ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಎಸ್ತೇರ್‌ 3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಎಸ್ತೇರ್‌ ಮುಖ್ಯಾಂಶಗಳು

      • ಹಾಮಾನನನ್ನ ರಾಜ ಗೌರವಿಸಿದ (1-4)

      • ಯೆಹೂದ್ಯರನ್ನ ನಾಶ ಮಾಡೋಕೆ ಹಾಮಾನ ಸಂಚು ಮಾಡಿದ (5-15)

ಎಸ್ತೇರ್‌ 3:1

ಮಾರ್ಜಿನಲ್ ರೆಫರೆನ್ಸ್

  • +ವಿಮೋ 17:16; ಅರ 24:7; ಧರ್ಮೋ 25:19; 1ಸಮು 15:8, 32
  • +ಎಸ್ತೇ 3:10; 8:7; 9:24
  • +ಎಸ್ತೇ 1:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 151

ಎಸ್ತೇರ್‌ 3:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 9/2023, ಪು. 2-3

    ಅನುಕರಿಸಿ, ಪು. 151

    ಕಾವಲಿನಬುರುಜು,

    3/1/2006, ಪು. 9

ಎಸ್ತೇರ್‌ 3:4

ಮಾರ್ಜಿನಲ್ ರೆಫರೆನ್ಸ್

  • +ದಾನಿ 6:13
  • +ಎಸ್ತೇ 2:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 9/2023, ಪು. 2-3

    ಕಾವಲಿನಬುರುಜು,

    3/1/2006, ಪು. 10

ಎಸ್ತೇರ್‌ 3:5

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 5:9

ಎಸ್ತೇರ್‌ 3:6

ಪಾದಟಿಪ್ಪಣಿ

  • *

    ಅಥವಾ “ಮೊರ್ದೆಕೈಯನ್ನ ಮಾತ್ರ ಕೊಲ್ಲೋದು.”

ಎಸ್ತೇರ್‌ 3:7

ಪಾದಟಿಪ್ಪಣಿ

  • *

    ಪರಿಶಿಷ್ಟ ಬಿ15 ನೋಡಿ.

  • *

    ಪರಿಶಿಷ್ಟ ಬಿ15 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 1:3; 2:16
  • +ಎಸ್ತೇ 9:24
  • +ಎಸ್ತೇ 9:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2644, 2756

ಎಸ್ತೇರ್‌ 3:8

ಪಾದಟಿಪ್ಪಣಿ

  • *

    ಅಥವಾ “ನಿನ್ನ ಕೈಕೆಳಗಿರೋ ಜಿಲ್ಲೆಗಳಲ್ಲಿ.”

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 1:1
  • +ಧರ್ಮೋ 4:27; ನೆಹೆ 1:8; ಯೆರೆ 50:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 151-152

ಎಸ್ತೇರ್‌ 3:9

ಪಾದಟಿಪ್ಪಣಿ

  • *

    ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.

  • *

    ಬಹುಶಃ, “ಈ ಕೆಲಸ ಮಾಡುವವರಿಗೆ ಕೊಡೋಕೆ ನಾನು ರಾಜ ಖಜಾನೆಯಲ್ಲಿ 10,000 ತಲಾಂತು ಬೆಳ್ಳಿಯನ್ನ ಜಮಾ ಮಾಡ್ತೀನಿ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 151-152

ಎಸ್ತೇರ್‌ 3:10

ಮಾರ್ಜಿನಲ್ ರೆಫರೆನ್ಸ್

  • +ಆದಿ 41:42
  • +ಅರ 24:7; 1ಸಮು 15:8, 32
  • +ಎಸ್ತೇ 3:1; 8:2

ಎಸ್ತೇರ್‌ 3:12

ಪಾದಟಿಪ್ಪಣಿ

  • *

    ಅಥವಾ “ಬರವಣಿಗೆ ಶೈಲಿಗಳಲ್ಲಿ.”

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 8:9
  • +ದಾನಿ 6:8
  • +ಎಸ್ತೇ 8:8; ದಾನಿ 6:17

ಎಸ್ತೇರ್‌ 3:13

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 9:1
  • +ಎಸ್ತೇ 8:11, 12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 152-153

ಎಸ್ತೇರ್‌ 3:15

ಪಾದಟಿಪ್ಪಣಿ

  • *

    ಅಥವಾ “ಸೂಸಾ.”

  • *

    ಅಥವಾ “ಅರಮನೆಯಲ್ಲಿ.”

  • *

    ಅಥವಾ “ಸೂಸಾ.”

ಮಾರ್ಜಿನಲ್ ರೆಫರೆನ್ಸ್

  • +ಎಸ್ತೇ 8:14
  • +ಎಜ್ರ 4:9; ನೆಹೆ 1:1; ದಾನಿ 8:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 152-153

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಎಸ್ತೇ. 3:1ವಿಮೋ 17:16; ಅರ 24:7; ಧರ್ಮೋ 25:19; 1ಸಮು 15:8, 32
ಎಸ್ತೇ. 3:1ಎಸ್ತೇ 3:10; 8:7; 9:24
ಎಸ್ತೇ. 3:1ಎಸ್ತೇ 1:14
ಎಸ್ತೇ. 3:4ದಾನಿ 6:13
ಎಸ್ತೇ. 3:4ಎಸ್ತೇ 2:5
ಎಸ್ತೇ. 3:5ಎಸ್ತೇ 5:9
ಎಸ್ತೇ. 3:7ಎಸ್ತೇ 1:3; 2:16
ಎಸ್ತೇ. 3:7ಎಸ್ತೇ 9:24
ಎಸ್ತೇ. 3:7ಎಸ್ತೇ 9:1
ಎಸ್ತೇ. 3:8ಎಸ್ತೇ 1:1
ಎಸ್ತೇ. 3:8ಧರ್ಮೋ 4:27; ನೆಹೆ 1:8; ಯೆರೆ 50:17
ಎಸ್ತೇ. 3:10ಆದಿ 41:42
ಎಸ್ತೇ. 3:10ಅರ 24:7; 1ಸಮು 15:8, 32
ಎಸ್ತೇ. 3:10ಎಸ್ತೇ 3:1; 8:2
ಎಸ್ತೇ. 3:12ಎಸ್ತೇ 8:9
ಎಸ್ತೇ. 3:12ದಾನಿ 6:8
ಎಸ್ತೇ. 3:12ಎಸ್ತೇ 8:8; ದಾನಿ 6:17
ಎಸ್ತೇ. 3:13ಎಸ್ತೇ 9:1
ಎಸ್ತೇ. 3:13ಎಸ್ತೇ 8:11, 12
ಎಸ್ತೇ. 3:15ಎಸ್ತೇ 8:14
ಎಸ್ತೇ. 3:15ಎಜ್ರ 4:9; ನೆಹೆ 1:1; ದಾನಿ 8:2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಎಸ್ತೇರ್‌ 3:1-15

ಎಸ್ತೇರ್‌

3 ಇದಾದ ಮೇಲೆ ರಾಜ ಅಹಷ್ವೇರೋಷ ಅಗಾಗನ+ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನಿಗೆ+ ಪದವಿ ಕೊಟ್ಟು ತನ್ನ ಹತ್ರ ಇದ್ದ ಬೇರೆಲ್ಲ ಅಧಿಕಾರಿಗಳಿಗಿಂತ ಅವನನ್ನ ದೊಡ್ಡ ಸ್ಥಾನಕ್ಕೆ ಏರಿಸಿದ.+ 2 ಅರಮನೆಯ ಹೆಬ್ಬಾಗಿಲ ಹತ್ರ ಇದ್ದ ರಾಜನ ಸೇವಕರೆಲ್ಲ ಹಾಮಾನನಿಗೆ ಬಗ್ಗಿ ನಮಸ್ಕಾರ ಮಾಡ್ತಾ ಇದ್ರು. ಯಾಕಂದ್ರೆ ಅವನನ್ನ ಗೌರವಿಸೋಕೆ ಹೀಗೆ ಮಾಡಬೇಕಂತ ರಾಜ ಆಜ್ಞೆ ಕೊಟ್ಟಿದ್ದ. ಆದ್ರೆ ಮೊರ್ದೆಕೈ ಹಾಮಾನನಿಗೆ ಬಗ್ಗಿ ನಮಸ್ಕಾರ ಮಾಡೋಕೆ ಅಥವಾ ಅಡ್ಡಬೀಳೋಕೆ ಒಪ್ಪಲಿಲ್ಲ. 3 ಹಾಗಾಗಿ ಅರಮನೆಯ ಹೆಬ್ಬಾಗಿಲ ಹತ್ರ ಇದ್ದ ರಾಜನ ಸೇವಕರು ಮೊರ್ದೆಕೈಗೆ “ನೀನ್ಯಾಕೆ ರಾಜಾಜ್ಞೆ ಮೀರ್ತಾ ಇದ್ದೀಯ?” ಅಂತ ಕೇಳಿದ್ರು. 4 ದಿನಾಲೂ ಇದನ್ನೇ ಕೇಳ್ತಿದ್ರು. ಆದ್ರೆ ಅವನು ಅವ್ರ ಮಾತನ್ನ ಕಿವಿಗೆ ಹಾಕೊಳ್ತಾನೇ ಇರ್ಲಿಲ್ಲ. ಆಗ ಅವರು ಈ ವಿಷ್ಯ ಹಾಮಾನನಿಗೆ ಹೇಳಿದ್ರು. ಮೊರ್ದೆಕೈಗೆ ಶಿಕ್ಷೆ ಆಗುತ್ತಾ ಇಲ್ವಾ ಅಂತ ನೋಡೋಕೆ ಹಾಗೆ ಮಾಡಿದ್ರು.+ ಯಾಕಂದ್ರೆ ತಾನೊಬ್ಬ ಯೆಹೂದಿ+ ಅಂತ ಮೊರ್ದೆಕೈ ಅವ್ರಿಗೆ ಹೇಳಿದ್ದ.

5 ಮೊರ್ದೆಕೈ ತನಗೆ ಬಗ್ಗಿ ನಮಸ್ಕಾರ ಮಾಡದೇ ಇರೋದನ್ನ ನೋಡಿದಾಗ ಹಾಮಾನನ ಕೋಪ ನೆತ್ತಿಗೇರಿತು.+ 6 ಆದ್ರೆ ಮೊರ್ದೆಕೈ ಮೇಲೆ ಮಾತ್ರ ಕೈಹಾಕೋದು* ಹಾಮಾನನ ದೃಷ್ಟಿಯಲ್ಲಿ ತುಂಬ ಚಿಕ್ಕ ವಿಷ್ಯ ಆಗಿತ್ತು. ಯಾಕಂದ್ರೆ ಮೊರ್ದೆಕೈಯ ಜನ್ರ ಬಗ್ಗೆನೂ ಅವನಿಗೆ ಹೇಳಿದ್ರು. ಹಾಗಾಗಿ ಹಾಮಾನ ಅಹಷ್ವೇರೋಷನ ಸಾಮ್ರಾಜ್ಯದಲ್ಲಿದ್ದ ಮೊರ್ದೆಕೈಯ ಜನ್ರನ್ನ ಅಂದ್ರೆ ಎಲ್ಲ ಯೆಹೂದ್ಯರನ್ನ ನಾಶ ಮಾಡೋಕೆ ದಾರಿ ಹುಡುಕ್ತಿದ್ದ.

7 ಅವ್ರನ್ನ ಯಾವ ತಿಂಗಳ ಯಾವ ದಿನದಲ್ಲಿ ನಾಶ ಮಾಡಬೇಕಂತ ತೀರ್ಮಾನ ಮಾಡೋಕೆ ರಾಜ ಅಹಷ್ವೇರೋಷ ಆಳ್ತಿದ್ದ 12ನೇ ವರ್ಷದ+ ಮೊದಲ್ನೇ ತಿಂಗಳಲ್ಲಿ ಅಂದ್ರೆ ನೈಸಾನ್‌* ತಿಂಗಳಲ್ಲಿ ಹಾಮಾನನ ಮುಂದೆ ಪೂರನ್ನ (ಅಂದ್ರೆ ಚೀಟು) ಹಾಕಿದ್ರು.+ ಅದು 12ನೇ ತಿಂಗಳಿನ ಅಂದ್ರೆ ಅದಾರ್‌*+ ತಿಂಗಳಿನ ಮೇಲೆ ಬಿತ್ತು. 8 ಹಾಮಾನ ರಾಜ ಅಹಷ್ವೇರೋಷನಿಗೆ “ನಿನ್ನ ಸಾಮ್ರಾಜ್ಯದಲ್ಲಿ ಒಂದು ಜನಾಂಗ ಇದೆ. ಅವರು ಎಲ್ಲ ಪ್ರಾಂತ್ಯಗಳಲ್ಲಿ*+ ಚದರಿಕೊಂಡಿದ್ದಾರೆ.+ ಅವ್ರ ನಿಯಮಗಳು ಬೇರೆ ಜನಾಂಗಗಳ ನಿಯಮಗಳ ತರ ಅಲ್ಲ. ಅವರು ರಾಜನ ನಿಯಮಗಳನ್ನೂ ಪಾಲಿಸಲ್ಲ. ಅವ್ರನ್ನ ಹಾಗೇ ಬಿಟ್ಟುಬಿಡೋದು ರಾಜನಿಗೆ ಒಳ್ಳೇದಲ್ಲ. 9 ರಾಜನಿಗೆ ಇಷ್ಟ ಆಗೋದಾದ್ರೆ ಅವ್ರನ್ನ ನಾಶ ಮಾಡೋಕೆ ಒಂದು ಆಜ್ಞೆ ಬರೆದು ಕೊಡು. ಹಾಗೆ ಮಾಡಿದ್ರೆ ರಾಜನ ಖಜಾನೆಯಲ್ಲಿ ಇಡೋಕೆ ನಾನು 10,000 ಬೆಳ್ಳಿ ತಲಾಂತುಗಳನ್ನ* ಅಧಿಕಾರಿಗಳಿಗೆ ಕೊಡ್ತೀನಿ”* ಅಂದ.

10 ಅದನ್ನ ಕೇಳಿ ರಾಜ ತನ್ನ ಕೈಯಲ್ಲಿದ್ದ ಮುದ್ರೆ ಉಂಗುರ+ ತೆಗೆದು ಯೆಹೂದ್ಯರ ಶತ್ರುವಾಗಿದ್ದ ಅಗಾಗನ+ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನಿಗೆ+ ಕೊಟ್ಟ. 11 ರಾಜನು ಹಾಮಾನನಿಗೆ “ಬೆಳ್ಳಿಯನ್ನೂ ಜನ್ರನ್ನೂ ನಿನ್ನ ಕೈಗೆ ಒಪ್ಪಿಸ್ತಿದ್ದೀನಿ. ನಿನಗೆ ಇಷ್ಟಬಂದ ಹಾಗೆ ಮಾಡು” ಅಂದ. 12 ಹಾಗಾಗಿ ಮೊದಲ್ನೇ ತಿಂಗಳ 13ನೇ ದಿನ ರಾಜನ ಕಾರ್ಯದರ್ಶಿಗಳನ್ನ+ ಕರೆಸಲಾಯ್ತು. ಅವರು ಬಂದು ರಾಜನ ದೇಶಾಧಿಪತಿಗಳಿಗೆ, ಪ್ರಾಂತ್ಯಗಳ ರಾಜ್ಯಪಾಲರಿಗೆ, ಎಲ್ಲ ಜನ್ರ ಅಧಿಕಾರಿಗಳಿಗೆ ಹಾಮಾನನ ಆಜ್ಞೆಗಳನ್ನೆಲ್ಲ ಬರೆದ್ರು.+ ಅವುಗಳನ್ನ ಎಲ್ಲ ಪ್ರಾಂತ್ಯಗಳಲ್ಲಿರೋ ಜನ್ರ ಭಾಷೆಗಳಲ್ಲಿ, ಲಿಪಿಗಳಲ್ಲಿ* ಬರೆದ್ರು. ಅವುಗಳನ್ನ ರಾಜ ಅಹಷ್ವೇರೋಷನ ಹೆಸ್ರಲ್ಲಿ ಬರೆದು ರಾಜನ ಮುದ್ರೆ ಉಂಗುರವನ್ನ ಒತ್ತಿದ್ರು.+

13 ಸಂದೇಶವಾಹಕರ ಮೂಲಕ ಈ ಪತ್ರಗಳನ್ನ ರಾಜನ ಆಳ್ವಿಕೆ ಕೆಳಗಿದ್ದ ಎಲ್ಲ ಪ್ರಾಂತ್ಯಗಳಿಗೆ ಕಳಿಸಿದ್ರು. ಒಂದೇ ದಿನ ಅಂದ್ರೆ 12ನೇ ತಿಂಗಳಾದ ಅದಾರ್‌+ ತಿಂಗಳ 13ನೇ ದಿನ ಎಲ್ಲ ಯೆಹೂದ್ಯರನ್ನ ಅಂದ್ರೆ ಅವ್ರಲ್ಲಿದ್ದ ಯುವಕರನ್ನ, ವೃದ್ಧರನ್ನ, ಮಕ್ಕಳನ್ನ, ಸ್ತ್ರೀಯರನ್ನ ಹೀಗೆ ಎಲ್ರನ್ನ ಕೊಂದು ಅವ್ರನ್ನ ಪೂರ್ತಿ ನಾಶಮಾಡಿ ಅವ್ರ ಆಸ್ತಿಪಾಸ್ತಿನ ಸ್ವಾಧೀನ ಮಾಡ್ಕೊಳ್ಳಬೇಕಂತ ಅದ್ರಲ್ಲಿ ಹೇಳಿತ್ತು.+ 14 ಅಷ್ಟೇ ಅಲ್ಲ ಎಲ್ಲ ಜನ ಆ ದಿನಕ್ಕಾಗಿ ಸಿದ್ಧರಾಗಿರೋಕೆ ಎಲ್ಲ ಪ್ರಾಂತ್ಯಗಳಲ್ಲಿ ಆ ಪ್ರತಿಯನ್ನ ನಿಯಮದ ಹಾಗೆ ಜಾರಿ ಮಾಡಿ, ಅದನ್ನ ಎಲ್ಲ ಜನ್ರಿಗೆ ಪ್ರಕಟಣೆ ಮಾಡಬೇಕಿತ್ತು. 15 ರಾಜ ಆಜ್ಞೆ ಕೊಟ್ಟ ಹಾಗೇ ಸಂದೇಶವಾಹಕರು ತಕ್ಷಣ ಅಲ್ಲಿಂದ ಹೊರಟ್ರು.+ ಹೀಗೆ ಆ ನಿಯಮ ಶೂಷನಿನ*+ ಕೋಟೆಯಲ್ಲಿ* ಜಾರಿಗೆ ಬಂತು. ಆಗ ಶೂಷನ್‌* ಪಟ್ಟಣದ ಜನ್ರಿಗೆ ಗಲಿಬಿಲಿ ಆಯ್ತು. ಆದ್ರೆ ರಾಜ ಮತ್ತು ಹಾಮಾನ ಕೂತು ದ್ರಾಕ್ಷಾಮದ್ಯ ಕುಡಿತಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ