1
  • +ಯಾಜ 25:17; ಪ್ರಸಂ 12:13

ಯಾಜಕಕಾಂಡ 25:45

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:38; ಯೆಹೋ 9:21

ಯಾಜಕಕಾಂಡ 25:46

ಮಾರ್ಜಿನಲ್ ರೆಫರೆನ್ಸ್

  • +ಯಾಜ 25:39, 43

ಯಾಜಕಕಾಂಡ 25:48

ಮಾರ್ಜಿನಲ್ ರೆಫರೆನ್ಸ್

  • +ಯಾಜ 25:25

ಯಾಜಕಕಾಂಡ 25:49

ಪಾದಟಿಪ್ಪಣಿ

  • *

    ಅಥವಾ “ರಕ್ತ ಸಂಬಂಧಿಕರಿಗೆ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 25:26, 27

ಯಾಜಕಕಾಂಡ 25:50

ಮಾರ್ಜಿನಲ್ ರೆಫರೆನ್ಸ್

  • +ಯಾಜ 25:10
  • +ಯಾಜ 25:15, 16
  • +ಧರ್ಮೋ 15:18

ಯಾಜಕಕಾಂಡ 25:53

ಮಾರ್ಜಿನಲ್ ರೆಫರೆನ್ಸ್

  • +ಯಾಜ 25:40, 43; ಕೊಲೊ 4:1

ಯಾಜಕಕಾಂಡ 25:54

ಮಾರ್ಜಿನಲ್ ರೆಫರೆನ್ಸ್

  • +ವಿಮೋ 21:3

ಯಾಜಕಕಾಂಡ 25:55

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:2; ಯಾಜ 25:42

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯಾಜ. 25:2ಆದಿ 15:16
ಯಾಜ. 25:2ಯಾಜ 26:34; 2ಪೂರ್ವ 36:20, 21
ಯಾಜ. 25:3ವಿಮೋ 23:10, 11
ಯಾಜ. 25:9ಯಾಜ 16:30; 23:27, 28
ಯಾಜ. 25:10ಯೆಶಾ 61:1, 2; ಲೂಕ 4:18, 19; ರೋಮ 8:20, 21
ಯಾಜ. 25:10ಯಾಜ 27:24; ಅರ 36:4; ಧರ್ಮೋ 15:1
ಯಾಜ. 25:11ಯಾಜ 25:5
ಯಾಜ. 25:12ವಿಮೋ 23:11; ಯಾಜ 25:6
ಯಾಜ. 25:13ಯಾಜ 25:29, 30; 27:24
ಯಾಜ. 25:141ಸಮು 12:3; ಜ್ಞಾನೋ 14:31
ಯಾಜ. 25:15ಯಾಜ 27:18
ಯಾಜ. 25:17ಯಾಜ 19:13; ಜ್ಞಾನೋ 22:22
ಯಾಜ. 25:17ಯಾಜ 25:43; ಜ್ಞಾನೋ 1:7; 8:13
ಯಾಜ. 25:17ಯೆಶಾ 33:22
ಯಾಜ. 25:18ಧರ್ಮೋ 12:10; ಕೀರ್ತ 4:8; ಜ್ಞಾನೋ 1:33
ಯಾಜ. 25:19ಕೀರ್ತ 67:6
ಯಾಜ. 25:19ಯಾಜ 26:3-5
ಯಾಜ. 25:20ಯಾಜ 25:4, 5; ಮತ್ತಾ 6:25
ಯಾಜ. 25:21ಆದಿ 26:12; ಧರ್ಮೋ 28:8; ಮಲಾ 3:10
ಯಾಜ. 25:231ಅರ 21:3
ಯಾಜ. 25:23ಕೀರ್ತ 24:1
ಯಾಜ. 25:231ಪೂರ್ವ 29:15
ಯಾಜ. 25:25ರೂತ್‌ 2:20; 4:4-6
ಯಾಜ. 25:27ಯಾಜ 25:50
ಯಾಜ. 25:28ಯಾಜ 27:24
ಯಾಜ. 25:28ಯಾಜ 25:10, 13
ಯಾಜ. 25:29ಯಾಜ 25:25-27
ಯಾಜ. 25:32ಅರ 35:2, 8
ಯಾಜ. 25:33ಯಾಜ 25:28
ಯಾಜ. 25:33ಅರ 18:20; 35:2, 4; ಧರ್ಮೋ 18:1
ಯಾಜ. 25:34ಅರ 35:7; ಯೆಹೋ 14:4
ಯಾಜ. 25:35ವಿಮೋ 22:21; 23:9; ಯಾಜ 19:34; ಧರ್ಮೋ 10:18; 15:7; ಕೀರ್ತ 41:1; 112:5; ಜ್ಞಾನೋ 3:27; 19:17; ಮಾರ್ಕ 14:7; ಅಕಾ 11:29; 1ತಿಮೊ 6:18; 1ಯೋಹಾ 3:17
ಯಾಜ. 25:36ವಿಮೋ 22:25; ಧರ್ಮೋ 23:19; ಕೀರ್ತ 15:5; ಜ್ಞಾನೋ 28:8
ಯಾಜ. 25:36ಜ್ಞಾನೋ 8:13
ಯಾಜ. 25:37ಧರ್ಮೋ 23:20; ಲೂಕ 6:34, 35
ಯಾಜ. 25:38ವಿಮೋ 6:7
ಯಾಜ. 25:38ವಿಮೋ 20:2; 1ಅರ 8:51
ಯಾಜ. 25:39ವಿಮೋ 21:2; ಧರ್ಮೋ 15:12
ಯಾಜ. 25:391ಅರ 9:22
ಯಾಜ. 25:40ಯಾಜ 25:53
ಯಾಜ. 25:41ವಿಮೋ 21:3; ಯಾಜ 25:10
ಯಾಜ. 25:42ವಿಮೋ 1:13, 14; 19:5; ಯಾಜ 25:55
ಯಾಜ. 25:43ವಿಮೋ 3:7; ಎಫೆ 6:9; ಕೊಲೊ 4:1
ಯಾಜ. 25:43ಯಾಜ 25:17; ಪ್ರಸಂ 12:13
ಯಾಜ. 25:45ವಿಮೋ 12:38; ಯೆಹೋ 9:21
ಯಾಜ. 25:46ಯಾಜ 25:39, 43
ಯಾಜ. 25:48ಯಾಜ 25:25
ಯಾಜ. 25:49ಯಾಜ 25:26, 27
ಯಾಜ. 25:50ಯಾಜ 25:10
ಯಾಜ. 25:50ಯಾಜ 25:15, 16
ಯಾಜ. 25:50ಧರ್ಮೋ 15:18
ಯಾಜ. 25:53ಯಾಜ 25:40, 43; ಕೊಲೊ 4:1
ಯಾಜ. 25:54ವಿಮೋ 21:3
ಯಾಜ. 25:55ವಿಮೋ 20:2; ಯಾಜ 25:42
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
  • 49
  • 50
  • 51
  • 52
  • 53
  • 54
  • 55
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯಾಜಕಕಾಂಡ 25:1-55

ಯಾಜಕಕಾಂಡ

25 ಸಿನಾಯಿ ಬೆಟ್ಟದ ಮೇಲೆ ಮೋಶೆ ಜೊತೆ ಯೆಹೋವ ಇನ್ನೂ ಮಾತಾಡ್ತಾ ಹೇಳಿದ್ದು ಏನಂದ್ರೆ 2 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನಾನು ನಿಮಗೆ ಕೊಡೋ ದೇಶಕ್ಕೆ+ ನೀವು ಹೋದ ಮೇಲೆ ಯೆಹೋವ ಆಜ್ಞೆ ಕೊಟ್ಟ ಹಾಗೆ ಸಬ್ಬತ್‌ ವರ್ಷವನ್ನ ಆಚರಿಸಬೇಕು. ಆ ವರ್ಷ ನೀವು ವ್ಯವಸಾಯ ಮಾಡಬಾರದು.+ 3 ಆರು ವರ್ಷ ಹೊಲದಲ್ಲಿ ಬೀಜ ಬಿತ್ತಿ, ದ್ರಾಕ್ಷಿಬಳ್ಳಿಯ ಕೊಂಬೆಗಳನ್ನ ಕತ್ತರಿಸಿ, ಹೊಲದ ಬೆಳೆನ ಕೂಡಿಸಿ.+ 4 ಆದ್ರೆ ಏಳನೇ ವರ್ಷ ಸಬ್ಬತ್‌ ವರ್ಷ. ನೀವು ಯೆಹೋವನಿಗೆ ಗೌರವ ಕೊಡೋಕೆ ಆ ಸಬ್ಬತ್ತನ್ನ ಆಚರಿಸಬೇಕು. ಆ ವರ್ಷ ಜಮೀನಿಗೆ ಪೂರ್ತಿ ವಿಶ್ರಾಂತಿ ಕೊಡಬೇಕು. ಬೀಜ ಬಿತ್ತಬಾರದು, ದ್ರಾಕ್ಷಿಬಳ್ಳಿ ಕೊಂಬೆಗಳನ್ನ ಕತ್ತರಿಸಬಾರದು. 5 ಕೊನೇ ಕೊಯ್ಲು ಮಾಡಿದ ಮೇಲೆ ಹೊಲದಲ್ಲಿ ಧಾನ್ಯ ಉಳಿದು ತನ್ನಷ್ಟಕ್ಕೆ ತಾನೇ ಬರೋ ಬೆಳೆನ ಕಟಾವು ಮಾಡಬಾರದು. ಕೊಂಬೆಗಳನ್ನ ಕತ್ತರಿಸದೆ ಹಾಗೇ ಬಿಟ್ಟ ದ್ರಾಕ್ಷಿಬಳ್ಳಿಯಲ್ಲಿ ಬೆಳೆಯೋ ದ್ರಾಕ್ಷಿನ ಕೂಡಿಸಬಾರದು. ಸಬ್ಬತ್‌ ವರ್ಷದಲ್ಲಿ ಜಮೀನಿಗೆ ಪೂರ್ತಿ ವಿಶ್ರಾಂತಿ ಕೊಡಬೇಕು. 6 ಆದ್ರೆ ಆ ವರ್ಷ ಜಮೀನಲ್ಲಿ ತನ್ನಷ್ಟಕ್ಕೆ ತಾನೇ ಬೆಳೆಯೋದನ್ನ ನಿಮ್ಮ ದಾಸ ದಾಸಿಯರು, ಕೂಲಿ ಕೆಲಸಗಾರರು, ನಿಮ್ಮ ದೇಶದಲ್ಲಿ ಇರೋ ವಿದೇಶಿಯರು ತಗೊಬಹುದು.* 7 ಸಾಕುಪ್ರಾಣಿ, ಕಾಡುಪ್ರಾಣಿಗಳೂ ಅದನ್ನ ತಿನ್ನಬಹುದು. ನಿಮ್ಮ ದೇಶದಲ್ಲಿ ಬೆಳಿಯೋ ಎಲ್ಲವನ್ನ ನೀವು ತಿನ್ನಬಹುದು.

8 ಏಳು ಸಬ್ಬತ್‌ ವರ್ಷಗಳನ್ನ ಅಂದ್ರೆ ಏಳು ವರ್ಷಗಳನ್ನ ಏಳು ಸಲ ಲೆಕ್ಕಿಸಬೇಕು. ಆಗ ಒಟ್ಟು 49 ವರ್ಷ ಆಗುತ್ತೆ. 9 50ನೇ ವರ್ಷದ ಏಳನೇ ತಿಂಗಳಿನ ಹತ್ತನೇ ದಿನ ಅಂದ್ರೆ ಪ್ರಾಯಶ್ಚಿತ್ತ ದಿನ+ ದೇಶದವರಿಗೆಲ್ಲ ಕೇಳಿಸೋ ಹಾಗೆ ಗಟ್ಟಿಯಾಗಿ ಕೊಂಬು ಊದಬೇಕು. 10 50ನೇ ವರ್ಷವನ್ನ ಪವಿತ್ರ ವರ್ಷ ಅಂತ ಹೇಳಬೇಕು. ದೇಶದವರಿಗೆಲ್ಲ ಬಿಡುಗಡೆಯನ್ನ ಘೋಷಿಸಬೇಕು.+ ಇದು ನಿಮಗೆ ಬಿಡುಗಡೆಯ ವರ್ಷ* ಆಗಿರುತ್ತೆ. ಯಾರಾದ್ರೂ ತಮ್ಮ ಜಮೀನನ್ನ ಮಾರಿದ್ರೆ ಆ ವರ್ಷ ಅವರಿಗೆ ಅದು ವಾಪಸ್‌ ಸಿಗಬೇಕು. ದಾಸನಾಗಿ ಬಂದಿದ್ದ ವ್ಯಕ್ತಿ ಆ ವರ್ಷ ಅವನ ಮನೆಗೆ ವಾಪಸ್‌ ಹೋಗಬೇಕು.+ 11 ಆ 50ನೇ ವರ್ಷ ನಿಮಗೆ ಬಿಡುಗಡೆ ವರ್ಷ ಆಗಿರುತ್ತೆ. ಆ ವರ್ಷ ನೀವು ಹೊಲದಲ್ಲಿ ಬೀಜ ಬಿತ್ತಬಾರದು. ಹೊಲದಲ್ಲಿ ಉಳಿದ ಧಾನ್ಯದಿಂದ ತಾನಾಗಿ ಬೆಳೆಯೋ ಬೆಳೆನ ಕಟಾವು ಮಾಡಬಾರದು. ಕೊಂಬೆಗಳನ್ನ ಕತ್ತರಿಸದೆ ಹಾಗೇ ಬಿಟ್ಟ ದ್ರಾಕ್ಷಿಬಳ್ಳಿಯಲ್ಲಿ ಬೆಳೆಯೋ ದ್ರಾಕ್ಷಿನ ಕೂಡಿಸಬಾರದು.+ 12 ಯಾಕಂದ್ರೆ ಅದು ಬಿಡುಗಡೆ ವರ್ಷ. ಅದು ನಿಮಗೆ ಪವಿತ್ರ ಆಗಿರಬೇಕು. ಹೊಲದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನ ಮಾತ್ರ ಆ ವರ್ಷ ನೀವು ಆಹಾರಕ್ಕಾಗಿ ಬಳಸಬಹುದು.*+

13 ಯಾರಾದ್ರೂ ತಮ್ಮ ಜಮೀನನ್ನ ಮಾರಿದ್ರೆ ಬಿಡುಗಡೆ ವರ್ಷದಲ್ಲಿ ಅವ್ರಿಗೆ ವಾಪಸ್‌ ಸಿಗಬೇಕು.+ 14 ನೀವು ಏನಾದ್ರೂ ಮಾರೋವಾಗ ತಗೊಳ್ಳುವಾಗ ಲಾಭಕ್ಕಾಗಿ ಇನ್ನೊಬ್ರಿಗೆ ಮೋಸ ಮಾಡಬೇಡಿ.+ 15 ನೀವು ಜಮೀನನ್ನ ತಗೊಳ್ಳುವಾಗ ಮುಂದಿನ ಬಿಡುಗಡೆ ವರ್ಷಕ್ಕೆ ಇನ್ನೆಷ್ಟು ವರ್ಷ ಬಾಕಿ ಇದೆ ಅಂತ ನೋಡಬೇಕು. ಜಮೀನನ್ನ ಮಾರೋನು ಬಿಡುಗಡೆ ವರ್ಷಕ್ಕೆ ಮುಂಚೆ ಅದ್ರಿಂದ ಇನ್ನೆಷ್ಟು ಬೆಳೆ ಸಿಗುತ್ತೆ ಅಂತ ಲೆಕ್ಕಹಾಕಿ ಆ ಜಮೀನಿಗೆ ಬೆಲೆ ಹೇಳಬೇಕು.+ 16 ಬಿಡುಗಡೆ ವರ್ಷ ಬರೋದಕ್ಕೆ ಇನ್ನೂ ತುಂಬ ವರ್ಷ ಇರೋದಾದ್ರೆ ಅವನು ಜಮೀನಿಗೆ ಜಾಸ್ತಿ ಬೆಲೆ ಹೇಳಬಹುದು. ಒಂದುವೇಳೆ ಸ್ವಲ್ಪ ವರ್ಷ ಇದ್ರೆ ಕಡಿಮೆ ಬೆಲೆ ಹೇಳಬೇಕು. ಯಾಕಂದ್ರೆ ಅವನು ನಿಮಗೆ ಕೊಡ್ತಾ ಇರೋದು ಆ ಜಮೀನಿನ ಬೆಳೆಗಳನ್ನಷ್ಟೇ. 17 ನಿಮ್ಮಲ್ಲಿ ಯಾರೂ ಸ್ವಂತ ಲಾಭಕ್ಕಾಗಿ ಇನ್ನೊಬ್ಬನಿಗೆ ಮೋಸ ಮಾಡಬಾರದು.+ ನೀವು ದೇವರಿಗೆ ಭಯಪಡಬೇಕು.+ ಯಾಕಂದ್ರೆ ನಾನು ನಿಮ್ಮ ದೇವರಾದ ಯೆಹೋವ.+ 18 ನನ್ನ ನಿಯಮಗಳನ್ನ, ತೀರ್ಪುಗಳನ್ನ ಕೇಳಿ ಅದೇ ತರ ನಡೆದ್ರೆ ನಾನು ನಿಮಗೆ ಕೊಡೋ ದೇಶದಲ್ಲಿ ಸುರಕ್ಷಿತವಾಗಿ ಇರ್ತಿರ.+ 19 ಆ ದೇಶದಲ್ಲಿ ಬೆಳೆನೂ ಚೆನ್ನಾಗಿ ಬರುತ್ತೆ,+ ನಿಮಗೆ ಬೇಕಾದಷ್ಟು ಆಹಾರ ಇರುತ್ತೆ. ನೀವು ಸುರಕ್ಷಿತವಾಗಿ ಇರ್ತಿರ.+

20 ಆದ್ರೆ “ಏಳನೇ ವರ್ಷ ಬೀಜ ಬಿತ್ತದಿದ್ರೆ, ಬೆಳೆ ಕೊಯ್ಯದಿದ್ರೆ ಊಟಕ್ಕೇನು ಮಾಡೋದು?”+ ಅಂತ ನೀವು ಯೋಚಿಸಬಹುದು. 21 ಚಿಂತೆ ಮಾಡಬೇಡಿ. ಆರನೇ ವರ್ಷ ಚೆನ್ನಾಗಿ ಬೆಳೆ ಆಗೋ ತರ ಆಶೀರ್ವಾದ ಮಾಡ್ತೀನಿ. ಆ ಬೆಳೆ ಎಷ್ಟು ಜಾಸ್ತಿ ಇರುತ್ತೆ ಅಂದ್ರೆ ನಿಮಗೆ ಮೂರು ವರ್ಷಕ್ಕೆ ಬೇಕಾಗುವಷ್ಟು ಆಹಾರ ಸಿಗುತ್ತೆ.+ 22 ಎಂಟನೇ ವರ್ಷ ನೀವು ಬೀಜ ಬಿತ್ತಿ ಅದ್ರ ಬೆಳೆ ಕೊಯ್ಯೋ ತನಕ ಅಂದ್ರೆ ಒಂಬತ್ತನೇ ವರ್ಷದ ತನಕ ಆ ಬೆಳೆಯನ್ನೇ ನೀವು ತಿಂತೀರ.

23 ನಿಮ್ಮ ಜಮೀನನ್ನ ಶಾಶ್ವತವಾಗಿ ಮಾರಬಾರದು.+ ಯಾಕಂದ್ರೆ ಆ ಜಮೀನು ನಂದು.+ ನೀವು ನನ್ನ ದೃಷ್ಟಿಯಲ್ಲಿ ವಿದೇಶಿಯರು, ಪ್ರವಾಸಿಗರು ಆಗಿದ್ದೀರ.+ 24 ನೀವು ಆಸ್ತಿಯಾಗಿ ಪಡ್ಕೊಳ್ಳೋ ಆ ದೇಶದಲ್ಲಿ ಜಮೀನನ್ನ ಮಾರಿದ್ರೆ ಅದನ್ನ ವಾಪಸ್‌ ಪಡ್ಕೊಳ್ಳೋ ಹಕ್ಕು ನಿಮಗಿರುತ್ತೆ.

25 ನಿಮ್ಮ ಒಬ್ಬ ಬಡ ಸಹೋದರ ತನ್ನ ಜಮೀನಲ್ಲಿ ಸ್ವಲ್ಪ ಭಾಗನ ಮಾರಿದ್ರೆ ಅವನ ಹತ್ರದ ಸಂಬಂಧಿಗೆ ಆ ಜಮೀನನ್ನ ಬಿಡಿಸ್ಕೊಳ್ಳೋ ಹಕ್ಕಿದೆ. ಹಾಗಾಗಿ ಅವನು ಬಂದು ಆ ಜಮೀನನ್ನ ಮತ್ತೆ ಖರೀದಿಸಬೇಕು.+ 26 ಆ ಜಮೀನನ್ನ ಮಾರಿದವನಿಗೆ ಅದನ್ನ ಬಿಡಿಸ್ಕೊಳ್ಳೋ ಹಕ್ಕಿರೋ ಹತ್ರದ ಸಂಬಂಧಿ ಇಲ್ಲದಿದ್ರೆ ಮತ್ತು ಮಾರಿದವನೇ ಮುಂದೆ ಅದನ್ನ ಖರೀದಿಸೋ ಪರಿಸ್ಥಿತಿಗೆ ಬಂದ್ರೆ 27 ಅವನೇ ಅದನ್ನ ತಗೋಬಹುದು. ಆಗ ಅವನು ಜಮೀನನ್ನ ಮಾರಿದ ಸಮಯದಿಂದ ಎಷ್ಟು ವರ್ಷ ಫಸಲು ಕೊಯ್ತಿದ್ದಾರೆ ಅಂತ ಲೆಕ್ಕ ಮಾಡಬೇಕು. ಅವನು ಜಮೀನನ್ನ ಎಷ್ಟು ಬೆಲೆಗೆ ಮಾರಿದ್ದನೋ ಅದ್ರಲ್ಲಿ ಆ ಫಸಲಿನ ಬೆಲೆಯನ್ನ ಕಳೆದು ಉಳಿದ ಹಣವನ್ನ ಕೊಟ್ಟು ತನ್ನ ಜಮೀನನ್ನ ವಾಪಸ್‌ ತಗೋಬೇಕು.+

28 ಅವನಿಗೆ ಜಮೀನನ್ನ ವಾಪಸ್‌ ತಗೊಳ್ಳೋಕ್ಕೆ ಆಗದಿದ್ರೆ ಆ ಜಮೀನು ಬಿಡುಗಡೆ ವರ್ಷದ ತನಕ ಖರೀದಿಸಿದವನ ಹತ್ರಾನೇ ಇರುತ್ತೆ.+ ಆದ್ರೆ ಮಾರಿದವನಿಗೆ ಆ ಜಮೀನು ಬಿಡುಗಡೆ ವರ್ಷದಲ್ಲಿ ವಾಪಸ್‌ ಸಿಗುತ್ತೆ. ಅದು ಮತ್ತೆ ಅವನ ಆಸ್ತಿ ಆಗುತ್ತೆ.+

29 ಸುತ್ತ ಗೋಡೆ ಇರೋ ಪಟ್ಟಣದಲ್ಲಿ ಒಬ್ಬ ಮನೆಯನ್ನ ಮಾರಿದ್ರೆ ಅವನಿಗೆ ಅದನ್ನ ವಾಪಸ್‌ ಖರೀದಿಸೋ ಹಕ್ಕು+ ಒಂದು ವರ್ಷದ ತನಕ ಇರುತ್ತೆ. ಆ ಮನೆಯನ್ನ ಮಾರಿದ ಸಮಯದಿಂದ ಒಂದು ವರ್ಷದ ಒಳಗೆ ಅವನು ಅದನ್ನ ವಾಪಸ್‌ ಖರೀದಿಸಬೇಕು. 30 ಒಂದು ವರ್ಷದೊಳಗೆ ಖರೀದಿಸದಿದ್ರೆ ಸುತ್ತ ಗೋಡೆ ಇರೋ ಪಟ್ಟಣದ ಆ ಮನೆ ಖರೀದಿಸಿದವನಿಗೇ ಸೇರುತ್ತೆ. ಅವನ ನಂತ್ರ ಅವನ ವಂಶದವರಿಗೆ ಸೇರುತ್ತೆ. ಬಿಡುಗಡೆ ವರ್ಷದಲ್ಲಿ ಆ ಮನೆಯನ್ನ ಅವರು ವಾಪಸ್‌ ಕೊಡಬಾರದು. 31 ಆದ್ರೆ ಸುತ್ತ ಗೋಡೆ ಇಲ್ಲದಿರೋ ಪಟ್ಟಣದ ಮನೆಯನ್ನ ಒಬ್ಬನು ಮಾರಿದ್ರೆ ಅದನ್ನ ವಾಪಸ್‌ ಖರೀದಿಸೋ ಹಕ್ಕು ಅವನಿಗೆ ಯಾವಾಗ್ಲೂ ಇರುತ್ತೆ. ಯಾಕಂದ್ರೆ ಅಂಥ ಮನೆ ಹಳ್ಳಿ ಪ್ರದೇಶದಲ್ಲಿರೋ ಹೊಲದ ಭಾಗ ಆಗಿದೆ. ಆ ಮನೆನ ಖರೀದಿಸಿದವನು ಬಿಡುಗಡೆ ವರ್ಷದಲ್ಲಿ ಅದನ್ನ ವಾಪಸ್‌ ಕೊಡಬೇಕು.

32 ಲೇವಿಯರು ತಮ್ಮ ಪಟ್ಟಣದಲ್ಲಿರೋ+ ಮನೆಗಳನ್ನ ಮಾರಿದ್ರೆ ಅವುಗಳನ್ನ ವಾಪಸ್‌ ಖರೀದಿಸೋ ಹಕ್ಕು ಅವರಿಗೆ ಯಾವಾಗ್ಲೂ ಇರುತ್ತೆ. 33 ಲೇವಿಯರಲ್ಲಿ ಒಬ್ಬ ತನ್ನ ಮನೆನ ವಾಪಸ್‌ ತಗೊಳ್ಳದಿದ್ರೆ ಆ ಮನೆ ತಗೊಂಡವನು ಬಿಡುಗಡೆ ವರ್ಷ ಅದನ್ನ ವಾಪಸ್‌ ಕೊಡಬೇಕು.+ ಯಾಕಂದ್ರೆ ಇಸ್ರಾಯೇಲ್ಯರ ದೇಶದಲ್ಲಿ ಲೇವಿಯರ ಪಟ್ಟಣದಲ್ಲಿರೋ ಮನೆಗಳು ಲೇವಿಯರ ಆಸ್ತಿ.+ 34 ಆದ್ರೆ ಅವರು ಪಟ್ಟಣಗಳ ಸುತ್ತ ಇರೋ ಹುಲ್ಲುಗಾವಲಿನ ಪ್ರದೇಶವನ್ನ+ ಮಾರಬಾರದು. ಯಾಕಂದ್ರೆ ಅದು ಅವರ ಶಾಶ್ವತ ಆಸ್ತಿ.

35 ನಿಮ್ಮ ಅಕ್ಕಪಕ್ಕದಲ್ಲಿ ಇರೋ ಒಬ್ಬ ಬಡ ಇಸ್ರಾಯೇಲ್ಯ ಸಹೋದರ ಹೊಟ್ಟೆಬಟ್ಟೆಗೆ ಏನೂ ಇಲ್ಲದ ಸ್ಥಿತಿಗೆ ಬಂದ್ರೆ ನಿಮ್ಮ ಮಧ್ಯ ವಾಸಿಸೋ ವಿದೇಶಿಯರಿಗೆ, ಪ್ರವಾಸಿಗರಿಗೆ ಸಹಾಯ ಮಾಡೋ ತರ ಅವನಿಗೂ ಸಹಾಯ ಮಾಡಬೇಕು.+ ಆಗ ಅವನು ಬದುಕಿ ಉಳಿತಾನೆ. 36 ನೀವು ಅವನಿಂದ ಬಡ್ಡಿ ತಗೊಳ್ಳಬಾರದು, ಅವನಿಂದ ಲಾಭ* ಪಡಿಯೋಕೆ ಪ್ರಯತ್ನಿಸಬಾರದು.+ ನೀವು ದೇವರಿಗೆ ಭಯಪಡಬೇಕು.+ ಹೀಗೆ ಮಾಡಿದ್ರೆ ಆ ನಿಮ್ಮ ಸಹೋದರ ಬದುಕಿ ಉಳಿತಾನೆ. 37 ನೀವು ಅವನಿಗೆ ಕೊಟ್ಟ ಸಾಲಕ್ಕೆ ಬಡ್ಡಿ ಕೇಳಬಾರದು.+ ಅವನಿಗೆ ಊಟ ಕೊಟ್ರೆ ಅದ್ರಿಂದ ಲಾಭ ಪಡೀಬಾರದು. 38 ನಾನು ನಿಮ್ಮ ದೇವರಾದ ಯೆಹೋವ. ನಿಮಗೆ ಕಾನಾನ್‌ ದೇಶ ಕೊಡೋಕೆ, ನಾನು ನಿಮ್ಮ ದೇವರು ಅಂತ ತೋರಿಸೋಕೆ+ ನಿಮ್ಮನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬಂದ+ ದೇವರು ನಾನೇ.

39 ಅಕ್ಕಪಕ್ಕ ವಾಸಿಸೋ ಇಸ್ರಾಯೇಲ್ಯ ಸಹೋದರರಲ್ಲಿ ಒಬ್ಬ ಬಡವನಾಗಿ ತನ್ನನ್ನೇ ನಿಮಗೆ ಮಾರಿಕೊಂಡ್ರೆ+ ಅವನನ್ನ ಗುಲಾಮನ ತರ ದುಡಿಸ್ಕೊಳ್ಳಬಾರದು.+ 40 ಅವನು ನಿಮ್ಮ ಹತ್ರ ಕೂಲಿ ಕೆಲಸಗಾರ+ ಅಥವಾ ಪ್ರವಾಸಿಗನ ತರ ಇರಬೇಕು. ಬಿಡುಗಡೆ ವರ್ಷದ ತನಕ ಅವನು ನಿಮ್ಮ ಹತ್ರ ಕೆಲಸ ಮಾಡಬೇಕು. 41 ಆಮೇಲೆ ಅವನು ತನ್ನ ಮಕ್ಕಳನ್ನ ಕರ್ಕೊಂಡು ಅವನ ಸಂಬಂಧಿಕರ ಹತ್ರ ವಾಪಸ್‌ ಹೋಗಬೇಕು. ಅವನ ಪೂರ್ವಜರ ಆಸ್ತಿ ಅವನಿಗೆ ವಾಪಸ್‌ ಸಿಗಬೇಕು.+ 42 ಇಸ್ರಾಯೇಲ್ಯರು ನನ್ನ ದಾಸರು. ನಾನು ಅವರನ್ನ ಈಜಿಪ್ಟಿಂದ ಕರ್ಕೊಂಡು ಬಂದಿದ್ದೀನಿ.+ ಹಾಗಾಗಿ ಅವರು ತಮ್ಮನ್ನ ಬೇರೆಯವರಿಗೆ ದಾಸರಾಗಿ ಮಾರಿಕೊಳ್ಳಬಾರದು. 43 ಆ ನಿಮ್ಮ ಸಹೋದರನ ಜೊತೆ ಕ್ರೂರವಾಗಿ ನಡ್ಕೊಬಾರದು,+ ದೇವರಿಗೆ ಭಯಪಡಬೇಕು.+ 44 ನಿಮ್ಮ ಸುತ್ತಮುತ್ತ ಇರೋ ದೇಶಗಳ ಜನ್ರು ಮಾತ್ರ ನಿಮಗೆ ಗುಲಾಮರಾಗಿ ಇರಬೇಕು. ಅವರನ್ನ ಗುಲಾಮರಾಗಿ ಖರೀದಿ ಮಾಡ್ಕೊಬಹುದು. 45 ನಿಮ್ಮ ಮಧ್ಯ ಇರೋ ವಿದೇಶಿಯರನ್ನ,+ ನಿಮ್ಮ ದೇಶದಲ್ಲಿ ಅವರಿಗೆ ಹುಟ್ಟಿದ ಮಕ್ಕಳನ್ನ ಗುಲಾಮರಾಗಿ ಖರೀದಿ ಮಾಡ್ಕೊಬಹುದು. ಅವರು ನಿಮ್ಮ ಆಸ್ತಿ ಆಗ್ತಾರೆ. 46 ನೀವು ಸತ್ತಮೇಲೆ ಆ ಗುಲಾಮರು ನಿಮ್ಮ ಮಕ್ಕಳ ಆಸ್ತಿ ಆಗಬಹುದು. ಅವರು ಶಾಶ್ವತವಾಗಿ ನಿಮ್ಮ ಹತ್ರ ದಾಸರಾಗಿ ಇರಬಹುದು. ಆದ್ರೆ ನಿಮ್ಮ ಇಸ್ರಾಯೇಲ್ಯ ಸಹೋದರರ ಜೊತೆ ನೀವು ಕ್ರೂರವಾಗಿ ನಡ್ಕೊಬಾರದು.+

47 ನಿಮ್ಮ ಮಧ್ಯ ಇರೋ ವಿದೇಶಿ ಅಥವಾ ಪ್ರವಾಸಿಗ ಶ್ರೀಮಂತನಾದ್ರೆ ಮತ್ತು ಅವನ ಅಕ್ಕಪಕ್ಕ ಇರೋ ನಿಮ್ಮ ಇಸ್ರಾಯೇಲ್ಯ ಸಹೋದರ ಬಡವನಾಗಿ ತನ್ನನ್ನ ಆ ವಿದೇಶಿಗೋ ಅವನ ಕುಟುಂಬದಲ್ಲಿ ಒಬ್ಬನಿಗೋ ಅಥವಾ ಪ್ರವಾಸಿಗನಿಗೋ ಮಾರಿಕೊಂಡ್ರೆ 48 ಅವನನ್ನ ಬಿಡಿಸ್ಕೊಳ್ಳೋ ಹಕ್ಕು ಅವನಿಗೆ ಯಾವಾಗ್ಲೂ ಇರುತ್ತೆ. ಅವನ ಅಣ್ಣ ಅಥವಾ ತಮ್ಮ ಅವನನ್ನ ವಾಪಸ್‌ ಖರೀದಿಸಬಹುದು.+ 49 ಅವನ ದೊಡ್ಡಪ್ಪ, ಚಿಕ್ಕಪ್ಪನಿಗೆ ಅಥವಾ ಅವರ ಮಕ್ಕಳಿಗೆ ಅಥವಾ ಅವನ ಹತ್ರದ ಸಂಬಂಧಿಕರಿಗೆ* ಅವನನ್ನ ವಾಪಸ್‌ ಖರೀದಿಸೋ ಹಕ್ಕಿದೆ.

ತನ್ನನ್ನು ಮಾರಿಕೊಂಡವನ ಪರಿಸ್ಥಿತಿ ಮುಂದೆ ಚೆನ್ನಾಗಾದ್ರೆ ಅವನೇ ತನ್ನನ್ನ ಬಿಡಿಸ್ಕೊಬಹುದು.+ 50 ಅವನು ತನ್ನನ್ನ ಮಾರಿಕೊಂಡ ವರ್ಷದಿಂದ ಬಿಡುಗಡೆ ವರ್ಷದ+ ತನಕ ಎಷ್ಟು ವರ್ಷ ಆಗುತ್ತೆ ಅಂತ ತನ್ನನ್ನ ಖರೀದಿಸಿದವನ ಜೊತೆ ಸೇರಿ ಲೆಕ್ಕ ಮಾಡಬೇಕು. ಅವನು ತನ್ನನ್ನ ಮಾರಿಕೊಂಡಿರೋ ಬೆಲೆ ಆ ವರ್ಷಗಳಲ್ಲಿ ಅವನಿಗೆ ಸಿಗೋ ಕೂಲಿಗೆ ಸಮ.+ ಆ ಎಲ್ಲ ಸಮಯದಲ್ಲಿ ಅವನು ಮಾಡೋ ಕೆಲಸ ಕೂಲಿ ಕೆಲಸದವನ ತರ ಇರುತ್ತೆ.+ 51 ಅವನು ತನ್ನನ್ನ ಬಿಡಿಸ್ಕೊಳ್ಳುವಾಗ ಬಿಡುಗಡೆ ವರ್ಷಕ್ಕೆ ಇನ್ನೂ ಎಷ್ಟು ವರ್ಷ ಇದೆ ಅಂತ ಲೆಕ್ಕ ಮಾಡಬೇಕು. ತುಂಬ ವರ್ಷ ಇರೋದಾದ್ರೆ ಅವನು ಆ ವರ್ಷಗಳ ಹಣವನ್ನ ವಾಪಸ್‌ ಕೊಟ್ಟು ತನ್ನನ್ನ ಬಿಡಿಸ್ಕೊಬೇಕು. 52 ಸ್ವಲ್ಪ ವರ್ಷಾನೇ ಇರೋದಾದ್ರೆ ಆ ಸ್ವಲ್ಪ ವರ್ಷಗಳ ಹಣನ ವಾಪಸ್‌ ಕೊಟ್ಟು ಅವನು ತನ್ನನ್ನ ಬಿಡಿಸ್ಕೊಬೇಕು. 53 ಅವನು ತನ್ನನ್ನ ಖರೀದಿಸಿದವನ ಹತ್ರ ಇರೋಷ್ಟು ಕಾಲ ಕೂಲಿಯವನ ತರ ಕೆಲಸ ಮಾಡಬೇಕು. ಆದ್ರೆ ಯಜಮಾನ ಅವನ ಜೊತೆ ಕ್ರೂರವಾಗಿ ನಡ್ಕೊಳ್ಳದ ಹಾಗೆ ನೀವು ನೋಡ್ಕೊಬೇಕು.+ 54 ಒಂದುವೇಳೆ ಒಬ್ಬ ಇಸ್ರಾಯೇಲ್ಯ ವ್ಯಕ್ತಿಗೆ ಹೀಗೆ ತನ್ನನ್ನ ಬಿಡಿಸ್ಕೊಳ್ಳೋಕೆ ಆಗದಿದ್ರೆ ಬಿಡುಗಡೆ ವರ್ಷದಲ್ಲಿ+ ಅವನಿಗೆ ಅವನ ಮಕ್ಕಳಿಗೆ ಬಿಡುಗಡೆ ಆಗಬೇಕು.

55 ಯಾಕಂದ್ರೆ ಇಸ್ರಾಯೇಲ್ಯರು ನನ್ನ ದಾಸರು, ಈಜಿಪ್ಟ್‌ ದೇಶದಿಂದ ನಾನು ಬಿಡಿಸ್ಕೊಂಡು ಬಂದ ನನ್ನ ದಾಸರು.+ ನಾನು ನಿಮ್ಮ ದೇವರಾದ ಯೆಹೋವ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ