ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅ. ಕಾರ್ಯ 25
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅಪೊಸ್ತಲರ ಕಾರ್ಯ ಮುಖ್ಯಾಂಶಗಳು

      • ಫೆಸ್ತನ ಮುಂದೆ ಪೌಲನ ವಿಚಾರಣೆ (1-12)

        • ‘ನಾನು ರಾಜನ ಹತ್ರ ಹೋಗ್ತಿನಿ!’ (11)

      • ಫೆಸ್ತ ಅಗ್ರಿಪ್ಪ ರಾಜನನ್ನ ಭೇಟಿಮಾಡ್ತಾನೆ (13-22)

      • ಪೌಲ ಅಗ್ರಿಪ್ಪನ ಮುಂದೆ (23-27)

ಅ. ಕಾರ್ಯ 25:1

ಮಾರ್ಜಿನಲ್ ರೆಫರೆನ್ಸ್

  • +ಅಕಾ 24:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 196

ಅ. ಕಾರ್ಯ 25:2

ಮಾರ್ಜಿನಲ್ ರೆಫರೆನ್ಸ್

  • +ಅಕಾ 24:1

ಅ. ಕಾರ್ಯ 25:3

ಮಾರ್ಜಿನಲ್ ರೆಫರೆನ್ಸ್

  • +ಅಕಾ 23:20, 21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 196

ಅ. ಕಾರ್ಯ 25:5

ಮಾರ್ಜಿನಲ್ ರೆಫರೆನ್ಸ್

  • +ಅಕಾ 25:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 196

ಅ. ಕಾರ್ಯ 25:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 197-198

ಅ. ಕಾರ್ಯ 25:7

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 5:11; ಲೂಕ 23:1, 2; ಅಕಾ 24:5

ಅ. ಕಾರ್ಯ 25:8

ಮಾರ್ಜಿನಲ್ ರೆಫರೆನ್ಸ್

  • +ಅಕಾ 24:11, 12

ಅ. ಕಾರ್ಯ 25:9

ಮಾರ್ಜಿನಲ್ ರೆಫರೆನ್ಸ್

  • +ಅಕಾ 24:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 197-198

    ಕಾವಲಿನಬುರುಜು,

    12/15/2001, ಪು. 23-24

ಅ. ಕಾರ್ಯ 25:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 198

    ಕಾವಲಿನಬುರುಜು,

    12/15/2001, ಪು. 23-24

ಅ. ಕಾರ್ಯ 25:11

ಮಾರ್ಜಿನಲ್ ರೆಫರೆನ್ಸ್

  • +ಅಕಾ 23:26, 29
  • +ಅಕಾ 28:17-19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 198

    ಕಾವಲಿನಬುರುಜು (ಅಧ್ಯಯನ),

    9/2016, ಪು. 15-16

    ಕಾವಲಿನಬುರುಜು,

    5/15/2008, ಪು. 32

    12/15/2001, ಪು. 23-24

    6/15/1997, ಪು. 30-31

    6/1/1991, ಪು. 10-11

    2/1/1991, ಪು. 15

ಅ. ಕಾರ್ಯ 25:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 198

ಅ. ಕಾರ್ಯ 25:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 198, 201

    ಕಾವಲಿನಬುರುಜು,

    2/1/1991, ಪು. 15

ಅ. ಕಾರ್ಯ 25:15

ಮಾರ್ಜಿನಲ್ ರೆಫರೆನ್ಸ್

  • +ಅಕಾ 25:2, 3

ಅ. ಕಾರ್ಯ 25:16

ಮಾರ್ಜಿನಲ್ ರೆಫರೆನ್ಸ್

  • +ಅಕಾ 25:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2001, ಪು. 23

ಅ. ಕಾರ್ಯ 25:18

ಮಾರ್ಜಿನಲ್ ರೆಫರೆನ್ಸ್

  • +ಅಕಾ 25:7

ಅ. ಕಾರ್ಯ 25:19

ಮಾರ್ಜಿನಲ್ ರೆಫರೆನ್ಸ್

  • +ಅಕಾ 18:14, 15; 23:26, 29
  • +ಅಕಾ 22:6-8

ಅ. ಕಾರ್ಯ 25:20

ಮಾರ್ಜಿನಲ್ ರೆಫರೆನ್ಸ್

  • +ಅಕಾ 25:9

ಅ. ಕಾರ್ಯ 25:21

ಮಾರ್ಜಿನಲ್ ರೆಫರೆನ್ಸ್

  • +ಅಕಾ 25:11, 12

ಅ. ಕಾರ್ಯ 25:22

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:15

ಅ. ಕಾರ್ಯ 25:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/1998, ಪು. 30

ಅ. ಕಾರ್ಯ 25:24

ಮಾರ್ಜಿನಲ್ ರೆಫರೆನ್ಸ್

  • +ಅಕಾ 22:22

ಅ. ಕಾರ್ಯ 25:25

ಮಾರ್ಜಿನಲ್ ರೆಫರೆನ್ಸ್

  • +ಅಕಾ 23:26, 29

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅ. ಕಾ. 25:1ಅಕಾ 24:27
ಅ. ಕಾ. 25:2ಅಕಾ 24:1
ಅ. ಕಾ. 25:3ಅಕಾ 23:20, 21
ಅ. ಕಾ. 25:5ಅಕಾ 25:16
ಅ. ಕಾ. 25:7ಮತ್ತಾ 5:11; ಲೂಕ 23:1, 2; ಅಕಾ 24:5
ಅ. ಕಾ. 25:8ಅಕಾ 24:11, 12
ಅ. ಕಾ. 25:9ಅಕಾ 24:27
ಅ. ಕಾ. 25:11ಅಕಾ 23:26, 29
ಅ. ಕಾ. 25:11ಅಕಾ 28:17-19
ಅ. ಕಾ. 25:15ಅಕಾ 25:2, 3
ಅ. ಕಾ. 25:16ಅಕಾ 25:5
ಅ. ಕಾ. 25:18ಅಕಾ 25:7
ಅ. ಕಾ. 25:19ಅಕಾ 18:14, 15; 23:26, 29
ಅ. ಕಾ. 25:19ಅಕಾ 22:6-8
ಅ. ಕಾ. 25:20ಅಕಾ 25:9
ಅ. ಕಾ. 25:21ಅಕಾ 25:11, 12
ಅ. ಕಾ. 25:22ಅಕಾ 9:15
ಅ. ಕಾ. 25:24ಅಕಾ 22:22
ಅ. ಕಾ. 25:25ಅಕಾ 23:26, 29
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅ. ಕಾರ್ಯ 25:1-27

ಅಪೊಸ್ತಲರ ಕಾರ್ಯ

25 ಫೆಸ್ತ+ ಆ ಪ್ರದೇಶಕ್ಕೆ ಬಂದು ಅಧಿಕಾರ ವಹಿಸ್ಕೊಂಡು ಮೂರು ದಿನ ಆದಮೇಲೆ ಕೈಸರೈಯದಿಂದ ಯೆರೂಸಲೇಮಿಗೆ ಹೋದ. 2 ಅವನಿಗೆ ಮುಖ್ಯ ಪುರೋಹಿತರು ಮತ್ತು ಯೆಹೂದ್ಯರ ಪ್ರಮುಖ ಪುರುಷರು ಪೌಲನ ವಿರುದ್ಧ ದೂರು ಕೊಟ್ರು.+ ಅವರು ಫೆಸ್ತನ ಹತ್ರ ಹೋಗಿ 3 ತಮಗೆ ಸಹಾಯ ಮಾಡಬೇಕಂತ ಮತ್ತು ಪೌಲನನ್ನ ಯೆರೂಸಲೇಮಿಗೆ ಕರೆಸಬೇಕಂತ ಬೇಡ್ಕೊಂಡ್ರು. ಯಾಕಂದ್ರೆ ಪೌಲ ಅಲ್ಲಿಗೆ ಬರುವಾಗ ದಾರಿಯಲ್ಲೇ ಅವನನ್ನ ಮುಗಿಸಿಬಿಡಬೇಕು ಅಂತ ಅವರು ಹೊಂಚುಹಾಕಿದ್ರು.+ 4 ಆದ್ರೆ ಫೆಸ್ತ ಅವ್ರಿಗೆ ‘ಪೌಲ ಕೈಸರೈಯದಲ್ಲೇ ಇರಲಿ, ನಾನೇ ಸ್ವಲ್ಪ ದಿನದಲ್ಲಿ ಅಲ್ಲಿಗೆ ವಾಪಸ್‌ ಹೋಗ್ತಾ ಇದ್ದೀನಿ’ ಅಂದ. 5 ಅಷ್ಟೇ ಅಲ್ಲ “ಪೌಲ ಏನಾದ್ರೂ ತಪ್ಪು ಮಾಡಿದ್ರೆ ನಿಮ್ಮಲ್ಲಿ ಅಧಿಕಾರದಲ್ಲಿ ಇರುವವರು ನನ್ನ ಜೊತೆ ಬಂದು ಅವನ ತಪ್ಪುಗಳನ್ನ ಅಲ್ಲಿ ಹೇಳಬಹುದು”+ ಅಂದ.

6 ಫೆಸ್ತ ಯೆರೂಸಲೇಮಲ್ಲಿ 8ರಿಂದ 10 ದಿನ ಇದ್ದು ಕೈಸರೈಯಕ್ಕೆ ವಾಪಸ್‌ ಹೋದ. ಮಾರನೇ ದಿನ ನ್ಯಾಯವಿಚಾರಣೆ ಮಾಡಲಿಕ್ಕಾಗಿ ಪೌಲನನ್ನ ಕರ್ಕೊಂಡು ಬರೋಕೆ ಆಜ್ಞೆ ಕೊಟ್ಟ. 7 ಪೌಲ ಅಲ್ಲಿಗೆ ಬಂದಾಗ, ಯೆರೂಸಲೇಮಿಂದ ಬಂದ ಯೆಹೂದ್ಯರು ಅವನ ಸುತ್ತ ನಿಂತ್ಕೊಂಡು ಅವನ ಮೇಲೆ ದೊಡ್ಡದೊಡ್ಡ ಆರೋಪಗಳನ್ನ ಹಾಕಿದ್ರು. ಆದ್ರೆ ಅದನ್ನೆಲ್ಲ ನಿಜ ಅಂತ ಸಾಬೀತು ಮಾಡೋಕಾಗಲಿಲ್ಲ.+

8 ಆಗ ಪೌಲ “ನಾನು ಯೆಹೂದ್ಯರ ನಿಯಮವನ್ನ ಮುರಿದಿಲ್ಲ. ದೇವಾಲಯದ ವಿರುದ್ಧ ಆಗಲಿ ರೋಮಿನ ರಾಜನ ವಿರುದ್ಧ ಆಗಲಿ ನಾನೇನೂ ತಪ್ಪು ಮಾಡಿಲ್ಲ”+ ಅಂದ. 9 ಆಗ ಯೆಹೂದ್ಯರ ಮೆಚ್ಚುಗೆ ಪಡಿಬೇಕಂತ+ ಫೆಸ್ತ ಪೌಲನಿಗೆ “ನಿನಗೆ ಯೆರೂಸಲೇಮಲ್ಲಿ ಇರೋ ನ್ಯಾಯಾಲಯಕ್ಕೆ ಹೋಗಬೇಕಾ? ಅಲ್ಲಿ ನಿಂಗೆ ವಿಚಾರಣೆ ಆಗೋವಾಗ ನಾನೂ ಇರ್ತಿನಿ” ಅಂದ. 10 ಅದಕ್ಕೆ ಪೌಲ “ನಾನು ರೋಮಿನ ರಾಜನ ನ್ಯಾಯಾಲಯದಲ್ಲಿ ನಿಂತಿದ್ದೀನಿ. ನನಗೆ ವಿಚಾರಣೆ ಆಗಬೇಕಾಗಿರೋದು ಇಲ್ಲೇ. ನಾನು ಯೆಹೂದ್ಯರ ವಿರುದ್ಧ ಯಾವ ತಪ್ಪೂ ಮಾಡಿಲ್ಲ. ನಿನ್ಗೂ ಅದು ಚೆನ್ನಾಗಿ ಗೊತ್ತು. 11 ನಾನು ನಿಜವಾಗ್ಲೂ ತಪ್ಪು ಮಾಡಿದ್ರೆ ಮರಣಶಿಕ್ಷೆ ಸಿಗೋ ತಪ್ಪು ಮಾಡಿದ್ರೆ+ ನನಗೆ ಶಿಕ್ಷೆ ಕೊಡಿ. ನನ್ನನ್ನ ಸಾಯಿಸಬೇಡಿ ಅಂತ ಬೇಡ್ಕೊಳ್ಳಲ್ಲ. ಆದ್ರೆ ಈ ಜನ ನನ್ನ ಮೇಲೆ ಹಾಕಿರೋ ಆರೋಪಗಳು ನಿಜ ಅಲ್ಲದಿದ್ರೆ ಇವ್ರ ಸಂತೋಷಕ್ಕಾಗಿ ನನ್ನನ್ನ ಇವ್ರ ಕೈಗೆ ಒಪ್ಪಿಸೋಕೆ ಯಾರಿಗೂ ಅಧಿಕಾರ ಇಲ್ಲ. ನನ್ನ ಈ ಕೇಸನ್ನ ರೋಮಿನ ರಾಜನ ಹತ್ರ ತಗೊಂಡು ಹೋಗ್ತೀನಿ!”+ ಅಂದ. 12 ಫೆಸ್ತ ತನ್ನ ಸಲಹೆಗಾರರ ಹತ್ರ ಮಾತಾಡಿದ ಮೇಲೆ “ರೋಮಿನ ರಾಜ ನಿನ್ನ ವಿಚಾರಣೆ ಮಾಡಬೇಕು ಅಂತ ಹೇಳಿದ್ಯಲ್ಲಾ. ಅದಕ್ಕೆ ನೀನು ರೋಮಿನ ರಾಜನ ಹತ್ರ ಹೋಗು” ಅಂದ.

13 ಸ್ವಲ್ಪ ದಿನ ಆದಮೇಲೆ ಫೆಸ್ತನನ್ನ ಭೇಟಿ ಮಾಡಿ ಮಾತಾಡೋಕೆ ಅಗ್ರಿಪ್ಪ ರಾಜ ಮತ್ತು ಬೆರ್ನಿಕೆ ಕೈಸರೈಯಕ್ಕೆ ಬಂದ್ರು. 14 ಅವರು ಅಲ್ಲಿ ತುಂಬ ದಿನ ಉಳ್ಕೊಳ್ತಾರೆ ಅಂತ ಫೆಸ್ತನಿಗೆ ಗೊತ್ತಾದಾಗ ಪೌಲನ ವಿಷ್ಯವನ್ನ ರಾಜನಿಗೆ ತಿಳಿಸಿದ

“ಫೇಲಿಕ್ಸ ಜೈಲಲ್ಲೇ ಬಿಟ್ಟುಹೋಗಿರೋ ಒಬ್ಬ ವ್ಯಕ್ತಿ ಇದ್ದಾನೆ. 15 ನಾನು ಯೆರೂಸಲೇಮಿಗೆ ಹೋದಾಗ ಮುಖ್ಯ ಪುರೋಹಿತರು ಮತ್ತು ಯೆಹೂದ್ಯರ ಹಿರಿಯರು ಅವನ ಬಗ್ಗೆ ದೂರು ಹೇಳಿದ್ರು.+ ಅವನಿಗೆ ಶಿಕ್ಷೆ ಕೊಡಬೇಕಂತ ಕೇಳ್ಕೊಂಡ್ರು. 16 ಆದ್ರೆ ಆರೋಪಿಗೆ ಮಾತಾಡೋಕೆ ಅವಕಾಶ ಕೊಡದೆ ಆ ಜನ್ರ ಸಂತೋಷಕ್ಕಾಗಿ ಆರೋಪಿಯನ್ನ ಅವ್ರ ಕೈಗೆ ಒಪ್ಪಿಸ್ಕೊಡೋದು ರೋಮಿನ ನಿಯಮಕ್ಕೆ ವಿರುದ್ಧ ಅಂತ ನಾನು ಅವ್ರಿಗೆ ಹೇಳಿದೆ.+ 17 ಅದಕ್ಕೇ ಅವರು ಇಲ್ಲಿಗೆ ಬಂದಾಗ ನಾನು ತಡಮಾಡಲಿಲ್ಲ. ಮಾರನೇ ದಿನಾನೇ ವಿಚಾರಣೆಗೆ ಪೌಲನನ್ನ ಕರ್ಕೊಂಡು ಬರೋಕೆ ಹೇಳಿದೆ. 18 ಆರೋಪ ಹಾಕಿದವರು ಮಾತಾಡೋಕೆ ಶುರುಮಾಡಿದಾಗ ಪೌಲನ ಮೇಲೆ ತುಂಬ ಆರೋಪ ಹಾಕಿದ್ರು. ಆದ್ರೆ ನಾನು ನೆನಸಿದ ತರ ಯಾವ ಕೆಟ್ಟ ಕೆಲಸವನ್ನೂ ಅವನು ಮಾಡಿಲ್ಲ.+ 19 ಅವ್ರ ಧರ್ಮದ ಬಗ್ಗೆ,+ ಯೇಸು ಅನ್ನೋ ಒಬ್ಬ ವ್ಯಕ್ತಿಗೆ ಸತ್ತ ಮೇಲೆ ಜೀವ ಬಂದಿದೆ ಅಂತ ಪೌಲ ಹೇಳೋದ್ರ ಬಗ್ಗೆ ಅವ್ರ ಮಧ್ಯ ಜಗಳ ಇದೆ ಅಷ್ಟೇ.+ 20 ಇವ್ರ ಜಗಳವನ್ನ ಹೇಗೆ ಬಗೆಹರಿಸೋದು ಅಂತ ನಂಗೆ ಗೊತ್ತಾಗಲಿಲ್ಲ. ಯೆರೂಸಲೇಮಿಗೆ ಹೋಗಿ ಅಲ್ಲಿ ನಿಂಗೆ ವಿಚಾರಣೆ ಆಗಬೇಕಂತ ಇಷ್ಟನಾ ಅಂತ ಕೇಳಿದೆ.+ 21 ಆಗ ಅವನು ಚಕ್ರವರ್ತಿ+ ನನ್ನ ಕೇಸನ್ನ ವಿಚಾರಣೆ ಮಾಡಬೇಕು, ಅಲ್ಲಿ ತನಕ ಇಲ್ಲೇ ಇರ್ತಿನಿ ಅಂತ ಕೇಳ್ಕೊಂಡ. ಹಾಗಾಗಿ ನಾನು ರೋಮಿನ ರಾಜನ ಹತ್ರ ಕಳಿಸೋ ತನಕ ಇಲ್ಲೇ ಕಾವಲಲ್ಲಿ ಇಡೋಕೆ ಆಜ್ಞೆ ಕೊಟ್ಟೆ.”

22 ಆಗ ಅಗ್ರಿಪ್ಪ ಫೆಸ್ತನಿಗೆ “ಅವನು ಏನು ಹೇಳಬೇಕಂತ ಇದ್ದಾನೋ ಅದನ್ನ ಕೇಳಿಸ್ಕೊಳ್ಳೋಕೆ ಇಷ್ಟಪಡ್ತೀನಿ”+ ಅಂದ. ಅದಕ್ಕೆ ಫೆಸ್ತ “ನಾಳೆನೇ ಅವನ ವಿಚಾರಣೆ ಮಾಡಬಹುದು” ಅಂದ. 23 ಹಾಗಾಗಿ ಮಾರನೇ ದಿನ ಅಗ್ರಿಪ್ಪ ಮತ್ತು ಬೆರ್ನಿಕೆ ತುಂಬ ಗತ್ತಿಂದ ನ್ಯಾಯಾಲಯದ ಒಳಗೆ ಬಂದ್ರು. ಅವ್ರ ಸೇನಾಪತಿಗಳು ಮತ್ತು ಪಟ್ಟಣದ ಗಣ್ಯವ್ಯಕ್ತಿಗಳು ಬಂದ್ರು. ಫೆಸ್ತ ಅಪ್ಪಣೆ ಕೊಟ್ಟಾಗ ಪೌಲನನ್ನ ಕರ್ಕೊಂಡು ಬಂದ್ರು. 24 ಆಗ ಫೆಸ್ತ “ಅಗ್ರಿಪ್ಪ ರಾಜನೇ, ಇಲ್ಲಿ ಬಂದಿರೋ ಎಲ್ಲ ಜನ್ರೇ, ನೀವು ನೋಡ್ತಿರೋ ಈ ಮನುಷ್ಯನ ಮೇಲೆ ಯೆಹೂದ್ಯರು ಯೆರೂಸಲೇಮಲ್ಲೂ ಇಲ್ಲೂ ನಂಗೆ ದೂರು ಕೊಟ್ಟಿದ್ದಾರೆ. ಇವನಿಗೆ ಮರಣಶಿಕ್ಷೆ ಆಗಬೇಕು, ಇವನನ್ನ ಬಿಡಬಾರದು ಅಂತ ಜೋರಾಗಿ ಕೂಗಿ ನನ್ನ ಹತ್ರ ಬೇಡ್ಕೊಂಡಿದ್ದಾರೆ.+ 25 ಆದ್ರೆ ಮರಣಶಿಕ್ಷೆ ಆಗುವಷ್ಟು ದೊಡ್ಡ ತಪ್ಪು ಇವನೇನೂ ಮಾಡಿಲ್ಲ ಅಂತ ನಂಗೆ ಗೊತ್ತಾಯ್ತು.+ ಹಾಗಾಗಿ ಈ ಮನುಷ್ಯನೇ ಚಕ್ರವರ್ತಿ ಹತ್ರ ನನ್ನನ್ನ ಕಳಿಸಬೇಕು ಅಂತ ಕೇಳ್ಕೊಂಡಾಗ ನಾನು ಒಪ್ಕೊಂಡೆ. 26 ಆದ್ರೆ ನನ್ನ ಒಡೆಯ, ಇವನ ಬಗ್ಗೆ ಏನು ಬರಿಬೇಕು ಅಂತ ನಂಗೆ ಗೊತ್ತಾಗಲಿಲ್ಲ. ಅದಕ್ಕೇ ಇವನನ್ನ ಇಲ್ಲಿ ನಿಮ್ಮೆಲ್ಲರ ಮುಂದೆ ಮುಖ್ಯವಾಗಿ ಅಗ್ರಿಪ್ಪ ರಾಜನೇ ನಿನ್ನ ಮುಂದೆ ಕರ್ಕೊಂಡು ಬಂದೆ. ಇವನ ವಿಚಾರಣೆ ಮಾಡಿ. ಆಗ ನನಗೆ ಇವನ ಬಗ್ಗೆ ಬರಿಯೋಕೆ ಏನಾದ್ರೂ ಸಿಗಬಹುದು. 27 ಒಬ್ಬನನ್ನ ಜೈಲಿಗೆ ಹಾಕಬೇಕಂದ್ರೆ ಅವನ ಮೇಲೆ ಇರೋ ಆರೋಪಗಳು ಏನಂತ ಹೇಳಬೇಕಲ್ವಾ? ಹೇಳದೆ ಹಾಗೇ ಜೈಲಿಗೆ ಹಾಕೋದು ತಪ್ಪು ಅಂತ ನನಗನಿಸುತ್ತೆ” ಅಂದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ