ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೆಜ್ಕೇಲ 18
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೆಜ್ಕೇಲ ಮುಖ್ಯಾಂಶಗಳು

      • ಪ್ರತಿಯೊಬ್ಬ ತನ್ನ ಪಾಪಕ್ಕೆ ತಾನೇ ಹೊಣೆ (1-32)

        • ಪಾಪ ಮಾಡೋ ವ್ಯಕ್ತಿನೇ ಸಾಯ್ತಾನೆ (4)

        • ತಂದೆ ಮಾಡಿದ ಪಾಪಕ್ಕೆ ಮಗನಿಗೆ ಶಿಕ್ಷೆ ಸಿಗಲ್ಲ (19, 20)

        • ಕೆಟ್ಟವ ಸತ್ತರೆ ಸ್ವಲ್ಪನೂ ಸಂತೋಷ ಆಗಲ್ಲ (23)

        • ಪಶ್ಚಾತ್ತಾಪಪಟ್ರೆ ಜೀವ ಉಳಿಯುತ್ತೆ (27, 28)

ಯೆಹೆಜ್ಕೇಲ 18:2

ಮಾರ್ಜಿನಲ್ ರೆಫರೆನ್ಸ್

  • +ಯೆರೆ 31:29, 30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 53

ಯೆಹೆಜ್ಕೇಲ 18:4

ಪಾದಟಿಪ್ಪಣಿ

  • *

    ಪದವಿವರಣೆಯಲ್ಲಿ “ಪ್ರಾಣ” ನೋಡಿ.

  • *

    ಪದವಿವರಣೆಯಲ್ಲಿ “ಪ್ರಾಣ” ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1997, ಪು. 19

ಯೆಹೆಜ್ಕೇಲ 18:6

ಪಾದಟಿಪ್ಪಣಿ

  • *

    ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.

  • *

    ಅಕ್ಷ. “ಕೆಡಿಸಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 12:2; ಯೆರೆ 3:6
  • +ಯಾಜ 20:10
  • +ಯಾಜ 18:19; 20:18

ಯೆಹೆಜ್ಕೇಲ 18:7

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 14:21
  • +ಧರ್ಮೋ 24:12, 13
  • +ಯಾಜ 6:2, 4
  • +ಧರ್ಮೋ 15:11
  • +ಯೆಶಾ 58:6, 7; ಯಾಕೋ 2:15, 16

ಯೆಹೆಜ್ಕೇಲ 18:8

ಮಾರ್ಜಿನಲ್ ರೆಫರೆನ್ಸ್

  • +ವಿಮೋ 22:25; ಕೀರ್ತ 15:5; ಲೂಕ 6:34, 35
  • +ಯಾಜ 19:35
  • +ಯಾಜ 19:15; 25:14; ಧರ್ಮೋ 1:16

ಯೆಹೆಜ್ಕೇಲ 18:9

ಮಾರ್ಜಿನಲ್ ರೆಫರೆನ್ಸ್

  • +ಯಾಜ 18:5

ಯೆಹೆಜ್ಕೇಲ 18:10

ಮಾರ್ಜಿನಲ್ ರೆಫರೆನ್ಸ್

  • +ಯಾಜ 19:13
  • +ಆದಿ 9:6; ವಿಮೋ 21:12

ಯೆಹೆಜ್ಕೇಲ 18:11

ಪಾದಟಿಪ್ಪಣಿ

  • *

    ಅಕ್ಷ. “ಕೆಡಿಸ್ತಾನೆ.”

ಯೆಹೆಜ್ಕೇಲ 18:12

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 15:7, 8
  • +ಯಾಜ 26:30
  • +2ಅರ 21:11

ಯೆಹೆಜ್ಕೇಲ 18:13

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 22:12

ಯೆಹೆಜ್ಕೇಲ 18:19

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 16:20; ರೋಮ 10:5

ಯೆಹೆಜ್ಕೇಲ 18:20

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 24:16; ಯೆರೆ 31:30; ಯೆಹೆ 18:4
  • +ಯೆಶಾ 3:10, 11; ಗಲಾ 6:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2010, ಪು. 28-29

    10/1/1997, ಪು. 19

ಯೆಹೆಜ್ಕೇಲ 18:21

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 55:7; ಯೆಹೆ 3:21; 33:12, 19; ಅಕಾ 3:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    7/2017, ಪು. 1

ಯೆಹೆಜ್ಕೇಲ 18:22

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 33:12, 13; ಕೀರ್ತ 25:7; ಯೆಶಾ 43:25
  • +ಯೆಹೆ 33:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು,

    7/2017, ಪು. 1-2

    ಎಚ್ಚರ!,

    6/8/1995, ಪು. 15

ಯೆಹೆಜ್ಕೇಲ 18:23

ಮಾರ್ಜಿನಲ್ ರೆಫರೆನ್ಸ್

  • +ಪ್ರಲಾ 3:33; ಯೆಹೆ 33:11; 1ತಿಮೊ 2:3, 4; 2ಪೇತ್ರ 3:9
  • +ಮೀಕ 7:18

ಯೆಹೆಜ್ಕೇಲ 18:24

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 33:12, 18; ಇಬ್ರಿ 10:38; 2ಯೋಹಾ 8
  • +ಜ್ಞಾನೋ 21:16; ಯೆಹೆ 3:20

ಯೆಹೆಜ್ಕೇಲ 18:25

ಮಾರ್ಜಿನಲ್ ರೆಫರೆನ್ಸ್

  • +ಯೋಬ 35:2; ಜ್ಞಾನೋ 19:3; ಯೆಹೆ 33:17, 20
  • +ಧರ್ಮೋ 32:4
  • +ಯೆಶಾ 55:9; ಯೆರೆ 2:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2010, ಪು. 3-4

ಯೆಹೆಜ್ಕೇಲ 18:27

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 55:7; 1ತಿಮೊ 4:16

ಯೆಹೆಜ್ಕೇಲ 18:29

ಮಾರ್ಜಿನಲ್ ರೆಫರೆನ್ಸ್

  • +ಆದಿ 18:25; ಕೀರ್ತ 145:17; ಯೆಶಾ 40:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2013, ಪು. 11-12

ಯೆಹೆಜ್ಕೇಲ 18:30

ಮಾರ್ಜಿನಲ್ ರೆಫರೆನ್ಸ್

  • +ಯೋಬ 34:11; ರೋಮ 2:6

ಯೆಹೆಜ್ಕೇಲ 18:31

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 30:15; ಜ್ಞಾನೋ 8:36; ಅಕಾ 13:46
  • +ಕೀರ್ತ 34:14; ಯೆಶಾ 1:16
  • +ಕೀರ್ತ 51:10; ಯೆರೆ 32:39; ಯೆಹೆ 11:19; ಎಫೆ 4:23, 24

ಯೆಹೆಜ್ಕೇಲ 18:32

ಮಾರ್ಜಿನಲ್ ರೆಫರೆನ್ಸ್

  • +ಯೆರೆ 29:11; ಪ್ರಲಾ 3:33; ಯೆಹೆ 33:11; ಲೂಕ 15:10; 2ಪೇತ್ರ 3:9
  • +ಧರ್ಮೋ 30:16

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೆ. 18:2ಯೆರೆ 31:29, 30
ಯೆಹೆ. 18:6ಧರ್ಮೋ 12:2; ಯೆರೆ 3:6
ಯೆಹೆ. 18:6ಯಾಜ 20:10
ಯೆಹೆ. 18:6ಯಾಜ 18:19; 20:18
ಯೆಹೆ. 18:7ಜ್ಞಾನೋ 14:21
ಯೆಹೆ. 18:7ಧರ್ಮೋ 24:12, 13
ಯೆಹೆ. 18:7ಯಾಜ 6:2, 4
ಯೆಹೆ. 18:7ಧರ್ಮೋ 15:11
ಯೆಹೆ. 18:7ಯೆಶಾ 58:6, 7; ಯಾಕೋ 2:15, 16
ಯೆಹೆ. 18:8ವಿಮೋ 22:25; ಕೀರ್ತ 15:5; ಲೂಕ 6:34, 35
ಯೆಹೆ. 18:8ಯಾಜ 19:35
ಯೆಹೆ. 18:8ಯಾಜ 19:15; 25:14; ಧರ್ಮೋ 1:16
ಯೆಹೆ. 18:9ಯಾಜ 18:5
ಯೆಹೆ. 18:10ಯಾಜ 19:13
ಯೆಹೆ. 18:10ಆದಿ 9:6; ವಿಮೋ 21:12
ಯೆಹೆ. 18:12ಧರ್ಮೋ 15:7, 8
ಯೆಹೆ. 18:12ಯಾಜ 26:30
ಯೆಹೆ. 18:122ಅರ 21:11
ಯೆಹೆ. 18:13ಯೆಹೆ 22:12
ಯೆಹೆ. 18:19ಧರ್ಮೋ 16:20; ರೋಮ 10:5
ಯೆಹೆ. 18:20ಧರ್ಮೋ 24:16; ಯೆರೆ 31:30; ಯೆಹೆ 18:4
ಯೆಹೆ. 18:20ಯೆಶಾ 3:10, 11; ಗಲಾ 6:7
ಯೆಹೆ. 18:21ಯೆಶಾ 55:7; ಯೆಹೆ 3:21; 33:12, 19; ಅಕಾ 3:19
ಯೆಹೆ. 18:222ಪೂರ್ವ 33:12, 13; ಕೀರ್ತ 25:7; ಯೆಶಾ 43:25
ಯೆಹೆ. 18:22ಯೆಹೆ 33:16
ಯೆಹೆ. 18:23ಪ್ರಲಾ 3:33; ಯೆಹೆ 33:11; 1ತಿಮೊ 2:3, 4; 2ಪೇತ್ರ 3:9
ಯೆಹೆ. 18:23ಮೀಕ 7:18
ಯೆಹೆ. 18:24ಯೆಹೆ 33:12, 18; ಇಬ್ರಿ 10:38; 2ಯೋಹಾ 8
ಯೆಹೆ. 18:24ಜ್ಞಾನೋ 21:16; ಯೆಹೆ 3:20
ಯೆಹೆ. 18:25ಯೋಬ 35:2; ಜ್ಞಾನೋ 19:3; ಯೆಹೆ 33:17, 20
ಯೆಹೆ. 18:25ಧರ್ಮೋ 32:4
ಯೆಹೆ. 18:25ಯೆಶಾ 55:9; ಯೆರೆ 2:17
ಯೆಹೆ. 18:27ಯೆಶಾ 55:7; 1ತಿಮೊ 4:16
ಯೆಹೆ. 18:29ಆದಿ 18:25; ಕೀರ್ತ 145:17; ಯೆಶಾ 40:14
ಯೆಹೆ. 18:30ಯೋಬ 34:11; ರೋಮ 2:6
ಯೆಹೆ. 18:31ಧರ್ಮೋ 30:15; ಜ್ಞಾನೋ 8:36; ಅಕಾ 13:46
ಯೆಹೆ. 18:31ಕೀರ್ತ 34:14; ಯೆಶಾ 1:16
ಯೆಹೆ. 18:31ಕೀರ್ತ 51:10; ಯೆರೆ 32:39; ಯೆಹೆ 11:19; ಎಫೆ 4:23, 24
ಯೆಹೆ. 18:32ಯೆರೆ 29:11; ಪ್ರಲಾ 3:33; ಯೆಹೆ 33:11; ಲೂಕ 15:10; 2ಪೇತ್ರ 3:9
ಯೆಹೆ. 18:32ಧರ್ಮೋ 30:16
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೆಜ್ಕೇಲ 18:1-32

ಯೆಹೆಜ್ಕೇಲ

18 ಯೆಹೋವ ಮತ್ತೆ ನನಗೆ ಹೀಗಂದನು: 2 “‘ಅಪ್ಪಂದಿರು ಹುಳಿದ್ರಾಕ್ಷಿ ತಿಂದಿದ್ದಾರೆ, ಆದ್ರೆ ಮಕ್ಕಳ ಹಲ್ಲು ಜುಮ್‌ ಅಂತಿವೆ’+ ಅನ್ನೋ ಗಾದೆಯನ್ನ ನೀವು ಇಸ್ರಾಯೇಲಲ್ಲಿ ಹೇಳ್ತಿರಲ್ಲಾ, ಅದ್ರ ಅರ್ಥ ಏನು?

3 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನಾಣೆ, ನೀವು ಇನ್ಮುಂದೆ ಇಸ್ರಾಯೇಲಲ್ಲಿ ಈ ಗಾದೆ ಹೇಳಲ್ಲ. 4 ನೋಡಿ, ಎಲ್ರ ಜೀವ* ನನಗೆ ಸೇರಿದ್ದು. ಅಪ್ಪನ ಜೀವ ಮಗನ ಜೀವ ಎರಡೂ ನನಗೆ ಸೇರಿದ್ದು. ಪಾಪ ಮಾಡೋ ವ್ಯಕ್ತಿನೇ* ಸಾಯ್ತಾನೆ.

5 ಹೀಗೆ ನೆನಸಿ, ಒಬ್ಬ ವ್ಯಕ್ತಿ ನೀತಿವಂತನಾಗಿದ್ದು ನ್ಯಾಯವಾಗಿ ಇರೋದನ್ನೇ ಮಾಡ್ತಾನೆ. 6 ಬೆಟ್ಟಗಳ ಮೇಲೆ ಮೂರ್ತಿಗಳಿಗೆ ಬಲಿಯಾಗಿ ಕೊಟ್ಟಿದ್ದನ್ನ ಅವನು ತಿನ್ನಲ್ಲ.+ ಇಸ್ರಾಯೇಲ್ಯರ ಅಸಹ್ಯ* ಮೂರ್ತಿಗಳ ಮೇಲೆ ಭರವಸೆ ಇಡಲ್ಲ. ಅವನು ಇನ್ನೊಬ್ಬನ ಹೆಂಡತಿ ಜೊತೆ ವ್ಯಭಿಚಾರ ಮಾಡಲ್ಲ,*+ ತನ್ನ ಹೆಂಡತಿಗೆ ಮುಟ್ಟು ಆಗಿರೋವಾಗ ಅವಳ ಜೊತೆ ಲೈಂಗಿಕ ಸಂಪರ್ಕ ಇಟ್ಕೊಳ್ಳಲ್ಲ.+ 7 ಅವನು ಯಾರ ಜೊತೆನೂ ಕೆಟ್ಟದ್ದಾಗಿ ನಡ್ಕೊಳ್ಳಲ್ಲ,+ ಬದಲಿಗೆ ಸಾಲಗಾರ ಅಡ ಇಟ್ಟಿದ್ದನ್ನ ವಾಪಸ್‌ ಕೊಡ್ತಾನೆ.+ ಅವನು ಯಾರಿಂದಾನೂ ದೋಚಲ್ಲ,+ ಬದ್ಲಾಗಿ ಊಟ ಇಲ್ಲದವ್ರಿಗೆ ತನ್ನ ಊಟ ಕೊಡ್ತಾನೆ,+ ಮೈಮುಚ್ಚೋಕೆ ಬಟ್ಟೆ ಇಲ್ಲದವನಿಗೆ ಬಟ್ಟೆ ಕೊಡ್ತಾನೆ.+ 8 ಸಾಲ ಕೊಟ್ಟು ಬಡ್ಡಿ ಕೇಳಲ್ಲ, ಚಕ್ರ ಬಡ್ಡಿನೂ ಕೇಳಲ್ಲ,+ ಯಾರಿಗೂ ಅನ್ಯಾಯ ಮಾಡಲ್ಲ.+ ಇಬ್ರ ಮಧ್ಯ ಜಗಳ ಆಗಿದ್ದನ್ನ ವಿಚಾರಿಸುವಾಗ ನ್ಯಾಯವಾಗಿ ತೀರ್ಪು ಕೊಡ್ತಾನೆ.+ 9 ಅವನು ಯಾವಾಗ್ಲೂ ನನ್ನ ನಿಯಮಗಳಿಗೆ ತಕ್ಕ ಹಾಗೆ ನಡೀತಾ, ನನ್ನ ತೀರ್ಪುಗಳನ್ನ ಪಾಲಿಸ್ತಾ ನಂಬಿಗಸ್ತನಾಗಿ ಇರ್ತಾನೆ. ಅಂಥ ವ್ಯಕ್ತಿ ನೀತಿವಂತ. ಅವನು ನಿಜವಾಗ್ಲೂ ಬಾಳ್ತಾನೆ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.

10 ‘ಆದ್ರೆ ನೆನಸಿ, ಆ ನೀತಿವಂತನಿಗೆ ಒಬ್ಬ ಮಗ ಇದ್ದಾನೆ. ಅವನು ದರೋಡೆಕೋರ+ ಅಥವಾ ಕೊಲೆಗಾರ+ ಅಥವಾ ಈ ಕೆಟ್ಟ ವಿಷ್ಯಗಳಲ್ಲಿ ಯಾವುದಾದ್ರೂ ಮಾಡ್ತಾನೆ. 11 (ಅಪ್ಪ ಈ ಕೆಟ್ಟ ವಿಷ್ಯಗಳಲ್ಲಿ ಯಾವದನ್ನೂ ಮಾಡದಿದ್ರೂ) ಬೆಟ್ಟಗಳ ಮೇಲೆ ಮೂರ್ತಿಗಳಿಗೆ ಬಲಿ ಕೊಟ್ಟಿದ್ದನ್ನ ಮಗ ತಿಂತಾನೆ, ಇನ್ನೊಬ್ಬನ ಹೆಂಡತಿ ಜೊತೆ ವ್ಯಭಿಚಾರ ಮಾಡ್ತಾನೆ,* 12 ಗತಿ ಇಲ್ಲದವ್ರಿಗೆ, ಬಡವ್ರಿಗೆ ಕಾಟ ಕೊಡ್ತಾನೆ,+ ಬೇರೆಯವ್ರ ವಸ್ತುಗಳನ್ನ ದರೋಡೆ ಮಾಡ್ತಾನೆ, ಸಾಲಗಾರ ಅಡ ಇಟ್ಟಿದ್ದನ್ನ ವಾಪಸ್‌ ಕೊಡಲ್ಲ, ಅಸಹ್ಯ ಮೂರ್ತಿಗಳಲ್ಲಿ ಭರವಸೆ ಇಡ್ತಾನೆ,+ ಗಲೀಜು ಕೆಲಸಗಳನ್ನ ಮಾಡ್ತಾನೆ,+ 13 ಬಡ್ಡಿ, ಚಕ್ರಬಡ್ಡಿ ಕೇಳ್ತಾನೆ.+ ಈ ಎಲ್ಲ ಅಸಹ್ಯ ಕೆಲಸಗಳನ್ನ ಮಾಡಿದ್ರಿಂದ ಆ ಮಗ ಬಾಳಲ್ಲ. ಅವನು ನಿಜವಾಗ್ಲೂ ಸಾಯ್ತಾನೆ. ಅವನ ಸಾವಿಗೆ ಅವನೇ ಕಾರಣ.

14 ಆದ್ರೆ ನೆನಸಿ, ಒಬ್ಬ ಮಗ ಇದ್ದಾನೆ. ಅಪ್ಪ ಮಾಡೋ ಎಲ್ಲ ಪಾಪಗಳನ್ನ ಅವನು ನೋಡ್ತಾನೆ. ಆದ್ರೂ ಅವನು ಅಂಥ ವಿಷ್ಯಗಳನ್ನ ಮಾಡಲ್ಲ. 15 ಬೆಟ್ಟಗಳ ಮೇಲೆ ಮೂರ್ತಿಗಳಿಗೆ ಬಲಿ ಕೊಟ್ಟಿದ್ದನ್ನ ತಿನ್ನಲ್ಲ, ಇಸ್ರಾಯೇಲ್ಯರ ಅಸಹ್ಯ ಮೂರ್ತಿಗಳ ಮೇಲೆ ಭರವಸೆ ಇಡಲ್ಲ, ಇನ್ನೊಬ್ಬನ ಹೆಂಡತಿ ಜೊತೆ ವ್ಯಭಿಚಾರ ಮಾಡಲ್ಲ, 16 ಯಾರ ಜೊತೆನೂ ಕೆಟ್ಟದಾಗಿ ನಡ್ಕೊಳ್ಳಲ್ಲ, ಸಾಲಗಾರ ಅಡ ಇಟ್ಟಿದ್ದನ್ನ ತನ್ನ ಹತ್ರಾನೇ ಇಟ್ಕೊಳ್ಳಲ್ಲ, ಸುಲಿಗೆ ಮಾಡಲ್ಲ, ಊಟ ಇಲ್ಲದವ್ರಿಗೆ ತನ್ನ ಊಟ ಕೊಡ್ತಾನೆ, ಮೈಮುಚ್ಚೋಕೆ ಬಟ್ಟೆ ಇಲ್ಲದವನಿಗೆ ಬಟ್ಟೆ ಕೊಡ್ತಾನೆ. 17 ಅವನು ಬಡವರ ಮೇಲೆ ದಬ್ಬಾಳಿಕೆ ಮಾಡಲ್ಲ, ಸಾಲ ಕೊಡುವಾಗ ಬಡ್ಡಿ, ಚಕ್ರ ಬಡ್ಡಿ ಕೇಳಲ್ಲ, ನನ್ನ ತೀರ್ಪುಗಳನ್ನ ಪಾಲಿಸ್ತಾನೆ, ನನ್ನ ನಿಯಮಗಳ ಪ್ರಕಾರ ನಡೀತಾನೆ. ಅಂಥ ವ್ಯಕ್ತಿ ನಿಜವಾಗ್ಲೂ ಬಾಳ್ತಾನೆ. ಅವನ ಅಪ್ಪ ಮಾಡಿದ ಪಾಪದಿಂದ ಅವನು ಸಾಯಲ್ಲ. 18 ಆದ್ರೆ ಅವನ ಅಪ್ಪ ತಾನು ಮಾಡಿದ ತಪ್ಪಿಗಾಗಿ ಸಾಯ್ತಾನೆ. ಯಾಕಂದ್ರೆ ಅವನು ಮೋಸಗಾರ, ತನ್ನ ಸಹೋದರನಿಂದ ಸುಲಿಗೆ ಮಾಡಿದ್ದಾನೆ ಮತ್ತು ತನ್ನ ಜನ್ರ ಮಧ್ಯ ಕೆಟ್ಟದ್ದನ್ನ ಮಾಡಿದ್ದಾನೆ.

19 ಆದ್ರೆ ನೀವು “ಅಪ್ಪ ತಪ್ಪು ಮಾಡಿದ್ರೆ ಆ ಅಪರಾಧ ಮಗನ ಮೇಲೆ ಯಾಕೆ ಬರಲ್ಲ?” ಅಂತ ಕೇಳ್ತೀರ. ಮಗ ನ್ಯಾಯನೀತಿಯ ಪ್ರಕಾರ ನಡಿದಿದ್ರಿಂದ, ನನ್ನ ಎಲ್ಲ ನಿಯಮಗಳನ್ನ ಪಾಲಿಸಿದ್ರಿಂದ ಅವನು ನಿಜವಾಗ್ಲೂ ಬಾಳ್ತಾನೆ.+ 20 ಪಾಪ ಮಾಡಿದ ವ್ಯಕ್ತಿನೇ ಸಾಯ್ತಾನೆ.+ ಅಪ್ಪ ಮಾಡಿದ ತಪ್ಪಿಗಾಗಿ ಮಗ ಅಪರಾಧಿ ಆಗಲ್ಲ, ಮಗ ಮಾಡಿದ ತಪ್ಪಿಗಾಗಿ ಅಪ್ಪ ಅಪರಾಧಿ ಆಗಲ್ಲ. ನೀತಿವಂತ ನೀತಿಯಿಂದ ನಡಿದದ್ದಕ್ಕೆ ಅವನೇ ಪ್ರತಿಫಲ ಪಡಿತಾನೆ. ಕೆಟ್ಟವ ಕೆಟ್ಟತನ ನಡಿಸಿದ್ದಕ್ಕೆ ಅವನೇ ಶಿಕ್ಷೆ ಅನುಭವಿಸ್ತಾನೆ.+

21 ಒಬ್ಬ ಕೆಟ್ಟವ ಅವನು ಮಾಡ್ತಿದ್ದ ಎಲ್ಲ ಪಾಪಗಳನ್ನ ಬಿಟ್ಟು ನನ್ನ ನಿಯಮಗಳ ಪ್ರಕಾರ ನಡಿದ್ರೆ ಮತ್ತು ನ್ಯಾಯನೀತಿಯ ಪ್ರಕಾರ ನಡಿದ್ರೆ ಅವನು ನಿಜವಾಗ್ಲೂ ಬಾಳ್ತಾನೆ. ಅವನು ಸಾಯಲ್ಲ.+ 22 ಅವನು ಹಿಂದೆ ಮಾಡಿದ ಯಾವ ತಪ್ಪಿಗೂ ನಾನು ಅವನಿಗೆ ಶಿಕ್ಷೆ ಕೊಡಲ್ಲ.+ ಅವನು ನೀತಿಗೆ ತಕ್ಕ ಹಾಗೆ ನಡಿಯೋದ್ರಿಂದ ಬಾಳ್ತಾನೆ.’+

23 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ, ‘ಒಬ್ಬ ದುಷ್ಟ ಸತ್ತರೆ ನನಗೆ ಸ್ವಲ್ಪಾನೂ ಖುಷಿ ಆಗಲ್ಲ.+ ಅವನು ಕೆಟ್ಟ ದಾರಿ ಬಿಟ್ಟು ಬಾಳಬೇಕು ಅನ್ನೋದೇ ನನ್ನಾಸೆ.’+

24 ‘ಆದ್ರೆ ಒಬ್ಬ ನೀತಿವಂತ ನೀತಿಯಿಂದ ಜೀವಿಸೋದನ್ನ ಬಿಟ್ಟು ಕೆಟ್ಟದ್ದನ್ನ ಮಾಡಿದ್ರೆ, ಕೆಟ್ಟವನು ಮಾಡೋ ಎಲ್ಲ ಅಸಹ್ಯ ಕೆಲಸಗಳನ್ನ ಮಾಡಿದ್ರೆ ಅವನು ಉಳಿತಾನಾ? ಇಲ್ಲ. ಅವನು ಮಾಡಿದ ಯಾವ ಒಳ್ಳೇ ಕೆಲಸಗಳನ್ನೂ ನಾನು ನೆನಪಿಸ್ಕೊಳ್ಳಲ್ಲ.+ ಅವನು ನಂಬಿಕೆ ದ್ರೋಹ ಮಾಡಿದ್ರಿಂದ ಮತ್ತು ಪಾಪ ಮಾಡಿದ್ರಿಂದ ಸತ್ತು ಹೋಗ್ತಾನೆ.+

25 ಆದ್ರೆ ನೀವು “ಯೆಹೋವ ಮಾಡೋದು ಅನ್ಯಾಯ”+ ಅಂತೀರ. ಇಸ್ರಾಯೇಲ್ಯರೇ, ದಯವಿಟ್ಟು ಕೇಳಿಸ್ಕೊಳ್ಳಿ. ನಾನು ಮಾಡ್ತಿರೋದು ಅನ್ಯಾಯನಾ?+ ಇಲ್ಲ, ನೀವು ಮಾಡ್ತಿರೋದು ಅನ್ಯಾಯ.+

26 ನೀತಿವಂತ ನೀತಿಯಿಂದ ಜೀವಿಸೋದನ್ನ ಬಿಟ್ಟು ಕೆಟ್ಟದ್ದನ್ನ ಮಾಡಿದ್ರೆ ಅದಕ್ಕಾಗಿ ಅವನು ಸಾಯ್ತಾನೆ. ಅವನು ಕೆಟ್ಟದ್ದನ್ನ ಮಾಡಿದ್ರಿಂದಾನೇ ಅವನು ಸಾಯ್ತಾನೆ.

27 ಕೆಟ್ಟವನು ಕೆಟ್ಟದ್ದನ್ನ ಬಿಟ್ಟು ನ್ಯಾಯನೀತಿಯ ಪ್ರಕಾರ ನಡಿಯೋಕೆ ಶುರುಮಾಡಿದ್ರೆ ತನ್ನ ಜೀವ ಉಳಿಸ್ಕೊಳ್ತಾನೆ.+ 28 ಅವನು ಮಾಡ್ತಾ ಇರೋದು ಕೆಟ್ಟದು ಅಂತ ಅರ್ಥ ಮಾಡ್ಕೊಂಡು ಬಿಟ್ಟುಬಿಟ್ರೆ ಅವನು ಸಾಯಲ್ಲ, ನಿಜವಾಗ್ಲೂ ಬಾಳ್ತಾನೆ.

29 ಆದ್ರೆ ಇಸ್ರಾಯೇಲ್ಯರು “ಯೆಹೋವ ಮಾಡೋದು ಅನ್ಯಾಯ” ಅಂತಾರೆ. ಇಸ್ರಾಯೇಲ್ಯರೇ, ಸ್ವಲ್ಪ ಯೋಚ್ನೆ ಮಾಡಿ ನೋಡಿ, ನಾನು ಮಾಡ್ತಿರೋದು ಅನ್ಯಾಯನಾ?+ ಇಲ್ಲ, ನೀವು ಮಾಡ್ತಿರೋದೇ ಅನ್ಯಾಯ.’

30 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಹಾಗಾಗಿ ಇಸ್ರಾಯೇಲ್ಯರೇ, ನಾನು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನಿಮ್ಮ ನಿಮ್ಮ ನಡತೆಗೆ ತಕ್ಕ ಹಾಗೆ ನ್ಯಾಯ ತೀರಿಸ್ತಿನಿ.+ ಹಾಗಾಗಿ ನೀವು ಮಾಡೋ ಎಲ್ಲ ಕೆಟ್ಟ ಕೆಲಸಗಳನ್ನ ಬಿಟ್ಟುಬಿಡಿ. ವಾಪಸ್‌ ಬನ್ನಿ, ಹಾಗೆ ಮಾಡಿದ್ರೆ, ಎಡವಿಸೋ ಕಲ್ಲಿನ ತರ ಇರೋ ನಿಮ್ಮ ತಪ್ಪುಗಳು ನಿಮ್ಮನ್ನ ಅಪರಾಧಿಯಾಗಿ ಮಾಡಲ್ಲ. 31 ಇಸ್ರಾಯೇಲ್ಯರೇ, ಯಾಕೆ ಸುಮ್ಮನೆ ಜೀವ ಕಳ್ಕೊತೀರಾ?+ ನೀವು ಮಾಡ್ತಿದ್ದ ತಪ್ಪುಗಳನ್ನೆಲ್ಲ ಬಿಟ್ಟುಬಿಡಿ.+ ನಿಮ್ಮ ಹೃದಯದಲ್ಲಿ ಬದಲಾವಣೆ ಮಾಡ್ಕೊಳ್ಳಿ, ನೀವು ಯೋಚಿಸೋ ರೀತಿಯನ್ನ ಬದಲಾಯಿಸ್ಕೊಳ್ಳಿ.’+

32 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಯಾರೂ ಸಾಯೋದು ನನಗೆ ಇಷ್ಟ ಇಲ್ಲ,+ ಸ್ವಲ್ಪಾನೂ ಇಷ್ಟ ಇಲ್ಲ. ಹಾಗಾಗಿ ಪಾಪ ಮಾಡೋದನ್ನ ಬಿಟ್ಟು ಬಾಳಿ.’”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ