ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 20
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆರೆಮೀಯ ಮುಖ್ಯಾಂಶಗಳು

      • ಪಷ್ಹೂರ ಯೆರೆಮೀಯನಿಗೆ ಹೊಡೆದದ್ದು (1-6)

      • ಯೆರೆಮೀಯನಿಗೆ ಸಾರದೇ ಇರೋಕೆ ಆಗಲಿಲ್ಲ (7-13)

        • ಉರಿಯೋ ಬೆಂಕಿ ತರ ಇದ್ದ ಸಂದೇಶ (9)

        • ಯೆಹೋವ ಭಯಂಕರ ಯುದ್ಧಶೂರ (11)

      • ಯೆರೆಮೀಯನ ದೂರು (14-18)

ಯೆರೆಮೀಯ 20:2

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 16:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2652

ಯೆರೆಮೀಯ 20:3

ಮಾರ್ಜಿನಲ್ ರೆಫರೆನ್ಸ್

  • +ಯೆರೆ 6:25

ಯೆರೆಮೀಯ 20:4

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:32
  • +ಯೆರೆ 25:9; 39:9

ಯೆರೆಮೀಯ 20:5

ಮಾರ್ಜಿನಲ್ ರೆಫರೆನ್ಸ್

  • +2ಅರ 20:17; 24:11, 13; 25:13-15; ಪ್ರಲಾ 1:10
  • +2ಪೂರ್ವ 36:10; ಯೆರೆ 15:13

ಯೆರೆಮೀಯ 20:6

ಮಾರ್ಜಿನಲ್ ರೆಫರೆನ್ಸ್

  • +ಯೆರೆ 14:14; 28:15; 29:21

ಯೆರೆಮೀಯ 20:7

ಪಾದಟಿಪ್ಪಣಿ

  • *

    ಅಥವಾ “ಮರುಳು ಮಾಡಿದ್ದೀಯ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 3:14; ಮೀಕ 3:8
  • +ಕೀರ್ತ 22:7; ಯೆರೆ 15:10, 15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2007, ಪು. 9

ಯೆರೆಮೀಯ 20:8

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 36:16; ಯೆರೆ 6:10

ಯೆರೆಮೀಯ 20:9

ಮಾರ್ಜಿನಲ್ ರೆಫರೆನ್ಸ್

  • +1ಅರ 19:2, 4; ಯೋನ 1:3
  • +ಯೆರೆ 6:11; ಆಮೋ 3:8; ಅಕಾ 4:19, 20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2010, ಪು. 9

    2/15/2010, ಪು. 7

    7/1/2000, ಪು. 9-10

    3/1/2000, ಪು. 17

ಯೆರೆಮೀಯ 20:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 31:13
  • +ಕೀರ್ತ 38:16

ಯೆರೆಮೀಯ 20:11

ಮಾರ್ಜಿನಲ್ ರೆಫರೆನ್ಸ್

  • +ಯೆರೆ 1:8; ರೋಮ 8:31
  • +ಕೀರ್ತ 27:2; ಯೆರೆ 15:15, 20; 17:18
  • +ಕೀರ್ತ 6:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2011, ಪು. 30

ಯೆರೆಮೀಯ 20:12

ಪಾದಟಿಪ್ಪಣಿ

  • *

    ಅಥವಾ “ಮನದಾಳದ ಭಾವನೆಗಳನ್ನ.” ಅಕ್ಷ. “ಮೂತ್ರಪಿಂಡಗಳು.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 17:10
  • +ಕೀರ್ತ 59:10; ಯೆರೆ 17:18
  • +ಯೆರೆ 11:20; 1ಪೇತ್ರ 2:23

ಯೆರೆಮೀಯ 20:14

ಮಾರ್ಜಿನಲ್ ರೆಫರೆನ್ಸ್

  • +ಯೋಬ 3:3; ಯೆರೆ 15:10

ಯೆರೆಮೀಯ 20:17

ಪಾದಟಿಪ್ಪಣಿ

  • *

    ಅಕ್ಷ. “ಅವಳು ಯಾವಾಗ್ಲೂ ಗರ್ಭಿಣಿಯಾಗೇ ಇರ್ತಿದ್ದಳು.”

ಮಾರ್ಜಿನಲ್ ರೆಫರೆನ್ಸ್

  • +ಯೋಬ 10:18

ಯೆರೆಮೀಯ 20:18

ಮಾರ್ಜಿನಲ್ ರೆಫರೆನ್ಸ್

  • +ಯೋಬ 3:20

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆರೆ. 20:22ಪೂರ್ವ 16:10
ಯೆರೆ. 20:3ಯೆರೆ 6:25
ಯೆರೆ. 20:4ಧರ್ಮೋ 28:32
ಯೆರೆ. 20:4ಯೆರೆ 25:9; 39:9
ಯೆರೆ. 20:52ಅರ 20:17; 24:11, 13; 25:13-15; ಪ್ರಲಾ 1:10
ಯೆರೆ. 20:52ಪೂರ್ವ 36:10; ಯೆರೆ 15:13
ಯೆರೆ. 20:6ಯೆರೆ 14:14; 28:15; 29:21
ಯೆರೆ. 20:7ಯೆಹೆ 3:14; ಮೀಕ 3:8
ಯೆರೆ. 20:7ಕೀರ್ತ 22:7; ಯೆರೆ 15:10, 15
ಯೆರೆ. 20:82ಪೂರ್ವ 36:16; ಯೆರೆ 6:10
ಯೆರೆ. 20:91ಅರ 19:2, 4; ಯೋನ 1:3
ಯೆರೆ. 20:9ಯೆರೆ 6:11; ಆಮೋ 3:8; ಅಕಾ 4:19, 20
ಯೆರೆ. 20:10ಕೀರ್ತ 31:13
ಯೆರೆ. 20:10ಕೀರ್ತ 38:16
ಯೆರೆ. 20:11ಯೆರೆ 1:8; ರೋಮ 8:31
ಯೆರೆ. 20:11ಕೀರ್ತ 27:2; ಯೆರೆ 15:15, 20; 17:18
ಯೆರೆ. 20:11ಕೀರ್ತ 6:10
ಯೆರೆ. 20:12ಯೆರೆ 17:10
ಯೆರೆ. 20:12ಕೀರ್ತ 59:10; ಯೆರೆ 17:18
ಯೆರೆ. 20:12ಯೆರೆ 11:20; 1ಪೇತ್ರ 2:23
ಯೆರೆ. 20:14ಯೋಬ 3:3; ಯೆರೆ 15:10
ಯೆರೆ. 20:17ಯೋಬ 10:18
ಯೆರೆ. 20:18ಯೋಬ 3:20
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆರೆಮೀಯ 20:1-18

ಯೆರೆಮೀಯ

20 ಈ ಭವಿಷ್ಯವಾಣಿಗಳನ್ನ ಯೆರೆಮೀಯ ಹೇಳ್ತಾ ಇದ್ದಾಗ ಇಮ್ಮೇರನ ಮಗ ಪಷ್ಹೂರ ಕೇಳಿಸ್ಕೊಳ್ತಿದ್ದ. ಇವನು ಪುರೋಹಿತ, ಯೆಹೋವನ ಆಲಯದ ಮುಖ್ಯಾಧಿಕಾರಿ ಆಗಿದ್ದ. 2 ಪಷ್ಹೂರ ಪ್ರವಾದಿಯಾದ ಯೆರೆಮೀಯನನ್ನ ಹೊಡೆದು ಯೆಹೋವನ ಆಲಯಕ್ಕೆ ಸೇರಿದ ‘ಮೇಲಿನ ಬೆನ್ಯಾಮೀನ್‌ ಬಾಗಿಲಲ್ಲಿದ್ದ’ ಕೋಳಗಳಿಗೆ* ಅವನನ್ನ ಬಿಗಿದ.+ 3 ಮಾರನೇ ದಿನ ಪಷ್ಹೂರ ಯೆರೆಮೀಯನನ್ನ ಕೋಳಗಳಿಂದ ಬಿಡಿಸಿದ. ಆಗ ಯೆರೆಮೀಯ ಅವನಿಗೆ ಹೀಗಂದ

“ಪಷ್ಹೂರ್‌ ಅನ್ನೋ ನಿನ್ನ ಹೆಸ್ರನ್ನ ಯೆಹೋವ ಬದಲಾಯಿಸಿ ‘ಸುತ್ತಮುತ್ತ ಭೀತಿ’ ಅನ್ನೋ ಅರ್ಥ ಇರೋ ಹೆಸರಿಟ್ಟಿದ್ದಾನೆ.+ 4 ಯಾಕಂದ್ರೆ ಯೆಹೋವ ಹೀಗೆ ಹೇಳ್ತಾನೆ ‘ನಾನು ನಿನಗೆ ಎಂಥ ಸ್ಥಿತಿ ತರ್ತಿನಿ ಅಂದ್ರೆ ಅದ್ರಿಂದ ನಿನಗೆ, ನಿನ್ನ ಎಲ್ಲ ಸ್ನೇಹಿತರಿಗೆ ಭಯ ಆಗುತ್ತೆ. ನಿನ್ನ ಕಣ್ಮುಂದೆನೇ ಅವ್ರನ್ನ ಶತ್ರುಗಳು ಕತ್ತಿಯಿಂದ ಕೊಂದುಬಿಡ್ತಾರೆ.+ ಅಷ್ಟೇ ಅಲ್ಲ ನಾನು ಇಡೀ ಯೆಹೂದವನ್ನ ಬಾಬೆಲಿನ ರಾಜನ ಕೈಗೆ ಕೊಡ್ತೀನಿ. ಅವನು ಅವ್ರನ್ನ ಬಾಬೆಲಿಗೆ ಕೈದಿಯಾಗಿ ಹಿಡ್ಕೊಂಡು ಹೋಗ್ತಾನೆ, ಅವ್ರನ್ನ ಕತ್ತಿಯಿಂದ ಸಾಯಿಸ್ತಾನೆ.+ 5 ನಾನು ಈ ಪಟ್ಟಣದ ಎಲ್ಲ ಐಶ್ವರ್ಯವನ್ನ, ಎಲ್ಲ ಸಂಪತ್ತನ್ನ, ಎಲ್ಲ ಅಮೂಲ್ಯ ವಸ್ತುಗಳನ್ನ, ಯೆಹೂದದ ರಾಜರ ಎಲ್ಲ ನಿಧಿನಿಕ್ಷೇಪಗಳನ್ನ ಅವ್ರ ಶತ್ರುಗಳ ಕೈಗೆ ಒಪ್ಪಿಸ್ತೀನಿ.+ ಅದನ್ನೆಲ್ಲ ಅವರು ಕಿತ್ಕೊಂಡು ದೋಚ್ಕೊಂಡು ಬಾಬೆಲಿಗೆ ತಗೊಂಡು ಹೋಗ್ತಾರೆ.+ 6 ಪಷ್ಹೂರ, ನೀನು ನಿನ್ನ ಸ್ನೇಹಿತರಿಗೆ ಸುಳ್ಳು ಭವಿಷ್ಯಗಳನ್ನ ಹೇಳ್ದೆ. ಹಾಗಾಗಿ ನೀನು, ನಿನ್ನ ಮನೆಯಲ್ಲಿ ವಾಸ ಮಾಡೋರೆಲ್ಲ ಕೈದಿಯಾಗಿ ಹೋಗ್ತೀರ. ಬಾಬೆಲಿಗೆ ಹೋಗಿ ಅಲ್ಲೇ ಸಾಯ್ತೀಯ. ನಿನ್ನನ್ನ ನಿನ್ನ ಆ ಸ್ನೇಹಿತರ ಜೊತೆ ಸಮಾಧಿ ಮಾಡ್ತಾರೆ.’”+

 7 ಯೆಹೋವನೇ, ನಾನು ಆಶ್ಚರ್ಯ ಪಡೋ ತರ ಮಾಡಿದ್ದೀಯ,* ನನಗೆ ಆಶ್ಚರ್ಯನೂ ಆಯ್ತು.

ನೀನು ನನಗಿಂತ ಶಕ್ತಿಶಾಲಿ ಅಂತ ಸಾಬೀತು ಮಾಡಿದ್ದೀಯ, ನೀನೇ ಗೆದ್ದೆ.+

ಇಡೀ ದಿನ ಜನ ನನ್ನನ್ನ ನೋಡಿ ನಗ್ತಾರೆ,

ಎಲ್ರೂ ನನ್ನನ್ನ ಗೇಲಿ ಮಾಡ್ತಾರೆ.+

 8 ಯಾವಾಗೆಲ್ಲ ಅವ್ರ ಜೊತೆ ನಾನು ಮಾತಾಡ್ತೀನೋ ಆಗೆಲ್ಲ,

“ಹಿಂಸೆ ಬರುತ್ತೆ, ನಾಶ ಬರುತ್ತೆ!” ಅಂತ ಜೋರಾಗಿ ಕಿರುಚಿ ಸಾರಬೇಕಾಗಿದೆ,

ನಾನು ಯೆಹೋವನ ಮಾತು ಸಾರುತ್ತಾ ಇರೋದ್ರಿಂದ ದಿನ ಇಡೀ ಬೇರೆಯವರು ನನ್ನನ್ನ ಅವಮಾನ, ಗೇಲಿ ಮಾಡ್ತಿದ್ದಾರೆ.+

 9 ಹಾಗಾಗಿ ನಾನು “ಇನ್ಮುಂದೆ ಆತನ ಬಗ್ಗೆ ಮಾತಾಡಲ್ಲ,

ಆತನ ಹೆಸ್ರಲ್ಲಿ ಏನೂ ಹೇಳಲ್ಲ” ಅಂದ್ಕೊಂಡೆ.+

ಆದ್ರೆ ದೇವರ ಸಂದೇಶ ನನ್ನ ಹೃದಯದಲ್ಲಿ ಬೆಂಕಿ ತರ ಉರಿಯೋಕೆ ಶುರುಮಾಡಿದೆ,

ಅದು ನನ್ನ ಮೂಳೆಗಳ ಒಳಗೆ ಉರಿಯೋ ಬೆಂಕಿಯನ್ನ ಮುಚ್ಚಿಟ್ಟ ಹಾಗಿತ್ತು,

ಅದನ್ನ ಅದುಮಿಟ್ಟು ನನಗೆ ಸುಸ್ತಾಗಿ ಹೋಯ್ತು,

ಇನ್ನು ಮೌನವಾಗಿ ಇರೋಕೆ ನನ್ನಿಂದಾಗಲ್ಲ.+

10 ನನ್ನ ಬಗ್ಗೆ ಹಬ್ಬಿಸ್ತಿರೋ ಎಷ್ಟೋ ಸುಳ್ಳು ಸುದ್ದಿಗಳನ್ನ ಕೇಳಿಸ್ಕೊಂಡಿದ್ದೀನಿ,

ಆತಂಕ ನನ್ನನ್ನ ಮುತ್ಕೊಂಡಿದೆ.+

“ಬನ್ನಿ ಅವನನ್ನ ಬಯ್ಯೋಣ, ಬಾಯಿಗೆ ಬಂದ ಹಾಗೆ ಬಯ್ಯೋಣ” ಅಂತ ಮಾತಾಡ್ಕೊಳ್ತಿದ್ದಾರೆ.

ಬಾಯಿಮಾತಲ್ಲಿ ನನಗೆ ಶಾಂತಿ ಹಾರೈಸ್ತಾರೆ, ಆದ್ರೆ ನಾನು ಯಾವಾಗ ಬೀಳ್ತೀನೋ ಅಂತ ಕಾಯ್ತಾ+

“ಅವನು ಬುದ್ಧಿ ಇಲ್ಲದೆ ಏನಾದ್ರೂ ತಪ್ಪು ಮಾಡೇ ಮಾಡ್ತಾನೆ,

ಆಗ ಅವನನ್ನ ಸೋಲಿಸಿ ಸೇಡು ತೀರಿಸ್ಕೊಳ್ಳೋಣ” ಅಂತಾರೆ.

11 ಆದ್ರೆ ಭಯಂಕರ ಯುದ್ಧಶೂರನ ತರ ಯೆಹೋವ ನನ್ನ ಜೊತೆ ಇದ್ದನು.+

ಹಾಗಾಗಿ ನನಗೆ ಹಿಂಸೆ ಕೊಡೋರು ಎಡವಿ ಬಿಳ್ತಾರೆ, ಗೆಲ್ಲಲ್ಲ.+

ಅವ್ರ ಯೋಜನೆಯೆಲ್ಲ ಮಣ್ಣುಪಾಲು ಆಗೋದ್ರಿಂದ ಅವ್ರಿಗೆ ತುಂಬ ಅವಮಾನ ಆಗುತ್ತೆ.

ಅವ್ರಿಗೆ ಯಾವಾಗ್ಲೂ ಅವಮಾನ ಆಗ್ತಾ ಇರುತ್ತೆ, ಅದನ್ನ ಅವರು ಯಾವತ್ತೂ ಮರಿಯಲ್ಲ.+

12 ಆದ್ರೆ ಸೈನ್ಯಗಳ ದೇವರಾದ ಯೆಹೋವನೇ, ನೀನು ನೀತಿವಂತರನ್ನ ಪರೀಕ್ಷಿಸ್ತೀಯ,

ನೀನು ಅಂತರಾಳದ ಯೋಚನೆಗಳನ್ನ* ತಿಳ್ಕೊಳ್ತೀಯ, ಹೃದಯ ನೋಡ್ತೀಯ.+

ನೀನು ಅವ್ರಿಗೆ ಸೇಡು ತೀರಿಸೋದನ್ನ ನೋಡೋ ಅವಕಾಶ ನನಗೆ ಕೊಡು,+

ಯಾಕಂದ್ರೆ ನನ್ನ ಮೊಕದ್ದಮೆಯನ್ನ ನಿನ್ನ ಕೈಗೆ ಕೊಟ್ಟಿದ್ದೀನಿ.+

13 ಯೆಹೋವನನ್ನ ಹಾಡಿಹೊಗಳಿ! ಯೆಹೋವನ ಗುಣಗಾನ ಮಾಡಿ!

ಯಾಕಂದ್ರೆ ಆತನು ಬಡವನನ್ನ ಕೆಟ್ಟವರ ಕೈಯಿಂದ ಬಿಡಿಸಿ ಕಾಪಾಡಿದ್ದಾನೆ.

14 ನಾನು ಹುಟ್ಟಿದ ದಿನಕ್ಕೆ ಶಾಪತಟ್ಟಲಿ!

ಅಮ್ಮ ನನ್ನನ್ನ ಹೆತ್ತ ದಿನವನ್ನ ಜನ ಕೆಟ್ಟದಿನ ಅಂತ ಹೇಳಲಿ!+

15 “ಗಂಡು ಮಗು ಹುಟ್ಟಿದೆ!” ಅನ್ನೋ ಸಿಹಿಸುದ್ದಿ ನನ್ನ ಅಪ್ಪನಿಗೆ ಮುಟ್ಟಿಸಿ

ಅವನನ್ನ ಸಂತೋಷದಲ್ಲಿ ತೇಲಾಡೋ ಹಾಗೆ ಮಾಡಿದ ಮನುಷ್ಯನಿಗೆ ಶಾಪತಟ್ಟಲಿ.

16 ಯೆಹೋವ ಕನಿಕರ ತೋರಿಸದೆ ನಾಶಮಾಡಿದ ಪಟ್ಟಣಗಳಿಗೆ ಬಂದ ಗತಿ ಅವನಿಗೂ ಬರ್ಲಿ.

ಬೆಳಬೆಳಗ್ಗೆನೇ ಅವನಿಗೆ ಕಿರಿಚಾಟ ಕೇಳಿಸಲಿ, ಮಧ್ಯಾಹ್ನ ಯುದ್ಧಘೋಷ ಅವನ ಕಿವಿಗೆ ಬೀಳಲಿ.

17 ನಾನು ಅಮ್ಮನ ಗರ್ಭದಲ್ಲಿ ಇರುವಾಗ್ಲೇ ಅವನು ನನ್ನನ್ನ ಕೊಂದುಹಾಕಬಾರದಿತ್ತಾ?

ಆಗ ಅವಳ ಗರ್ಭಾನೇ ನನಗೆ ಸಮಾಧಿ ಆಗ್ತಿತ್ತು,

ನಾನು ಹುಟ್ತಾನೇ ಇರಲಿಲ್ಲ.*+

18 ಛೇ! ನಾನು ಯಾಕಾದ್ರೂ ಹುಟ್ಟಿದ್ನೋ?

ಈ ಕಷ್ಟ ದುಃಖ ನೋಡೋಕಾ?

ಅವಮಾನ ಸಹಿಸಿ ಸಹಿಸಿ ಸಾಯೋಕಾ?+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ