ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 21
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ನ್ಯಾಯಸ್ಥಾಪಕರು ಮುಖ್ಯಾಂಶಗಳು

      • ಬೆನ್ಯಾಮೀನ್ಯರ ಕುಲವನ್ನ ಪೂರ್ತಿ ಅಳಿಸಿಹಾಕಲಿಲ್ಲ (1-25)

ನ್ಯಾಯಸ್ಥಾಪಕರು 21:1

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:1
  • +ನ್ಯಾಯ 21:18

ನ್ಯಾಯಸ್ಥಾಪಕರು 21:2

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:18, 26

ನ್ಯಾಯಸ್ಥಾಪಕರು 21:4

ಮಾರ್ಜಿನಲ್ ರೆಫರೆನ್ಸ್

  • +ಯಾಜ 3:1

ನ್ಯಾಯಸ್ಥಾಪಕರು 21:7

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 21:1, 18
  • +ಯಾಜ 5:4; 19:12; ಮತ್ತಾ 5:33

ನ್ಯಾಯಸ್ಥಾಪಕರು 21:8

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:1

ನ್ಯಾಯಸ್ಥಾಪಕರು 21:10

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 21:5

ನ್ಯಾಯಸ್ಥಾಪಕರು 21:12

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 18:1

ನ್ಯಾಯಸ್ಥಾಪಕರು 21:13

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:46, 47

ನ್ಯಾಯಸ್ಥಾಪಕರು 21:14

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 21:8, 12

ನ್ಯಾಯಸ್ಥಾಪಕರು 21:15

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 21:6

ನ್ಯಾಯಸ್ಥಾಪಕರು 21:18

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:12; ನ್ಯಾಯ 21:1

ನ್ಯಾಯಸ್ಥಾಪಕರು 21:19

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 18:1

ನ್ಯಾಯಸ್ಥಾಪಕರು 21:22

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 21:12, 14
  • +ನ್ಯಾಯ 21:1, 18

ನ್ಯಾಯಸ್ಥಾಪಕರು 21:23

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 20:48

ನ್ಯಾಯಸ್ಥಾಪಕರು 21:25

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 17:6; 1ಸಮು 8:4, 5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2005, ಪು. 27

    6/15/1995, ಪು. 22

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ನ್ಯಾಯ. 21:1ನ್ಯಾಯ 20:1
ನ್ಯಾಯ. 21:1ನ್ಯಾಯ 21:18
ನ್ಯಾಯ. 21:2ನ್ಯಾಯ 20:18, 26
ನ್ಯಾಯ. 21:4ಯಾಜ 3:1
ನ್ಯಾಯ. 21:7ನ್ಯಾಯ 21:1, 18
ನ್ಯಾಯ. 21:7ಯಾಜ 5:4; 19:12; ಮತ್ತಾ 5:33
ನ್ಯಾಯ. 21:8ನ್ಯಾಯ 20:1
ನ್ಯಾಯ. 21:10ನ್ಯಾಯ 21:5
ನ್ಯಾಯ. 21:12ಯೆಹೋ 18:1
ನ್ಯಾಯ. 21:13ನ್ಯಾಯ 20:46, 47
ನ್ಯಾಯ. 21:14ನ್ಯಾಯ 21:8, 12
ನ್ಯಾಯ. 21:15ನ್ಯಾಯ 21:6
ನ್ಯಾಯ. 21:18ಯಾಜ 19:12; ನ್ಯಾಯ 21:1
ನ್ಯಾಯ. 21:19ಯೆಹೋ 18:1
ನ್ಯಾಯ. 21:22ನ್ಯಾಯ 21:12, 14
ನ್ಯಾಯ. 21:22ನ್ಯಾಯ 21:1, 18
ನ್ಯಾಯ. 21:23ನ್ಯಾಯ 20:48
ನ್ಯಾಯ. 21:25ನ್ಯಾಯ 17:6; 1ಸಮು 8:4, 5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ನ್ಯಾಯಸ್ಥಾಪಕರು 21:1-25

ನ್ಯಾಯಸ್ಥಾಪಕರು

21 ಇಸ್ರಾಯೇಲ್‌ ಗಂಡಸ್ರು ಮಿಚ್ಪಾದಲ್ಲಿ+ “ನಮ್ಮಲ್ಲಿ ಯಾರೂ ನಮ್ಮ ಹೆಣ್ಣು ಮಕ್ಕಳನ್ನ ಬೆನ್ಯಾಮೀನ್‌ ಗಂಡಸ್ರಿಗೆ ಮದುವೆ ಮಾಡ್ಕೊಡಲ್ಲ”+ ಅಂತ ಆಣೆ ಮಾಡಿದ್ರು. 2 ಆಮೇಲೆ ಜನ್ರು ಬೆತೆಲಿಗೆ+ ಬಂದು ಸತ್ಯ ದೇವರ ಮುಂದೆ ಸಾಯಂಕಾಲ ತನಕ ಕೂತು ಜೋರಾಗಿ ಅಳ್ತಾ ಗೋಳಾಡ್ತಾ 3 “ಇಸ್ರಾಯೇಲಿನ ದೇವರಾದ ಯೆಹೋವ, ಇಸ್ರಾಯೇಲಲ್ಲಿ ಯಾಕೆ ಹೀಗಾಯ್ತು? ಇವತ್ತು ಇಸ್ರಾಯೇಲಿನ ಒಂದು ಕುಲ ಯಾಕೆ ನಾಶ ಆಯ್ತು?” ಅಂತ ಹೇಳ್ತಿದ್ರು. 4 ಮಾರನೇ ದಿನ ಜನ ಬೇಗ ಎದ್ದು ಯಜ್ಞವೇದಿ ಕಟ್ಟಿದ್ರು. ಅದ್ರಲ್ಲಿ ಸರ್ವಾಂಗಹೋಮ ಬಲಿಗಳನ್ನ, ಸಮಾಧಾನ ಬಲಿಗಳನ್ನ+ ಅರ್ಪಿಸಿದ್ರು.

5 ಆಮೇಲೆ ಇಸ್ರಾಯೇಲ್‌ ಜನ್ರು “ಇಸ್ರಾಯೇಲಿನ ಎಲ್ಲ ಕುಲಗಳಲ್ಲಿ ಯೆಹೋವನ ಮುಂದೆ ಸಭೆಯಾಗಿ ಸೇರಿಬರದೆ ಇರೋರು ಯಾರಾದ್ರೂ ಇದ್ದಾರಾ?” ಅಂತ ಕೇಳಿದ್ರು. ಯಾಕಂದ್ರೆ ಯೆಹೋವನ ಮುಂದೆ ಬರದೇ ಇದ್ದವ್ರನ್ನ ಕೊಲ್ಲಲೇಬೇಕು ಅಂತ ಮಿಚ್ಪಾದಲ್ಲಿ ಆಣೆ ಮಾಡಿದ್ರು. 6 ಇಸ್ರಾಯೇಲ್‌ ಜನ್ರು ತಮ್ಮ ಸಹೋದರರಾದ ಬೆನ್ಯಾಮೀನ್ಯರಿಗೆ ಆಗಿದ್ದನ್ನ ನೆನಸಿ ತುಂಬ ನೊಂದ್ಕೊಂಡು “ಇವತ್ತು ಇಸ್ರಾಯೇಲಿಂದ ಒಂದು ಕುಲ ಕಮ್ಮಿ ಆಗಿದೆ. 7 ನಮ್ಮಲ್ಲಿ ಯಾರೂ ನಮ್ಮ ಹೆಣ್ಣು ಮಕ್ಕಳನ್ನ ಅವ್ರಿಗೆ ಮದುವೆ ಮಾಡ್ಕೊಡಲ್ಲ+ ಅಂತ ಯೆಹೋವನ ಮೇಲೆ ಆಣೆ ಮಾಡಿರೋದ್ರಿಂದ+ ಉಳಿದವ್ರಿಗೆ ಎಲ್ಲಿಂದ ಹೆಣ್ಣು ತರೋದು?” ಅಂದ್ರು.

8 ಆಮೇಲೆ ಅವರು “ಮಿಚ್ಪಾದಲ್ಲಿ+ ಯೆಹೋವನ ಮುಂದೆ ಸೇರಿಬಂದಾಗ ಇಸ್ರಾಯೇಲಿನ ಕುಲಗಳಲ್ಲಿ ಬರದೆ ಇದ್ದವ್ರು ಯಾರು?” ಅಂತ ಕೇಳಿದ್ರು. ಜನ್ರು ಸಭೆಯಾಗಿ ಸೇರಿ ಬಂದಿದ್ದ ಪಾಳೆಯಕ್ಕೆ ಯಾಬೆಷ್‌-ಗಿಲ್ಯಾದಿಂದ ಯಾರೂ ಬಂದಿರಲಿಲ್ಲ. 9 ಜನ್ರನ್ನ ಲೆಕ್ಕ ಮಾಡಿದಾಗ ಯಾಬೆಷ್‌-ಗಿಲ್ಯಾದಿನ ಜನ್ರಲ್ಲಿ ಯಾರೂ ಬರಲಿಲ್ಲ ಅಂತ ಅವ್ರಿಗೆ ಗೊತ್ತಾಯ್ತು. 10 ಹಾಗಾಗಿ ಸಭೆ 12,000 ಶಕ್ತಿಶಾಲಿ ವೀರರನ್ನ ಅಲ್ಲಿಗೆ ಕಳಿಸ್ತು. ಸಭೆ ಅವ್ರಿಗೆ “ಹೋಗಿ, ಯಾಬೆಷ್‌-ಗಿಲ್ಯಾದಿನ ಜನ್ರನ್ನ ಕತ್ತಿಯಿಂದ ಸಾಯಿಸಿ. ಅಲ್ಲಿನ ಸ್ತ್ರೀಯರನ್ನ, ಮಕ್ಕಳನ್ನ ಯಾರನ್ನೂ ಬಿಡಬೇಡಿ.+ 11 ಎಲ್ಲ ಗಂಡಸ್ರನ್ನ, ಗಂಡಸ್ರ ಜೊತೆ ಲೈಂಗಿಕ ಸಂಪರ್ಕ ಇದ್ದ ಸ್ತ್ರೀಯರಲ್ಲಿ ಒಬ್ರನ್ನೂ ಬಿಡಬಾರದು.” 12 ಯಾಬೆಷ್‌-ಗಿಲ್ಯಾದಿನ ಜನ್ರಲ್ಲಿ ಕನ್ಯೆಯರಾಗಿದ್ದ 400 ಹುಡುಗಿಯರು ಸಿಕ್ಕಿದ್ರು. ಆ ಹುಡುಗಿಯರಿಗೆ ಯಾವ ಗಂಡಸಿನ ಜೊತೆನೂ ಲೈಂಗಿಕ ಸಂಪರ್ಕ ಇರಲಿಲ್ಲ. ಹಾಗಾಗಿ ಅವ್ರನ್ನ ಕಾನಾನ್‌ ದೇಶದ ಶೀಲೋನಲ್ಲಿದ್ದ+ ಪಾಳೆಯಕ್ಕೆ ಕರ್ಕೊಂಡು ಬಂದ್ರು.

13 ಆಮೇಲೆ ಇಡೀ ಸಭೆ ರಿಮ್ಮೋನಿನ ಕಡಿದಾದ ಬಂಡೆ+ ಮೇಲಿರೋ ಬೆನ್ಯಾಮೀನ್ಯರಿಗೆ ಶಾಂತಿಯ ಒಂದು ಸಂದೇಶ ಕಳಿಸ್ತು. 14 ಆಗ ಬೆನ್ಯಾಮೀನ್ಯರು ವಾಪಸ್‌ ಬಂದ್ರು. ಯಾಬೆಷ್‌-ಗಿಲ್ಯಾದಿಂದ+ ಕರ್ಕೊಂಡು ಬಂದಿದ್ದ ಕನ್ಯೆಯರನ್ನ ಇಸ್ರಾಯೇಲ್ಯರು ಅವ್ರಿಗೆ ಕೊಟ್ಟು ಮದುವೆ ಮಾಡಿದ್ರು. ಆದ್ರೆ ಹೆಣ್ಣು ಮಕ್ಕಳು ಸಾಕಾಗಲಿಲ್ಲ. 15 ಬೆನ್ಯಾಮೀನ್ಯರ+ ಪಾಡನ್ನ ನೋಡಿ ಜನ್ರಿಗೆ ಬೇಜಾರಾಯ್ತು. ಯಾಕಂದ್ರೆ ಯೆಹೋವ ಅವ್ರನ್ನ ಇಸ್ರಾಯೇಲ್ಯರ ಕುಲಗಳಿಂದ ದೂರ ಮಾಡಿದ್ದನು. 16 ಸಭೆಯ ಹಿರಿಯರು “ಬೆನ್ಯಾಮೀನ್ಯರಲ್ಲಿದ್ದ ಸ್ತ್ರೀಯರೆಲ್ಲ ಪೂರ್ತಿ ನಾಶ ಆಗಿರುವಾಗ ಅವ್ರಲ್ಲಿ ಉಳಿದಿರೋ ಗಂಡಸ್ರಿಗೆ ಎಲ್ಲಿಂದ ಹೆಣ್ಣು ತರೋಣ?” ಅಂತ ಕೇಳಿದ್ರು. 17 ಅದಕ್ಕೆ ಅವರು “ಇಸ್ರಾಯೇಲ್ಯರಲ್ಲಿ ಬೆನ್ಯಾಮೀನ್‌ ಕುಲ ಅಳಿದು ಹೋಗದ ಹಾಗೆ ಬೆನ್ಯಾಮೀನ್ಯರಲ್ಲಿ ಪಾರಾಗಿ ಉಳಿದಿರೋ ಗಂಡಸ್ರಿಗೆ ಆಸ್ತಿ ಸಿಗಬೇಕು. 18 ‘ಬೆನ್ಯಾಮೀನ್‌ ಗಂಡಸಿಗೆ ಹೆಣ್ಣು ಕೊಡುವವನಿಗೆ ಶಾಪ ಸಿಗ್ಲಿ’ ಅಂತ ಇಸ್ರಾಯೇಲ್‌ ಜನ್ರು ಆಣೆ ಮಾಡಿದ್ರಿಂದ+ ನಮ್ಮ ಹೆಣ್ಣು ಮಕ್ಕಳನ್ನ ಅವ್ರಿಗೆ ಮದುವೆ ಮಾಡಿ ಕೊಡೋಕೆ ಆಗಲ್ಲ” ಅಂದ್ರು.

19 ಆಮೇಲೆ ಅವರು “ನೋಡಿ! ಶೀಲೋನಲ್ಲಿ+ ವರ್ಷ ವರ್ಷ ಯೆಹೋವನಿಗಾಗಿ ಒಂದು ಹಬ್ಬ ನಡಿಯುತ್ತೆ. ಈ ಶೀಲೋ ಬೆತೆಲಿನ ಉತ್ತರಕ್ಕೆ, ಬೆತೆಲಿಂದ ಶೆಕೆಮಿಗೆ ಹೋಗೋ ಹೆದ್ದಾರಿಯ ಪೂರ್ವಕ್ಕೆ, ಲೆಬೋನದ ದಕ್ಷಿಣಕ್ಕೆ ಇದೆ” ಅಂದ್ರು. 20 ಅವರು ಬೆನ್ಯಾಮೀನ್‌ ಗಂಡಸ್ರಿಗೆ ಹೀಗೆ ಆಜ್ಞೆ ಕೊಟ್ರು: “ನೀವು ಹೋಗಿ ದ್ರಾಕ್ಷಿತೋಟದಲ್ಲಿ ಹೊಂಚುಹಾಕಿ ಕೂತ್ಕೊಳ್ಳಿ. 21 ಶೀಲೋನ ಯುವತಿಯರು ನೃತ್ಯ ಮಾಡೋಕೆ ಅಲ್ಲಿಗೆ ಬರುವಾಗ ದ್ರಾಕ್ಷಿತೋಟದಿಂದ ಹೊರಗೆ ಬನ್ನಿ. ಮದುವೆ ಮಾಡ್ಕೊಳ್ಳೋಕೆ ಶೀಲೋನ ಯುವತಿಯರನ್ನ ಹಿಡ್ಕೊಂಡು ಬೆನ್ಯಾಮೀನ್ಯರ ಪ್ರದೇಶಕ್ಕೆ ವಾಪಸ್‌ ಬನ್ನಿ. 22 ಆ ಯುವತಿಯರ ತಂದೆಯಂದಿರೋ ಸಹೋದರರೋ ನಮ್ಮ ಹತ್ರ ದೂರು ತಂದ್ರೆ ನಾವು ಅವ್ರಿಗೆ ‘ಅವ್ರ ಪರವಾಗಿ ನಮಗೆ ದಯೆ ತೋರಿಸಿ. ಅವ್ರಲ್ಲಿರೋ ಎಲ್ಲ ಗಂಡಸ್ರಿಗೆ ಕೊಡೋಕೆ ನಮಗೆ ಯುದ್ಧದಲ್ಲಿ ಹೆಣ್ಣು ಮಕ್ಕಳು ಸಿಗಲಿಲ್ಲ.+ ಅವ್ರಿಗೆ ನಿಮ್ಮ ಹೆಣ್ಣು ಮಕ್ಕಳನ್ನ ನಿಮ್ಮ ಸ್ವಂತ ಇಷ್ಟದಿಂದ ಕೊಡದೇ ಇರೋದ್ರಿಂದ ಯಾವುದೇ ಕಾರಣಕ್ಕೂ ನೀವು ಅಪರಾಧಿ ಆಗಲ್ಲ’+ ಅಂತ ಹೇಳ್ತೀವಿ.”

23 ಅವರು ಹೇಳಿದ ಹಾಗೇ ಬೆನ್ಯಾಮೀನ್‌ ಗಂಡಸ್ರು ಮಾಡಿದ್ರು. ಅವ್ರಲ್ಲಿ ಪ್ರತಿಯೊಬ್ರು ನೃತ್ಯ ಮಾಡ್ತಿದ್ದ ಯುವತಿಯರನ್ನ ಎತ್ಕೊಂಡು ಹೋಗಿ ಮದುವೆ ಮಾಡ್ಕೊಂಡ್ರು. ಆಮೇಲೆ ತಮ್ಮ ಪ್ರದೇಶಗಳಿಗೆ ವಾಪಸ್‌ ಬಂದು ತಮ್ಮ ಪಟ್ಟಣಗಳನ್ನ ಮತ್ತೆ ಕಟ್ಟಿ+ ಅಲ್ಲೇ ಇದ್ರು.

24 ಇಸ್ರಾಯೇಲ್ಯರು ಅಲ್ಲಿಂದ ಚದರಿ ಹೋದ್ರು. ಅವ್ರಲ್ಲಿ ಪ್ರತಿಯೊಬ್ಬ ತನ್ನ ಕುಲಕ್ಕೆ, ತನ್ನ ಮನೆತನಕ್ಕೆ ಆಸ್ತಿಯಾಗಿ ಸಿಕ್ಕಿದ ಪ್ರದೇಶಕ್ಕೆ ಹೋದ.

25 ಆ ಕಾಲದಲ್ಲಿ ಇಸ್ರಾಯೇಲ್ಯರಿಗೆ ರಾಜ ಇರಲಿಲ್ಲ.+ ಪ್ರತಿಯೊಬ್ರೂ ತಮಗೆ ಸರಿ ಅನಿಸಿದ್ದನ್ನೇ ಮಾಡ್ತಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ