ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ವಿಮೋಚನಕಾಂಡ ಮುಖ್ಯಾಂಶಗಳು

      • ಫರೋಹನ ಆಸ್ಥಾನದಲ್ಲಿ ಮೋಶೆ ಆರೋನ (1-5)

      • ಫರೋಹನ ದಬ್ಬಾಳಿಕೆ ಹೆಚ್ಚಾಯ್ತು (6-18)

      • ಇಸ್ರಾಯೇಲ್ಯರು ಮೋಶೆ ಆರೋನನನ್ನ ಬೈದ್ರು (19-23)

ವಿಮೋಚನಕಾಂಡ 5:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 7:5; 9:15, 16
  • +2ಅರ 18:28, 35
  • +ವಿಮೋ 3:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/1993, ಪು. 3-5

ವಿಮೋಚನಕಾಂಡ 5:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 3:18

ವಿಮೋಚನಕಾಂಡ 5:4

ಮಾರ್ಜಿನಲ್ ರೆಫರೆನ್ಸ್

  • +ವಿಮೋ 1:11

ವಿಮೋಚನಕಾಂಡ 5:7

ಮಾರ್ಜಿನಲ್ ರೆಫರೆನ್ಸ್

  • +ವಿಮೋ 1:14

ವಿಮೋಚನಕಾಂಡ 5:8

ಪಾದಟಿಪ್ಪಣಿ

  • *

    ಅಥವಾ “ಸುಮ್ನೆ ಕಾಲ ಕಳಿತಿದ್ದಾರೆ.”

ವಿಮೋಚನಕಾಂಡ 5:10

ಮಾರ್ಜಿನಲ್ ರೆಫರೆನ್ಸ್

  • +ವಿಮೋ 1:11

ವಿಮೋಚನಕಾಂಡ 5:14

ಮಾರ್ಜಿನಲ್ ರೆಫರೆನ್ಸ್

  • +ವಿಮೋ 2:11

ವಿಮೋಚನಕಾಂಡ 5:17

ಪಾದಟಿಪ್ಪಣಿ

  • *

    ಅಥವಾ “ಸುಮ್ನೆ ಕಾಲ ಕಳಿತಿದ್ದೀರ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 5:7, 8
  • +ವಿಮೋ 5:3

ವಿಮೋಚನಕಾಂಡ 5:21

ಮಾರ್ಜಿನಲ್ ರೆಫರೆನ್ಸ್

  • +ವಿಮೋ 6:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    11/2022, ಪು. 15

ವಿಮೋಚನಕಾಂಡ 5:23

ಮಾರ್ಜಿನಲ್ ರೆಫರೆನ್ಸ್

  • +ವಿಮೋ 5:1
  • +ವಿಮೋ 5:6, 9
  • +ವಿಮೋ 3:8

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ವಿಮೋ. 5:2ವಿಮೋ 7:5; 9:15, 16
ವಿಮೋ. 5:22ಅರ 18:28, 35
ವಿಮೋ. 5:2ವಿಮೋ 3:19
ವಿಮೋ. 5:3ವಿಮೋ 3:18
ವಿಮೋ. 5:4ವಿಮೋ 1:11
ವಿಮೋ. 5:7ವಿಮೋ 1:14
ವಿಮೋ. 5:10ವಿಮೋ 1:11
ವಿಮೋ. 5:14ವಿಮೋ 2:11
ವಿಮೋ. 5:17ವಿಮೋ 5:7, 8
ವಿಮೋ. 5:17ವಿಮೋ 5:3
ವಿಮೋ. 5:21ವಿಮೋ 6:9
ವಿಮೋ. 5:23ವಿಮೋ 5:1
ವಿಮೋ. 5:23ವಿಮೋ 5:6, 9
ವಿಮೋ. 5:23ವಿಮೋ 3:8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ವಿಮೋಚನಕಾಂಡ 5:1-23

ವಿಮೋಚನಕಾಂಡ

5 ಆಮೇಲೆ ಮೋಶೆ ಆರೋನರು ಫರೋಹನ ಹತ್ರ ಹೋಗಿ “ಇಸ್ರಾಯೇಲಿನ ದೇವರಾದ ಯೆಹೋವ ನಿನಗೆ ಹೇಳೋದು ಏನಂದ್ರೆ ‘ನನ್ನ ಜನ್ರನ್ನ ಕಳಿಸು, ಅವರು ನನ್ನ ಘನತೆಗಾಗಿ ಕಾಡಲ್ಲಿ ಹಬ್ಬ ಆಚರಿಸಬೇಕು’” ಅಂದ್ರು. 2 ಅದಕ್ಕವನು “ಯಾರು ಯೆಹೋವ?+ ಅವನ ಮಾತು ಕೇಳಿ ನಾನ್ಯಾಕೆ ಇಸ್ರಾಯೇಲ್ಯರನ್ನ ಬಿಡ್ಲಿ?+ ಯೆಹೋವ ಯಾರೋ ನಂಗೊತ್ತಿಲ್ಲ. ಇಸ್ರಾಯೇಲ್ಯರನ್ನ ಹೋಗೋಕೆ ನಾನಂತೂ ಬಿಡಲ್ಲ”+ ಅಂದ. 3 ಆಗ ಅವರು “ಇಬ್ರಿಯರ ದೇವರು ನಮ್ಮ ಜೊತೆ ಮಾತಾಡಿದ್ದಾನೆ. ನಾವು ಮೂರು ದಿನ ಪ್ರಯಾಣ ಮಾಡೋಕೆ ದಯವಿಟ್ಟು ಅನುಮತಿ ಕೊಡು. ಕಾಡಿಗೆ ಹೋಗಿ ನಮ್ಮ ದೇವರಾದ ಯೆಹೋವನಿಗೆ ಬಲಿ ಅರ್ಪಿಸಬೇಕು.+ ಇಲ್ಲದಿದ್ರೆ ಆತನು ನಮಗೆ ಕಾಯಿಲೆ ಬರೋ ಹಾಗೆ ಮಾಡಿ ಅಥವಾ ಕತ್ತಿಯಿಂದ ಸಾಯೋ ಹಾಗೆ ಮಾಡಿ ಶಿಕ್ಷೆ ಕೊಡ್ತಾನೆ” ಅಂದ್ರು. 4 ಅದಕ್ಕೆ ಈಜಿಪ್ಟಿನ ರಾಜ “ಮೋಶೆ! ಆರೋನ! ಜನ್ರು ಮಾಡ್ತಿರೋ ಕೆಲಸವನ್ನ ನೀವ್ಯಾಕೆ ನಿಲ್ಲಿಸ್ತಿರಾ? ಹೋಗಿ, ನಿಮಗೆ ಕೊಟ್ಟ ಕೆಲಸ ಮಾಡಿ!”+ ಅಂದ. 5 “ಈ ದೇಶದಲ್ಲಿ ನಿಮ್ಮವರು ಎಷ್ಟೊಂದು ಜನ ಇದ್ದಾರೆ ನೋಡಿ. ಅಷ್ಟು ಜನ್ರ ಕೆಲಸವನ್ನ ನಿಲ್ಲಿಸಬೇಕಂತ ಇದ್ದೀರಾ?” ಅಂದ.

6 ಅದೇ ದಿನ ಫರೋಹ ಬಿಟ್ಟಿಕೆಲಸ ಮಾಡಿಸೋ ಅಧಿಕಾರಿಗಳಿಗೆ, ಅವರ ಕೈಕೆಳಗಿದ್ದ ಮೇಸ್ತ್ರಿಗಳಿಗೆ ಹೀಗಂದ: 7 “ಇನ್ನು ಮೇಲೆ ನೀವು ಆ ಜನ್ರಿಗೆ ಇಟ್ಟಿಗೆ ಮಾಡೋಕೆ ಒಣಹುಲ್ಲು ಕೊಡಬಾರದು.+ ಅವರೇ ಹೋಗಿ ಒಣಹುಲ್ಲು ತರ್ಲಿ. 8 ಆದ್ರೆ ಇಲ್ಲಿ ತನಕ ಅವರು ದಿನಾ ಎಷ್ಟು ಇಟ್ಟಿಗೆ ಮಾಡ್ತಿದ್ರೋ ಅಷ್ಟೇ ಇಟ್ಟಿಗೆಗಳನ್ನ ಈಗ್ಲೂ ಅವರಿಂದ ಮಾಡಿಸಿ. ಒಂದು ಇಟ್ಟಿಗೆನೂ ಕಮ್ಮಿ ಆಗಬಾರದು. ಅವರು ಸೋಮಾರಿಗಳಾಗಿದ್ದಾರೆ.* ಅದಕ್ಕೇ ‘ನಾವು ಹೋಗಬೇಕು, ನಮ್ಮ ದೇವರಿಗೆ ಬಲಿ ಅರ್ಪಿಸಬೇಕು’ ಅಂತಿದ್ದಾರೆ. 9 ಅವರಿಗೆ ತುಂಬ ಕೆಲಸ ಕೊಡಿ. ಪುರುಸೊತ್ತೇ ಸಿಗಬಾರದು. ಆಗ ಈ ಸುಳ್ಳು ಮಾತಿಗೆಲ್ಲ ಅವರು ಗಮನಕೊಡಲ್ಲ.”

10 ಆ ಅಧಿಕಾರಿಗಳು+ ಮತ್ತು ಅವರ ಕೈಕೆಳಗಿದ್ದ ಮೇಸ್ತ್ರಿಗಳು ಜನ್ರ ಹತ್ರ ಬಂದು “ಫರೋಹ ನಿಮಗೆ ಹೇಳೋದು ಏನಂದ್ರೆ ‘ನಾನು ನಿಮಗೆ ಇನ್ನು ಮೇಲೆ ಒಣಹುಲ್ಲು ಕೊಡಲ್ಲ. 11 ನೀವೇ ಹೋಗಿ ಎಲ್ಲಾದ್ರೂ ಹುಡುಕಿ ತನ್ನಿ. ಆದ್ರೆ ಇಟ್ಟಿಗೆ ಮಾತ್ರ ಒಂದೂ ಕಮ್ಮಿ ಆಗಬಾರದು’ ” ಅಂದ್ರು. 12 ಆಗ ಜನ ಈಜಿಪ್ಟ್‌ ದೇಶದಲ್ಲೆಲ್ಲ ಹುಡುಕಿ ಒಣಹುಲ್ಲು ಬದಲು ಕೂಳೆ ಕೂಡಿಸೋಕೆ ಶುರು ಮಾಡಿದ್ರು. 13 ಬಿಟ್ಟಿಕೆಲಸ ಮಾಡಿಸೋ ಅಧಿಕಾರಿಗಳು ಜನ್ರಿಗೆ “ಹುಲ್ಲು ಕೊಡ್ತಿದ್ದಾಗ ಮಾಡಿದ್ದಷ್ಟೇ ಕೆಲಸ ಈಗ್ಲೂ ಪ್ರತಿಯೊಬ್ರು ಪ್ರತಿ ದಿನ ಮಾಡಿ ಮುಗಿಸಬೇಕು” ಅಂತ ಒತ್ತಾಯ ಮಾಡ್ತಾ ಇದ್ರು. 14 ಅಷ್ಟೇ ಅಲ್ಲ ಫರೋಹನ ಆ ಅಧಿಕಾರಿಗಳು ತಾವು ನೇಮಿಸಿದ್ದ ಇಸ್ರಾಯೇಲ್ಯ ಮೇಸ್ತ್ರಿಗಳಿಗೆ “ನೀವು ಮುಂಚೆ ಮಾಡ್ತಾ ಇದ್ದಷ್ಟು ಇಟ್ಟಿಗೆಗಳನ್ನ ಯಾಕೆ ಈಗ ಮಾಡ್ತಿಲ್ಲ? ನಿನ್ನೆನೂ ಮಾಡಿಲ್ಲ, ಇವತ್ತೂ ಮಾಡಿಲ್ಲ” ಅಂತ ಹೇಳಿ ಅವ್ರಿಗೆ ಹೊಡೆದ್ರು.+

15 ಹಾಗಾಗಿ ಇಸ್ರಾಯೇಲ್ಯ ಮೇಸ್ತ್ರಿಗಳು ಫರೋಹನ ಹತ್ರ ಹೋಗಿ ದೂರು ಕೊಟ್ರು. ಅವರು ಫರೋಹನಿಗೆ “ನಿನ್ನ ಸೇವಕರಾದ ನಮಗೆ ಯಾಕೆ ಹೀಗೆ ಮಾಡ್ತಾ ಇದ್ದಿಯಾ? 16 ನಿನ್ನ ಜನ್ರು ನಮಗೆ ಸ್ವಲ್ಪನೂ ಒಣಹುಲ್ಲು ಕೊಡ್ತಿಲ್ಲ. ‘ಇಟ್ಟಿಗೆಗಳನ್ನ ಮಾಡಿ ಮಾಡಿ’ ಅಂತ ಹೇಳ್ತಿದ್ದಾರೆ. ತಪ್ಪು ನಿನ್ನ ಜನ್ರದ್ದೇ ಆದ್ರೂ ನಮ್ಮನ್ನ ಹೊಡಿತಿದ್ದಾರೆ” ಅಂದ್ರು. 17 ಅದಕ್ಕೆ ಫರೋಹ “ನೀವು ಸೋಮಾರಿಗಳು,* ಮೈಗಳ್ಳರು!+ ಅದಕ್ಕೇ ‘ನಾವು ಹೋಗಬೇಕು, ಯೆಹೋವನಿಗೆ ಬಲಿ ಅರ್ಪಿಸಬೇಕು’+ ಅಂತಿದ್ದೀರ. 18 ಹೋಗಿ, ನಿಮ್ಮ ನಿಮ್ಮ ಕೆಲಸ ಮಾಡಿ. ನಿಮಗೆ ಒಣಹುಲ್ಲು ಕೊಡೋದೇ ಇಲ್ಲ, ಮೊದ್ಲು ಎಷ್ಟು ಇಟ್ಟಿಗೆ ಮಾಡ್ತಾ ಇದ್ರೋ ಈಗ್ಲೂ ಅಷ್ಟೇ ಮಾಡಬೇಕು” ಅಂದ.

19 “ಮುಂಚೆ ಮಾಡ್ತಾ ಇದ್ದಷ್ಟು ಇಟ್ಟಿಗೆಗಳನ್ನ ಪ್ರತಿದಿನ ಮಾಡಬೇಕು, ಒಂದೂ ಕಮ್ಮಿ ಆಗಬಾರದು” ಅನ್ನೋ ಆಜ್ಞೆಯಿಂದ ತಾವು ದೊಡ್ಡ ಕಷ್ಟದಲ್ಲಿ ಸಿಕ್ಕಿಕೊಂಡಿದ್ದೀವಿ ಅಂತ ಇಸ್ರಾಯೇಲ್ಯ ಮೇಸ್ತ್ರಿಗಳಿಗೆ ಗೊತ್ತಾಯ್ತು. 20 ಅವರು ಫರೋಹನ ಅರಮನೆಯಿಂದ ಹೊರಗೆ ಬಂದಾಗ ಮೋಶೆ ಆರೋನರನ್ನ ನೋಡಿದ್ರು. ಆ ಮೇಸ್ತ್ರಿಗಳ ಹತ್ರ ಮಾತಾಡೋಕೆ ಮೋಶೆ ಆರೋನ ಅಲ್ಲಿ ಕಾಯ್ತಿದ್ರು. 21 ತಕ್ಷಣ ಇಸ್ರಾಯೇಲ್ಯ ಮೇಸ್ತ್ರಿಗಳು ಅವರಿಬ್ಬರಿಗೆ “ಫರೋಹ ಮತ್ತು ಅವನ ಸೇವಕರು ನಮ್ಮನ್ನ ನೋಡಿ ಅಸಹ್ಯಪಡ್ತಾರೆ. ಇದಕ್ಕೆ ನೀವೇ ಕಾರಣ. ನಮ್ಮನ್ನ ಕೊಲ್ಲೋಕೆ ನೀವೇ ಅವರ ಕೈಗೆ ಕತ್ತಿ ಕೊಟ್ಟ ಹಾಗಿದೆ. ನೀವು ಮಾಡಿರೋದನ್ನ ಯೆಹೋವನೇ ನೋಡಿ ನಿಮಗೆ ಶಿಕ್ಷೆ ಕೊಡ್ಲಿ”+ ಅಂದ್ರು. 22 ಆಗ ಯೆಹೋವನಿಗೆ ಮೋಶೆ “ಯೆಹೋವ, ಈ ಜನ್ರಿಗೆ ಯಾಕಿಷ್ಟು ಕಷ್ಟ ಕೊಡ್ತಾ ಇದ್ದೀಯ? ನನ್ನನ್ನ ಯಾಕೆ ಇಲ್ಲಿಗೆ ಕಳಿಸ್ದೆ? 23 ನಾನು ಫರೋಹನ ಹತ್ರ ಹೋಗಿ ನಿನ್ನ ಹೆಸ್ರಲ್ಲಿ+ ಮಾತಾಡಿದ ಸಮಯದಿಂದ ಅವನು ಈ ಜನ್ರಿಗೆ ಇನ್ನೂ ಜಾಸ್ತಿ ಕಷ್ಟ ಕೊಡ್ತಿದ್ದಾನೆ.+ ನಿನ್ನ ಜನ್ರನ್ನ ಬಿಡಿಸೋಕೆ ನೀನು ಇದುವರೆಗೆ ಏನೂ ಮಾಡಿಲ್ಲ”+ ಅಂದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ