ರೂತ್
4 ಬೋವಜ ಪಟ್ಟಣದ ಬಾಗಿಲ+ ಹತ್ರ ಕೂತ. ಅವನು ಹೇಳಿದ್ದ ಆ ಹತ್ರದ ಸಂಬಂಧಿ+ ದಾರೀಲಿ ಹೋಗ್ತಿದ್ದ. ಬೋವಜ ಅವನಿಗೆ* “ಇಲ್ಲಿ ಬಂದು ಕೂತ್ಕೊ” ಅಂದ. ಅವನು ಬಂದು ಕೂತ್ಕೊಂಡ. 2 ಆಮೇಲೆ ಬೋವಜ ಪಟ್ಟಣದ 10 ಹಿರಿಯರನ್ನ+ ಕರೆದಾಗ ಅವರೂ ಬಂದು ಕೂತ್ರು.
3 ಬೋವಜ ಆ ಹತ್ರದ ಸಂಬಂಧಿಗೆ+ “ನೊವೊಮಿ ಮೋವಾಬಿಂದ ವಾಪಸ್ ಬಂದಿದ್ದಾಳೆ.+ ನಮ್ಮ ಸಂಬಂಧಿಕ ಎಲೀಮೆಲೆಕನ+ ಜಮೀನನ್ನ ಮಾರಬೇಕಾದ ಪರಿಸ್ಥಿತಿ ಅವಳಿಗೆ ಬಂದಿದೆ. 4 ಹಾಗಾಗಿ ನಿನಗೆ ಒಂದು ವಿಷ್ಯ ಹೇಳೋಣ ಅಂದ್ಕೊಂಡೆ. ಜಮೀನನ್ನ ಪಟ್ಟಣದ ಜನ್ರ ಮತ್ತು ಹಿರಿಯರ ಮುಂದೆ ಬಿಡಿಸ್ಕೊ.+ ಬಿಡಿಸ್ಕೊಳ್ಳೋ ಹಕ್ಕಿರೋದು ನಿನಗೇ. ನೀನಾದ ಮೇಲೆ ಆ ಹಕ್ಕಿರೋದು ನನಗೆ. ನಿನಗಾಗಲ್ಲ ಅಂದ್ರೆ ಹೇಳು” ಅಂದ. ಅದಕ್ಕೆ ಅವನು “ಬಿಡಿಸ್ಕೊಳ್ತೀನಿ”+ ಅಂದ. 5 ಆಗ ಬೋವಜ “ಆ ಜಮೀನು ನೊವೊಮಿಗಷ್ಟೇ ಅಲ್ಲ, ವಿಧವೆ ಆಗಿರೋ ಅವಳ ಸೊಸೆ ಮೋವಾಬಿನ ರೂತ್ಗೂ ಸೇರಿದೆ. ಹಾಗಾಗಿ ನೀನು ಅವಳಿಂದಾನೂ ಕೊಂಡ್ಕೊಳ್ಳಬೇಕು. ಹೀಗೆ ಮಾಡಿದ್ರೆ ಆ ಜಮೀನು ಸತ್ತವನ ಹೆಸ್ರಲ್ಲೇ ಇರುತ್ತೆ”+ ಅಂದ. 6 ಅದಕ್ಕೆ ಅವನು “ನನ್ನಿಂದಾಗಲ್ಲ. ಬಿಡಿಸ್ಕೊಂಡ್ರೆ ನನಗೆ* ನಷ್ಟ ಆಗುತ್ತೆ. ಆ ಹಕ್ಕನ್ನ ನಿನಗೇ ಕೊಡ್ತಿನಿ. ನೀನೇ ಬಿಡಿಸ್ಕೊ” ಅಂದ.
7 ಆ ಕಾಲದಲ್ಲಿ ಇಸ್ರಾಯೇಲ್ಯರಲ್ಲಿ ಒಂದು ಪದ್ಧತಿ ಇತ್ತು. ಬಿಡಿಸ್ಕೊಳ್ಳುವಾಗ, ಆ ಹಕ್ಕನ್ನ ಬೇರೆಯವ್ರಿಗೆ ಕೊಡುವಾಗ ಅವರು ಚಪ್ಪಲಿ ಬಿಚ್ಚಿ+ ಇನ್ನೊಬ್ಬನಿಗೆ ಕೊಡಬೇಕಿತ್ತು. ಹೀಗೆ ಇಸ್ರಾಯೇಲ್ಯರು ಒಪ್ಪಂದವನ್ನ ಪಕ್ಕಾ ಮಾಡ್ತಿದ್ರು. 8 ಹಾಗಾಗಿ ಆ ಹತ್ರದ ಸಂಬಂಧಿ “ನೀನೇ ಬಿಡಿಸ್ಕೊ” ಅಂತ ಹೇಳಿ ಚಪ್ಪಲಿ ಬಿಚ್ಚಿ ಬೋವಜನಿಗೆ ಕೊಟ್ಟ. 9 ಬೋವಜ ಹಿರಿಯರಿಗೆ, ಅಲ್ಲಿದ್ದವ್ರಿಗೆ “ಎಲೀಮೆಲೆಕ, ಕಿಲ್ಯೋನ ಮತ್ತು ಮಹ್ಲೋನನಿಗೆ ಸೇರಿದ ಎಲ್ಲವನ್ನ ನಾನು ನೊವೊಮಿಯಿಂದ ತಗೊಳ್ತಾ ಇದ್ದೀನಿ. ಅದಕ್ಕೆ ನೀವೇ ಸಾಕ್ಷಿ.+ 10 ಅಷ್ಟೇ ಅಲ್ಲ ತೀರಿಹೋದ ಮಹ್ಲೋನನ ಹೆಂಡ್ತಿ ಅಂದ್ರೆ ಮೋವಾಬಿನ ರೂತನ್ನ ನಾನು ಹೆಂಡತಿಯಾಗಿ ಮಾಡ್ಕೊಳ್ತೀನಿ. ಇದ್ರಿಂದ ಅವನ ಆಸ್ತಿ ಅವನ ವಂಶದ ಹೆಸ್ರಲ್ಲೇ ಇರುತ್ತೆ.+ ಅವನ ಹೆಸ್ರನ್ನ ಸಂಬಂಧಿಕರು ಮತ್ತು ಪಟ್ಟಣದ ಜನ್ರು ಮರಿಯಲ್ಲ. ಇದಕ್ಕೆ ನೀವೇ ಸಾಕ್ಷಿ”+ ಅಂದ.
11 ಅದಕ್ಕೆ ಪಟ್ಟಣದ ಬಾಗಿಲ ಹತ್ರ ಇದ್ದ ಹಿರಿಯರು, ಎಲ್ಲ ಜನ್ರು “ಇದಕ್ಕೆ ನಾವು ಸಾಕ್ಷಿ. ನೀನು ಮದುವೆ ಆಗ್ತಿರೋ ಆ ಸ್ತ್ರೀಯನ್ನ ಯೆಹೋವ ಆಶೀರ್ವದಿಸ್ಲಿ. ಇಸ್ರಾಯೇಲ್ಯರ ಅಮ್ಮಂದಿರಾದ ರಾಹೇಲ ಮತ್ತು ಲೇಯ ತರ ಅವಳಾಗ್ಲಿ.+ ಎಫ್ರಾತದಲ್ಲಿ+ ನಿನಗೆ ಅಭಿವೃದ್ಧಿ ಆಗ್ಲಿ. ಬೆತ್ಲೆಹೇಮಲ್ಲಿ+ ನಿನಗೆ ಒಳ್ಳೇ ಹೆಸ್ರು ಸಿಗ್ಲಿ. 12 ಈ ಯುವತಿಯಿಂದ ಯೆಹೋವ ನಿನಗೆ ಕೊಡೊ ಸಂತಾನದಿಂದಾಗಿ+ ನಿನ್ನ ಕುಟುಂಬ ಯೆಹೂದ ಮತ್ತು ತಾಮಾರಳ ಮಗ ಪೆರೆಚನ+ ಕುಟುಂಬದ ತರ ಆಗ್ಲಿ” ಅಂದ್ರು.
13 ಬೋವಜ ರೂತನ್ನ ಮದುವೆಯಾದ. ಅವಳನ್ನ ಕೂಡಿದಾಗ ಅವಳಿಗೆ ಯೆಹೋವನ ಆಶೀರ್ವಾದದಿಂದ ಗಂಡು ಮಗು ಆಯ್ತು. 14 ಆಗ ಸ್ತ್ರೀಯರು ನೊವೊಮಿಗೆ “ನಿನಗೆ ಹತ್ರದ ಸಂಬಂಧಿಯನ್ನ ಕೊಟ್ಟ ಯೆಹೋವಗೆ ಗೌರವ ಸಿಗ್ಲಿ. ಈ ಮಗುವಿನ ಹೆಸ್ರು ಇಸ್ರಾಯೇಲಲ್ಲಿ ಪ್ರಸಿದ್ಧವಾಗ್ಲಿ! 15 ಆ ಮಗು ನಿನಗೆ ಹೊಸ ಜೀವನ ಕೊಟ್ಟಿದೆ. ವಯಸ್ಸಾದಾಗ ಅದು ನಿನ್ನನ್ನ ನೋಡ್ಕೊಳ್ಳುತ್ತೆ. ಯಾಕಂದ್ರೆ ಅದು ನಿನ್ನ ಸೊಸೆಗೆ ಹುಟ್ಟಿದೆ. ಅವಳು ನಿನ್ನನ್ನ ತುಂಬ ಪ್ರೀತಿಸ್ತಾಳೆ,+ ಅವಳು ನಿನಗೆ ಏಳು ಗಂಡು ಮಕ್ಕಳಿಗಿಂತ ಹೆಚ್ಚು” ಅಂದ್ರು. 16 ನೊವೊಮಿ ಮಗುನ ಎದೆಗಪ್ಪಿಕೊಂಡಳು. ಅದನ್ನ ಚೆನ್ನಾಗಿ ನೋಡ್ಕೊಂಡಳು. 17 ಸುತ್ತಮುತ್ತ ಇದ್ದ ಸ್ತ್ರೀಯರು “ನೊವೊಮಿಗೆ ಮಗ ಹುಟ್ಟಿದ್ದಾನೆ” ಅಂತ ಹೇಳಿ ಅವನಿಗೆ ಓಬೇದ+ ಅಂತ ಹೆಸ್ರಿಟ್ರು. ಈ ಓಬೇದ ಇಷಯನ+ ತಂದೆ. ಇಷಯ ದಾವೀದನ ತಂದೆ.
18 ಪೆರೆಚನ+ ವಂಶ:* ಪೆರೆಚನ ಮಗ ಹೆಚ್ರೋನ.+ 19 ಹೆಚ್ರೋನನ ಮಗ ರಾಮ. ರಾಮನ ಮಗ ಅಮ್ಮೀನಾದಾಬ.+ 20 ಅಮ್ಮೀನಾದಾಬನ+ ಮಗ ನಹಶೋನ. ನಹಶೋನನ ಮಗ ಸಲ್ಮೋನ. 21 ಸಲ್ಮೋನನ ಮಗ ಬೋವಜ. ಬೋವಜನ ಮಗ ಓಬೇದ. 22 ಓಬೇದನ ಮಗ ಇಷಯ.+ ಇಷಯನ ಮಗ ದಾವೀದ.+