ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೆಜ್ಕೇಲ 28
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೆಜ್ಕೇಲ ಮುಖ್ಯಾಂಶಗಳು

      • ತೂರಿನ ರಾಜನ ವಿರುದ್ಧ ಭವಿಷ್ಯವಾಣಿ (1-10)

        • “ನಾನೇ ದೇವರು” (2, 9)

      • ತೂರಿನ ರಾಜನ ಬಗ್ಗೆ ಶೋಕಗೀತೆ (11-19)

        • ‘ನೀನು ಏದೆನಲ್ಲಿ ಇದ್ದೆ’ (13)

        • “ಅಭಿಷೇಕಿಸಿ ಸಂರಕ್ಷಣೆ ಕೊಡೋ ಕೆರೂಬಿಯ ಸ್ಥಾನದಲ್ಲಿಟ್ಟೆ”(14)

        • ನಿನ್ನಲ್ಲಿ ಅನೀತಿ ಇದೆ ಅಂತ ಗೊತ್ತಾಯ್ತು (15)

      • ಸೀದೋನಿನ ವಿರುದ್ಧ ಭವಿಷ್ಯವಾಣಿ (20-24)

      • ಇಸ್ರಾಯೇಲ್ಯರು ಸ್ವದೇಶಕ್ಕೆ ಮತ್ತೆ ಬರ್ತಾರೆ (25, 26)

ಯೆಹೆಜ್ಕೇಲ 28:2

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 28:5
  • +ಯೆಹೆ 27:4

ಯೆಹೆಜ್ಕೇಲ 28:3

ಮಾರ್ಜಿನಲ್ ರೆಫರೆನ್ಸ್

  • +ದಾನಿ 2:48

ಯೆಹೆಜ್ಕೇಲ 28:4

ಮಾರ್ಜಿನಲ್ ರೆಫರೆನ್ಸ್

  • +ಜೆಕ 9:3

ಯೆಹೆಜ್ಕೇಲ 28:5

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 23:1, 3; ಯೆಹೆ 27:12

ಯೆಹೆಜ್ಕೇಲ 28:7

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 30:10, 11
  • +ಯೆಶಾ 23:9

ಯೆಹೆಜ್ಕೇಲ 28:8

ಪಾದಟಿಪ್ಪಣಿ

  • *

    ಅಥವಾ “ಸಮಾಧಿಗೆ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 27:26

ಯೆಹೆಜ್ಕೇಲ 28:10

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಯೆಹೆಜ್ಕೇಲ 28:12

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 28:3
  • +ಯೆಹೆ 27:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2005, ಪು. 23-24

ಯೆಹೆಜ್ಕೇಲ 28:13

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 27:16

ಯೆಹೆಜ್ಕೇಲ 28:14

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 14:13

ಯೆಹೆಜ್ಕೇಲ 28:15

ಮಾರ್ಜಿನಲ್ ರೆಫರೆನ್ಸ್

  • +ಯೋವೇ 3:4; ಆಮೋ 1:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 8/2017, ಪು. 1-2

ಯೆಹೆಜ್ಕೇಲ 28:16

ಮಾರ್ಜಿನಲ್ ರೆಫರೆನ್ಸ್

  • +1ಅರ 10:11; 2ಪೂರ್ವ 9:21; ಯೆಹೆ 27:12
  • +ಯೋವೇ 3:6
  • +ಯೆಶಾ 23:9; ಯೆರೆ 25:17, 22; 47:4; ಯೋವೇ 3:8

ಯೆಹೆಜ್ಕೇಲ 28:17

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 27:3
  • +ಯೆಶಾ 14:14
  • +ಯೆಶಾ 14:15

ಯೆಹೆಜ್ಕೇಲ 28:18

ಮಾರ್ಜಿನಲ್ ರೆಫರೆನ್ಸ್

  • +ಆಮೋ 1:9, 10

ಯೆಹೆಜ್ಕೇಲ 28:19

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 27:35
  • +ಯೆಹೆ 27:36

ಯೆಹೆಜ್ಕೇಲ 28:21

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 23:4; ಯೆರೆ 25:17, 22; ಯೆಹೆ 32:30

ಯೆಹೆಜ್ಕೇಲ 28:23

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 26:6

ಯೆಹೆಜ್ಕೇಲ 28:24

ಮಾರ್ಜಿನಲ್ ರೆಫರೆನ್ಸ್

  • +ಅರ 33:55; ಯೆಹೋ 23:12, 13

ಯೆಹೆಜ್ಕೇಲ 28:25

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 30:3; ಯೆಶಾ 11:12; ಯೆರೆ 30:18; ಹೋಶೇ 1:11
  • +ಯೆಶಾ 5:16
  • +ಯೆರೆ 23:8
  • +ಆದಿ 28:13

ಯೆಹೆಜ್ಕೇಲ 28:26

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 32:18; ಯೆರೆ 23:6; ಹೋಶೇ 2:18
  • +ಯೆಶಾ 65:21, 22; ಯೆರೆ 31:5; ಆಮೋ 9:14
  • +ಯೆರೆ 30:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 110

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೆ. 28:2ಯೆಹೆ 28:5
ಯೆಹೆ. 28:2ಯೆಹೆ 27:4
ಯೆಹೆ. 28:3ದಾನಿ 2:48
ಯೆಹೆ. 28:4ಜೆಕ 9:3
ಯೆಹೆ. 28:5ಯೆಶಾ 23:1, 3; ಯೆಹೆ 27:12
ಯೆಹೆ. 28:7ಯೆಹೆ 30:10, 11
ಯೆಹೆ. 28:7ಯೆಶಾ 23:9
ಯೆಹೆ. 28:8ಯೆಹೆ 27:26
ಯೆಹೆ. 28:12ಯೆಹೆ 28:3
ಯೆಹೆ. 28:12ಯೆಹೆ 27:3
ಯೆಹೆ. 28:13ಯೆಹೆ 27:16
ಯೆಹೆ. 28:14ಯೆಶಾ 14:13
ಯೆಹೆ. 28:15ಯೋವೇ 3:4; ಆಮೋ 1:9
ಯೆಹೆ. 28:161ಅರ 10:11; 2ಪೂರ್ವ 9:21; ಯೆಹೆ 27:12
ಯೆಹೆ. 28:16ಯೋವೇ 3:6
ಯೆಹೆ. 28:16ಯೆಶಾ 23:9; ಯೆರೆ 25:17, 22; 47:4; ಯೋವೇ 3:8
ಯೆಹೆ. 28:17ಯೆಹೆ 27:3
ಯೆಹೆ. 28:17ಯೆಶಾ 14:14
ಯೆಹೆ. 28:17ಯೆಶಾ 14:15
ಯೆಹೆ. 28:18ಆಮೋ 1:9, 10
ಯೆಹೆ. 28:19ಯೆಹೆ 27:35
ಯೆಹೆ. 28:19ಯೆಹೆ 27:36
ಯೆಹೆ. 28:21ಯೆಶಾ 23:4; ಯೆರೆ 25:17, 22; ಯೆಹೆ 32:30
ಯೆಹೆ. 28:23ಯೆಹೆ 26:6
ಯೆಹೆ. 28:24ಅರ 33:55; ಯೆಹೋ 23:12, 13
ಯೆಹೆ. 28:25ಧರ್ಮೋ 30:3; ಯೆಶಾ 11:12; ಯೆರೆ 30:18; ಹೋಶೇ 1:11
ಯೆಹೆ. 28:25ಯೆಶಾ 5:16
ಯೆಹೆ. 28:25ಯೆರೆ 23:8
ಯೆಹೆ. 28:25ಆದಿ 28:13
ಯೆಹೆ. 28:26ಯೆಶಾ 32:18; ಯೆರೆ 23:6; ಹೋಶೇ 2:18
ಯೆಹೆ. 28:26ಯೆಶಾ 65:21, 22; ಯೆರೆ 31:5; ಆಮೋ 9:14
ಯೆಹೆ. 28:26ಯೆರೆ 30:16
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೆಜ್ಕೇಲ 28:1-26

ಯೆಹೆಜ್ಕೇಲ

28 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ನೀನು ತೂರಿನ ಮುಖಂಡನಿಗೆ ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ:

“ನೀನು ಜಂಬದಿಂದ ಉಬ್ಬಿಕೊಂಡಿರೋದ್ರಿಂದ,+ ‘ನಾನೇ ದೇವರು.

ನಾನು ಸಮುದ್ರದ ಮಧ್ಯ ದೇವರ ಸಿಂಹಾಸನದಲ್ಲಿ ಕೂತಿದ್ದೀನಿ’+ ಅಂತ ಹೇಳ್ತಿದ್ದೀಯ.

ನೀನೇ ದೇವರು ಅಂತ ಮನಸ್ಸಲ್ಲಿ ಅಂದ್ಕೊಳ್ತೀಯ,

ಆದ್ರೆ ನೀನು ದೇವರಲ್ಲ, ಒಬ್ಬ ಮನುಷ್ಯ ಅಷ್ಟೆ.

 3 ನೋಡು! ನೀನು ದಾನಿಯೇಲನಿಗಿಂತ ಬುದ್ಧಿವಂತ,+

ಎಲ್ಲ ರಹಸ್ಯಗಳು ನಿನಗೆ ಗೊತ್ತು.

 4 ನೀನು ನಿನ್ನ ವಿವೇಕ, ವಿವೇಚನೆಯಿಂದ ಶ್ರೀಮಂತನಾದೆ,

ನಿನ್ನ ಖಜಾನೆಗಳಿಗೆ ಚಿನ್ನ ಬೆಳ್ಳಿಯನ್ನ ತುಂಬಿಸ್ತಾ ಹೋಗ್ತಿದ್ದೀಯ.+

 5 ವ್ಯಾಪಾರದಲ್ಲಿ ನಿನಗಿರೋ ಬುದ್ಧಿವಂತಿಕೆಯಿಂದ ನೀನು ತುಂಬ ಆಸ್ತಿ ಮಾಡಿದ್ದೀಯ,+

ನಿನ್ನ ಐಶ್ವರ್ಯದಿಂದಾಗಿ ನಿನ್ನ ಹೃದಯದಲ್ಲಿ ಜಂಬ ಬೆಳೀತು.”’

6 ‘ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ

“ನೀನು ದೇವರು ಅಂತ ನಿನ್ನ ಮನಸ್ಸಲ್ಲಿ ಅಂದ್ಕೊಳ್ಳೋದ್ರಿಂದ

 7 ನಿನ್ನ ಮೇಲೆ ದಾಳಿ ಮಾಡೋಕೆ ವಿದೇಶಿಯರನ್ನ ನಾನು ಕರ್ಕೊಂಡು ಬರ್ತಿನಿ, ಜನಾಂಗಗಳಲ್ಲೇ ಅವ್ರಷ್ಟು ಕ್ರೂರಿಗಳು ಯಾರೂ ಇಲ್ಲ.+

ಅವರು ತಮ್ಮ ಕತ್ತಿ ಬೀಸಿ ನೀನು ವಿವೇಕದಿಂದ ಸಂಪಾದಿಸಿದ ಎಲ್ಲ ಸುಂದರ ವಸ್ತುಗಳನ್ನ ನಾಶ ಮಾಡ್ತಾರೆ,

ನಿನಗೆ ಗೌರವ ತಂದ ವೈಭವವನ್ನ ಹಾಳುಮಾಡ್ತಾರೆ.+

 8 ಅವರು ನಿನ್ನನ್ನ ಗುಂಡಿಗೆ* ತಳ್ಳಿಬಿಡ್ತಾರೆ,

ವಿಶಾಲ ಸಮುದ್ರದ ಮಧ್ಯ ನಿನಗೆ ಸಾವು ಬರುತ್ತೆ.+

 9 ಆಗಲೂ ನೀನು ನಿನ್ನನ್ನ ಸಾಯಿಸೋನಿಗೆ ‘ನಾನು ದೇವರು’ ಅಂತ ಹೇಳ್ತಿಯಾ?

ನಿನ್ನನ್ನ ಅಶುದ್ಧ ಮಾಡೋರ ಕೈಗೆ ಸಿಕ್ಕಿಬಿದ್ದಾಗ ನೀನೇನು ಒಬ್ಬ ದೇವರಾಗಿ ಇರ್ತಿಯಾ? ಬರೀ ಒಬ್ಬ ಮನುಷ್ಯನಾಗಿ ಇರ್ತಿಯ ಅಷ್ಟೇ.”’

10 ‘ಸುನ್ನತಿಯಾಗಿರದ* ಜನ್ರ ತರ ನೀನು ವಿದೇಶಿಯರ ಕೈಯಿಂದ ಸಾಯ್ತೀಯ,

ಯಾಕಂದ್ರೆ ನಾನೇ ಇದನ್ನ ಹೇಳಿದ್ದೀನಿ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”

11 ಯೆಹೋವ ನನಗೆ ಮತ್ತೆ ಹೀಗಂದನು: 12 “ಮನುಷ್ಯಕುಮಾರನೇ, ತೂರಿನ ರಾಜನ ಬಗ್ಗೆ ಒಂದು ಶೋಕಗೀತೆ ಹಾಡು. ಅವನಿಗೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ

“ನಿನ್ನಲ್ಲಿ ಒಂದೇ ಒಂದು ಅಪರಾಧನೂ ಇರಲಿಲ್ಲ,

ನೀನು ತುಂಬ ಜಾಣನಾಗಿದ್ದೆ,+ ಪರಿಪೂರ್ಣ ಸುಂದರನಾಗಿದ್ದೆ.+

13 ನೀನು ದೇವರ ತೋಟವಾದ ಏದೆನಲ್ಲಿ ಇದ್ದೆ.

ಮಾಣಿಕ್ಯ, ಪುಷ್ಯರಾಗ, ಸೂರ್ಯಕಾಂತ ಶಿಲೆ, ಕ್ರಿಸಲೈಟ್‌ ರತ್ನ, ಗೋಮೇದಕ ರತ್ನ, ಜೇಡ್‌ ರತ್ನ, ನೀಲಮಣಿ, ವೈಢೂರ್ಯ,+ ಪಚ್ಚೆ,

ಹೀಗೆ ಎಲ್ಲ ಅಮೂಲ್ಯ ರತ್ನಗಳಿಂದ ನಿನ್ನನ್ನ ಅಲಂಕರಿಸಿದ್ದೆ.

ಆ ಒಂದೊಂದು ರತ್ನವನ್ನೂ ಚಿನ್ನದ ಕುಂದಣಗಳಲ್ಲಿ ಕೂರಿಸಿದ್ದೆ.

ನಾನು ನಿನ್ನನ್ನ ಸೃಷ್ಟಿಸಿದ ದಿನಾನೇ ಅವನ್ನ ಮಾಡಿದೆ.

14 ನಾನು ನಿನ್ನನ್ನ ಅಭಿಷೇಕಿಸಿ ಸಂರಕ್ಷಣೆ ಕೊಡೋ ಕೆರೂಬಿಯ ಸ್ಥಾನದಲ್ಲಿಟ್ಟೆ.

ದೇವರ ಪವಿತ್ರ ಬೆಟ್ಟದ ಮೇಲೆ ನೀನಿದ್ದೆ,+ ಬೆಂಕಿಯ ಕಲ್ಲುಗಳ ಮಧ್ಯ ನೀನು ನಡೀತಿದ್ದೆ.

15 ನೀನು ಸೃಷ್ಟಿಯಾದ ದಿನದಿಂದ ಹಿಡಿದು ಕೆಟ್ಟವನಾಗೋ ತನಕ

ಯಾವ ತಪ್ಪೂ ಮಾಡಿರಲಿಲ್ಲ.+

16 ಭರ್ಜರಿ ವ್ಯಾಪಾರದಿಂದಾಗಿ ನೀನು+

ಹಿಂಸೆಯಲ್ಲಿ ಮುಳುಗಿ ಪಾಪ ಮಾಡೋಕೆ ಶುರುಮಾಡ್ದೆ.+

ಹಾಗಾಗಿ ಅಪವಿತ್ರನನ್ನ ತಳ್ಳೋ ಹಾಗೆ ನಾನು ನಿನ್ನನ್ನ ದೇವರ ಬೆಟ್ಟದಿಂದ ತಳ್ಳಿ ನಾಶಮಾಡ್ತೀನಿ,+

ಸಂರಕ್ಷಣೆ ಕೊಡೋ ಕೆರೂಬಿಯೇ, ಬೆಂಕಿಯ ಕಲ್ಲುಗಳ ಮಧ್ಯದಿಂದ ನಾನು ನಿನ್ನನ್ನ ಓಡಿಸಿಬಿಡ್ತೀನಿ.

17 ನಿನ್ನ ಸೌಂದರ್ಯದಿಂದ ನಿನಗೆ ಜಂಬ ಬಂತು.+

ನಿನಗೆ ಗೌರವ ತಂದ ವೈಭವದಿಂದ ನೀನು ನಿನ್ನ ವಿವೇಕವನ್ನ ಹಾಳುಮಾಡ್ಕೊಂಡೆ.+

ನಾನು ನಿನ್ನನ್ನ ಭೂಮಿಗೆ ಎಸೆದುಬಿಡ್ತೀನಿ.+

ರಾಜರು ನಿನ್ನನ್ನ ನೋಡೋ ಹಾಗೆ ಮಾಡ್ತೀನಿ.

18 ನಿನ್ನ ದೊಡ್ಡ ದೊಡ್ಡ ಅಪರಾಧಗಳಿಂದ ಮತ್ತು ಮೋಸದ ವ್ಯಾಪಾರದಿಂದ ನಿನ್ನ ಆರಾಧನಾ ಸ್ಥಳಗಳನ್ನ ಅಪವಿತ್ರ ಮಾಡಿದ್ದೀಯ.

ನಿನ್ನ ಮಧ್ಯ ಬೆಂಕಿ ಹೊತ್ಕೊಳ್ಳೋ ಹಾಗೆ ಮಾಡ್ತೀನಿ, ಅದು ನಿನ್ನನ್ನ ಸುಟ್ಟುಬಿಡುತ್ತೆ.+

ಭೂಮಿ ಮೇಲೆ ನಿನ್ನನ್ನ ನೋಡ್ತಾ ಇರೋರ ಕಣ್ಮುಂದೆನೇ ನಾನು ನಿನ್ನನ್ನ ಬೂದಿ ಮಾಡ್ತೀನಿ.

19 ನಿನ್ನ ಬಗ್ಗೆ ಗೊತ್ತಿದ್ದ ಎಲ್ಲ ಜನಾಂಗದವರು ನಿನಗೆ ಬಂದಿರೋ ಗತಿಯನ್ನ ನೋಡಿ ಬೆಚ್ಚಿ ಬೆರಗಾಗ್ತಾರೆ.+

ನೀನು ದಿಢೀರಂತ ಭಯಂಕರವಾಗಿ ನಾಶ ಆಗ್ತಿಯ,

ಅಸ್ತಿತ್ವದಲ್ಲೇ ಇಲ್ಲದ ಹಾಗೆ ಅಳಿದು ಹೋಗ್ತಿಯ.”’”+

20 ಯೆಹೋವ ಮತ್ತೆ ನನಗೆ ಹೀಗಂದನು: 21 “ಮನುಷ್ಯಕುಮಾರನೇ, ನೀನು ಸೀದೋನಿನ ಕಡೆ ಮುಖಮಾಡಿ+ ಅವಳ ವಿರುದ್ಧ ಭವಿಷ್ಯ ಹೇಳು. 22 ನೀನು ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ:

“ಸೀದೋನೇ, ನಾನು ನಿನಗೆ ವಿರುದ್ಧವಾಗಿದ್ದೀನಿ. ನಾನು ನಿನಗೆ ಒಂದು ಗತಿ ಕಾಣಿಸಿ ಗೌರವ ಪಡ್ಕೊತೀನಿ.

ನಿನ್ನನ್ನ ಶಿಕ್ಷಿಸಿ ನಾನು ಪವಿತ್ರ ದೇವರು ಅಂತ ತೋರಿಸಿದಾಗ ನಾನೇ ಯೆಹೋವ ಅಂತ ಜನ್ರಿಗೆ ಗೊತ್ತಾಗುತ್ತೆ.

23 ನಾನು ಸೀದೋನಿನಲ್ಲಿ ಅಂಟುರೋಗ ತರ್ತಿನಿ, ಅವಳ ಬೀದಿಯಲ್ಲಿ ರಕ್ತದ ಪ್ರವಾಹ ಹರಿಯುತ್ತೆ.

ಎಲ್ಲ ಕಡೆಗಳಿಂದ ಕತ್ತಿ ಅವಳ ಮೇಲೆ ದಾಳಿ ಮಾಡಿದಾಗ ಅವಳ ಎಷ್ಟೋ ಜನ ಸತ್ತು ಬೀಳ್ತಾರೆ,

ಆಗ, ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.+

24 ಅದಾದ್ಮೇಲೆ ಇಸ್ರಾಯೇಲ್ಯರನ್ನ ಕೀಳಾಗಿ ನೋಡೋ, ಹಾನಿ ಮಾಡೋ ಮುಳ್ಳುಪೊದೆಗಳಾಗಲಿ ಮುಳ್ಳುಗಳಾಗಲಿ ಅವ್ರ ಸುತ್ತಮುತ್ತ ಎಲ್ಲೂ ಇರಲ್ಲ.+ ಆಗ, ನಾನೇ ವಿಶ್ವದ ರಾಜ ಯೆಹೋವ ಅಂತ ಜನ್ರಿಗೆ ಗೊತ್ತಾಗುತ್ತೆ.”’

25 ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಾನು ಇಸ್ರಾಯೇಲ್‌ ಜನ್ರನ್ನ ಅವರು ಚೆಲ್ಲಾಪಿಲ್ಲಿ ಆಗಿರೋ ಜನಾಂಗಗಳಿಂದ ಮತ್ತೆ ಒಟ್ಟುಸೇರಿಸಿದಾಗ+ ನಾನೇ ಪವಿತ್ರ ದೇವರು ಅಂತ ಅವ್ರ ಮೂಲಕ ಜನಾಂಗಗಳಿಗೆ ಗೊತ್ತಾಗುತ್ತೆ.+ ಅಷ್ಟೇ ಅಲ್ಲ, ಇಸ್ರಾಯೇಲ್ಯರು ಅವ್ರ ದೇಶದಲ್ಲಿ+ ಅಂದ್ರೆ ನನ್ನ ಸೇವಕ ಯಾಕೋಬನಿಗೆ ನಾನು ಕೊಟ್ಟ ದೇಶದಲ್ಲಿ ವಾಸಿಸ್ತಾರೆ.+ 26 ಅಲ್ಲಿ ಅವರು ಸುರಕ್ಷಿತವಾಗಿ ವಾಸಿಸ್ತಾರೆ,+ ಮನೆಗಳನ್ನ ಕಟ್ಕೊಂಡು ದ್ರಾಕ್ಷಿ ತೋಟಗಳನ್ನ ಮಾಡ್ಕೊಳ್ತಾರೆ.+ ಅವ್ರನ್ನ ಕೀಳಾಗಿ ನೋಡಿದ ಎಲ್ಲ ಜನ್ರಿಗೆ ನಾನು ಶಿಕ್ಷೆ ಕೊಟ್ಟಾಗ ಅವರು ಸುರಕ್ಷಿತವಾಗಿ ವಾಸಿಸ್ತಾರೆ.+ ಆಗ, ನಾನೇ ಅವ್ರ ದೇವರಾದ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.”’”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ