ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 21
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಧರ್ಮೋಪದೇಶಕಾಂಡ ಮುಖ್ಯಾಂಶಗಳು

      • ಕೊಲೆಗಾರ ಯಾರಂತ ಗೊತ್ತಿರದಿದ್ರೆ (1-9)

      • ಸೆರೆಹಿಡಿದ ಸ್ತ್ರೀಯನ್ನ ಮದುವೆ ಆಗಬೇಕೆಂದಿದ್ರೆ (10-14)

      • ಜ್ಯೇಷ್ಠ ಮಗನ ಹಕ್ಕು (15-17)

      • ಹಠಮಾರಿ ಮಗ (18-21)

      • ಮರದಕಂಬಕ್ಕೆ ತೂಗುಹಾಕಿದ ವ್ಯಕ್ತಿ ಶಾಪಗ್ರಸ್ತ (22, 23)

ಧರ್ಮೋಪದೇಶಕಾಂಡ 21:2

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 16:18

ಧರ್ಮೋಪದೇಶಕಾಂಡ 21:4

ಮಾರ್ಜಿನಲ್ ರೆಫರೆನ್ಸ್

  • +ಅರ 35:33

ಧರ್ಮೋಪದೇಶಕಾಂಡ 21:5

ಮಾರ್ಜಿನಲ್ ರೆಫರೆನ್ಸ್

  • +ವಿಮೋ 28:1
  • +ಅರ 6:23-27; 1ಪೂರ್ವ 23:13
  • +ಧರ್ಮೋ 17:8, 9

ಧರ್ಮೋಪದೇಶಕಾಂಡ 21:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 26:6; ಮತ್ತಾ 27:24

ಧರ್ಮೋಪದೇಶಕಾಂಡ 21:8

ಮಾರ್ಜಿನಲ್ ರೆಫರೆನ್ಸ್

  • +2ಸಮು 7:23
  • +ಯೆಶಾ 26:21; ಯೆರೆ 26:15

ಧರ್ಮೋಪದೇಶಕಾಂಡ 21:10

ಮಾರ್ಜಿನಲ್ ರೆಫರೆನ್ಸ್

  • +ಅರ 31:9; ಧರ್ಮೋ 20:13, 14

ಧರ್ಮೋಪದೇಶಕಾಂಡ 21:13

ಮಾರ್ಜಿನಲ್ ರೆಫರೆನ್ಸ್

  • +ಅರ 20:29; ಧರ್ಮೋ 34:8

ಧರ್ಮೋಪದೇಶಕಾಂಡ 21:14

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 24:1

ಧರ್ಮೋಪದೇಶಕಾಂಡ 21:15

ಮಾರ್ಜಿನಲ್ ರೆಫರೆನ್ಸ್

  • +ಆದಿ 29:30, 33

ಧರ್ಮೋಪದೇಶಕಾಂಡ 21:17

ಪಾದಟಿಪ್ಪಣಿ

  • *

    ಅಕ್ಷ. “ಸಂತಾನಶಕ್ತಿಯ ಪ್ರಥಮಫಲ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 25:31; 2ಪೂರ್ವ 21:3

ಧರ್ಮೋಪದೇಶಕಾಂಡ 21:18

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:12; ಧರ್ಮೋ 27:16; ಜ್ಞಾನೋ 1:8; ಎಫೆ 6:1
  • +ಧರ್ಮೋ 8:5; ಜ್ಞಾನೋ 13:24; 19:18; 23:13; ಇಬ್ರಿ 12:9

ಧರ್ಮೋಪದೇಶಕಾಂಡ 21:20

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 28:7
  • +ರೋಮ 13:13; 1ಕೊರಿಂ 6:10; ಎಫೆ 5:18

ಧರ್ಮೋಪದೇಶಕಾಂಡ 21:21

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 13:10, 11

ಧರ್ಮೋಪದೇಶಕಾಂಡ 21:22

ಮಾರ್ಜಿನಲ್ ರೆಫರೆನ್ಸ್

  • +ಅರ 25:5
  • +ಯೆಹೋ 10:26; ಅಕಾ 10:39

ಧರ್ಮೋಪದೇಶಕಾಂಡ 21:23

ಮಾರ್ಜಿನಲ್ ರೆಫರೆನ್ಸ್

  • +ಗಲಾ 3:13
  • +ಯೆಹೋ 8:29; ಯೋಹಾ 19:31
  • +ಅರ 35:34

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಧರ್ಮೋ. 21:2ಧರ್ಮೋ 16:18
ಧರ್ಮೋ. 21:4ಅರ 35:33
ಧರ್ಮೋ. 21:5ವಿಮೋ 28:1
ಧರ್ಮೋ. 21:5ಅರ 6:23-27; 1ಪೂರ್ವ 23:13
ಧರ್ಮೋ. 21:5ಧರ್ಮೋ 17:8, 9
ಧರ್ಮೋ. 21:6ಕೀರ್ತ 26:6; ಮತ್ತಾ 27:24
ಧರ್ಮೋ. 21:82ಸಮು 7:23
ಧರ್ಮೋ. 21:8ಯೆಶಾ 26:21; ಯೆರೆ 26:15
ಧರ್ಮೋ. 21:10ಅರ 31:9; ಧರ್ಮೋ 20:13, 14
ಧರ್ಮೋ. 21:13ಅರ 20:29; ಧರ್ಮೋ 34:8
ಧರ್ಮೋ. 21:14ಧರ್ಮೋ 24:1
ಧರ್ಮೋ. 21:15ಆದಿ 29:30, 33
ಧರ್ಮೋ. 21:17ಆದಿ 25:31; 2ಪೂರ್ವ 21:3
ಧರ್ಮೋ. 21:18ವಿಮೋ 20:12; ಧರ್ಮೋ 27:16; ಜ್ಞಾನೋ 1:8; ಎಫೆ 6:1
ಧರ್ಮೋ. 21:18ಧರ್ಮೋ 8:5; ಜ್ಞಾನೋ 13:24; 19:18; 23:13; ಇಬ್ರಿ 12:9
ಧರ್ಮೋ. 21:20ಜ್ಞಾನೋ 28:7
ಧರ್ಮೋ. 21:20ರೋಮ 13:13; 1ಕೊರಿಂ 6:10; ಎಫೆ 5:18
ಧರ್ಮೋ. 21:21ಧರ್ಮೋ 13:10, 11
ಧರ್ಮೋ. 21:22ಅರ 25:5
ಧರ್ಮೋ. 21:22ಯೆಹೋ 10:26; ಅಕಾ 10:39
ಧರ್ಮೋ. 21:23ಗಲಾ 3:13
ಧರ್ಮೋ. 21:23ಯೆಹೋ 8:29; ಯೋಹಾ 19:31
ಧರ್ಮೋ. 21:23ಅರ 35:34
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಧರ್ಮೋಪದೇಶಕಾಂಡ 21:1-23

ಧರ್ಮೋಪದೇಶಕಾಂಡ

21 ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶದಲ್ಲಿ ಯಾರಾದ್ರೂ ಕೊಲೆಯಾಗಿ ಬಯಲಲ್ಲಿ ಬಿದ್ದಿರೋದನ್ನ ನೀವು ನೋಡಿದ್ರೆ, ಕೊಲೆಗಾರ ಯಾರು ಅಂತ ನಿಮಗೆ ಗೊತ್ತಿಲ್ಲಾಂದ್ರೆ 2 ನಿಮ್ಮ ಹಿರಿಯರು, ನ್ಯಾಯಾಧೀಶರು+ ಅಲ್ಲಿ ಹೋಗಿ ಶವ ಬಿದ್ದಿರೋ ಜಾಗದಿಂದ ಸುತ್ತಮುತ್ತ ಇರೋ ಪಟ್ಟಣಗಳು ಎಷ್ಟು ದೂರ ಇದೆ ಅಂತ ಅಳತೆ ಮಾಡಬೇಕು. 3 ಆ ಶವ ಬಿದ್ದಿರೋ ಜಾಗಕ್ಕೆ ತುಂಬ ಹತ್ರ ಇರೋ ಪಟ್ಟಣದ ಹಿರಿಯರು ಒಂದು ಎಳೇ ಹಸು ತಗೊಂಡು ಬರಬೇಕು. ಆ ಹಸು ಇಲ್ಲಿ ತನಕ ಯಾವ ಕೆಲಸನೂ ಮಾಡಿರಬಾರದು, ಅದು ಯಾವತ್ತೂ ನೊಗ ಎಳೆದಿರಬಾರದು. 4 ಆ ಪಟ್ಟಣದ ಹಿರಿಯರು ಆ ಎಳೇ ಹಸುನ ನೀರು ಹರಿತಿರೋ ಕಣಿವೆಗೆ ಕರ್ಕೊಂಡು ಹೋಗಬೇಕು. ಆ ಕಣಿವೆಯಲ್ಲಿ ಉಳುಮೆ ಮಾಡಿರಬಾರದು, ಬಿತ್ತನೆ ಮಾಡಿರಬಾರದು. ಅಲ್ಲಿ ಆ ಹಸುನ ಕುತ್ತಿಗೆ ಮುರಿದು ಸಾಯಿಸಬೇಕು.+

5 ಆಮೇಲೆ ಲೇವಿಯರಾದ ಪುರೋಹಿತರು ಅಲ್ಲಿಗೆ ಬರ್ತಾರೆ. ಯಾಕಂದ್ರೆ ನಿಮ್ಮ ದೇವರಾದ ಯೆಹೋವ ಅವ್ರನ್ನ ತನ್ನ ಸೇವೆಗಾಗಿ ಆರಿಸ್ಕೊಂಡಿದ್ದಾನೆ.+ ಅವರು ಯೆಹೋವನ ಹೆಸ್ರಲ್ಲಿ ಜನ್ರಿಗೆ ಆಶೀರ್ವಾದ ಮಾಡ್ತಾರೆ.+ ಹಿಂಸೆ ಹೊಡೆದಾಟ ನಡೆದಾಗೆಲ್ಲ ಅದನ್ನ ಹೇಗೆ ಇತ್ಯರ್ಥ ಮಾಡಬೇಕು ಅಂತ ಹೇಳ್ತಾರೆ.+ 6 ಆಮೇಲೆ, ಶವ ಬಿದ್ದಿರೋ ಜಾಗಕ್ಕೆ ತುಂಬ ಹತ್ರ ಇರೋ ಪಟ್ಟಣದ ಹಿರಿಯರು ಕಣಿವೆಯಲ್ಲಿ ಕುತ್ತಿಗೆ ಮುರಿದು ಸಾಯಿಸಿದ ಎಳೇ ಹಸು ಮೇಲೆ ಕೈ ತೊಳೀಬೇಕು.+ 7 ಅವರು ‘ನಾವು ಈ ಕೊಲೆ ಮಾಡಿಲ್ಲ, ಈ ಕೊಲೆ ಆಗಿದ್ದೂ ನಾವು ನೋಡಿಲ್ಲ. 8 ಯೆಹೋವನೇ, ನೀನು ಬಿಡಿಸ್ಕೊಂಡು ಬಂದಿರೋ ನಿನ್ನ ಜನ್ರಾದ ಇಸ್ರಾಯೇಲ್ಯರನ್ನ+ ಈ ಕೊಲೆಗೆ ಹೊಣೆಗಾರರಾಗಿ ಮಾಡಬೇಡ. ಅನ್ಯಾಯವಾಗಿ ಸತ್ತಿರೋ ಈ ವ್ಯಕ್ತಿಯ ಕೊಲೆ ಅಪರಾಧ ನಮ್ಮ ಮೇಲೆ ಬರೋಕೆ ಬಿಡಬೇಡ’+ ಅನ್ನಬೇಕು. ಆಗ ಆ ಕೊಲೆ ಅಪರಾಧ ಅವ್ರ ಮೇಲೆ ಬರಲ್ಲ. 9 ಹೀಗೆ ನೀವು ಯೆಹೋವನಿಗೆ ಸರಿ ಅನಿಸಿದ್ದನ್ನ ಮಾಡೋ ಮೂಲಕ ಅನ್ಯಾಯವಾಗಿ ಸತ್ತ ವ್ಯಕ್ತಿಯ ಕೊಲೆ ಅಪರಾಧವನ್ನ ನಿಮ್ಮಿಂದ ತೆಗೆದುಹಾಕ್ತೀರ.

10 ನಿಮ್ಮ ಶತ್ರುಗಳ ವಿರುದ್ಧ ಯುದ್ಧಕ್ಕೆ ಹೋದಾಗ ನಿಮ್ಮ ದೇವರಾದ ಯೆಹೋವ ಅವ್ರನ್ನ ನಿಮಗೋಸ್ಕರ ಸೋಲಿಸಿದ್ದಾನೆ. ನೀವು ಅವ್ರನ್ನ ಬಂಧಿಸಿದ್ದೀರ ಅಂದ್ಕೊಳ್ಳಿ.+ 11 ನಿಮ್ಮಲ್ಲಿ ಯಾರಾದ್ರೂ ಆ ಕೈದಿಗಳಲ್ಲಿ ಒಬ್ಬ ಸುಂದರ ಸ್ತ್ರೀಯನ್ನ ನೋಡಿ, ಅವಳ ಅಂದಕ್ಕೆ ಮನಸೋತು ಮದುವೆ ಆಗೋಕೆ ಇಷ್ಟಪಟ್ರೆ 12 ಅವಳನ್ನ ನಿಮ್ಮ ಮನೆಗೆ ಕರ್ಕೊಂಡು ಹೋಗಬಹುದು. ಆಮೇಲೆ ಅವಳು ತನ್ನ ತಲೆ ಬೋಳಿಸ್ಕೊಳ್ಳಬೇಕು, ಉಗುರು ಕತ್ತರಿಸ್ಕೊಳ್ಳಬೇಕು, 13 ಕೈದಿಯಾಗಿ ಬರುವಾಗ ಹಾಕಿದ್ದ ಬಟ್ಟೆ ಬದಲಾಯಿಸಿ ಅವನ ಮನೇಲಿ ಇರಬೇಕು. ತೀರಿಹೋದ ತನ್ನ ಅಪ್ಪಅಮ್ಮಗಾಗಿ ಅವಳು ಒಂದು ಇಡೀ ತಿಂಗಳು ಗೋಳಾಡಬೇಕು.+ ಆಮೇಲೆ ಅವನು ಅವಳನ್ನ ಮದುವೆಯಾಗಿ ತನ್ನ ಹೆಂಡತಿಯಾಗಿ ಮಾಡ್ಕೊಬಹುದು. 14 ಅವಳು ಇಷ್ಟವಾಗದೇ ಹೋದ್ರೆ ಅವಳಿಗೆ ಎಲ್ಲಿ ಇಷ್ಟಾನೋ ಅಲ್ಲಿಗೆ ಕಳಿಸಿಬಿಡಬೇಕು.+ ಅವಳನ್ನ ಒತ್ತಾಯದಿಂದ ಮದುವೆ ಆಗಿರೋದ್ರಿಂದ ಅವಳನ್ನ ಮಾರಬಾರದು, ಕ್ರೂರವಾಗಿ ನಡ್ಕೊಬಾರದು.

15 ಒಬ್ಬನಿಗೆ ಎರಡು ಹೆಂಡತಿ ಇದ್ರೆ ಒಬ್ಬಳನ್ನ ತುಂಬ ಪ್ರೀತಿಸಿ ಇನ್ನೊಬ್ಬಳನ್ನ ಪ್ರೀತಿಸದಿದ್ರೆ, ಆ ಇಬ್ರು ಹೆಂಡತಿಯರಿಗೂ ಗಂಡು ಮಕ್ಕಳಾಗಿ ಯಾರ ಮೇಲೆ ಅವನಿಗೆ ಜಾಸ್ತಿ ಪ್ರೀತಿ ಇಲ್ವೋ ಅವಳ ಮಗನೇ ಮೊದಲನೇ ಮಗ ಆಗಿದ್ರೆ+ 16 ಅವನು ಆಸ್ತಿ ಪಾಲುಮಾಡಿ ಕೊಡುವಾಗ ಇದನ್ನ ನೆನಪಲ್ಲಿ ಇಟ್ಕೊಬೇಕು: ಅವನು ಆ ಮೊದಲ ಮಗನನ್ನ ಬಿಟ್ಟು ತನಗೆ ಯಾರ ಮೇಲೆ ಜಾಸ್ತಿ ಪ್ರೀತಿ ಇದ್ಯೋ ಅವಳ ಮಗನಿಗೆ ಮೊದಲ ಮಗನ ಸ್ಥಾನ ಕೊಡಬಾರದು. 17 ಯಾರ ಮೇಲೆ ಜಾಸ್ತಿ ಪ್ರೀತಿ ಇಲ್ವೋ ಆ ಹೆಂಡತಿಯ ಮಗನನ್ನೇ ಮೊದಲ ಮಗ ಅಂತ ಒಪ್ಕೊಂಡು ತನ್ನ ಹತ್ರ ಏನೆಲ್ಲ ಇದ್ಯೋ ಅದ್ರಲ್ಲಿ ಎರಡು ಭಾಗ ಅವನಿಗೆ ಕೊಡಬೇಕು. ಯಾಕಂದ್ರೆ ಆ ಮಗನೇ ತಂದೆಯ ಮೊದಲ ಸಂತಾನ.* ಜೇಷ್ಠಪುತ್ರನ ಹಕ್ಕು ಇರೋದು ಆ ಮಗನಿಗೇ.+

18 ಯಾರ ಮಗನಾದ್ರೂ ಹಠಮಾರಿ ಆಗಿದ್ರೆ ದಂಗೆ ಏಳೋ ಸ್ವಭಾವ ಇದ್ರೆ ಅಪ್ಪಅಮ್ಮನ ಮಾತು ಕೇಳದಿದ್ರೆ+ ಅವನನ್ನ ತಿದ್ದೋಕೆ ಎಷ್ಟೇ ಪ್ರಯತ್ನ ಮಾಡಿದ್ರೂ ಬಗ್ಗದಿದ್ರೆ+ 19 ಅವನ ಅಪ್ಪಅಮ್ಮ ಅವನನ್ನ ಹಿಡ್ಕೊಂಡು ಅವನಿರೋ ಪಟ್ಟಣದ ಬಾಗಿಲ ಹತ್ರ ಇರೋ ಹಿರಿಯರ ಹತ್ರ ಕರ್ಕೊಂಡು ಬರಬೇಕು. 20 ಆ ಹಿರಿಯರಿಗೆ ‘ನಮ್ಮ ಮಗ ತುಂಬ ಹಠಮಾರಿ, ದಂಗೆಕೋರ. ನಮ್ಮ ಮಾತು ಕೇಳೋದೇ ಇಲ್ಲ. ಅವನು ಹೊಟ್ಟೆಬಾಕ+ ಕುಡುಕ’ + ಅಂತ ಹೇಳಬೇಕು. 21 ಆಗ ಆ ಪಟ್ಟಣದ ಎಲ್ಲ ಜನ್ರು ಅವನನ್ನ ಕಲ್ಲು ಹೊಡೆದು ಸಾಯಿಸಬೇಕು. ಹೀಗೆ ನಿಮ್ಮ ಮಧ್ಯದಿಂದ ಆ ಕೆಟ್ಟತನ ತೆಗೆದುಬಿಡಬೇಕು. ಇದನ್ನ ಕೇಳಿ ಎಲ್ಲ ಇಸ್ರಾಯೇಲ್ಯರೂ ಹೆದರ್ತಾರೆ.+

22 ಒಬ್ಬ ಮರಣದಂಡನೆಗೆ ತಕ್ಕ ಪಾಪ ಮಾಡಿದ್ರೆ ಅವನನ್ನ ಸಾಯಿಸಿ+ ಮರದಕಂಬಕ್ಕೆ ಅವನ ಶವ ನೇತುಹಾಕಬೇಕು.+ 23 ಆದ್ರೆ ಆ ಶವನ ಅದೇ ದಿನ ಸಮಾಧಿ ಮಾಡಬೇಕು. ಕಂಬಕ್ಕೆ ನೇತುಹಾಕಿದ ವ್ಯಕ್ತಿ ಮೇಲೆ ದೇವರ ಶಾಪ ಇದೆ.+ ಹಾಗಾಗಿ ಇಡೀ ರಾತ್ರಿ ಕಂಬದ ಮೇಲೆನೇ ಶವ ಇರೋಕೆ ಬಿಡಬಾರದು.+ ಬಿಟ್ರೆ ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡೋ ದೇಶ ಅಪವಿತ್ರ ಆಗುತ್ತೆ.+ ಹಾಗೆ ಅಪವಿತ್ರ ಆಗೋಕೆ ಬಿಡಬಾರದು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ