ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ವಿಮೋಚನಕಾಂಡ ಮುಖ್ಯಾಂಶಗಳು

      • ಶಿಕ್ಷೆ 8: ಮಿಡತೆಗಳು (1-20)

      • ಶಿಕ್ಷೆ 9: ಕತ್ತಲೆ (21-29)

ವಿಮೋಚನಕಾಂಡ 10:1

ಪಾದಟಿಪ್ಪಣಿ

  • *

    ಅಕ್ಷ. “ಅವನ ಮತ್ತು ಅವನ ಸೇವಕರ ಹೃದಯಗಳು.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 4:21; 9:34
  • +ವಿಮೋ 9:15, 16; ಕೀರ್ತ 78:12; ರೋಮ 9:17

ವಿಮೋಚನಕಾಂಡ 10:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 13:3, 8; ಧರ್ಮೋ 4:9; 6:20-22; ಕೀರ್ತ 44:1

ವಿಮೋಚನಕಾಂಡ 10:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 9:17

ವಿಮೋಚನಕಾಂಡ 10:5

ಮಾರ್ಜಿನಲ್ ರೆಫರೆನ್ಸ್

  • +ವಿಮೋ 9:31, 32

ವಿಮೋಚನಕಾಂಡ 10:6

ಮಾರ್ಜಿನಲ್ ರೆಫರೆನ್ಸ್

  • +ವಿಮೋ 9:24

ವಿಮೋಚನಕಾಂಡ 10:9

ಮಾರ್ಜಿನಲ್ ರೆಫರೆನ್ಸ್

  • +ವಿಮೋ 10:25, 26
  • +ವಿಮೋ 3:18; 5:1

ವಿಮೋಚನಕಾಂಡ 10:10

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:31, 32

ವಿಮೋಚನಕಾಂಡ 10:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 78:46
  • +ವಿಮೋ 10:5; ಕೀರ್ತ 105:34, 35

ವಿಮೋಚನಕಾಂಡ 10:18

ಪಾದಟಿಪ್ಪಣಿ

  • *

    ಮೋಶೆ ಆಗಿರಬಹುದು.

ಮಾರ್ಜಿನಲ್ ರೆಫರೆನ್ಸ್

  • +ವಿಮೋ 8:30, 31

ವಿಮೋಚನಕಾಂಡ 10:20

ಮಾರ್ಜಿನಲ್ ರೆಫರೆನ್ಸ್

  • +ವಿಮೋ 7:3; 11:10; ರೋಮ 9:17, 18

ವಿಮೋಚನಕಾಂಡ 10:22

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 105:28

ವಿಮೋಚನಕಾಂಡ 10:23

ಮಾರ್ಜಿನಲ್ ರೆಫರೆನ್ಸ್

  • +ವಿಮೋ 8:21, 22; 9:3, 6, 26; 11:7; 12:13

ವಿಮೋಚನಕಾಂಡ 10:24

ಮಾರ್ಜಿನಲ್ ರೆಫರೆನ್ಸ್

  • +ವಿಮೋ 8:28; 9:28

ವಿಮೋಚನಕಾಂಡ 10:25

ಮಾರ್ಜಿನಲ್ ರೆಫರೆನ್ಸ್

  • +ವಿಮೋ 3:18; 5:3

ವಿಮೋಚನಕಾಂಡ 10:27

ಮಾರ್ಜಿನಲ್ ರೆಫರೆನ್ಸ್

  • +ವಿಮೋ 4:21; 14:4

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ವಿಮೋ. 10:1ವಿಮೋ 4:21; 9:34
ವಿಮೋ. 10:1ವಿಮೋ 9:15, 16; ಕೀರ್ತ 78:12; ರೋಮ 9:17
ವಿಮೋ. 10:2ವಿಮೋ 13:3, 8; ಧರ್ಮೋ 4:9; 6:20-22; ಕೀರ್ತ 44:1
ವಿಮೋ. 10:3ವಿಮೋ 9:17
ವಿಮೋ. 10:5ವಿಮೋ 9:31, 32
ವಿಮೋ. 10:6ವಿಮೋ 9:24
ವಿಮೋ. 10:9ವಿಮೋ 10:25, 26
ವಿಮೋ. 10:9ವಿಮೋ 3:18; 5:1
ವಿಮೋ. 10:10ವಿಮೋ 12:31, 32
ವಿಮೋ. 10:14ಕೀರ್ತ 78:46
ವಿಮೋ. 10:14ವಿಮೋ 10:5; ಕೀರ್ತ 105:34, 35
ವಿಮೋ. 10:18ವಿಮೋ 8:30, 31
ವಿಮೋ. 10:20ವಿಮೋ 7:3; 11:10; ರೋಮ 9:17, 18
ವಿಮೋ. 10:22ಕೀರ್ತ 105:28
ವಿಮೋ. 10:23ವಿಮೋ 8:21, 22; 9:3, 6, 26; 11:7; 12:13
ವಿಮೋ. 10:24ವಿಮೋ 8:28; 9:28
ವಿಮೋ. 10:25ವಿಮೋ 3:18; 5:3
ವಿಮೋ. 10:27ವಿಮೋ 4:21; 14:4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ವಿಮೋಚನಕಾಂಡ 10:1-29

ವಿಮೋಚನಕಾಂಡ

10 ಆಮೇಲೆ ಯೆಹೋವ ಮೋಶೆಗೆ “ನೀನು ಫರೋಹನ ಹತ್ರ ಹೋಗು. ಅವನು, ಅವನ ಸೇವಕರು* ಒಂಚೂರೂ ಬದಲಾಗಿಲ್ಲ. ಹಾಗೇ ಇರಲಿ ಅಂತ ಅವರನ್ನ ಬಿಟ್ಟಿದ್ದೀನಿ.+ ಇದ್ರಿಂದ ನಾನು ಫರೋಹನ ಕಣ್ಮುಂದೆನೇ ಅದ್ಭುತಗಳನ್ನ ಮಾಡಕ್ಕಾಗುತ್ತೆ.+ 2 ನಾನು ಈಜಿಪ್ಟಿಗೆ ಯಾವ್ಯಾವ ಶಿಕ್ಷೆ ಕೊಟ್ಟೆ, ಯಾವ್ಯಾವ ಅದ್ಭುತ ಮಾಡಿದೆ ಅಂತ ನಿಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಹೇಳಕ್ಕಾಗುತ್ತೆ.+ ಅಷ್ಟೇ ಅಲ್ಲ ನಾನೇ ಯೆಹೋವ ಅಂತ ನಿಮಗೆ ಖಂಡಿತ ಗೊತ್ತಾಗುತ್ತೆ” ಅಂದನು.

3 ಮೋಶೆ ಆರೋನ ಫರೋಹನ ಹತ್ರ ಹೋಗಿ ಹೀಗಂದ್ರು: “ಇಬ್ರಿಯರ ದೇವರಾದ ಯೆಹೋವ ನಿನಗೆ ಹೇಳೋದು ಏನಂದ್ರೆ ‘ಇನ್ನೆಷ್ಟು ದಿನ ನೀನು ನನ್ನ ಮುಂದೆ ತಗ್ಗಿಸಿಕೊಳ್ಳದೆ ಇರ್ತಿಯ?+ ನನ್ನ ಜನ್ರನ್ನ ಕಳ್ಸು. ಅವರು ನನ್ನ ಆರಾಧನೆ ಮಾಡಬೇಕು. 4 ಒಂದುವೇಳೆ ನೀನು ನನ್ನ ಜನ್ರನ್ನ ಕಳಿಸೋಕೆ ಒಪ್ಪದೇ ಇದ್ರೆ ನಾಳೆ ನಿನ್ನ ದೇಶದಲ್ಲಿ ಮಿಡತೆಗಳು ಬರೋ ಹಾಗೆ ಮಾಡ್ತೀನಿ. 5 ಅವು ನೆಲ ಕಾಣದಿರೋ ಹಾಗೆ ದೇಶವನ್ನ ಮುಚ್ಚಿಬಿಡುತ್ತೆ. ಹೊಲದಲ್ಲಿರೋ ಎಲ್ಲ ಮರಗಳ ಎಲೆಗಳನ್ನ ಒಂದೂ ಬಿಡದೆ ತಿಂದುಬಿಡುತ್ತೆ. ಆಲಿಕಲ್ಲು ಬಿದ್ದಾಗ ನಾಶ ಆಗದೆ ಉಳಿದ ಎಲ್ಲವನ್ನ ತಿಂದುಬಿಡುತ್ತೆ.+ 6 ಆ ಮಿಡತೆಗಳು ನಿನ್ನ ಮನೆಗಳಲ್ಲಿ, ನಿನ್ನ ಎಲ್ಲ ಸೇವಕರ ಮನೆಗಳಲ್ಲಿ, ಈಜಿಪ್ಟಿನ ಎಲ್ಲ ಮನೆಗಳಲ್ಲಿ ತುಂಬ್ಕೊಳ್ಳುತ್ತೆ. ಮಿಡತೆಗಳ ಅಂಥ ದೊಡ್ಡ ದಂಡನ್ನ ನಿನ್ನ ತಂದೆತಾತಂದಿರ ಕಾಲದಿಂದ ಇವತ್ತಿನ ತನಕ ಈ ದೇಶದಲ್ಲಿ ಯಾರೂ ನೋಡಿರಲ್ಲ.’”+ ಇದನ್ನ ಹೇಳಿ ಮೋಶೆ ಫರೋಹನ ಹತ್ರದಿಂದ ಹೋದ.

7 ಆಮೇಲೆ ಫರೋಹನಿಗೆ ಅವನ ಸೇವಕರು “ಈ ಮನುಷ್ಯ ಇನ್ನೆಷ್ಟು ದಿನ ನಮ್ಮ ಮೇಲೆ ಕಷ್ಟ ತರ್ತಾನೆ? ಆ ಜನ್ರನ್ನ ಬಿಟ್ಟುಬಿಡು, ಅವರು ತಮ್ಮ ದೇವರಾದ ಯೆಹೋವನ ಆರಾಧನೆ ಮಾಡ್ಲಿ. ಈಜಿಪ್ಟ್‌ ದೇಶವೆಲ್ಲ ನಾಶವಾಗಿ ಹೋಗಿದೆ. ಇನ್ನೂ ಇದು ನಿನಗೆ ಅರ್ಥ ಆಗ್ತಿಲ್ವಾ?” ಅಂದ್ರು. 8 ಆಗ ಮೋಶೆ ಆರೋನನನ್ನ ಫರೋಹ ಕರೆಸಿ “ಹೋಗಿ, ನಿಮ್ಮ ದೇವರಾದ ಯೆಹೋವನ ಆರಾಧನೆ ಮಾಡಿ. ಆದ್ರೆ ಯಾರೆಲ್ಲ ಹೋಗ್ತಿರ ಅಂತ ಹೇಳಿ” ಅಂದ. 9 ಅದಕ್ಕೆ ಮೋಶೆ “ನಾವು ಯೆಹೋವನ ಘನತೆಗಾಗಿ ಹಬ್ಬ ಮಾಡ್ತೀವಿ. ಹಾಗಾಗಿ ಯುವಕರು, ವಯಸ್ಸಾದವರು, ಗಂಡುಹೆಣ್ಣು ಮಕ್ಕಳು ಹೀಗೆ ನಮ್ಮವರೆಲ್ಲಾ ಹೋಗ್ತೀವಿ. ನಮ್ಮ ಕುರಿದನಗಳನ್ನೂ+ ತಗೊಂಡು ಹೋಗ್ತೀವಿ”+ ಅಂದ. 10 ಆಗ ಫರೋಹ “ನಾನು ನಿಮ್ಮನ್ನ, ನಿಮ್ಮ ಮಕ್ಕಳನ್ನ ನಿಜವಾಗ್ಲೂ ಕಳಿಸ್ತೀನಿ ಅಂದ್ಕೊಂಡ್ರಾ? ನಿಮ್ಮನ್ನ ಹೋಗೋಕೆ ಬಿಟ್ರೆ ಯೆಹೋವ ನಿಮ್ಮ ಜೊತೆ ಇದ್ದಾನೆ ಅನ್ನೋದು ನಿಜ ಆಗುತ್ತೆ!+ ನೀವು ಹೋಗಬೇಕಂತ ಹೇಳ್ತಿರೋದು ಏನೋ ಕೆಟ್ಟ ಉದ್ದೇಶ ಇಟ್ಕೊಂಡೇ ಅಂತ ನಂಗೊತ್ತು. 11 ನಾನು ಎಲ್ರನ್ನೂ ಕಳಿಸಲ್ಲ. ಬೇಕಿದ್ರೆ ನಿಮ್ಮಲ್ಲಿರೋ ಗಂಡಸರು ಮಾತ್ರ ಹೋಗಿ ಯೆಹೋವನ ಆರಾಧನೆ ಮಾಡಿ. ನೀವು ಕೇಳಿದ್ದು ಅದನ್ನೇ ತಾನೇ?” ಅಂದ. ಆಮೇಲೆ ಅವರನ್ನ ಫರೋಹನ ಎದುರಿಂದ ಓಡಿಸಿಬಿಟ್ರು.

12 ಆಮೇಲೆ ಯೆಹೋವ ಮೋಶೆಗೆ “ನೀನು ಈಜಿಪ್ಟ್‌ ದೇಶದ ಮೇಲೆ ಕೈಚಾಚು. ಆಗ ದೇಶದಲ್ಲೆಲ್ಲ ಮಿಡತೆಗಳು ಬರುತ್ತೆ. ಅವು ಆಲಿಕಲ್ಲಿಂದ ನಾಶ ಆಗದಿದ್ದ ಗಿಡಗಳನ್ನ, ಉಳಿದ ಬೆಳೆಗಳನ್ನ ತಿಂದುಬಿಡುತ್ತೆ” ಅಂದನು. 13 ತಕ್ಷಣ ಮೋಶೆ ತನ್ನ ಕೋಲನ್ನ ಈಜಿಪ್ಟ್‌ ದೇಶದ ಮೇಲೆ ಚಾಚಿದ. ಆಗ ಯೆಹೋವ ಹಗಲಿಡೀ, ರಾತ್ರಿಯಿಡೀ ಪೂರ್ವದಿಕ್ಕಿಂದ ಗಾಳಿ ಬೀಸೋ ಹಾಗೆ ಮಾಡಿದನು. ಬೆಳಿಗ್ಗೆ ನೋಡಿದಾಗ ಪೂರ್ವದಿಕ್ಕಿನ ಆ ಗಾಳಿ ಮಿಡತೆಗಳನ್ನ ಹೊತ್ತುತಂದಿತ್ತು. 14 ಮಿಡತೆಗಳು ಬಂದು ಆ ದೇಶದ ಎಲ್ಲಾ ಕಡೆ ಮುತ್ಕೊಂಡು ಬಿಡ್ತು.+ ಆ ಮಿಡತೆಗಳ ಕಾಟ ವಿಪರೀತ ಆಗಿತ್ತು.+ ಯಾವತ್ತೂ ಅಷ್ಟು ಮಿಡತೆಗಳು ಬಂದಿರಲಿಲ್ಲ, ಮುಂದೆನೂ ಬರಲ್ಲ. 15 ಮಿಡತೆಗಳ ಸಂಖ್ಯೆ ಎಷ್ಟು ಜಾಸ್ತಿ ಇತ್ತಂದ್ರೆ ಅವು ಇಡೀ ದೇಶದ ನೆಲವನ್ನ ಮುಚ್ಚಿಕೊಂಡಿತ್ತು. ಅವುಗಳಿಂದ ದೇಶದಲ್ಲೆಲ್ಲ ಕತ್ತಲೆ ಕವಿದಿತ್ತು. ಆಲಿಕಲ್ಲು ಬಿದ್ದಾಗ ನಾಶ ಆಗದೆ ಉಳಿದ ಎಲ್ಲ ಗಿಡಗಳನ್ನ, ಮರಗಳಲ್ಲಿದ್ದ ಎಲ್ಲ ಹಣ್ಣನ್ನ ಮಿಡತೆಗಳು ತಿಂದುಬಿಡ್ತು. ಇಡೀ ಈಜಿಪ್ಟ್‌ ದೇಶದಲ್ಲಿ ಒಂದೇ ಒಂದು ಹಸಿರು ಎಲೆ ಆಗ್ಲಿ ಹಸಿರು ಹುಲ್ಲಾಗ್ಲಿ ಕಾಣಿಸಲಿಲ್ಲ.

16 ಆಗ ಮೋಶೆ ಆರೋನರನ್ನ ಫರೋಹ ಬೇಗ ಕರೆಸಿ “ನಾನು ನಿಮ್ಮ ದೇವರಾದ ಯೆಹೋವನ ವಿರುದ್ಧ, ನಿಮ್ಮ ವಿರುದ್ಧ ಪಾಪ ಮಾಡಿದ್ದೀನಿ. 17 ದಯವಿಟ್ಟು ಇದೊಂದು ಸಲ ನನ್ನ ಪಾಪ ಕ್ಷಮಿಸಿ. ಜೀವ ತೆಗಿಯೋ ಈ ಶಿಕ್ಷೆಯನ್ನ ತೆಗೆದು ಹಾಕೋಕೆ ನಿಮ್ಮ ದೇವರಾದ ಯೆಹೋವನ ಹತ್ರ ಬೇಡ್ಕೊಳಿ” ಅಂದ. 18 ಹಾಗಾಗಿ ಅವನು* ಅಲ್ಲಿಂದ ಹೋಗಿ ಯೆಹೋವನ ಹತ್ರ ಬೇಡಿದ.+ 19 ಆಗ ಯೆಹೋವ ಗಾಳಿಯ ದಿಕ್ಕನ್ನ ಬದಲಾಯಿಸಿದನು. ಗಾಳಿ ಪಶ್ಚಿಮ ದಿಕ್ಕಿಂದ ತುಂಬ ಜೋರಾಗಿ ಬೀಸ್ತು. ಅದು ಮಿಡತೆಗಳನ್ನ ಹೊತ್ಕೊಂಡು ಹೋಗಿ ಕೆಂಪು ಸಮುದ್ರದಲ್ಲಿ ಹಾಕಿಬಿಡ್ತು. ಈಜಿಪ್ಟ್‌ ದೇಶದಲ್ಲಿ ಎಲ್ಲೂ ಒಂದೇ ಒಂದು ಮಿಡತೆನೂ ಇರಲಿಲ್ಲ. 20 ಆದ್ರೂ ಫರೋಹ ಹೃದಯ ಕಲ್ಲು ಮಾಡ್ಕೊಂಡ. ಅವನು ಹಾಗೇ ಇರೋಕೆ ಯೆಹೋವ ಬಿಟ್ಟನು.+ ಫರೋಹ ಇಸ್ರಾಯೇಲ್ಯರನ್ನ ಕಳಿಸಲಿಲ್ಲ.

21 ಆಮೇಲೆ ಯೆಹೋವ ಮೋಶೆಗೆ “ನಿನ್ನ ಕೈಯನ್ನ ಆಕಾಶದ ಕಡೆಗೆ ಚಾಚು. ಆಗ ಈಜಿಪ್ಟ್‌ ದೇಶದಲ್ಲಿ ಕತ್ತಲೆ ಕವಿಯುತ್ತೆ. ಅದು ಗಾಢ ಕತ್ತಲೆ ಆಗಿರುತ್ತೆ” ಅಂದನು. 22 ತಕ್ಷಣ ಮೋಶೆ ಕೈಯನ್ನ ಆಕಾಶದ ಕಡೆ ಚಾಚಿದ. ಆಗ ಇಡೀ ಈಜಿಪ್ಟ್‌ ದೇಶದಲ್ಲಿ ಗಾಢ ಕತ್ತಲೆ ಕವಿತು. ಮೂರು ದಿನ ದೇಶದಲ್ಲಿ ಕಾರ್ಗತ್ತಲೆ ಇತ್ತು.+ 23 ಆ ಮೂರು ದಿನ ಈಜಿಪ್ಟ್‌ ಜನ ಒಬ್ರು ಇನ್ನೊಬ್ರನ್ನ ನೋಡಕ್ಕಾಗಲಿಲ್ಲ, ಯಾರೂ ತಾವಿದ್ದ ಸ್ಥಳ ಬಿಟ್ಟು ಆಚೀಚೆ ಹೋಗಲಿಲ್ಲ. ಆದ್ರೆ ಇಸ್ರಾಯೇಲ್ಯರು ವಾಸವಾಗಿದ್ದ ಪ್ರದೇಶದಲ್ಲಿ ಬೆಳಕಿತ್ತು.+ 24 ಆಮೇಲೆ ಫರೋಹ ಮೋಶೆನ ಕರೆದು “ಹೋಗಿ, ಯೆಹೋವನ ಆರಾಧನೆ ಮಾಡಿ.+ ನಿಮ್ಮ ಮಕ್ಕಳನ್ನೂ ಕರ್ಕೊಂಡು ಹೋಗಬಹುದು. ನಿಮ್ಮ ಕುರಿ, ದನಗಳನ್ನ ಮಾತ್ರ ಇಲ್ಲೇ ಬಿಟ್ಟು ಹೋಗಬೇಕು” ಅಂದ. 25 ಅದಕ್ಕೆ ಮೋಶೆ “ನಮ್ಮ ದೇವರಾದ ಯೆಹೋವನಿಗೆ ಬಲಿ ಅರ್ಪಿಸೋಕೆ, ಸರ್ವಾಂಗಹೋಮ ಕೊಡೋಕೆ ನೀನು ನಮಗೆ ಪ್ರಾಣಿಗಳನ್ನ ಸಹ ಕೊಡಬೇಕು.+ 26 ಅದಕ್ಕೆ ನಾವು ನಮ್ಮ ಪ್ರಾಣಿಗಳನ್ನ ಸಹ ತಗೊಂಡು ಹೋಗ್ತೀವಿ. ಒಂದನ್ನೂ ಬಿಟ್ಟುಹೋಗೋಕೆ ಆಗಲ್ಲ. ಯಾಕಂದ್ರೆ ಅದ್ರಲ್ಲಿ ಕೆಲವನ್ನ ನಮ್ಮ ದೇವರಾದ ಯೆಹೋವನ ಆರಾಧನೆಗಾಗಿ ಉಪಯೋಗಿಸ್ತೀವಿ. ಅಷ್ಟೇ ಅಲ್ಲ ಯೆಹೋವನಿಗೆ ಯಾವ ಪ್ರಾಣಿಗಳನ್ನ ಅರ್ಪಿಸಬೇಕು ಅಂತ ಅಲ್ಲಿಗೆ ಹೋದ ಮೇಲೆನೇ ನಮಗೆ ಗೊತ್ತಾಗೋದು” ಅಂದ. 27 ಆಗ ಫರೋಹ ಇನ್ನೂ ಹೃದಯ ಕಲ್ಲು ಮಾಡ್ಕೊಂಡ. ಅವನು ಹಾಗೇ ಇರೋಕೆ ಯೆಹೋವ ಬಿಟ್ಟನು. ಫರೋಹ ಅವರನ್ನ ಕಳಿಸೋಕೆ ಒಪ್ಪಲಿಲ್ಲ.+ 28 ಫರೋಹ ಮೋಶೆಗೆ “ನನ್ನ ಕಣ್ಮುಂದೆ ನಿಲ್ಲಬೇಡ, ಹೋಗು. ಇನ್ನು ಮುಂದೆ ಯಾವತ್ತೂ ನನಗೆ ನಿನ್ನ ಮುಖ ತೋರಿಸಬೇಡ. ತೋರಿಸಿದ್ರೆ ನಿನ್ನನ್ನ ಸಾಯಿಸಿಬಿಡ್ತೀನಿ ಹುಷಾರ್‌!” ಅಂದ. 29 ಅದಕ್ಕೆ ಮೋಶೆ “ಸರಿ, ಇನ್ನು ಯಾವತ್ತೂ ನಾನು ನಿನ್ನ ಮುಂದೆ ಬರಲ್ಲ” ಅಂದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ