ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 21
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅರಣ್ಯಕಾಂಡ ಮುಖ್ಯಾಂಶಗಳು

      • ಅರಾದಿನ ರಾಜನ ಸೋಲು (1-3)

      • ತಾಮ್ರದ ಹಾವು (4-9)

      • ಇಸ್ರಾಯೇಲ್ಯರು ಮೋವಾಬಿನ ಗಡಿಯಲ್ಲಿ ಪ್ರಯಾಣಿಸಿದ್ದು (10-20)

      • ಅಮೋರಿಯರ ರಾಜನಾದ ಸೀಹೋನನ ಸೋಲು (21-30)

      • ಅಮೋರಿಯರ ರಾಜನಾದ ಓಗನ ಸೋಲು (31-35)

ಅರಣ್ಯಕಾಂಡ 21:1

ಮಾರ್ಜಿನಲ್ ರೆಫರೆನ್ಸ್

  • +ಅರ 33:40; ಯೆಹೋ 12:7, 14

ಅರಣ್ಯಕಾಂಡ 21:3

ಪಾದಟಿಪ್ಪಣಿ

  • *

    ಅರ್ಥ “ಸಂಪೂರ್ಣ ನಾಶ.”

ಮಾರ್ಜಿನಲ್ ರೆಫರೆನ್ಸ್

  • +ಅರ 14:45

ಅರಣ್ಯಕಾಂಡ 21:4

ಮಾರ್ಜಿನಲ್ ರೆಫರೆನ್ಸ್

  • +ಅರ 33:41
  • +ಅರ 20:21; ಧರ್ಮೋ 2:8; ನ್ಯಾಯ 11:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1995, ಪು. 17

ಅರಣ್ಯಕಾಂಡ 21:5

ಪಾದಟಿಪ್ಪಣಿ

  • *

    ಅಥವಾ “ದ್ವೇಷ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:11; 15:24; ಅರ 16:13
  • +ಅರ 20:5
  • +ವಿಮೋ 16:15; ಅರ 11:6; ಕೀರ್ತ 78:24, 25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/1999, ಪು. 26-27

ಅರಣ್ಯಕಾಂಡ 21:6

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 10:6, 9

ಅರಣ್ಯಕಾಂಡ 21:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 78:34
  • +ವಿಮೋ 32:11

ಅರಣ್ಯಕಾಂಡ 21:9

ಮಾರ್ಜಿನಲ್ ರೆಫರೆನ್ಸ್

  • +2ಅರ 18:1, 4
  • +ಯೋಹಾ 3:14, 15
  • +ಯೋಹಾ 6:40

ಅರಣ್ಯಕಾಂಡ 21:10

ಮಾರ್ಜಿನಲ್ ರೆಫರೆನ್ಸ್

  • +ಅರ 33:43

ಅರಣ್ಯಕಾಂಡ 21:11

ಮಾರ್ಜಿನಲ್ ರೆಫರೆನ್ಸ್

  • +ಅರ 33:44

ಅರಣ್ಯಕಾಂಡ 21:12

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 2:13

ಅರಣ್ಯಕಾಂಡ 21:13

ಮಾರ್ಜಿನಲ್ ರೆಫರೆನ್ಸ್

  • +ಅರ 22:36; ನ್ಯಾಯ 11:18

ಅರಣ್ಯಕಾಂಡ 21:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 64

    ಕಾವಲಿನಬುರುಜು,

    3/15/2009, ಪು. 32

    8/1/2004, ಪು. 26

ಅರಣ್ಯಕಾಂಡ 21:19

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 13:15, 17

ಅರಣ್ಯಕಾಂಡ 21:20

ಪಾದಟಿಪ್ಪಣಿ

  • *

    ಬಹುಶಃ, “ಮರುಭೂಮಿ; ಕಾಡು.”

ಮಾರ್ಜಿನಲ್ ರೆಫರೆನ್ಸ್

  • +ಅರ 33:49
  • +ಧರ್ಮೋ 3:27; 34:1
  • +ಅರ 23:28

ಅರಣ್ಯಕಾಂಡ 21:21

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 2:26-28

ಅರಣ್ಯಕಾಂಡ 21:22

ಮಾರ್ಜಿನಲ್ ರೆಫರೆನ್ಸ್

  • +ಅರ 20:14, 17

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ಒಳ್ಳೆಯ ದೇಶ”, ಪು. 8-9

ಅರಣ್ಯಕಾಂಡ 21:23

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 2:30-35; 29:7; ನ್ಯಾಯ 11:19, 20

ಅರಣ್ಯಕಾಂಡ 21:24

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 135:10, 11
  • +ಅರ 32:33; ನೆಹೆ 9:22
  • +ಅರ 21:13; ಧರ್ಮೋ 3:16
  • +ನ್ಯಾಯ 11:21, 22
  • +ಅರ 32:1; 1ಪೂರ್ವ 6:77, 81
  • +ಯೆಹೋ 12:1, 2

ಅರಣ್ಯಕಾಂಡ 21:25

ಪಾದಟಿಪ್ಪಣಿ

  • *

    ಅಥವಾ “ಸುತ್ತಮುತ್ತಲಿನ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 10:15, 16; 15:16; ವಿಮೋ 3:8; ಧರ್ಮೋ 7:1

ಅರಣ್ಯಕಾಂಡ 21:29

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 11:23, 24; 1ಅರ 11:7; 2ಅರ 23:13

ಅರಣ್ಯಕಾಂಡ 21:30

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 13:15, 17
  • +ಯೆಹೋ 13:8, 9

ಅರಣ್ಯಕಾಂಡ 21:32

ಪಾದಟಿಪ್ಪಣಿ

  • *

    ಅಥವಾ “ಸುತ್ತಮುತ್ತಲಿನ.”

ಮಾರ್ಜಿನಲ್ ರೆಫರೆನ್ಸ್

  • +ಅರ 32:1

ಅರಣ್ಯಕಾಂಡ 21:33

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 3:11; 4:47; ಯೆಹೋ 13:8, 12
  • +ಧರ್ಮೋ 3:1, 8, 10

ಅರಣ್ಯಕಾಂಡ 21:34

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 20:3
  • +ವಿಮೋ 23:27; ಧರ್ಮೋ 7:24
  • +ಧರ್ಮೋ 3:2; ಕೀರ್ತ 135:10, 11

ಅರಣ್ಯಕಾಂಡ 21:35

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 3:3
  • +ಯೆಹೋ 12:4-6

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅರ. 21:1ಅರ 33:40; ಯೆಹೋ 12:7, 14
ಅರ. 21:3ಅರ 14:45
ಅರ. 21:4ಅರ 33:41
ಅರ. 21:4ಅರ 20:21; ಧರ್ಮೋ 2:8; ನ್ಯಾಯ 11:18
ಅರ. 21:5ವಿಮೋ 14:11; 15:24; ಅರ 16:13
ಅರ. 21:5ಅರ 20:5
ಅರ. 21:5ವಿಮೋ 16:15; ಅರ 11:6; ಕೀರ್ತ 78:24, 25
ಅರ. 21:61ಕೊರಿಂ 10:6, 9
ಅರ. 21:7ಕೀರ್ತ 78:34
ಅರ. 21:7ವಿಮೋ 32:11
ಅರ. 21:92ಅರ 18:1, 4
ಅರ. 21:9ಯೋಹಾ 3:14, 15
ಅರ. 21:9ಯೋಹಾ 6:40
ಅರ. 21:10ಅರ 33:43
ಅರ. 21:11ಅರ 33:44
ಅರ. 21:12ಧರ್ಮೋ 2:13
ಅರ. 21:13ಅರ 22:36; ನ್ಯಾಯ 11:18
ಅರ. 21:19ಯೆಹೋ 13:15, 17
ಅರ. 21:20ಅರ 33:49
ಅರ. 21:20ಧರ್ಮೋ 3:27; 34:1
ಅರ. 21:20ಅರ 23:28
ಅರ. 21:21ಧರ್ಮೋ 2:26-28
ಅರ. 21:22ಅರ 20:14, 17
ಅರ. 21:23ಧರ್ಮೋ 2:30-35; 29:7; ನ್ಯಾಯ 11:19, 20
ಅರ. 21:24ಕೀರ್ತ 135:10, 11
ಅರ. 21:24ಅರ 32:33; ನೆಹೆ 9:22
ಅರ. 21:24ಅರ 21:13; ಧರ್ಮೋ 3:16
ಅರ. 21:24ನ್ಯಾಯ 11:21, 22
ಅರ. 21:24ಅರ 32:1; 1ಪೂರ್ವ 6:77, 81
ಅರ. 21:24ಯೆಹೋ 12:1, 2
ಅರ. 21:25ಆದಿ 10:15, 16; 15:16; ವಿಮೋ 3:8; ಧರ್ಮೋ 7:1
ಅರ. 21:29ನ್ಯಾಯ 11:23, 24; 1ಅರ 11:7; 2ಅರ 23:13
ಅರ. 21:30ಯೆಹೋ 13:15, 17
ಅರ. 21:30ಯೆಹೋ 13:8, 9
ಅರ. 21:32ಅರ 32:1
ಅರ. 21:33ಧರ್ಮೋ 3:11; 4:47; ಯೆಹೋ 13:8, 12
ಅರ. 21:33ಧರ್ಮೋ 3:1, 8, 10
ಅರ. 21:34ಧರ್ಮೋ 20:3
ಅರ. 21:34ವಿಮೋ 23:27; ಧರ್ಮೋ 7:24
ಅರ. 21:34ಧರ್ಮೋ 3:2; ಕೀರ್ತ 135:10, 11
ಅರ. 21:35ಧರ್ಮೋ 3:3
ಅರ. 21:35ಯೆಹೋ 12:4-6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅರಣ್ಯಕಾಂಡ 21:1-35

ಅರಣ್ಯಕಾಂಡ

21 ಕಾನಾನಿಗೆ ಸೇರಿದ ಅರಾದ್‌ ಪಟ್ಟಣದ ರಾಜ+ ನೆಗೆಬಿನಲ್ಲಿ ವಾಸಿಸ್ತಿದ್ದ. ಇಸ್ರಾಯೇಲ್ಯರು ಅತಾರೀಮಿನ ದಾರಿಲಿ ಬಂದಿದ್ದಾರೆ ಅನ್ನೋ ಸುದ್ದಿ ಅವನಿಗೆ ಸಿಕ್ತು. ಆಗ ಅವನು ಇಸ್ರಾಯೇಲ್ಯರ ಮೇಲೆ ದಾಳಿ ಮಾಡಿ ಸ್ವಲ್ಪ ಜನ್ರನ್ನ ಹಿಡ್ಕೊಂಡು ಹೋದ. 2 ಇಸ್ರಾಯೇಲ್ಯರು ಯೆಹೋವನಿಗೆ ಹರಕೆ ಮಾಡಿ “ಈ ಜನ್ರನ್ನ ಸೋಲಿಸೋಕೆ ನೀನು ನಮಗೆ ಸಹಾಯ ಮಾಡಿದ್ರೆ ನಾವು ಖಂಡಿತ ಅವ್ರ ಪಟ್ಟಣಗಳನ್ನೆಲ್ಲ ಸಂಪೂರ್ಣ ನಾಶ ಮಾಡ್ತೀವಿ” ಅಂದ್ರು. 3 ಯೆಹೋವ ಅವ್ರ ವಿನಂತಿ ಕೇಳಿ ಕಾನಾನ್ಯರ ವಿರುದ್ಧ ಜಯಿಸೋಕೆ ಸಹಾಯ ಮಾಡಿದನು. ಇಸ್ರಾಯೇಲ್ಯರು ಆ ಜನ್ರನ್ನೂ ಪಟ್ಟಣಗಳನ್ನೂ ಸಂಪೂರ್ಣ ನಾಶ ಮಾಡಿದ್ರು. ಹಾಗಾಗಿ ಇಸ್ರಾಯೇಲ್ಯರು ಆ ಜಾಗಕ್ಕೆ ಹೊರ್ಮಾ*+ ಅಂತ ಹೆಸರಿಟ್ರು.

4 ಇಸ್ರಾಯೇಲ್ಯರು ಹೋರ್‌ ಬೆಟ್ಟದಿಂದ ಹೊರಟ್ರು.+ ಅವರು ಎದೋಮ್ಯರ ದೇಶನ+ ಸುತ್ಕೊಂಡು ಹೋಗೋಕೆ ಕೆಂಪು ಸಮುದ್ರದ ಕಡೆಗೆ ಹೋಗೋ ದಾರಿಲಿ ಪ್ರಯಾಣಿಸಿದ್ರು. ಪ್ರಯಾಣ ಮಾಡಿಮಾಡಿ ಸುಸ್ತಾಗಿ ಹೋದ್ರು. 5 ಆಗ ಅವರು ದೇವರ ವಿರುದ್ಧ ಮೋಶೆ ವಿರುದ್ಧ ಮಾತಾಡ್ತಾ+ “ನೀವು ನಮ್ಮನ್ನ ಈಜಿಪ್ಟಿಂದ ಈ ಕಾಡಿಗೆ ಕರ್ಕೊಂಡು ಬಂದು ಯಾಕೆ ಸಾಯಿಸ್ತಿದ್ದೀರ? ಇಲ್ಲಿ ತಿನ್ನೋಕೆ ಊಟ ಇಲ್ಲ, ಕುಡಿಯೋಕೆ ನೀರಿಲ್ಲ.+ ರುಚಿಯಿಲ್ಲದ ಈ ಮನ್ನ ನೋಡಿದ್ರೇ ವಾಕರಿಕೆ* ಬರುತ್ತೆ”+ ಅನ್ನುತ್ತಾ ಇದ್ರು. 6 ಹಾಗಾಗಿ ಯೆಹೋವ ಇಸ್ರಾಯೇಲ್ಯರ ಮಧ್ಯ ವಿಷಹಾವುಗಳನ್ನ ಕಳಿಸಿದನು. ಅವು ಜನ್ರನ್ನ ಕಚ್ಚಿದ್ರಿಂದ ತುಂಬ ಜನ ಸತ್ತು ಹೋದ್ರು.+

7 ಆಗ ಜನ ಮೋಶೆ ಹತ್ರ ಬಂದು “ನಾವು ಯೆಹೋವನ ವಿರುದ್ಧ ನಿನ್ನ ವಿರುದ್ಧ ಮಾತಾಡಬಾರದಿತ್ತು. ನಾವು ಮಾಡಿದ್ದು ಪಾಪನೇ.+ ಆ ಪಾಪನ ಕ್ಷಮಿಸಿ ಈ ಹಾವುಗಳು ನಮ್ಮನ್ನ ಬಿಟ್ಟು ಹೋಗೋ ತರ ಮಾಡು ಅಂತ ಯೆಹೋವನ ಹತ್ರ ಬೇಡ್ಕೊ” ಅಂದ್ರು. ಆಗ ಮೋಶೆ ಜನ್ರಿಗಾಗಿ ದೇವರ ಹತ್ರ ಬೇಡ್ಕೊಂಡ.+ 8 ಯೆಹೋವ ಮೋಶೆಗೆ “ವಿಷಹಾವಿನ ಒಂದು ಆಕಾರ ಮಾಡಿ ಕಂಬದ ಮೇಲಿಡು. ಹಾವು ಕಚ್ಚಿದವರು ಅದನ್ನ ನೋಡಬೇಕು. ಆಗ ಅವ್ರ ಜೀವ ಉಳಿಯುತ್ತೆ” ಅಂದನು. 9 ತಕ್ಷಣ ಮೋಶೆ ತಾಮ್ರದಿಂದ ಒಂದು ಹಾವನ್ನ+ ಮಾಡಿ ಕಂಬದ ಮೇಲಿಟ್ಟ.+ ಹಾವು ಜನ್ರನ್ನ ಕಚ್ಚಿದಾಗ ಯಾರೆಲ್ಲ ಆ ತಾಮ್ರದ ಹಾವನ್ನ ನೋಡಿದ್ರೋ ಅವರೆಲ್ಲ ಬದುಕಿ ಉಳಿದ್ರು.+

10 ಆಮೇಲೆ ಇಸ್ರಾಯೇಲ್ಯರು ಅಲ್ಲಿಂದ ಓಬೋತಿಗೆ ಹೋಗಿ ಡೇರೆ ಹಾಕೊಂಡ್ರು.+ 11 ಆಮೇಲೆ ಓಬೋತಿನಿಂದ ಇಯ್ಯೇ-ಅಬಾರೀಮಿಗೆ ಹೋಗಿ ಅಲ್ಲಿ ಡೇರೆ ಹಾಕೊಂಡ್ರು.+ ಇದು ಮೋವಾಬಿನ ಮುಂದೆ, ಪೂರ್ವದಲ್ಲಿರೋ ಕಾಡಲ್ಲಿದೆ. 12 ಅವರು ಅಲ್ಲಿಂದ ಜೆರೆದ್‌ ಕಣಿವೆ+ ಹತ್ರ ಬಂದು ಡೇರೆ ಹಾಕೊಂಡ್ರು. 13 ಅಲ್ಲಿಂದ ಅರ್ನೋನ್‌ ಕಣಿವೆ ಪ್ರದೇಶಕ್ಕೆ+ ಬಂದು ಡೇರೆ ಹಾಕೊಂಡ್ರು. ಈ ಪ್ರದೇಶ ಅಮೋರಿಯರ ಗಡಿಯಿಂದ ಆಚೆ ಇರೋ ಕಾಡಲ್ಲಿ ಮೋವಾಬ್ಯರ, ಅಮೋರಿಯರ ಪ್ರದೇಶದ ಮಧ್ಯ ಇತ್ತು. 14 ಹಾಗಾಗಿ ಯೆಹೋವನ ಯುದ್ಧಗಳ ಪುಸ್ತಕದಲ್ಲಿ “ಸೂಫದಲ್ಲಿರೋ ವಾಹೇಬ, ಅರ್ನೋನಿನ ಕಣಿವೆಗಳು, 15 ಆರ್‌ ಪಟ್ಟಣದ ಕಡೆಗೆ ವಿಸ್ತರಿಸ್ತಾ ಮೋವಾಬಿನ ಗಡಿ ಸೇರೋ ಆ ಕಣಿವೆಗಳ ಇಳಿಜಾರು” ಈ ಜಾಗಗಳ ಬಗ್ಗೆ ಇದೆ.

16 ಅಲ್ಲಿಂದ ಅವರು ಬೇರ್‌ ಅನ್ನೋ ಜಾಗಕ್ಕೆ ಬಂದ್ರು. ಅಲ್ಲಿ ಒಂದು ಬಾವಿ ಇತ್ತು. ಈ ಮುಂಚೆ ಯೆಹೋವ ಮೋಶೆಗೆ “ಜನ್ರನ್ನ ಸೇರಿಸು. ನಾನು ಅವ್ರಿಗೆ ಕುಡಿಯೋಕೆ ನೀರು ಕೊಡ್ತೀನಿ” ಅಂತ ಹೇಳಿದ್ದು ಇಲ್ಲೇ.

17 ಆಗ ಇಸ್ರಾಯೇಲ್ಯರು ಈ ಹಾಡನ್ನ ಹಾಡಿದ್ರು:

“ಬಾವಿಯೇ, ನಿನ್ನಿಂದ ನೀರು ಉಕ್ಕಲಿ!

ಜನರೇ, ಹಾಡಿರಿ!

18 ಇದು ಪ್ರಧಾನರು ಅಗೆದ ಬಾವಿ, ಆದರ್ಶರು ತೋಡಿದ ಬಾವಿ,

ಅವರು ರಾಜನ ಕೋಲಿಂದ, ತಮ್ಮ ಕೋಲುಗಳಿಂದ ತೋಡಿದ ಬಾವಿ.”

ಆಮೇಲೆ ಅವರು ಆ ಕಾಡಿಂದ ಮತ್ತಾನಾಕ್ಕೆ ಬಂದ್ರು. 19 ಮತ್ತಾನಾದಿಂದ ನಹಲೀಯೇಲಿಗೆ, ನಹಲೀಯೇಲಿನಿಂದ ಬಾಮೋತಿಗೆ+ ಬಂದ್ರು. 20 ಬಾಮೋತಿನಿಂದ ಮೋವಾಬ್‌ ಪ್ರದೇಶದಲ್ಲಿರೋ+ ಕಣಿವೆಗೆ ಬಂದ್ರು. ಆ ಕಣಿವೆಯಿಂದ ಪಿಸ್ಗಾ ಬೆಟ್ಟದ ತುದಿಗೆ ಬಂದ್ರು.+ ಅಲ್ಲಿಂದ ಯೆಷೀಮೋನ್‌* ಕಾಣಿಸುತ್ತೆ.+

21 ಇಸ್ರಾಯೇಲ್ಯರು ಅಮೋರಿಯರ ರಾಜ ಸೀಹೋನನ ಹತ್ರ ಸಂದೇಶವಾಹಕರನ್ನ ಕಳಿಸಿ+ 22 “ನಾವು ನಿನ್ನ ದೇಶ ದಾಟಿ ಹೋಗೋಕೆ ಅನುಮತಿ ಕೊಡು. ನಾವು ಹೊಲಗದ್ದೆ, ದಾಕ್ಷಿತೋಟದ ಮಧ್ಯದಿಂದ ಹೋಗಲ್ಲ. ಬಾವಿ ನೀರು ಕುಡಿಯಲ್ಲ. ನಾವು ರಾಜಮಾರ್ಗದಲ್ಲಿ ನಡೆದು ನಿನ್ನ ಪ್ರದೇಶ ದಾಟಿ ಹೋಗ್ತೀವಿ” ಅಂದ್ರು.+ 23 ಆದ್ರೆ ಸೀಹೋನ ತನ್ನ ಪ್ರದೇಶ ದಾಟಿ ಹೋಗೋಕೆ ಇಸ್ರಾಯೇಲ್ಯರಿಗೆ ಅನುಮತಿ ಕೊಡಲಿಲ್ಲ. ಅಷ್ಟೇ ಅಲ್ಲ ತನ್ನ ಎಲ್ಲ ಜನ್ರನ್ನ ಕೂಡಿಸ್ಕೊಂಡು ಕಾಡಲ್ಲಿ ಇಸ್ರಾಯೇಲ್ಯರ ಮೇಲೆ ದಾಳಿ ಮಾಡೋಕೆ ಹೋದ. ಯಹಜ ಅನ್ನೋ ಪಟ್ಟಣಕ್ಕೆ ಬಂದು ಇಸ್ರಾಯೇಲ್ಯರ ಮೇಲೆ ಯುದ್ಧ ಮಾಡಿದ.+ 24 ಆದ್ರೆ ಇಸ್ರಾಯೇಲ್ಯರು ಅವನನ್ನ ಯುದ್ಧದಲ್ಲಿ ಸೋಲಿಸಿ+ ಅವನ ದೇಶವನ್ನ ವಶ ಮಾಡ್ಕೊಂಡ್ರು.+ ಅವನ ದೇಶ ಅರ್ನೋನ್‌ ಕಣಿವೆಯಿಂದ+ ಅಮ್ಮೋನಿಯರ ದೇಶದ ಹತ್ರ ಇದ್ದ ಯಬ್ಬೋಕ್‌ ಕಣಿವೆ ತನಕ+ ಇತ್ತು. ಇಸ್ರಾಯೇಲ್ಯರು ಯಜ್ಜೇರ್‌ ಪಟ್ಟಣಕ್ಕಿಂತ+ ಮುಂದೆ ಹೋಗಲಿಲ್ಲ. ಯಾಕಂದ್ರೆ ಯಜ್ಜೇರ್‌ ಪಟ್ಟಣ ಆದ್ಮೇಲೆ ಅಮ್ಮೋನಿಯರ ಪ್ರದೇಶ ಇತ್ತು.+

25 ಹೀಗೆ ಇಸ್ರಾಯೇಲ್ಯರು ಅಮೋರಿಯರ+ ಎಲ್ಲ ಪಟ್ಟಣಗಳನ್ನ ವಶ ಮಾಡ್ಕೊಂಡ್ರು. ಅವರು ಹೆಷ್ಬೋನಿನಲ್ಲಿ, ಅದಕ್ಕೆ ಸೇರಿದ* ಊರುಗಳಲ್ಲಿ ಅಮೋರಿಯರ ಬೇರೆ ಎಲ್ಲ ಪಟ್ಟಣಗಳಲ್ಲಿ ವಾಸಿಸೋಕೆ ಶುರು ಮಾಡಿದ್ರು. 26 ಅಮೋರಿಯರ ರಾಜನಾದ ಸೀಹೋನ ಮೋವಾಬ್ಯರ ರಾಜನ ವಿರುದ್ಧ ಯುದ್ಧ ಮಾಡಿ ಅರ್ನೋನ್‌ ಕಣಿವೆ ತನಕ ಇದ್ದ ಅವನ ಇಡೀ ದೇಶನ ವಶ ಮಾಡ್ಕೊಂಡಿದ್ದ. ಹಾಗಾಗಿ ಹೆಷ್ಬೋನ್‌ ಪಟ್ಟಣ ಸೀಹೋನನ ಪಟ್ಟಣ ಆಗಿತ್ತು. 27 ಹಾಗಾಗಿ ಹಂಗಿಸೋ ಈ ಗಾದೆ ಮಾತು ಬಂತು:

“ಹೆಷ್ಬೋನಿಗೆ ಬನ್ನಿ.

ಸೀಹೋನನ ಪಟ್ಟಣ ನಿರ್ಮಾಣ ಆಗಲಿ, ಅದು ಯಾವಾಗ್ಲೂ ಇರಲಿ.

28 ಹೆಷ್ಬೋನಿನಿಂದ ಬೆಂಕಿ ಬಂತು, ಹೌದು ಸೀಹೋನನ ಪಟ್ಟಣದಿಂದ ಜ್ವಾಲೆ ಬಂತು.

ಅದು ಮೋವಾಬಿನ ಆರ್‌ ಪಟ್ಟಣವನ್ನ ಅರ್ನೋನಿನ ಎತ್ತರದ ಸ್ಥಳಗಳ ಪ್ರಭುಗಳನ್ನ ಸುಟ್ಟುಬಿಡ್ತು.

29 ಅಯ್ಯೋ ಮೋವಾಬೇ, ನಿನಗೆಂಥ ಗತಿ ಬಂತು! ಅಯ್ಯೋ ಕೆಮೋಷನ+ ಜನ್ರೇ, ನೀವು ನಾಶ ಆಗ್ತಿರಲ್ಲಾ!

ಅವನು ತನ್ನ ಗಂಡು ಮಕ್ಕಳನ್ನ ಅಲೆಮಾರಿಗಳನ್ನಾಗಿ ತನ್ನ ಹೆಣ್ಣು ಮಕ್ಕಳನ್ನ ಅಮೋರಿಯರ ರಾಜನಾದ ಸೀಹೋನನ ಕೈದಿಗಳಾಗಿ ಮಾಡ್ತಾನೆ.

30 ಅವ್ರ ಮೇಲೆ ದಾಳಿ ಮಾಡೋಣ,

ದೀಬೋನಿನ+ ತನಕ ಹೆಷ್ಬೋನ್‌ ನಾಶವಾಗಿ ಹೋಗುತ್ತೆ,

ನೋಫಹದ ತನಕ ಅದನ್ನ ಹಾಳುಮಾಡಿ ಬಿಡೋಣ,

ಮೇದೆಬದ ತನಕ+ ಬೆಂಕಿ ಹೊತ್ತಿ ಉರಿಯುತ್ತೆ.”

31 ಇಸ್ರಾಯೇಲ್ಯರು ಅಮೋರಿಯರ ದೇಶದಲ್ಲಿ ವಾಸ ಮಾಡ್ತಾ ಇದ್ರು. 32 ಯಜ್ಜೇರ್‌+ ಪಟ್ಟಣ ಸಂಚರಿಸಿ ನೋಡೋಕೆ ಮೋಶೆ ಸ್ವಲ್ಪ ಗಂಡಸರನ್ನ ಕಳಿಸಿದ. ಅವರು ಯಜ್ಜೇರಿಗೆ ಸೇರಿದ* ಊರುಗಳನ್ನ ವಶ ಮಾಡ್ಕೊಂಡು ಅಲ್ಲಿದ್ದ ಅಮೋರಿಯರನ್ನ ಓಡಿಸಿಬಿಟ್ರು. 33 ಆಮೇಲೆ ಅವರು ಅಲ್ಲಿಂದ ತಿರುಗಿ ಬಾಷಾನಿಗೆ ಹೋಗೋ ದಾರಿಲಿ ಪ್ರಯಾಣಿಸಿದ್ರು. ಬಾಷಾನಿನ ರಾಜ ಓಗ+ ತನ್ನೆಲ್ಲ ಜನ್ರನ್ನ ಕರ್ಕೊಂಡು ಇಸ್ರಾಯೇಲ್ಯರ ಮೇಲೆ ಯುದ್ಧ ಮಾಡೋಕೆ ಎದ್ರೈಗೆ+ ಬಂದ. 34 ಆಗ ಯೆಹೋವ ಮೋಶೆಗೆ “ನೀನು ಅವನಿಗೆ ಹೆದರಬೇಡ.+ ಅವನನ್ನ ಅವನ ಎಲ್ಲ ಜನ್ರನ್ನ ಅವನ ದೇಶವನ್ನ ನಿನ್ನ ಕೈಗೆ ಕೊಡ್ತೀನಿ.+ ಹೆಷ್ಬೋನಿನಲ್ಲಿ+ ಇರೋ ಅಮೋರಿಯರ ರಾಜ ಸೀಹೋನನಿಗೆ ಮಾಡಿದ ತರಾನೇ ನೀನು ಇವನಿಗೂ ಮಾಡ್ತೀಯ” ಅಂದನು. 35 ಇಸ್ರಾಯೇಲ್ಯರು ಅವನನ್ನ, ಅವನ ಗಂಡು ಮಕ್ಕಳನ್ನ ಅವನ ಎಲ್ಲ ಜನ್ರನ್ನ ಕೊಲ್ತಾ ಹೋದ್ರು, ಒಬ್ರನ್ನೂ ಉಳಿಸಲಿಲ್ಲ.+ ಆಮೇಲೆ ಅವರು ಆ ದೇಶನ ವಶ ಮಾಡ್ಕೊಂಡ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ