ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 27
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ವಿಮೋಚನಕಾಂಡ ಮುಖ್ಯಾಂಶಗಳು

      • ಸರ್ವಾಂಗಹೋಮ ಯಜ್ಞವೇದಿ (1-8)

      • ಅಂಗಳ (9-19)

      • ದೀಪಸ್ತಂಭಕ್ಕೆ ಎಣ್ಣೆ (20, 21)

ವಿಮೋಚನಕಾಂಡ 27:1

ಪಾದಟಿಪ್ಪಣಿ

  • *

    ಇದು ಜಾಲಿ ಕುಲಕ್ಕೆ ಸೇರಿದ ಮರ.

  • *

    ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು). ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ವಿಮೋ 40:29; 2ಪೂರ್ವ 4:1; ಇಬ್ರಿ 13:10
  • +ವಿಮೋ 38:1-7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 10/2020, ಪು. 7-8

ವಿಮೋಚನಕಾಂಡ 27:2

ಮಾರ್ಜಿನಲ್ ರೆಫರೆನ್ಸ್

  • +ಯಾಜ 4:25
  • +1ಅರ 8:64

ವಿಮೋಚನಕಾಂಡ 27:3

ಪಾದಟಿಪ್ಪಣಿ

  • *

    ಅದು, ಬಲಿಗಳ ಕೊಬ್ಬಿಂದ ನೆನೆದ ಬೂದಿ.

ಮಾರ್ಜಿನಲ್ ರೆಫರೆನ್ಸ್

  • +1ಅರ 7:45

ವಿಮೋಚನಕಾಂಡ 27:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 10/2020, ಪು. 7-8

ವಿಮೋಚನಕಾಂಡ 27:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 10/2020, ಪು. 7-8

ವಿಮೋಚನಕಾಂಡ 27:7

ಮಾರ್ಜಿನಲ್ ರೆಫರೆನ್ಸ್

  • +ಅರ 4:14, 15

ವಿಮೋಚನಕಾಂಡ 27:8

ಮಾರ್ಜಿನಲ್ ರೆಫರೆನ್ಸ್

  • +ವಿಮೋ 25:40; 1ಪೂರ್ವ 28:12; ಅಕಾ 7:44; ಇಬ್ರಿ 8:5

ವಿಮೋಚನಕಾಂಡ 27:9

ಮಾರ್ಜಿನಲ್ ರೆಫರೆನ್ಸ್

  • +ವಿಮೋ 40:8; 1ಅರ 6:36
  • +ವಿಮೋ 38:9-15

ವಿಮೋಚನಕಾಂಡ 27:10

ಪಾದಟಿಪ್ಪಣಿ

  • *

    ಅಥವಾ ಜೋಡಿಸೋಕೆ ಬಳಸೋ “ಬಳೆಗಳು; ದುಂಡುಪಟ್ಟಿಗಳು; ಪಟ್ಟಿಗಳು.”

ವಿಮೋಚನಕಾಂಡ 27:11

ಪಾದಟಿಪ್ಪಣಿ

  • *

    ಅಥವಾ ಜೋಡಿಸೋಕೆ ಬಳಸೋ “ಬಳೆಗಳು; ದುಂಡುಪಟ್ಟಿಗಳು; ಪಟ್ಟಿಗಳು.”

ವಿಮೋಚನಕಾಂಡ 27:14

ಮಾರ್ಜಿನಲ್ ರೆಫರೆನ್ಸ್

  • +ವಿಮೋ 39:33, 40

ವಿಮೋಚನಕಾಂಡ 27:16

ಮಾರ್ಜಿನಲ್ ರೆಫರೆನ್ಸ್

  • +ವಿಮೋ 35:25
  • +ವಿಮೋ 38:18, 19

ವಿಮೋಚನಕಾಂಡ 27:17

ಮಾರ್ಜಿನಲ್ ರೆಫರೆನ್ಸ್

  • +ವಿಮೋ 38:17

ವಿಮೋಚನಕಾಂಡ 27:18

ಮಾರ್ಜಿನಲ್ ರೆಫರೆನ್ಸ್

  • +ವಿಮೋ 27:9

ವಿಮೋಚನಕಾಂಡ 27:19

ಮಾರ್ಜಿನಲ್ ರೆಫರೆನ್ಸ್

  • +ವಿಮೋ 38:20; ಅರ 3:36, 37

ವಿಮೋಚನಕಾಂಡ 27:20

ಮಾರ್ಜಿನಲ್ ರೆಫರೆನ್ಸ್

  • +ವಿಮೋ 39:33, 37; ಯಾಜ 24:1-3

ವಿಮೋಚನಕಾಂಡ 27:21

ಮಾರ್ಜಿನಲ್ ರೆಫರೆನ್ಸ್

  • +ವಿಮೋ 26:33; 40:3; ಇಬ್ರಿ 9:2, 3
  • +ವಿಮೋ 30:8
  • +ಅರ 18:23

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ವಿಮೋ. 27:1ವಿಮೋ 40:29; 2ಪೂರ್ವ 4:1; ಇಬ್ರಿ 13:10
ವಿಮೋ. 27:1ವಿಮೋ 38:1-7
ವಿಮೋ. 27:2ಯಾಜ 4:25
ವಿಮೋ. 27:21ಅರ 8:64
ವಿಮೋ. 27:31ಅರ 7:45
ವಿಮೋ. 27:7ಅರ 4:14, 15
ವಿಮೋ. 27:8ವಿಮೋ 25:40; 1ಪೂರ್ವ 28:12; ಅಕಾ 7:44; ಇಬ್ರಿ 8:5
ವಿಮೋ. 27:9ವಿಮೋ 40:8; 1ಅರ 6:36
ವಿಮೋ. 27:9ವಿಮೋ 38:9-15
ವಿಮೋ. 27:14ವಿಮೋ 39:33, 40
ವಿಮೋ. 27:16ವಿಮೋ 35:25
ವಿಮೋ. 27:16ವಿಮೋ 38:18, 19
ವಿಮೋ. 27:17ವಿಮೋ 38:17
ವಿಮೋ. 27:18ವಿಮೋ 27:9
ವಿಮೋ. 27:19ವಿಮೋ 38:20; ಅರ 3:36, 37
ವಿಮೋ. 27:20ವಿಮೋ 39:33, 37; ಯಾಜ 24:1-3
ವಿಮೋ. 27:21ವಿಮೋ 26:33; 40:3; ಇಬ್ರಿ 9:2, 3
ವಿಮೋ. 27:21ವಿಮೋ 30:8
ವಿಮೋ. 27:21ಅರ 18:23
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ವಿಮೋಚನಕಾಂಡ 27:1-21

ವಿಮೋಚನಕಾಂಡ

27 ಅಕೇಶಿಯ ಮರದಿಂದ* ಯಜ್ಞವೇದಿಯನ್ನ ಮಾಡಬೇಕು.+ ಅದು ಚೌಕಾಕಾರ ಆಗಿರಬೇಕು, ಐದು ಮೊಳ* ಉದ್ದ, ಐದು ಮೊಳ ಅಗಲ, ಮೂರು ಮೊಳ ಎತ್ತರ ಇರಬೇಕು.+ 2 ಅದ್ರ ನಾಲ್ಕು ಮೂಲೆಗಳಲ್ಲಿ ಒಂದೊಂದು ಕೊಂಬನ್ನ+ ಮಾಡಬೇಕು. ಯಜ್ಞವೇದಿ ಮತ್ತು ಅದ್ರ ಕೊಂಬುಗಳನ್ನ ಮರದ ಒಂದೇ ತುಂಡಿಂದ ಮಾಡಬೇಕು. ಯಜ್ಞವೇದಿಗೆ ತಾಮ್ರದ ತಗಡುಗಳನ್ನ ಹೊದಿಸಬೇಕು.+ 3 ಯಜ್ಞವೇದಿಯ ಬೂದಿ* ತಗೊಂಡು ಹೋಗೋಕೆ ಬಕೀಟುಗಳನ್ನ ಮಾಡಬೇಕು. ಅಷ್ಟೇ ಅಲ್ಲ ಸಲಿಕೆಗಳನ್ನ, ಬೋಗುಣಿಗಳನ್ನ, ಕವಲುಗೋಲುಗಳನ್ನ, ಕೆಂಡ ಹಾಕೋ ಪಾತ್ರೆಗಳನ್ನ ಮಾಡಬೇಕು. ಯಜ್ಞವೇದಿಯ ಈ ಎಲ್ಲ ಉಪಕರಣಗಳನ್ನ ತಾಮ್ರದಿಂದ ಮಾಡಬೇಕು.+ 4 ಜೊತೆಗೆ ಯಜ್ಞವೇದಿಗಾಗಿ ತಾಮ್ರದ ಜಾಲರಿ ಮಾಡಬೇಕು. ಜಾಲರಿಯ ನಾಲ್ಕು ಮೂಲೆಗಳಲ್ಲಿ ತಾಮ್ರದ ನಾಲ್ಕು ಬಳೆಗಳನ್ನ ಮಾಡಬೇಕು. 5 ಆ ಜಾಲರಿನ ಯಜ್ಞವೇದಿ ಒಳಗೆ ಅಂದ್ರೆ ಪಟ್ಟಿಯ ಕೆಳಗೆ ಯಜ್ಞವೇದಿಯ ಮಧ್ಯದಲ್ಲಿ ಇಡಬೇಕು. 6 ಯಜ್ಞವೇದಿಗಾಗಿ ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿ ಅವುಗಳಿಗೆ ತಾಮ್ರದ ತಗಡನ್ನ ಹೊದಿಸಬೇಕು. 7 ಆ ಕೋಲುಗಳನ್ನ ಯಜ್ಞವೇದಿಯ ಬಳೆಗಳಲ್ಲಿ ಹಾಕಬೇಕು. ಆಗ ಯಜ್ಞವೇದಿಯ ಎರಡೂ ಕಡೆಗಳಲ್ಲಿ ಕೋಲುಗಳು ಇರೋದ್ರಿಂದ ಹೊತ್ಕೊಂಡು ಹೋಗಕ್ಕಾಗುತ್ತೆ.+ 8 ಯಜ್ಞವೇದಿನ ಮರದ ಹಲಗೆಗಳಿಂದ ಪೆಟ್ಟಿಗೆ ಆಕಾರದಲ್ಲಿ ಮಾಡಬೇಕು. ಅದು ಮೇಲೆ ಕೆಳಗೆ ತೆರೆದಿರಬೇಕು. ನಾನು ನಿನಗೆ ಬೆಟ್ಟದಲ್ಲಿ ತೋರಿಸಿದ ಹಾಗೇ ಅದನ್ನ ಮಾಡಬೇಕು.+

9 ಪವಿತ್ರ ಡೇರೆಗೆ ಅಂಗಳವನ್ನ+ ಮಾಡಬೇಕು. ಹೊಸೆದ ಒಳ್ಳೇ ಗುಣಮಟ್ಟದ ನಾರಿಂದ ತಯಾರಿಸಿದ ಪರದೆಗಳನ್ನ ನಾಲ್ಕೂ ಕಡೆಗಳಲ್ಲಿ ಹಾಕಿ ಆ ಅಂಗಳವನ್ನ ಮಾಡಬೇಕು. ಅಂಗಳದ ದಕ್ಷಿಣಕ್ಕೆ 100 ಮೊಳ ಉದ್ದದ ಪರದೆ ತೂಗಿಬಿಡಬೇಕು.+ 10 ಅದಕ್ಕೆ 20 ಕಂಬ, ಆ ಕಂಬಗಳಿಗೆ 20 ತಾಮ್ರದ ಅಡಿಗಲ್ಲು ಇರಬೇಕು. ಕಂಬಗಳ ಕೊಕ್ಕೆಗಳನ್ನ, ಅವುಗಳ ಕಟ್ಟುಗಳನ್ನ* ಬೆಳ್ಳಿಯಿಂದ ಮಾಡಬೇಕು. 11 ಅಂಗಳದ ಉತ್ತರಕ್ಕೂ 100 ಮೊಳ ಉದ್ದದ ಪರದೆಯನ್ನ ತೂಗಿಬಿಡಬೇಕು. ಅದಕ್ಕೆ 20 ಕಂಬಗಳು ಆ ಕಂಬಗಳಿಗೆ 20 ತಾಮ್ರದ ಅಡಿಗಲ್ಲು ಇರಬೇಕು. ಕಂಬಗಳಿಗೆ ಬೆಳ್ಳಿಯ ಕೊಕ್ಕೆಗಳು, ಕಟ್ಟುಗಳು* ಇರಬೇಕು. 12 ಪಶ್ಚಿಮ ಭಾಗದಲ್ಲಿ 50 ಮೊಳ ಉದ್ದದ ಪರದೆಯನ್ನ ತೂಗಿಬಿಡಬೇಕು. ಅದಕ್ಕಾಗಿ ಹತ್ತು ಕಂಬಗಳನ್ನ, ಹತ್ತು ಅಡಿಗಲ್ಲುಗಳನ್ನ ಮಾಡಬೇಕು. 13 ಪೂರ್ವದ ಅಂಗಳ 50 ಮೊಳ ಅಗಲ ಇರಬೇಕು. 14 ಮುಖ್ಯ ಬಾಗಿಲಿನ ಬಲಕ್ಕೆ 15 ಮೊಳ ಉದ್ದದ ಪರದೆ ತೂಗಿಬಿಡಬೇಕು. ಅದಕ್ಕಾಗಿ ಮೂರು ಕಂಬಗಳನ್ನ, ಮೂರು ಅಡಿಗಲ್ಲುಗಳನ್ನ ಮಾಡಬೇಕು.+ 15 ಬಾಗಿಲಿನ ಎಡಕ್ಕೆ 15 ಮೊಳ ಉದ್ದದ ಪರದೆ ತೂಗಿಬಿಡಬೇಕು. ಅದಕ್ಕಾಗಿ ಮೂರು ಕಂಬಗಳನ್ನ, ಮೂರು ಅಡಿಗಲ್ಲುಗಳನ್ನ ಮಾಡಬೇಕು.

16 ಅಂಗಳದ ಬಾಗಿಲಿಗೆ 20 ಮೊಳ ಉದ್ದದ ಒಂದು ಪರದೆ ಹಾಕಬೇಕು. ಆ ಪರದೆಯನ್ನ ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರು ಇವುಗಳನ್ನೆಲ್ಲ ಒಟ್ಟಿಗೆ ನೇಯ್ದು ಮಾಡಬೇಕು.+ ನಾಲ್ಕು ಕಂಬಗಳನ್ನ ಅವುಗಳಿಗೆ ನಾಲ್ಕು ಅಡಿಗಲ್ಲುಗಳನ್ನ ಸಹ ಮಾಡಬೇಕು.+ 17 ಅಂಗಳದ ಸುತ್ತ ಇರೋ ಎಲ್ಲ ಕಂಬಗಳಿಗೆ ಬೆಳ್ಳಿಯ ಕಟ್ಟುಗಳು, ಬೆಳ್ಳಿಯ ಕೊಕ್ಕೆಗಳು ಇರಬೇಕು. ಆದ್ರೆ ಕಂಬಗಳ ಅಡಿಗಲ್ಲುಗಳು ತಾಮ್ರದ್ದಾಗಿರಬೇಕು.+ 18 ಅಂಗಳ 100 ಮೊಳ ಉದ್ದ,+ 50 ಮೊಳ ಅಗಲ, ಅಂಗಳದ ಸುತ್ತ ಇರೋ ಪರದೆ 5 ಮೊಳ ಎತ್ತರ ಇರಬೇಕು. ಹೊಸೆದ ಒಳ್ಳೇ ಗುಣಮಟ್ಟದ ನಾರಿಂದ ಪರದೆ ಮಾಡಬೇಕು. ಅಂಗಳದಲ್ಲಿರೋ ಅಡಿಗಲ್ಲುಗಳು ತಾಮ್ರದ್ದಾಗಿರಬೇಕು. 19 ಪವಿತ್ರ ಡೇರೆಯಲ್ಲಿನ ಕೆಲಸಕ್ಕಾಗಿ ಬಳಸೋ ಎಲ್ಲ ಉಪಕರಣಗಳನ್ನ, ವಸ್ತುಗಳನ್ನ, ಡೇರೆಯ ಗೂಟಗಳನ್ನ, ಅಂಗಳದ ಎಲ್ಲ ಗೂಟಗಳನ್ನ ತಾಮ್ರದಿಂದ ಮಾಡಬೇಕು.+

20 ದೀಪಗಳು ಯಾವಾಗ್ಲೂ ಉರಿತಾ ಇರೋಕೆ ಅವುಗಳಿಗಾಗಿ ಶುದ್ಧ ಆಲಿವ್‌ ಎಣ್ಣೆನ ತಂದುಕೊಡಬೇಕು ಅಂತ ನೀನು ಇಸ್ರಾಯೇಲ್ಯರಿಗೆ ಆಜ್ಞಾಪಿಸಬೇಕು.+ 21 ದೇವದರ್ಶನ ಡೇರೆಯಲ್ಲಿ ಸಾಕ್ಷಿ ಮಂಜೂಷದ+ ಹತ್ರ ಇರೋ ಪರದೆಯ ಹೊರಗೆ ದೀಪಗಳು ಸಂಜೆಯಿಂದ ಬೆಳಿಗ್ಗೆ ತನಕ ಯೆಹೋವನ ಮುಂದೆ ಉರಿತಾ ಇರೋ ಹಾಗೆ ಆರೋನ, ಅವನ ಮಕ್ಕಳು ಏರ್ಪಾಡು ಮಾಡಬೇಕು.+ ಇದು ಇಸ್ರಾಯೇಲ್ಯರು ಯಾವಾಗ್ಲೂ ಪಾಲಿಸಬೇಕಾದ ಶಾಶ್ವತ ನಿಯಮ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ