ಹೋಶೇಯ
2 ನಾನು ಅವ್ರ ಕೆಟ್ಟತನವನ್ನ ಗಮನಿಸ್ತೀನಿ ಅನ್ನೋ ಯೋಚ್ನೆನೂ ಅವ್ರಿಗಿಲ್ಲ.+
ಅವ್ರ ಕೆಟ್ಟ ಕೆಲಸಗಳೇ ಅವ್ರನ್ನ ಸುತ್ಕೊಂಡಿವೆ,
ಅವುಗಳಲ್ಲಿ ಯಾವುದೂ ನನ್ನ ಕಣ್ಣಿಗೆ ಮರೆಯಾಗಿಲ್ಲ.
3 ಅವರು ತಮ್ಮ ಕೆಟ್ಟತನದಿಂದ ರಾಜನನ್ನ ಸಂತೋಷಪಡಿಸ್ತಾರೆ,
ಮೋಸವಂಚನೆಗಳಿಂದ ಅಧಿಕಾರಿಗಳನ್ನ ಖುಷಿಪಡಿಸ್ತಾರೆ.
4 ಅವ್ರೆಲ್ಲ ವ್ಯಭಿಚಾರಿಗಳೇ,
ರೊಟ್ಟಿ ಮಾಡುವವನು ಬೆಂಕಿ ಉರಿಸಿ ಕಾಯಿಸಿರೋ ಒಲೆ ತರ ಅವರಿದ್ದಾರೆ,
ಒಲೆ ಎಷ್ಟು ಬಿಸಿಯಾಗಿರುತ್ತೆ ಅಂದ್ರೆ ನಾದಿದ ಹಿಟ್ಟು ಹುಳಿಹಿಡಿಯೋ ತನಕ ಅವನು ಬೆಂಕಿಯನ್ನ ಕೆದಕೋ ಅಗತ್ಯ ಇರಲ್ಲ.
5 ರಾಜನ ಹಬ್ಬದ ದಿನ ಅಧಿಕಾರಿಗಳು ಕಾಯಿಲೆ ಬಿದ್ದಿದ್ದಾರೆ,
ದ್ರಾಕ್ಷಾಮದ್ಯ ಕುಡಿದುಕುಡಿದು ರೊಚ್ಚಿಗೆದ್ದಿದ್ದಾರೆ.+
ರಾಜ ಅವಮಾನ ಮಾಡುವವ್ರ ಜೊತೆ ಕೈಜೋಡಿಸಿದ್ದಾನೆ.
6 ಅವ್ರ ಹೃದಯದ ಆಸೆಗಳು ಒಲೆ ತರ ಉರಿತಿವೆ.*
ರೊಟ್ಟಿ ಮಾಡುವವನು ರಾತ್ರಿಯೆಲ್ಲಾ ಮಲಗಿರ್ತಾನೆ,
ಬೆಳಿಗ್ಗೆ ಆ ಒಲೆಯಲ್ಲಿ ಬೆಂಕಿ ಹೊತ್ತಿ ಉರಿಯುತ್ತೆ.
7 ಅವ್ರೆಲ್ಲ ಒಲೆ ತರ ಸುಡ್ತಿದ್ದಾರೆ,
ಅವರು ತಮ್ಮ ಪ್ರಭುಗಳನ್ನ* ತಿಂದುಹಾಕ್ತಾರೆ.
8 ಎಫ್ರಾಯೀಮ್ ಬೇರೆ ಜನಾಂಗಗಳ ಜೊತೆ ಬೆರೆತ್ಕೊಳ್ತಾನೆ.+
ಎಫ್ರಾಯೀಮ್ ತಿರುವಿಹಾಕದ ದುಂಡಗಿನ ರೊಟ್ಟಿ ತರ ಇದ್ದಾನೆ.
9 ಅಪರಿಚಿತರು ಅವನ ಶಕ್ತಿಯನ್ನೆಲ್ಲ ಹೀರಿಕೊಂಡಿದ್ದಾರೆ.+ ಅದು ಅವನಿಗೆ ಗೊತ್ತೇ ಇಲ್ಲ.
ಅವನ ತಲೆಯಲ್ಲಿ ನರೆಗೂದಲು ತುಂಬಿರೋದ್ರಿಂದ ತಲೆ ಬೆಳ್ಳಗಾಗಿದೆ. ಅದನ್ನ ಅವನು ಗಮನಿಸ್ಲೇ ಇಲ್ಲ.
10 ಇಸ್ರಾಯೇಲನ ಹೆಮ್ಮೆಯೇ ಅವನ ವಿರುದ್ಧ ಸಾಕ್ಷಿ ಹೇಳಿದೆ,+
ಆದ್ರೆ ಅವರು ತಮ್ಮ ದೇವರಾದ ಯೆಹೋವನ ಹತ್ರ ವಾಪಸ್ ಬರಲಿಲ್ಲ,+
ಇಷ್ಟೆಲ್ಲ ಆದ್ರೂ ಅವರು ಆತನಿಗಾಗಿ ಹುಡುಕಲಿಲ್ಲ.
11 ಎಫ್ರಾಯೀಮ್ ವಿವೇಚನೆಯಿಲ್ಲದ ಮಂದ ಬುದ್ಧಿಯ ಪಾರಿವಾಳದ ತರ ಇದ್ದಾನೆ.+
ಅವರು ಈಜಿಪ್ಟಿನ ಹತ್ರ ನೆರವು ಕೇಳಿದ್ದಾರೆ,+ ಅಶ್ಶೂರದ ಹತ್ರ ಸಹಾಯ ಬೇಡಿದ್ದಾರೆ.+
12 ಅವರು ಎಲ್ಲೇ ಹೋಗ್ಲಿ ಅವ್ರ ಮೇಲೆ ನನ್ನ ಬಲೆ ಬೀಸ್ತೀನಿ.
ಪಕ್ಷಿಗಳ ತರ ಅವ್ರನ್ನ ಕೆಳಕ್ಕೆ ಬೀಳಿಸ್ತೀನಿ.
ನಾನು ಅವ್ರ ಸಮೂಹಕ್ಕೆ ಎಚ್ಚರಿಕೆ ಕೊಟ್ಟ ಪ್ರಕಾರನೇ ಅವ್ರಿಗೆ ಶಿಸ್ತು ಕೊಡ್ತೀನಿ.+
13 ಅವರು ನನ್ನನ್ನ ಬಿಟ್ಟು ಹೋಗಿದ್ದಾರೆ. ಹಾಗಾಗಿ ಅವ್ರಿಗೆ ಕೇಡಾಗ್ಲಿ!
ಅವರು ನನ್ನ ನಿಯಮ ಮೀರಿದ್ದಾರೆ. ಹಾಗಾಗಿ ಅವರು ನಾಶವಾಗ್ಲಿ!
ನಾನು ಅವ್ರನ್ನ ರಕ್ಷಿಸಬೇಕಂತಿದ್ದೆ, ಆದ್ರೆ ಅವರು ನನ್ನ ಬಗ್ಗೆ ಸುಳ್ಳು ಹೇಳಿದ್ದಾರೆ.+
14 ಅವರು ತಮ್ಮ ಹಾಸಿಗೆಗಳ ಮೇಲೆ ಬಿದ್ಕೊಂಡು ಗೋಳಾಡ್ತಿದ್ರೂ
ಸಹಾಯಕ್ಕಾಗಿ ಮನಸಾರೆ ನನಗೆ ಮೊರೆ ಇಡಲಿಲ್ಲ.+
ಧಾನ್ಯ, ಹೊಸ ದ್ರಾಕ್ಷಾಮದ್ಯಕ್ಕಾಗಿ ಅವರು ತಮ್ಮ ದೇಹವನ್ನ ಕೊಯ್ದುಕೊಳ್ತಾರೆ,
ಅವರು ನನ್ನ ವಿರುದ್ಧನೇ ತಿರುಗಿಬೀಳ್ತಾರೆ.
15 ನಾನು ಅವ್ರಿಗೆ ಶಿಸ್ತು ಕೊಟ್ರೂ ಅವ್ರ ತೋಳುಗಳನ್ನ ಬಲಪಡಿಸಿದ್ರೂ
ನನ್ನ ವಿರುದ್ಧನೇ ತಿರುಗಿಬಿದ್ದಿದ್ದಾರೆ, ಕೆಟ್ಟದು ಮಾಡೋಕೆ ಸಂಚು ಮಾಡ್ತಿದ್ದಾರೆ.
16 ಅವರು ದಾರಿಯನ್ನ ಬದಲಾಯಿಸ್ಕೊಂಡ್ರು. ಆದ್ರೆ ಉನ್ನತ ರೀತಿಯ ಆರಾಧನೆ ಕಡೆಗಲ್ಲ,
ಅವರು ಸಡಿಲವಾದ ಬಿಲ್ಲಿನ ತರ ಇದ್ರು, ಅವರು ಭರವಸೆಗೆ ಯೋಗ್ಯರಲ್ಲ.+
ಅವ್ರ ಅಧಿಕಾರಿಗಳು ಪ್ರತಿಭಟಿಸೋ ಮಾತುಗಳನ್ನಾಡೋ ಕಾರಣ ಕತ್ತಿಯಿಂದ ಸಾಯ್ತಾರೆ.
ಹಾಗಾಗಿ ಈಜಿಪ್ಟ್ ದೇಶದಲ್ಲಿ ಅವಮಾನಕ್ಕೆ ಗುರಿಯಾಗ್ತಾರೆ.”+