ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 27
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಧರ್ಮೋಪದೇಶಕಾಂಡ ಮುಖ್ಯಾಂಶಗಳು

      • ಕಲ್ಲುಗಳ ಮೇಲೆ ಎಲ್ಲ ನಿಯಮಗಳನ್ನ ಬರಿಬೇಕು (1-10)

      • ಏಲಾಬ್‌ ಮತ್ತು ಗೆರಿಜ್ಜೀಮ್‌ ಬೆಟ್ಟದ ಹತ್ರ (11-14)

      • ಶಾಪಗಳನ್ನ ಮತ್ತೆ ಹೇಳಿದ್ದು (15-26)

ಧರ್ಮೋಪದೇಶಕಾಂಡ 27:2

ಪಾದಟಿಪ್ಪಣಿ

  • *

    ಅಥವಾ “ಗಿಲಾವು ಮಾಡಬೇಕು.”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 8:30-32

ಧರ್ಮೋಪದೇಶಕಾಂಡ 27:3

ಮಾರ್ಜಿನಲ್ ರೆಫರೆನ್ಸ್

  • +ಅರ 13:26, 27

ಧರ್ಮೋಪದೇಶಕಾಂಡ 27:4

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 11:29

ಧರ್ಮೋಪದೇಶಕಾಂಡ 27:5

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:25

ಧರ್ಮೋಪದೇಶಕಾಂಡ 27:7

ಮಾರ್ಜಿನಲ್ ರೆಫರೆನ್ಸ್

  • +ಯಾಜ 3:1
  • +ಯಾಜ 7:15
  • +ಧರ್ಮೋ 12:7

ಧರ್ಮೋಪದೇಶಕಾಂಡ 27:8

ಮಾರ್ಜಿನಲ್ ರೆಫರೆನ್ಸ್

  • +ವಿಮೋ 24:12

ಧರ್ಮೋಪದೇಶಕಾಂಡ 27:9

ಮಾರ್ಜಿನಲ್ ರೆಫರೆನ್ಸ್

  • +ವಿಮೋ 19:5; ಧರ್ಮೋ 26:18

ಧರ್ಮೋಪದೇಶಕಾಂಡ 27:10

ಮಾರ್ಜಿನಲ್ ರೆಫರೆನ್ಸ್

  • +1ಅರ 2:3; ಮತ್ತಾ 19:17; 1ಯೋಹಾ 5:3

ಧರ್ಮೋಪದೇಶಕಾಂಡ 27:12

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 11:29

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/1997, ಪು. 30-31

    6/15/1996, ಪು. 14

ಧರ್ಮೋಪದೇಶಕಾಂಡ 27:13

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 8:33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/1997, ಪು. 30-31

    6/15/1996, ಪು. 14

ಧರ್ಮೋಪದೇಶಕಾಂಡ 27:14

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 33:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/1996, ಪು. 14

ಧರ್ಮೋಪದೇಶಕಾಂಡ 27:15

ಪಾದಟಿಪ್ಪಣಿ

  • *

    ಅಥವಾ “ಲೋಹದ ಕೆಲಸ, ಮರದ ಕೆಲಸ ಮಾಡುವವನ.”

  • *

    ಅಥವಾ “ಹಾಗೇ ಆಗ್ಲಿ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 7:25; 29:17
  • +ವಿಮೋ 20:4; ಧರ್ಮೋ 4:15, 16; ಯೆಶಾ 44:9
  • +ವಿಮೋ 34:17; ಯಾಜ 19:4

ಧರ್ಮೋಪದೇಶಕಾಂಡ 27:16

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:12; ಧರ್ಮೋ 21:18-21; ಜ್ಞಾನೋ 20:20; 30:17; ಮತ್ತಾ 15:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/1997, ಪು. 30-31

ಧರ್ಮೋಪದೇಶಕಾಂಡ 27:17

ಪಾದಟಿಪ್ಪಣಿ

  • *

    ಅಥವಾ “ಅವನ ಆಸ್ತಿಯನ್ನ ಅತಿಕ್ರಮಿಸುವವನಿಗೆ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 19:14; ಜ್ಞಾನೋ 23:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 7/2021, ಪು. 7

    ಕಾವಲಿನಬುರುಜು,

    2/1/1997, ಪು. 30-31

ಧರ್ಮೋಪದೇಶಕಾಂಡ 27:18

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:14

ಧರ್ಮೋಪದೇಶಕಾಂಡ 27:19

ಪಾದಟಿಪ್ಪಣಿ

  • *

    ಅಥವಾ “ತಂದೆ ಇಲ್ಲದ ಮಕ್ಕಳಿಗೆ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 22:21, 22; ಧರ್ಮೋ 10:17, 18; ಮಲಾ 3:5; ಯಾಕೋ 1:27
  • +ಧರ್ಮೋ 16:20; ಜ್ಞಾನೋ 17:23; ಮೀಕ 3:11

ಧರ್ಮೋಪದೇಶಕಾಂಡ 27:20

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:8; 1ಕೊರಿಂ 5:1

ಧರ್ಮೋಪದೇಶಕಾಂಡ 27:21

ಮಾರ್ಜಿನಲ್ ರೆಫರೆನ್ಸ್

  • +ವಿಮೋ 22:19; ಯಾಜ 18:23; 20:15

ಧರ್ಮೋಪದೇಶಕಾಂಡ 27:22

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:9; 20:17

ಧರ್ಮೋಪದೇಶಕಾಂಡ 27:23

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:17; 20:14

ಧರ್ಮೋಪದೇಶಕಾಂಡ 27:24

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:13; 21:12; ಅರ 35:31

ಧರ್ಮೋಪದೇಶಕಾಂಡ 27:25

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 27:3, 4

ಧರ್ಮೋಪದೇಶಕಾಂಡ 27:26

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:15; ಗಲಾ 3:10

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಧರ್ಮೋ. 27:2ಯೆಹೋ 8:30-32
ಧರ್ಮೋ. 27:3ಅರ 13:26, 27
ಧರ್ಮೋ. 27:4ಧರ್ಮೋ 11:29
ಧರ್ಮೋ. 27:5ವಿಮೋ 20:25
ಧರ್ಮೋ. 27:7ಯಾಜ 3:1
ಧರ್ಮೋ. 27:7ಯಾಜ 7:15
ಧರ್ಮೋ. 27:7ಧರ್ಮೋ 12:7
ಧರ್ಮೋ. 27:8ವಿಮೋ 24:12
ಧರ್ಮೋ. 27:9ವಿಮೋ 19:5; ಧರ್ಮೋ 26:18
ಧರ್ಮೋ. 27:101ಅರ 2:3; ಮತ್ತಾ 19:17; 1ಯೋಹಾ 5:3
ಧರ್ಮೋ. 27:12ಧರ್ಮೋ 11:29
ಧರ್ಮೋ. 27:13ಯೆಹೋ 8:33
ಧರ್ಮೋ. 27:14ಧರ್ಮೋ 33:10
ಧರ್ಮೋ. 27:15ಧರ್ಮೋ 7:25; 29:17
ಧರ್ಮೋ. 27:15ವಿಮೋ 20:4; ಧರ್ಮೋ 4:15, 16; ಯೆಶಾ 44:9
ಧರ್ಮೋ. 27:15ವಿಮೋ 34:17; ಯಾಜ 19:4
ಧರ್ಮೋ. 27:16ವಿಮೋ 20:12; ಧರ್ಮೋ 21:18-21; ಜ್ಞಾನೋ 20:20; 30:17; ಮತ್ತಾ 15:4
ಧರ್ಮೋ. 27:17ಧರ್ಮೋ 19:14; ಜ್ಞಾನೋ 23:10
ಧರ್ಮೋ. 27:18ಯಾಜ 19:14
ಧರ್ಮೋ. 27:19ವಿಮೋ 22:21, 22; ಧರ್ಮೋ 10:17, 18; ಮಲಾ 3:5; ಯಾಕೋ 1:27
ಧರ್ಮೋ. 27:19ಧರ್ಮೋ 16:20; ಜ್ಞಾನೋ 17:23; ಮೀಕ 3:11
ಧರ್ಮೋ. 27:20ಯಾಜ 18:8; 1ಕೊರಿಂ 5:1
ಧರ್ಮೋ. 27:21ವಿಮೋ 22:19; ಯಾಜ 18:23; 20:15
ಧರ್ಮೋ. 27:22ಯಾಜ 18:9; 20:17
ಧರ್ಮೋ. 27:23ಯಾಜ 18:17; 20:14
ಧರ್ಮೋ. 27:24ವಿಮೋ 20:13; 21:12; ಅರ 35:31
ಧರ್ಮೋ. 27:25ಮತ್ತಾ 27:3, 4
ಧರ್ಮೋ. 27:26ಧರ್ಮೋ 28:15; ಗಲಾ 3:10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಧರ್ಮೋಪದೇಶಕಾಂಡ 27:1-26

ಧರ್ಮೋಪದೇಶಕಾಂಡ

27 ಆಮೇಲೆ ಮೋಶೆ ಮತ್ತು ಇಸ್ರಾಯೇಲ್ಯರ ಹಿರಿಯರು ಜನ್ರ ಮುಂದೆ ನಿಂತ್ರು. ಮೋಶೆ ಜನ್ರಿಗೆ “ನಾನು ಇವತ್ತು ಕೊಡೋ ಎಲ್ಲಾ ಆಜ್ಞೆಗಳನ್ನ ನೀವು ಪಾಲಿಸಬೇಕು. 2 ನೀವು ಯೋರ್ದನ್‌ ನದಿ ದಾಟಿ ನಿಮ್ಮ ದೇವರಾದ ಯೆಹೋವ ಕೊಡೋ ದೇಶಕ್ಕೆ ಹೋದ ತಕ್ಷಣ ದೊಡ್ಡ ದೊಡ್ಡ ಕಲ್ಲುಗಳನ್ನ ನಿಲ್ಲಿಸಿ ಸುಣ್ಣ ಹಚ್ಚಬೇಕು.*+ 3 ನೀವು ಯೋರ್ದನ್‌ ನದಿ ದಾಟಿದಾಗ ಆ ಕಲ್ಲುಗಳ ಮೇಲೆ ಈ ನಿಯಮ ಪುಸ್ತಕದಲ್ಲಿ ಇರೋ ಎಲ್ಲಾ ನಿಯಮಗಳನ್ನ ಬರಿಬೇಕು. ಹಾಗೆ ಮಾಡಿದ್ರೆ ಮಾತ್ರ ನಿಮ್ಮ ದೇವರಾದ ಯೆಹೋವ ಕೊಡೋ ದೇಶಕ್ಕೆ ಅಂದ್ರೆ ನಿಮ್ಮ ಪೂರ್ವಜರ ದೇವರಾದ ಯೆಹೋವ ನಿಮಗೆ ಕೊಡ್ತೀನಿ ಅಂತ ಮಾತುಕೊಟ್ಟ ಹಾಲೂ ಜೇನೂ ಹರಿಯೋ ದೇಶಕ್ಕೆ ಹೋಗ್ತೀರ.+ 4 ಯೋರ್ದನ್‌ ನದಿ ದಾಟಿ ಹೋದ್ಮೇಲೆ ನಾನು ಇವತ್ತು ನಿಮಗೆ ಹೇಳಿದ ಹಾಗೇ ದೊಡ್ಡ ದೊಡ್ಡ ಕಲ್ಲುಗಳನ್ನ ಏಬಾಲ್‌ ಬೆಟ್ಟದ+ ಮೇಲೆ ನಿಲ್ಲಿಸಿ ಸುಣ್ಣ ಹಚ್ಚಬೇಕು. 5 ಅಲ್ಲಿ ನಿಮ್ಮ ದೇವರಾದ ಯೆಹೋವನಿಗಾಗಿ ಕಲ್ಲುಗಳಿಂದ ಒಂದು ಯಜ್ಞವೇದಿ ಕಟ್ಟಬೇಕು. ಆ ಕಲ್ಲುಗಳನ್ನ ಕಬ್ಬಿಣದ ಸಾಧನಗಳಿಂದ ಕೆತ್ತಿರಬಾರದು.+ 6 ಉಳಿ ತಾಗದ ಇಡೀ ಕಲ್ಲುಗಳಿಂದ ನಿಮ್ಮ ದೇವರಾದ ಯೆಹೋವನಿಗಾಗಿ ಆ ಯಜ್ಞವೇದಿ ಕಟ್ಟಬೇಕು. ಅದ್ರ ಮೇಲೆ ನಿಮ್ಮ ದೇವರಾದ ಯೆಹೋವನಿಗೆ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸಬೇಕು. 7 ಸಮಾಧಾನ ಬಲಿಗಳನ್ನ+ ಅರ್ಪಿಸಿ ಅಲ್ಲೇ ತಿನ್ನಬೇಕು.+ ನಿಮ್ಮ ದೇವರಾದ ಯೆಹೋವನ ಮುಂದೆ ಸಂತೋಷವಾಗಿ ಇರಬೇಕು.+ 8 ನಿಯಮ ಪುಸ್ತಕದಲ್ಲಿ ಇರೋ ಎಲ್ಲ ಮಾತುಗಳನ್ನ ಆ ಕಲ್ಲುಗಳ ಮೇಲೆ ಸ್ಪಷ್ಟವಾಗಿ ಬರಿಬೇಕು”+ ಅಂದ.

9 ಆಮೇಲೆ ಎಲ್ಲ ಇಸ್ರಾಯೇಲ್ಯರಿಗೆ ಮೋಶೆ ಮತ್ತೆ ಲೇವಿಯರಾದ ಪುರೋಹಿತರು “ಇಸ್ರಾಯೇಲ್ಯರೇ, ಮೌನವಾಗಿದ್ದು ಹೇಳೋದಕ್ಕೆ ಗಮನ ಕೊಡಿ. ಇವತ್ತು ನೀವು ನಿಮ್ಮ ದೇವರಾದ ಯೆಹೋವನ ಜನರಾಗಿದ್ದೀರ.+ 10 ನಿಮ್ಮ ದೇವರಾದ ಯೆಹೋವ ಹೇಳೋ ಮಾತನ್ನ ಕೇಳಿ. ಇವತ್ತು ನಿಮಗೆ ಹೇಳೋ ಆತನ ಆಜ್ಞೆಗಳನ್ನ ನಿಯಮಗಳನ್ನ ಪಾಲಿಸಬೇಕು”+ ಅಂದ್ರು.

11 ಆ ದಿನ ಮೋಶೆ ಜನ್ರಿಗೆ ಹೇಳಿದ್ದು ಏನಂದ್ರೆ 12 “ಯೋರ್ದನ್‌ ನದಿ ದಾಟಿದ ಮೇಲೆ ಸಿಮೆಯೋನ್‌, ಲೇವಿ, ಯೆಹೂದ, ಇಸ್ಸಾಕಾರ್‌, ಯೋಸೇಫ್‌, ಬೆನ್ಯಾಮೀನ್‌ ಕುಲದವರು ಗೆರಿಜ್ಜೀಮ್‌ ಬೆಟ್ಟದ+ ಹತ್ರ ನಿಂತು ಜನ್ರಿಗೆ ಆಶೀರ್ವಾದ ಮಾಡಬೇಕು. 13 ರೂಬೇನ್‌, ಗಾದ್‌, ಅಶೇರ್‌, ಜೆಬುಲೂನ್‌, ದಾನ್‌, ನಫ್ತಾಲಿ ಕುಲದವರು ಏಬಾಲ್‌ ಬೆಟ್ಟದ+ ಹತ್ರ ನಿಂತು ಶಾಪ ಹಾಕಬೇಕು. 14 ಲೇವಿಯರು ಇಸ್ರಾಯೇಲ್ಯರಿಗೆ ಗಟ್ಟಿಯಾಗಿ ಹೀಗೆ ಹೇಳಬೇಕು:+

15 ‘ಯೆಹೋವ ಅಸಹ್ಯಪಡೋ+ ವಸ್ತುಗಳನ್ನ ಅಂದ್ರೆ ಕರಕುಶಲಗಾರರ* ಕೈಕೆಲಸ ಆಗಿರೋ ಕೆತ್ತಿದ ಮೂರ್ತಿಗಳನ್ನ,+ ಅಚ್ಚಲ್ಲಿ ಲೋಹ ಹೊಯ್ದು ಮೂರ್ತಿಗಳನ್ನ+ ಮಾಡೋನಿಗೆ ಶಾಪ ತಟ್ಲಿ. ಅವುಗಳನ್ನ ಗುಟ್ಟಾಗಿ ಇಡುವವನಿಗೂ ಶಾಪ ತಟ್ಲಿ.’ (ಅದಕ್ಕೆ ಜನ್ರೆಲ್ಲ ‘ಆಮೆನ್‌’* ಅನ್ನಬೇಕು.)

16 ‘ಅಪ್ಪಅಮ್ಮನನ್ನ ಕೀಳಾಗಿ ನೋಡುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

17 ‘ನೆರೆಯವನ ಜಮೀನಿನ ಗಡಿ ಸರಿಸುವವನಿಗೆ* ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

18 ‘ಕುರುಡನನ್ನ ದಾರಿ ತಪ್ಪಿಸುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

19 ‘ವಿದೇಶಿಯರಿಗೆ, ಅನಾಥರಿಗೆ* ಅಥವಾ ವಿಧವೆಯರಿಗೆ+ ಅನ್ಯಾಯವಾಗಿ ತೀರ್ಪು ಕೊಡುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

20 ‘ತಂದೆಯ ಹೆಂಡತಿಯನ್ನ ಕೂಡಿ ತನ್ನ ತಂದೆಗೆ ಅವಮಾನ ಮಾಡುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

21 ‘ಪ್ರಾಣಿ ಜೊತೆ ಸಂಭೋಗ ಮಾಡುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

22 ‘ಅಕ್ಕತಂಗಿಯನ್ನ ಕೂಡುವವನಿಗೆ, ತಂದೆಯ ಮಗಳನ್ನ ಅಥವಾ ತಾಯಿಯ ಮಗಳನ್ನ ಕೂಡುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

23 ‘ಹೆಂಡತಿಯ ತಾಯಿಯನ್ನ ಕೂಡುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

24 ‘ಹೊಂಚುಹಾಕಿ ಒಬ್ಬನನ್ನ ಕೊಲ್ಲುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

25 ‘ನಿರಪರಾಧಿಯನ್ನ ಕೊಲ್ಲೋಕೆ ಲಂಚ ತಗೊಳ್ಳುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

26 ‘ಈ ನಿಯಮ ಪುಸ್ತಕದಲ್ಲಿ ಇರೋ ನಿಯಮಗಳನ್ನ ಪಾಲಿಸದೇ ಇರುವವನಿಗೆ ಶಾಪ ತಟ್ಲಿ.’+ (ಅದಕ್ಕೆ ಜನ್ರೆಲ್ಲ ‘ಆಮೆನ್‌’ ಅನ್ನಬೇಕು.)

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ