ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆರೆಮೀಯ ಮುಖ್ಯಾಂಶಗಳು

      • ಯೆರೆಮೀಯನ ದೂರು (1-4)

      • ಯೆಹೋವನ ಉತ್ರ (5-17)

ಯೆರೆಮೀಯ 12:1

ಮಾರ್ಜಿನಲ್ ರೆಫರೆನ್ಸ್

  • +ಆದಿ 18:25
  • +ಯೋಬ 12:6; 21:7; ಕೀರ್ತ 73:3; ಯೆರೆ 5:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2017, ಪು. 1

ಯೆರೆಮೀಯ 12:2

ಪಾದಟಿಪ್ಪಣಿ

  • *

    ಅಥವಾ “ಮನದಾಳದ ಭಾವನೆಗಳಲ್ಲಿ.” ಅಕ್ಷ. “ಮೂತ್ರಪಿಂಡಗಳು.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 29:13

ಯೆರೆಮೀಯ 12:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 139:1, 2
  • +2ಅರ 20:3; ಕೀರ್ತ 17:3; ಯೆರೆ 11:20

ಯೆರೆಮೀಯ 12:4

ಮಾರ್ಜಿನಲ್ ರೆಫರೆನ್ಸ್

  • +ಯೆರೆ 14:6; 23:10

ಯೆರೆಮೀಯ 12:5

ಪಾದಟಿಪ್ಪಣಿ

  • *

    ಯೆರೆಮೀಯನನ್ನೇ ಸೂಚಿಸುತ್ತೆ.

ಮಾರ್ಜಿನಲ್ ರೆಫರೆನ್ಸ್

  • +ಯೆರೆ 4:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2011, ಪು. 32

ಯೆರೆಮೀಯ 12:6

ಮಾರ್ಜಿನಲ್ ರೆಫರೆನ್ಸ್

  • +ಯೆರೆ 9:4

ಯೆರೆಮೀಯ 12:7

ಮಾರ್ಜಿನಲ್ ರೆಫರೆನ್ಸ್

  • +ಲೂಕ 13:35
  • +ವಿಮೋ 19:5; ಯೆಶಾ 47:6
  • +ಪ್ರಲಾ 2:1

ಯೆರೆಮೀಯ 12:9

ಪಾದಟಿಪ್ಪಣಿ

  • *

    ಅಥವಾ “ಚುಕ್ಕೆ ಚುಕ್ಕೆಗಳಿರೋ.”

ಮಾರ್ಜಿನಲ್ ರೆಫರೆನ್ಸ್

  • +2ಅರ 24:2; ಯೆಹೆ 16:37
  • +ಯೆಶಾ 56:9; ಯೆರೆ 7:33

ಯೆರೆಮೀಯ 12:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 80:8; ಯೆಶಾ 5:1, 7; ಯೆರೆ 6:3
  • +ಯೆಶಾ 63:18; ಯೆರೆ 3:19

ಯೆರೆಮೀಯ 12:11

ಪಾದಟಿಪ್ಪಣಿ

  • *

    ಬಹುಶಃ, “ಎದೆ ಬಡ್ಕೊಳ್ತಿದೆ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 9:11; 10:22
  • +ಯೆಶಾ 42:24, 25

ಯೆರೆಮೀಯ 12:12

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:33; ಯೆರೆ 15:2

ಯೆರೆಮೀಯ 12:13

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:16; ಮೀಕ 6:15

ಯೆರೆಮೀಯ 12:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 79:4; ಯೆರೆ 48:26; ಯೆಹೆ 25:3; ಜೆಕ 1:15; 2:8
  • +ಯೆರೆ 48:2; 49:2

ಯೆರೆಮೀಯ 12:17

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 60:12

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆರೆ. 12:1ಆದಿ 18:25
ಯೆರೆ. 12:1ಯೋಬ 12:6; 21:7; ಕೀರ್ತ 73:3; ಯೆರೆ 5:28
ಯೆರೆ. 12:2ಯೆಶಾ 29:13
ಯೆರೆ. 12:3ಕೀರ್ತ 139:1, 2
ಯೆರೆ. 12:32ಅರ 20:3; ಕೀರ್ತ 17:3; ಯೆರೆ 11:20
ಯೆರೆ. 12:4ಯೆರೆ 14:6; 23:10
ಯೆರೆ. 12:5ಯೆರೆ 4:13
ಯೆರೆ. 12:6ಯೆರೆ 9:4
ಯೆರೆ. 12:7ಲೂಕ 13:35
ಯೆರೆ. 12:7ವಿಮೋ 19:5; ಯೆಶಾ 47:6
ಯೆರೆ. 12:7ಪ್ರಲಾ 2:1
ಯೆರೆ. 12:92ಅರ 24:2; ಯೆಹೆ 16:37
ಯೆರೆ. 12:9ಯೆಶಾ 56:9; ಯೆರೆ 7:33
ಯೆರೆ. 12:10ಕೀರ್ತ 80:8; ಯೆಶಾ 5:1, 7; ಯೆರೆ 6:3
ಯೆರೆ. 12:10ಯೆಶಾ 63:18; ಯೆರೆ 3:19
ಯೆರೆ. 12:11ಯೆರೆ 9:11; 10:22
ಯೆರೆ. 12:11ಯೆಶಾ 42:24, 25
ಯೆರೆ. 12:12ಯಾಜ 26:33; ಯೆರೆ 15:2
ಯೆರೆ. 12:13ಯಾಜ 26:16; ಮೀಕ 6:15
ಯೆರೆ. 12:14ಕೀರ್ತ 79:4; ಯೆರೆ 48:26; ಯೆಹೆ 25:3; ಜೆಕ 1:15; 2:8
ಯೆರೆ. 12:14ಯೆರೆ 48:2; 49:2
ಯೆರೆ. 12:17ಯೆಶಾ 60:12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆರೆಮೀಯ 12:1-17

ಯೆರೆಮೀಯ

12 ಯೆಹೋವನೇ, ನೀನು ನೀತಿವಂತ.+

ನಾನು ನಿನ್ನ ಹತ್ರ ದೂರು ಕೊಟ್ಟಾಗ್ಲೂ ನಿನ್ನ ತೀರ್ಪಿನ ಬಗ್ಗೆ ಮಾತಾಡಿದಾಗ್ಲೂ

ನೀನು ನೀತಿಯಿಂದಾನೇ ನಡ್ಕೊಳ್ತೀಯ.

ಆದ್ರೆ ಕೆಟ್ಟವರು ಏನೇ ಮಾಡಿದ್ರೂ ಗೆಲ್ತಾರಲ್ಲಾ, ಯಾಕೆ?+

ಮೋಸ ಮಾಡೋರು ಯಾಕೆ ಇನ್ನೂ ಆರಾಮವಾಗಿ ಬದುಕ್ತಿದ್ದಾರೆ?

 2 ನೀನು ಅವ್ರನ್ನ ನೆಟ್ಟೆ, ಅವರು ಬೇರು ಬಿಟ್ರು,

ಅವರು ಬೆಳೆದು ಹಣ್ಣು ಕೊಟ್ರು.

ಅವರು ನಿನ್ನ ಬಗ್ಗೆ ಬಾಯಿ ತುಂಬ ಮಾತಾಡ್ತಾರೆ, ಆದ್ರೆ ಅವ್ರ ಅಂತರಾಳದ ಯೋಚನೆಗಳಲ್ಲಿ* ನೀನಿಲ್ಲ.+

 3 ಆದ್ರೆ ಯೆಹೋವನೇ, ನೀನು ನನ್ನನ್ನ ಚೆನ್ನಾಗಿ ತಿಳ್ಕೊಂಡಿದ್ದೀಯ,+ ನೀನು ನನ್ನನ್ನ ನೋಡ್ತಿದ್ದೀಯ,

ನನ್ನ ಹೃದಯ ಪರೀಕ್ಷಿಸ್ತಾ ಇದ್ದೀಯ, ನಿನ್ನ ಮೇಲೆ ನನಗೆ ಎಷ್ಟು ಭಕ್ತಿ ಇದೆ ಅಂತ ತಿಳ್ಕೊಂಡಿದ್ದಿಯ.+

ಬಲಿಕೊಡೋಕೆ ತಗೊಂಡು ಹೋಗೋ ಕುರಿಗಳ ತರ ನೀನು ಅವ್ರನ್ನ ಬೇರೆ ಮಾಡು,

ಕೊಲ್ಲೋ ದಿನಕ್ಕಾಗಿ ಅವ್ರನ್ನ ಬೇರೆ ಇಡು.

 4 ಇನ್ನೆಷ್ಟು ಸಮಯದ ತನಕ ದೇಶ ಬರಡಾಗಿರಬೇಕು?

ಎಲ್ಲ ಹೊಲದ ಬೆಳೆಗಳು ಒಣಗಿರಬೇಕು?+

ಆ ದೇಶದ ಜನ್ರು ಕೆಟ್ಟ ಕೆಲಸಗಳನ್ನ ಮಾಡಿರೋದ್ರಿಂದ

ಪ್ರಾಣಿಪಕ್ಷಿಗಳು ಅಲ್ಲಿಂದ ಕಣ್ಮರೆ ಆಗಿವೆ.

“ನಮಗೆ ಏನಾಗುತ್ತೆ ಅಂತ ತಿಳ್ಕೊಳ್ಳೋಕೆ ಆತನಿಗೆ ಆಗಲ್ಲ” ಅಂತ ಅವರು ಹೇಳಿದ್ದಾರೆ.

 5 ನಡಿಯೋರ ಜೊತೆ ಓಡಿ ಓಡಿ ನಿನಗೆ* ಸುಸ್ತಾದ್ರೆ

ಕುದುರೆಗಳ ಜೊತೆ ಓಡೋಕೆ ನಿನ್ನಿಂದ ಆಗುತ್ತಾ?+

ಶಾಂತಿ ಸಮಾಧಾನ ಇರೋ ದೇಶದಲ್ಲಿ ಆರಾಮಾಗಿ ಜೀವಿಸೋದು ನಿನಗೆ ರೂಢಿಯಾಗಿ ಇರೋದಾದ್ರೆ

ಯೋರ್ದನಿನ ಉದ್ದಕ್ಕೂ ಇರೋ ದಟ್ಟ ಪೊದೆಗಳ ಮಧ್ಯ ಅಪಾಯ ಬಂದಾಗ ನೀನೇನು ಮಾಡ್ತೀಯ?

 6 ಯಾಕಂದ್ರೆ ನಿನ್ನ ಸ್ವಂತ ಅಣ್ಣತಮ್ಮಂದಿರು,

ನಿನ್ನನ್ನ ಹೆತ್ತ ತಂದೆಯ ಮನೆಯವರು ಸಹ ನಿನಗೆ ದ್ರೋಹ ಮಾಡಿದ್ದಾರೆ.+

ಅವರು ನಿನ್ನ ಮೇಲೆ ಅರಚಿದ್ದಾರೆ.

ಅವರು ನಿನ್ನ ಹತ್ರ ಒಳ್ಳೇ ವಿಷ್ಯಗಳ ಬಗ್ಗೆ ಮಾತಾಡಿದ್ರೂ

ಅವ್ರನ್ನ ನಂಬಬೇಡ.

 7 “ನಾನು ನನ್ನ ಮನೆ ಬಿಟ್ಟು ಬಂದಿದ್ದೀನಿ,+ ನನ್ನ ಆಸ್ತಿಯನ್ನ ಬಿಟ್ಟುಕೊಟ್ಟಿದ್ದೀನಿ.+

ನನ್ನ ಪ್ರಾಣಪ್ರಿಯಳನ್ನ ಅವಳ ಶತ್ರುಗಳ ಕೈಗೆ ಕೊಟ್ಟಿದ್ದೀನಿ.+

 8 ನನ್ನ ಆಸ್ತಿ ನನಗೀಗ ಕಾಡಲ್ಲಿರೋ ಸಿಂಹದ ತರ ಆಗಿದೆ.

ಅವಳು ನನ್ನನ್ನ ನೋಡಿ ಗರ್ಜಿಸಿದ್ದಾಳೆ.

ಹಾಗಾಗಿ ನನಗೆ ಅವಳ ಮೇಲೆ ದ್ವೇಷ ಹುಟ್ಟಿದೆ.

 9 ನನ್ನ ಆಸ್ತಿ ನನಗೆ ಬಣ್ಣಬಣ್ಣದ* ಬೇಟೆ ಹಕ್ಕಿ ತರ ಇದೆ,

ಅದನ್ನ ಬೇರೆ ಬೇಟೆ ಹಕ್ಕಿಗಳು ಸುತ್ತುವರಿದು ದಾಳಿ ಮಾಡ್ತಿವೆ.+

ಎಲ್ಲ ಕಾಡು ಪ್ರಾಣಿಗಳೇ ಬನ್ನಿ,

ಎಲ್ರೂ ಸೇರ್ಕೊಂಡು ತಿನ್ನಿ.+

10 ತುಂಬ ಕುರುಬರು ಬಂದು ನನ್ನ ದ್ರಾಕ್ಷಿತೋಟ ನಾಶ ಮಾಡಿದ್ದಾರೆ,+

ಅವರು ನನ್ನ ಪಾಲಿನ ಜಮೀನನ್ನ ತುಳಿದು ಹಾಳು ಮಾಡಿದ್ದಾರೆ.+

ನನ್ನ ಅಚ್ಚುಮೆಚ್ಚಿನ ಆ ಜಮೀನನ್ನ ಅವರು ನಿರ್ಜನ ಕಾಡಿನ ತರ ಮಾಡಿದ್ದಾರೆ.

11 ಅದೀಗ ಬಂಜರುಭೂಮಿ ಆಗಿಬಿಟ್ಟಿದೆ.

ಅದು ಬರಡಾಗಿದೆ,*

ಅದು ಹಾಳುಬಿದ್ದಿರೋದನ್ನ ಕಣ್ಣಾರೆ ನೋಡ್ತಾ ಇದ್ದೀನಿ.+

ಇಡೀ ದೇಶವನ್ನ ಹಾಳುಮಾಡಿದ್ದಾರೆ,

ಆದ್ರೆ ಯಾರೂ ಈ ವಿಷ್ಯವನ್ನ ಮನಸ್ಸಿಗೆ ತಗೊಳ್ತಿಲ್ಲ.+

12 ನಾಶ ಮಾಡೋರು ಕಾಡಿನ ಎಲ್ಲ ಕಾಲುದಾರಿಗಳಿಂದ ಬಂದಿದ್ದಾರೆ,

ಯೆಹೋವನ ಕತ್ತಿ ದೇಶದ ಒಂದು ಮೂಲೆಯಿಂದ ಇನ್ನೊಂದು ಮೂಲೆ ತನಕ ಜನ್ರನ್ನ ಕೊಂದು ಬಿಟ್ಟಿದೆ.+

ಯಾರಿಗೂ ನೆಮ್ಮದಿ ಇಲ್ಲ.

13 ಅವರು ಗೋದಿ ಬಿತ್ತಿದ್ರೂ ಮುಳ್ಳುಗಳನ್ನ ಕೊಯ್ದಿದ್ದಾರೆ.+

ಸುಸ್ತಾಗುವಷ್ಟು ದುಡಿದ್ರೂ ಅವ್ರಿಗೆ ಏನೂ ಸಿಗಲಿಲ್ಲ.

ಯೆಹೋವನಿಗೆ ಅವ್ರ ಮೇಲೆ ಕೋಪ ಬಂದಿದ್ರಿಂದ ಅವ್ರಿಗೆ ಸ್ವಲ್ಪನೂ ಬೆಳೆ ಸಿಗಲ್ಲ,

ಹಾಗಾಗಿ ಅವರು ಅವಮಾನ ಅನುಭವಿಸಬೇಕಾಗುತ್ತೆ.”

14 ಯೆಹೋವ ಹೇಳೋದು ಏನಂದ್ರೆ “ನನ್ನ ಜನ್ರಾದ ಇಸ್ರಾಯೇಲ್ಯರಿಗೆ ವಾಸ ಮಾಡೋಕಂತ ನಾನು ಕೊಟ್ಟ ದೇಶಕ್ಕೆ ನನ್ನ ಕೆಟ್ಟ ನೆರೆಯವರು ಕೈಹಾಕ್ತಾ ಇದ್ದಾರೆ.+ ನಾನು ಅವ್ರನ್ನೆಲ್ಲ ಅವ್ರ ದೇಶದಿಂದ ಕಿತ್ತು ಹಾಕ್ತೀನಿ.+ ಅವ್ರ ಮಧ್ಯ ಇರೋ ಯೆಹೂದದ ಜನ್ರನ್ನ ಸಹ ಕಿತ್ತು ಹಾಕ್ತೀನಿ. 15 ಆದ್ರೆ ಅವ್ರನ್ನೆಲ್ಲ ಕಿತ್ತು ಹಾಕಿದ ಮೇಲೆ ನಾನು ಮತ್ತೆ ಕರುಣೆ ತೋರಿಸಿ ಪ್ರತಿಯೊಬ್ಬರನ್ನ ಅವರವ್ರ ಆಸ್ತಿ ಆಗಿರೋ ಅವ್ರ ದೇಶಕ್ಕೆ ವಾಪಸ್‌ ಕರ್ಕೊಂಡು ಬರ್ತಿನಿ.”

16 “ಆ ದೇಶದ ಜನ್ರು ನನ್ನ ಜನ್ರ ಹಾಗೆ ನಡ್ಕೊಳ್ಳೋಕೆ ಕಲಿಬೇಕು. ನನ್ನ ಜನ್ರಿಗೆ ಬಾಳನ ಮೇಲೆ ಆಣೆ ಇಡೋಕೆ ಅವರು ಕಲಿಸಿದ ಹಾಗೆ ‘ಜೀವ ಇರೋ ದೇವರಾದ ಯೆಹೋವನಾಣೆ’ ಅಂತ ನನ್ನ ಹೆಸ್ರಲ್ಲಿ ಆಣೆ ಮಾಡೋಕೆ ಅವರು ಕಲಿಬೇಕು. ಹಾಗೆ ಮಾಡಿದ್ರೆ, ನನ್ನ ಜನ್ರ ಜೊತೆ ಅವರು ಸಹ ಬದುಕಿಬಾಳೋ ತರ ನಾನು ಮಾಡ್ತೀನಿ. 17 ಆದ್ರೆ ನನ್ನ ಮಾತು ಕೇಳದ ಜನರನ್ನ ಅವರು ಯಾವ ದೇಶದವರಾದ್ರೂ ಕಿತ್ತು ಹಾಕಿ ನಾಶಮಾಡ್ತೀನಿ” ಅಂತ ಯೆಹೋವ ಹೇಳ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ