ಕೀರ್ತನೆ
ಕುಗ್ಗಿಹೋಗಿರೋ ವ್ಯಕ್ತಿ ಬೇಜಾರಲ್ಲಿ ಇರೋವಾಗ* ಯೆಹೋವನ ಮುಂದೆ ತನ್ನ ಚಿಂತೆ ತೋಡ್ಕೊಳ್ತಾ ಮಾಡೋ ಪ್ರಾರ್ಥನೆ.+
2 ನಾನು ಕಷ್ಟದಲ್ಲಿ ಇರೋವಾಗ ನಿನ್ನ ಮುಖನ ನನ್ನಿಂದ ಮರೆಮಾಡ್ಕೊಬೇಡ.+
3 ಯಾಕಂದ್ರೆ ನನ್ನ ದಿನಗಳು ಹೊಗೆ ತರ ಕಣ್ಮರೆ ಆಗ್ತಿವೆ,
ನನ್ನ ಎಲುಬು ಬೆಂಕಿಗೂಡಿನ ತರ ಉರಿದು ಕಪ್ಪಾಗಿದೆ.+
4 ನನ್ನ ಹೃದಯ ಸೂರ್ಯನ ಶಾಖಕ್ಕೆ ಒಣಗಿಹೋಗಿರೋ ಹುಲ್ಲಿನ ತರ ಆಗಿದೆ.+
ನಾನು ಊಟ ಮಾಡೋದನ್ನೇ ಮರೆತು ಹೋಗ್ತಿದ್ದೀನಿ.
6 ನಾನು ಕಾಡಲ್ಲಿರೋ ಬಕಪಕ್ಷಿ* ತರ ಇದ್ದೀನಿ,
ಹಾಳುಬಿದ್ದ ಜಾಗದಲ್ಲಿರೋ ಗೂಬೆ ತರ ಇದ್ದೀನಿ.
7 ಮಲಗಿದ್ರೂ ನನಗೆ ನಿದ್ದೆ ಬರ್ತಿಲ್ಲ.*
ಚಾವಣಿ ಮೇಲೆ ಕೂತ್ಕೊಳ್ಳೋ ಒಂಟಿ ಪಕ್ಷಿ ತರ ಇದ್ದೀನಿ.+
8 ಇಡೀ ದಿನ ಶತ್ರುಗಳು ನನ್ನನ್ನ ಬೈತಾರೆ.+
ನನ್ನನ್ನ ಅಣಕಿಸೋರು* ನನ್ನ ಹೆಸ್ರನ್ನ ಶಾಪವಾಗಿ ಬಳಸ್ತಾರೆ.
9 ಬೂದಿನೇ ನನ್ನ ಆಹಾರ ಆಗಿದೆ,+
ನಾನು ಕುಡಿಯೋ ನೀರಲ್ಲಿ ನನ್ನ ಕಣ್ಣೀರು ಬೆರೆತುಹೋಗಿದೆ,+
10 ನಿನ್ನ ಕೋಪ, ನಿನ್ನ ಸಿಟ್ಟಿಂದ ನನಗೆ ಇಂಥ ಪರಿಸ್ಥಿತಿ ಬಂದಿದೆ,
ನೀನು ನನ್ನನ್ನ ಎತ್ತಿ ಬಿಸಾಡಿ ಬಿಟ್ಟಿದ್ದೀಯ.
13 ನಿಜವಾಗ್ಲೂ ನೀನು ಬರ್ತಿಯ, ಚೀಯೋನಿಗೆ ಕರುಣೆ ತೋರಿಸ್ತೀಯ,+
ಯಾಕಂದ್ರೆ ಅದ್ರ ಮೇಲೆ ಕೃಪೆ ತೋರಿಸೋ ಸಮಯ ಬಂದಿದೆ,+
ಅಂದ್ಕೊಂಡಿದ್ದ ಸಮಯ ಬಂದಿದೆ.+
15 ಯೆಹೋವನ ಹೆಸ್ರಿಗೆ ದೇಶಗಳು ಹೆದರುತ್ತೆ,
ನಿನ್ನ ಮಹಿಮೆ ನೋಡಿ ಎಲ್ಲ ರಾಜರು ಭಯಪಡ್ತಾರೆ.+
19 ಮೇಲಿರೋ ತನ್ನ ಪವಿತ್ರ ಸ್ಥಳದಿಂದ ಆತನು ಕೆಳಗೆ ನೋಡ್ತಾನೆ,+
ಸ್ವರ್ಗದಿಂದ ಯೆಹೋವ ಭೂಮಿ ಮೇಲೆ ದೃಷ್ಟಿ ಇಡ್ತಾನೆ.
20 ಯಾಕಂದ್ರೆ ಜೈಲಲ್ಲಿ ಇರೋರ ನಿಟ್ಟುಸಿರನ್ನ ಕೇಳಿಸ್ಕೊಳ್ಳೋಕೆ,+
ಮರಣಶಿಕ್ಷೆ ಆಗ್ತಿರೋರನ್ನ ಬಿಡಿಸೋಕೆ ಆತನು ಹೀಗೆ ಮಾಡ್ತಾನೆ.+
21 ಹಾಗಾಗಿ ಚೀಯೋನಲ್ಲಿ ಯೆಹೋವನ ಹೆಸ್ರನ್ನ ಜೋರಾಗಿ ಹೇಳ್ತಾರೆ,+
ಯೆರೂಸಲೇಮಲ್ಲಿ ಆತನನ್ನ ಹೊಗಳ್ತಾರೆ.
22 ಆಗ ದೇಶಗಳು ಮತ್ತು ರಾಜ್ಯಗಳು ಒಟ್ಟುಸೇರಿ
ಯೆಹೋವನನ್ನ ಆರಾಧಿಸೋಕೆ ಬರುತ್ತವೆ.+
23 ಸಮ್ಯ ಬರೋ ಮುಂಚೆನೇ ಆತನು ನನ್ನ ಶಕ್ತಿನ ಕಿತ್ಕೊಂಡ,
ನನ್ನ ದಿನ ಕಮ್ಮಿ ಆದ್ವು.
26 ಅವು ನಾಶ ಆದ್ರೂ ನೀನು ಸದಾಕಾಲಕ್ಕೂ ಇರ್ತಿಯ,
ಬಟ್ಟೆ ತರ ಅವೆಲ್ಲ ಹಾಳಾಗಿ ಹೋಗುತ್ತೆ.
ಬಟ್ಟೆ ತರ ನೀನು ಅವುಗಳನ್ನ ಬದಲಾಯಿಸ್ತೀಯ, ಅವು ಇಲ್ಲದೆ ಹೋಗುತ್ತೆ.
27 ಆದ್ರೆ ನೀನು ಇದ್ದ ಹಾಗೇ ಇರ್ತಿಯ, ನಿನಗೆ ಅಂತ್ಯಾನೇ ಇಲ್ಲ.+
28 ನಿನ್ನ ಸೇವಕರ ಮಕ್ಕಳು ಸುರಕ್ಷಿತವಾಗಿ ವಾಸಿಸ್ತಾರೆ,
ಅವರ ಸಂತತಿ ಯಾವಾಗ್ಲೂ ನಿನ್ನ ಮುಂದೆ ಇರುತ್ತೆ.”+