ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 24
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯಾಜಕಕಾಂಡ ಮುಖ್ಯಾಂಶಗಳು

      • ಪವಿತ್ರ ಡೇರೆಯ ದೀಪಗಳಿಗೆ ಎಣ್ಣೆ (1-4)

      • ಅರ್ಪಣೆಯ ರೊಟ್ಟಿಗಳು (5-9)

      • ದೇವರ ಹೆಸ್ರನ್ನ ಬೈಯೋರಿಗೆ ಮರಣಶಿಕ್ಷೆ (10-23)

ಯಾಜಕಕಾಂಡ 24:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 27:20, 21; ಅರ 8:2

ಯಾಜಕಕಾಂಡ 24:4

ಮಾರ್ಜಿನಲ್ ರೆಫರೆನ್ಸ್

  • +ವಿಮೋ 25:31; 39:33, 37; ಇಬ್ರಿ 9:2

ಯಾಜಕಕಾಂಡ 24:5

ಪಾದಟಿಪ್ಪಣಿ

  • *

    ಅಂದ್ರೆ, 4.4 ಲೀ. ಪರಿಶಿಷ್ಟ ಬಿ14 ನೋಡಿ.

ಯಾಜಕಕಾಂಡ 24:6

ಮಾರ್ಜಿನಲ್ ರೆಫರೆನ್ಸ್

  • +ವಿಮೋ 25:23, 24; 1ಅರ 7:48
  • +ವಿಮೋ 40:22, 23; 1ಸಮು 21:4; ಮಾರ್ಕ 2:25, 26

ಯಾಜಕಕಾಂಡ 24:7

ಮಾರ್ಜಿನಲ್ ರೆಫರೆನ್ಸ್

  • +ಯಾಜ 2:2; 6:15

ಯಾಜಕಕಾಂಡ 24:8

ಮಾರ್ಜಿನಲ್ ರೆಫರೆನ್ಸ್

  • +ಅರ 4:7; 1ಪೂರ್ವ 9:32; 2ಪೂರ್ವ 2:4

ಯಾಜಕಕಾಂಡ 24:9

ಪಾದಟಿಪ್ಪಣಿ

  • *

    ಬಹುಶಃ ಪವಿತ್ರ ಡೇರೆ ಅಂಗಳದಲ್ಲಿ.

ಮಾರ್ಜಿನಲ್ ರೆಫರೆನ್ಸ್

  • +ಯಾಜ 21:22; 22:10; 1ಸಮು 21:4, 6; ಮತ್ತಾ 12:3, 4; ಲೂಕ 6:3, 4
  • +ಯಾಜ 6:14, 16

ಯಾಜಕಕಾಂಡ 24:10

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:38; ಅರ 11:4

ಯಾಜಕಕಾಂಡ 24:11

ಪಾದಟಿಪ್ಪಣಿ

  • *

    ವಚನ 15, 16 ಸೂಚಿಸುವಂತೆ ಅವನು ಯೆಹೋವನ ಹೆಸರನ್ನ ದೂಷಿಸಿದನು.

  • *

    ಅಥವಾ “ಕೇಡಾಗಲಿ ಅಂತ ಬೈಯೋಕೆ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:7; 22:28; ಯಾಜ 19:12
  • +ವಿಮೋ 18:22

ಯಾಜಕಕಾಂಡ 24:12

ಮಾರ್ಜಿನಲ್ ರೆಫರೆನ್ಸ್

  • +ವಿಮೋ 18:15, 16; ಅರ 15:32, 34

ಯಾಜಕಕಾಂಡ 24:14

ಮಾರ್ಜಿನಲ್ ರೆಫರೆನ್ಸ್

  • +ಅರ 15:32, 35; ಧರ್ಮೋ 17:7

ಯಾಜಕಕಾಂಡ 24:16

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 5:11

ಯಾಜಕಕಾಂಡ 24:17

ಮಾರ್ಜಿನಲ್ ರೆಫರೆನ್ಸ್

  • +ಆದಿ 9:6; ವಿಮೋ 21:12; ಅರ 35:31; ಧರ್ಮೋ 19:11-13

ಯಾಜಕಕಾಂಡ 24:19

ಮಾರ್ಜಿನಲ್ ರೆಫರೆನ್ಸ್

  • +ವಿಮೋ 21:23, 24

ಯಾಜಕಕಾಂಡ 24:20

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 19:21; ಮತ್ತಾ 5:38

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!—2011,

    1/2011, ಪು. 18-19

    ಕಾವಲಿನಬುರುಜು,

    1/1/2010, ಪು. 12

ಯಾಜಕಕಾಂಡ 24:21

ಮಾರ್ಜಿನಲ್ ರೆಫರೆನ್ಸ್

  • +ವಿಮೋ 22:1
  • +ಆದಿ 9:6; ವಿಮೋ 21:12

ಯಾಜಕಕಾಂಡ 24:22

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:49; ಯಾಜ 17:10; 19:34; ಅರ 9:14; 15:16

ಯಾಜಕಕಾಂಡ 24:23

ಮಾರ್ಜಿನಲ್ ರೆಫರೆನ್ಸ್

  • +ಅರ 15:33, 36; ಧರ್ಮೋ 17:7

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯಾಜ. 24:2ವಿಮೋ 27:20, 21; ಅರ 8:2
ಯಾಜ. 24:4ವಿಮೋ 25:31; 39:33, 37; ಇಬ್ರಿ 9:2
ಯಾಜ. 24:6ವಿಮೋ 25:23, 24; 1ಅರ 7:48
ಯಾಜ. 24:6ವಿಮೋ 40:22, 23; 1ಸಮು 21:4; ಮಾರ್ಕ 2:25, 26
ಯಾಜ. 24:7ಯಾಜ 2:2; 6:15
ಯಾಜ. 24:8ಅರ 4:7; 1ಪೂರ್ವ 9:32; 2ಪೂರ್ವ 2:4
ಯಾಜ. 24:9ಯಾಜ 21:22; 22:10; 1ಸಮು 21:4, 6; ಮತ್ತಾ 12:3, 4; ಲೂಕ 6:3, 4
ಯಾಜ. 24:9ಯಾಜ 6:14, 16
ಯಾಜ. 24:10ವಿಮೋ 12:38; ಅರ 11:4
ಯಾಜ. 24:11ವಿಮೋ 20:7; 22:28; ಯಾಜ 19:12
ಯಾಜ. 24:11ವಿಮೋ 18:22
ಯಾಜ. 24:12ವಿಮೋ 18:15, 16; ಅರ 15:32, 34
ಯಾಜ. 24:14ಅರ 15:32, 35; ಧರ್ಮೋ 17:7
ಯಾಜ. 24:16ಧರ್ಮೋ 5:11
ಯಾಜ. 24:17ಆದಿ 9:6; ವಿಮೋ 21:12; ಅರ 35:31; ಧರ್ಮೋ 19:11-13
ಯಾಜ. 24:19ವಿಮೋ 21:23, 24
ಯಾಜ. 24:20ಧರ್ಮೋ 19:21; ಮತ್ತಾ 5:38
ಯಾಜ. 24:21ವಿಮೋ 22:1
ಯಾಜ. 24:21ಆದಿ 9:6; ವಿಮೋ 21:12
ಯಾಜ. 24:22ವಿಮೋ 12:49; ಯಾಜ 17:10; 19:34; ಅರ 9:14; 15:16
ಯಾಜ. 24:23ಅರ 15:33, 36; ಧರ್ಮೋ 17:7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯಾಜಕಕಾಂಡ 24:1-23

ಯಾಜಕಕಾಂಡ

24 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ 2 “ನನ್ನ ಆಲಯದ ದೀಪಗಳು ಯಾವಾಗ್ಲೂ ಉರೀತಾ ಇರೋ ಹಾಗೆ ಶುದ್ಧ ಆಲಿವ್‌ ಎಣ್ಣೆಯನ್ನ ತಂದು ಕೊಡೋಕೆ ಇಸ್ರಾಯೇಲ್ಯರಿಗೆ ಆಜ್ಞೆ ಕೊಡು.+ 3 ದೇವದರ್ಶನ ಡೇರೆಯಲ್ಲಿ ಸಾಕ್ಷಿ ಮಂಜೂಷದ ಹತ್ರ ಇರೋ ಪರದೆ ಹೊರಗೆ ದೀಪಗಳು ಸಂಜೆಯಿಂದ ಬೆಳಿಗ್ಗೆ ತನಕ ಯೆಹೋವನ ಮುಂದೆ ಉರೀತಾ ಇರೋಕೆ ಆರೋನ ಏರ್ಪಾಡು ಮಾಡಬೇಕು. ಇದು ಶಾಶ್ವತ ನಿಯಮ. ಇದನ್ನ ಎಲ್ಲ ಪೀಳಿಗೆಯವರು ಪಾಲಿಸಬೇಕು. 4 ಯೆಹೋವನ ಮುಂದೆ ಇರೋ ಶುದ್ಧ ಚಿನ್ನದ ದೀಪಸ್ತಂಭದ+ ಮೇಲೆ ದೀಪಗಳು ಯಾವಾಗ್ಲೂ ಜೋಡಿಸಿ ಇಟ್ಟಿರೋ ಹಾಗೆ ಅವನು ನೋಡ್ಕೊಬೇಕು.

5 ನೀನು ನುಣ್ಣಗಿನ ಹಿಟ್ಟನ್ನ ತಗೊಂಡು ಅದ್ರಿಂದ ಬಳೆ ಆಕಾರದ 12 ರೊಟ್ಟಿಗಳನ್ನ ಸುಡಬೇಕು. ಒಂದೊಂದು ರೊಟ್ಟಿನ ಒಂದು ಏಫಾ ಅಳತೆಯ ಹತ್ತರಲ್ಲಿ ಎರಡು ಭಾಗದಷ್ಟು* ಹಿಟ್ಟಿಂದ ಮಾಡಿರಬೇಕು. 6 ಶುದ್ಧ ಚಿನ್ನದಿಂದ ಮಾಡಿದ ಮೇಜಿನ+ ಮೇಲೆ ಯೆಹೋವನ ಮುಂದೆ ಅವನ್ನ ಒಂದ್ರ ಮೇಲೆ ಒಂದ್ರ ತರ ಎರಡು ಸಾಲಾಗಿ ಇಡಬೇಕು. ಒಂದು ಸಾಲಲ್ಲಿ ಆರು ರೊಟ್ಟಿ ಇರಬೇಕು.+ 7 ಎರಡೂ ಸಾಲಿನ ಮೇಲೆ ಶುದ್ಧ ಸಾಂಬ್ರಾಣಿ ಇಡಬೇಕು. ರೊಟ್ಟಿಗಳ ಬದ್ಲು ಆ ಸಾಂಬ್ರಾಣಿನ ಅರ್ಪಿಸಬೇಕು.+ ಇದು ಯೆಹೋವನಿಗೆ ಬೆಂಕಿಯಲ್ಲಿ ಮಾಡೋ ಅರ್ಪಣೆ ಆಗಿದೆ. 8 ಪ್ರತಿ ಸಬ್ಬತ್‌ ದಿನ ಆ ರೊಟ್ಟಿಗಳನ್ನ ಯೆಹೋವನ ಮುಂದೆ ಜೋಡಿಸಿ ಇಡಬೇಕು.+ ಇದು ನಾನು ಇಸ್ರಾಯೇಲ್ಯರ ಜೊತೆ ಮಾಡ್ಕೊಂಡಿರೋ ಶಾಶ್ವತ ಒಪ್ಪಂದ. 9 ಆ ರೊಟ್ಟಿಗಳು ಆರೋನನಿಗೆ ಅವನ ಮಕ್ಕಳಿಗೆ ಸೇರಿದ್ದು.+ ಆ ರೊಟ್ಟಿಗಳನ್ನ ಯೆಹೋವನಿಗೆ ಬೆಂಕಿಯಲ್ಲಿ ಅರ್ಪಣೆಯಾಗಿ ಕೊಡೋದ್ರಿಂದ ಅವು ಪುರೋಹಿತರಿಗೆ ಪವಿತ್ರವಾಗಿವೆ. ಹಾಗಾಗಿ ಅವರು ಅವುಗಳನ್ನ ಒಂದು ಪವಿತ್ರ ಜಾಗದಲ್ಲಿ* ತಿನ್ನಬೇಕು.+ ಇದು ಶಾಶ್ವತ ನಿಯಮ.”

10 ಒಬ್ಬ ಇಸ್ರಾಯೇಲ್ಯ ಸ್ತ್ರೀಗೆ ಈಜಿಪ್ಟಿನ ಪುರುಷನಿಂದ ಹುಟ್ಟಿದ ಒಬ್ಬ ಮಗನಿದ್ದ.+ ಒಂದಿನ ಪಾಳೆಯದಲ್ಲಿ ಅವನಿಗೂ ಒಬ್ಬ ಇಸ್ರಾಯೇಲ್ಯನಿಗೂ ಜಗಳ ಆಯ್ತು. 11 ಇಸ್ರಾಯೇಲ್ಯ ಸ್ತ್ರೀಗೆ ಈಜಿಪ್ಟಿನ ಪುರುಷನಿಂದ ಹುಟ್ಟಿದ ಆ ಮಗ ದೇವರ ಹೆಸರನ್ನ ಬೈಯೋಕೆ* ಮತ್ತು ಶಪಿಸೋಕೆ* ಶುರುಮಾಡಿದ.+ ಹಾಗಾಗಿ ಜನ್ರು ಅವನನ್ನ ಮೋಶೆ ಹತ್ರ ಕರ್ಕೊಂಡು ಬಂದ್ರು.+ ಅವನ ತಾಯಿ ಹೆಸ್ರು ಶೆಲೋಮೀತ್‌. ಅವಳು ದಾನ್‌ ಕುಲದ ದಿಬ್ರೀ ಅನ್ನೋನ ಮಗಳು. 12 ಅವಳ ಮಗನ ಬಗ್ಗೆ ಯೆಹೋವನ ತೀರ್ಪು ಏನಂತ ಗೊತ್ತಾಗೋ ತನಕ ಅವನನ್ನ ಬಂಧಿಸಿಟ್ರು.+

13 ಆಮೇಲೆ ಯೆಹೋವ ಮೋಶೆಗೆ ಹೀಗಂದನು: 14 “ನನ್ನ ಹೆಸರಿಗೆ ಶಾಪ ಹಾಕಿದ ಆ ವ್ಯಕ್ತಿನ ಪಾಳೆಯದ ಹೊರಗೆ ಕರ್ಕೊಂಡು ಬಾ. ಅವನು ಆಡಿದ ಮಾತನ್ನ ಕೇಳಿಸ್ಕೊಂಡವರೆಲ್ಲ ಅವನ ತಲೆ ಮೇಲೆ ಕೈ ಇಡಬೇಕು. ಆಮೇಲೆ ಎಲ್ಲ ಇಸ್ರಾಯೇಲ್ಯರು ಅವನನ್ನ ಕಲ್ಲು ಹೊಡೆದು ಸಾಯಿಸಬೇಕು.+ 15 ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಯಾರಾದ್ರೂ ದೇವರಿಗೆ ಅವಮಾನ ಆಗೋ ತರ ಮಾತಾಡಿದ್ರೆ ಅದು ಪಾಪ. ಹಾಗಾಗಿ ಅವನಿಗೆ ಶಿಕ್ಷೆ ಆಗಬೇಕು. 16 ಯೆಹೋವನ ಹೆಸರಿಗೆ ಗೌರವ ಕೊಡದೆ ಮಾತಾಡಿದ ವ್ಯಕ್ತಿಗೆ ಖಂಡಿತ ಮರಣಶಿಕ್ಷೆ ಆಗಬೇಕು.+ ಎಲ್ಲ ಇಸ್ರಾಯೇಲ್ಯರು ಕಲ್ಲು ಹೊಡೆದು ಅವನನ್ನ ಸಾಯಿಸಬೇಕು. ದೇವರ ಹೆಸರಿಗೆ ಗೌರವ ಕೊಡದೆ ಮಾತಾಡೋನು ಇಸ್ರಾಯೇಲ್ಯನಾಗಿರಲಿ ವಿದೇಶಿಯಾಗಿರಲಿ ಮರಣಶಿಕ್ಷೆ ಆಗಬೇಕು.

17 ಕೊಲೆಗಾರನನ್ನ ಸಾಯಿಸ್ಲೇಬೇಕು.+ 18 ಬೇರೆಯವರ ಸಾಕುಪ್ರಾಣಿನ ಹೊಡೆದು ಕೊಂದ್ರೆ ಕೊಂದವನು ನಷ್ಟಭರ್ತಿ ಮಾಡಬೇಕು. ಅವನು ಪ್ರಾಣಿಗೆ ಬದಲಾಗಿ ಪ್ರಾಣಿನ ಕೊಡಬೇಕು. 19 ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಹಾನಿ ಮಾಡಿದ್ರೆ ಇವನು ಅಷ್ಟೇ ಹಾನಿಯನ್ನ ಅವನಿಗೂ ಮಾಡಬೇಕು.+ 20 ಅವನು ಮೂಳೆ ಮುರಿದ್ರೆ ಇವನೂ ಮೂಳೆಯನ್ನ ಮುರಿಬೇಕು. ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಕೊಡಬೇಕು. ಅವನು ಯಾವ ತರ ಹಾನಿ ಮಾಡಿದ್ದಾನೋ ಅದೇ ತರ ಅವನಿಗೂ ಹಾನಿ ಮಾಡಬೇಕು.+ 21 ಒಬ್ಬನು ಒಂದು ಪ್ರಾಣಿನ ಹೊಡೆದು ಕೊಂದ್ರೆ ಅವನು ನಷ್ಟಭರ್ತಿ ಮಾಡಬೇಕು.+ ಆದ್ರೆ ಅವನು ಒಬ್ಬ ವ್ಯಕ್ತಿನ ಹೊಡೆದು ಕೊಂದ್ರೆ ಅವನನ್ನ ಸಾಯಿಸಬೇಕು.+

22 ಇಸ್ರಾಯೇಲ್ಯನಾಗಿರಲಿ ಅವರ ಮಧ್ಯ ಇರೋ ವಿದೇಶಿಯಾಗಿರಲಿ ಎಲ್ರಿಗೂ ಒಂದೇ ನಿಯಮ,+ ಯಾಕಂದ್ರೆ ನಾನು ನಿಮ್ಮ ದೇವರಾದ ಯೆಹೋವ.’”

23 ಈ ಎಲ್ಲ ಮಾತುಗಳನ್ನ ಮೋಶೆ ಇಸ್ರಾಯೇಲ್ಯರಿಗೆ ಹೇಳಿದ. ದೇವರ ಹೆಸರನ್ನ ಶಪಿಸಿದ ಆ ವ್ಯಕ್ತಿನ ಜನ್ರು ಪಾಳೆಯದ ಹೊರಗೆ ಕರ್ಕೊಂಡು ಬಂದು ಕಲ್ಲು ಹೊಡೆದು ಸಾಯಿಸಿದ್ರು.+ ಹೀಗೆ ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ತರಾನೇ ಇಸ್ರಾಯೇಲ್ಯರು ಮಾಡಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ