ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ವಿಮೋಚನಕಾಂಡ ಮುಖ್ಯಾಂಶಗಳು

      • ಶಿಕ್ಷೆ 2: ಕಪ್ಪೆಗಳು (1-15)

      • ಶಿಕ್ಷೆ 3: ಸೊಳ್ಳೆಗಳು (16-19)

      • ಶಿಕ್ಷೆ 4: ರಕ್ತ ಹೀರೋ ನೊಣಗಳು (20-32)

        • ಗೋಷೆನ್‌ಗೆ ಶಿಕ್ಷೆ ತಟ್ಟಲಿಲ್ಲ (22, 23)

ವಿಮೋಚನಕಾಂಡ 8:1

ಮಾರ್ಜಿನಲ್ ರೆಫರೆನ್ಸ್

  • +ವಿಮೋ 3:12

ವಿಮೋಚನಕಾಂಡ 8:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 78:45

ವಿಮೋಚನಕಾಂಡ 8:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 105:30

ವಿಮೋಚನಕಾಂಡ 8:7

ಮಾರ್ಜಿನಲ್ ರೆಫರೆನ್ಸ್

  • +ವಿಮೋ 7:11, 12, 20, 22; 8:17, 18; 9:11; 2ತಿಮೊ 3:8

ವಿಮೋಚನಕಾಂಡ 8:8

ಮಾರ್ಜಿನಲ್ ರೆಫರೆನ್ಸ್

  • +ವಿಮೋ 10:16-19

ವಿಮೋಚನಕಾಂಡ 8:10

ಮಾರ್ಜಿನಲ್ ರೆಫರೆನ್ಸ್

  • +ವಿಮೋ 9:14; 15:11; ಕೀರ್ತ 83:18; 86:8; ಯೆಶಾ 46:9; ಯೆರೆ 10:6, 7; ರೋಮ 9:17

ವಿಮೋಚನಕಾಂಡ 8:11

ಮಾರ್ಜಿನಲ್ ರೆಫರೆನ್ಸ್

  • +ವಿಮೋ 8:3

ವಿಮೋಚನಕಾಂಡ 8:12

ಮಾರ್ಜಿನಲ್ ರೆಫರೆನ್ಸ್

  • +ವಿಮೋ 8:30, 31; 9:33

ವಿಮೋಚನಕಾಂಡ 8:15

ಮಾರ್ಜಿನಲ್ ರೆಫರೆನ್ಸ್

  • +ವಿಮೋ 4:21; 7:3

ವಿಮೋಚನಕಾಂಡ 8:16

ಪಾದಟಿಪ್ಪಣಿ

  • *

    ಇವು ಈಜಿಪ್ಟಲ್ಲಿ ಸಾಮಾನ್ಯವಾಗಿರೋ ಚಿಕ್ಕ ಕೀಟಗಳು. ಇವು ಸೊಳ್ಳೆಗಳ ತರ ಕಾಣುತ್ತೆ.

ವಿಮೋಚನಕಾಂಡ 8:17

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 105:31

ವಿಮೋಚನಕಾಂಡ 8:18

ಮಾರ್ಜಿನಲ್ ರೆಫರೆನ್ಸ್

  • +ವಿಮೋ 7:11, 12, 20, 22; 8:7; 9:11

ವಿಮೋಚನಕಾಂಡ 8:19

ಪಾದಟಿಪ್ಪಣಿ

  • *

    ಅಕ್ಷ. “ಬೆರಳಿಂದಾನೇ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 31:18; ಲೂಕ 11:20

ವಿಮೋಚನಕಾಂಡ 8:22

ಮಾರ್ಜಿನಲ್ ರೆಫರೆನ್ಸ್

  • +ವಿಮೋ 9:4, 26; 10:23; 12:13
  • +1ಸಮು 17:46; 1ಅರ 20:28; 2ಅರ 19:17, 19

ವಿಮೋಚನಕಾಂಡ 8:24

ಮಾರ್ಜಿನಲ್ ರೆಫರೆನ್ಸ್

  • +ವಿಮೋ 8:3
  • +ಕೀರ್ತ 78:45; 105:31

ವಿಮೋಚನಕಾಂಡ 8:26

ಮಾರ್ಜಿನಲ್ ರೆಫರೆನ್ಸ್

  • +ಆದಿ 46:33, 34; ವಿಮೋ 10:25, 26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2004, ಪು. 25

ವಿಮೋಚನಕಾಂಡ 8:27

ಮಾರ್ಜಿನಲ್ ರೆಫರೆನ್ಸ್

  • +ವಿಮೋ 3:18

ವಿಮೋಚನಕಾಂಡ 8:28

ಮಾರ್ಜಿನಲ್ ರೆಫರೆನ್ಸ್

  • +ವಿಮೋ 8:8; 9:28

ವಿಮೋಚನಕಾಂಡ 8:29

ಪಾದಟಿಪ್ಪಣಿ

  • *

    ಅಥವಾ “ನಮ್ಮ ಜೊತೆ ಆಟ ಆಡಬಾರದು.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 8:15

ವಿಮೋಚನಕಾಂಡ 8:30

ಮಾರ್ಜಿನಲ್ ರೆಫರೆನ್ಸ್

  • +ವಿಮೋ 9:33

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ವಿಮೋ. 8:1ವಿಮೋ 3:12
ವಿಮೋ. 8:2ಕೀರ್ತ 78:45
ವಿಮೋ. 8:3ಕೀರ್ತ 105:30
ವಿಮೋ. 8:7ವಿಮೋ 7:11, 12, 20, 22; 8:17, 18; 9:11; 2ತಿಮೊ 3:8
ವಿಮೋ. 8:8ವಿಮೋ 10:16-19
ವಿಮೋ. 8:10ವಿಮೋ 9:14; 15:11; ಕೀರ್ತ 83:18; 86:8; ಯೆಶಾ 46:9; ಯೆರೆ 10:6, 7; ರೋಮ 9:17
ವಿಮೋ. 8:11ವಿಮೋ 8:3
ವಿಮೋ. 8:12ವಿಮೋ 8:30, 31; 9:33
ವಿಮೋ. 8:15ವಿಮೋ 4:21; 7:3
ವಿಮೋ. 8:17ಕೀರ್ತ 105:31
ವಿಮೋ. 8:18ವಿಮೋ 7:11, 12, 20, 22; 8:7; 9:11
ವಿಮೋ. 8:19ವಿಮೋ 31:18; ಲೂಕ 11:20
ವಿಮೋ. 8:22ವಿಮೋ 9:4, 26; 10:23; 12:13
ವಿಮೋ. 8:221ಸಮು 17:46; 1ಅರ 20:28; 2ಅರ 19:17, 19
ವಿಮೋ. 8:24ವಿಮೋ 8:3
ವಿಮೋ. 8:24ಕೀರ್ತ 78:45; 105:31
ವಿಮೋ. 8:26ಆದಿ 46:33, 34; ವಿಮೋ 10:25, 26
ವಿಮೋ. 8:27ವಿಮೋ 3:18
ವಿಮೋ. 8:28ವಿಮೋ 8:8; 9:28
ವಿಮೋ. 8:29ವಿಮೋ 8:15
ವಿಮೋ. 8:30ವಿಮೋ 9:33
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ವಿಮೋಚನಕಾಂಡ 8:1-32

ವಿಮೋಚನಕಾಂಡ

8 ಆಮೇಲೆ ಯೆಹೋವ ಮೋಶೆಗೆ ಹೀಗಂದನು: “ನಾನು ಹೇಳಿದ್ದನ್ನ ಫರೋಹನ ಹತ್ರ ಹೋಗಿ ಹೇಳು. ‘ಯೆಹೋವ ನಿನಗೆ ಹೇಳೋದು ಏನಂದ್ರೆ “ನನ್ನ ಜನ್ರು ನನ್ನ ಆರಾಧನೆ ಮಾಡಬೇಕು, ಅವರನ್ನ ಕಳಿಸು.+ 2 ಕಳಿಸೋಕೆ ನೀನು ಒಪ್ಪಿಕೊಳ್ಳದೇ ಇದ್ರೆ ನಾನು ನಿನ್ನ ದೇಶದಲ್ಲೆಲ್ಲ ಕಪ್ಪೆಗಳು ಬರೋ ಹಾಗೆ ಮಾಡಿ ಇಡೀ ದೇಶಕ್ಕೆ ಶಿಕ್ಷೆ ಕೊಡ್ತೀನಿ.+ 3 ನೈಲ್‌ ನದಿಯಲ್ಲೆಲ್ಲ ಕಪ್ಪೆಗಳು ತುಂಬ್ಕೊಳ್ಳುತ್ತೆ. ಅವು ನೀರಿಂದ ಮೇಲೆ ಬಂದು ನಿನ್ನ ಮನೆ ಒಳಗೆ, ಮಲಗೋ ಕೋಣೆಗೆ, ಹಾಸಿಗೆ ಮೇಲೆ, ನಿನ್ನ ಸೇವಕರ ಮನೆ ಒಳಗೆ, ನಿನ್ನ ಜನ್ರ ಮೇಲೆ, ನಿನ್ನ ಒಲೆಗಳಲ್ಲಿ, ಹಿಟ್ಟು ನಾದೋ ಪಾತ್ರೆಗಳಲ್ಲಿ ಬರುತ್ತೆ.+ 4 ಕಪ್ಪೆಗಳು ನಿನ್ನ ಮೈಮೇಲೆ, ನಿನ್ನ ಜನ್ರ ಮತ್ತು ನಿನ್ನ ಎಲ್ಲ ಸೇವಕರ ಮೈಮೇಲೆ ಹತ್ತುತ್ತೆ.”’”

5 ಆಮೇಲೆ ಯೆಹೋವ ಮೋಶೆ ಜೊತೆ ಮಾತಾಡಿ “ಆರೋನ ತನ್ನ ಕೋಲನ್ನ ಎಲ್ಲಾ ನದಿ, ನೈಲ್‌ ನದಿಯ ಕಾಲುವೆ, ಕೆರೆ ಮೇಲೆ ಚಾಚಿ ಇಡೀ ಈಜಿಪ್ಟ್‌ ದೇಶದಲ್ಲಿ ಕಪ್ಪೆಗಳು ಬರೋ ಹಾಗೆ ಮಾಡಬೇಕಂತ ಅವನಿಗೆ ಹೇಳು” ಅಂದನು. 6 ಆರೋನ ಈಜಿಪ್ಟಲ್ಲಿ ನೀರಿರೋ ಎಲ್ಲ ಸ್ಥಳಗಳ ಮೇಲೆ ಕೈಚಾಚಿದ. ಆಗ ನೀರಿಂದ ಕಪ್ಪೆಗಳು ಮೇಲೆ ಬಂದು ಈಜಿಪ್ಟ್‌ ದೇಶದಲ್ಲೆಲ್ಲ ತುಂಬ್ತು. 7 ಮಂತ್ರವಾದಿಗಳು ಸಹ ತಮ್ಮ ಮಂತ್ರವಿದ್ಯೆಗಳಿಂದ ಅದೇ ರೀತಿ ಮಾಡಿ ಈಜಿಪ್ಟಲ್ಲಿ ಕಪ್ಪೆಗಳು ಬರೋ ತರ ಮಾಡಿದ್ರು.+ 8 ಆಗ ಫರೋಹ ಮೋಶೆ ಮತ್ತು ಆರೋನನನ್ನ ಕರೆದು “ಯೆಹೋವನಿಗೆ ಬಲಿ ಅರ್ಪಿಸೋಕೆ ನಿಮ್ಮ ಜನ್ರನ್ನ ಕಳಿಸ್ತೀನಿ. ಹಾಗಾಗಿ ನನ್ನ ಮತ್ತು ನನ್ನ ಜನ್ರಿಂದ ಕಪ್ಪೆಗಳನ್ನ ತೆಗಿಯೋಕೆ ಯೆಹೋವನ ಹತ್ರ ಬೇಡ್ಕೊಳಿ”+ ಅಂದ. 9 ಅದಕ್ಕೆ ಮೋಶೆ “ಸರಿ, ಕಪ್ಪೆಗಳು ನಿನ್ನನ್ನ, ನಿನ್ನ ಸೇವಕರನ್ನ, ನಿನ್ನ ಜನ್ರನ್ನ, ನಿನ್ನ ಮನೆಗಳನ್ನ ಬಿಟ್ಟುಹೋಗೋಕೆ ನಾನು ದೇವರ ಹತ್ರ ಬೇಡ್ತೀನಿ. ನೈಲ್‌ ನದಿಯಲ್ಲಿ ಮಾತ್ರ ಕಪ್ಪೆಗಳು ಇರುತ್ತೆ. ಆದ್ರೆ ಯಾವಾಗ ಬೇಡ್ಕೊಬೇಕಂತ ದಯವಿಟ್ಟು ನೀನೇ ಹೇಳು” ಅಂದ. 10 ಅದಕ್ಕೆ ಫರೋಹ “ನಾಳೆ ಬೇಡ್ಕೊ” ಅಂದ. ಆಗ ಮೋಶೆ “ನೀನು ಹೇಳಿದ ಹಾಗೆ ಆಗುತ್ತೆ. ಇದ್ರಿಂದ ನಮ್ಮ ದೇವರಾದ ಯೆಹೋವನ ತರ ಬೇರೆ ಯಾವ ದೇವರೂ ಇಲ್ಲ ಅಂತ ನಿಂಗೆ ಗೊತ್ತಾಗುತ್ತೆ.+ 11 ಕಪ್ಪೆಗಳು ನಿನ್ನನ್ನ, ನಿನ್ನ ಮನೆಗಳನ್ನ, ನಿನ್ನ ಸೇವಕರನ್ನ, ನಿನ್ನ ಜನ್ರನ್ನ ಬಿಟ್ಟುಹೋಗುತ್ತೆ. ನೈಲ್‌ ನದಿಯಲ್ಲಿ ಮಾತ್ರ ಇರುತ್ತೆ”+ ಅಂದ.

12 ಮೋಶೆ ಆರೋನ ಫರೋಹನ ಹತ್ರದಿಂದ ಹೋದ್ರು. ಫರೋಹನ ಮೇಲೆ ಬಂದ ಕಪ್ಪೆಗಳನ್ನ ತೆಗಿಯೋಕೆ ಮೋಶೆ ಯೆಹೋವನನ್ನ ಬೇಡ್ಕೊಂಡ.+ 13 ಮೋಶೆ ಕೇಳಿದ ಹಾಗೇ ಯೆಹೋವ ಮಾಡಿದನು. ಹಾಗಾಗಿ ಮನೆಗಳಲ್ಲಿ, ಅಂಗಳಗಳಲ್ಲಿ, ಬಯಲುಗಳಲ್ಲಿದ್ದ ಕಪ್ಪೆಗಳು ಸತ್ತೋಯ್ತು. 14 ಜನ ಅವುಗಳನ್ನ ಅಲ್ಲಲ್ಲಿ ಗುಡ್ಡೆಹಾಕಿದ್ರು. ಎಲ್ಲಾ ಕಡೆ ಆ ಕಪ್ಪೆಗಳ ರಾಶಿಗಳೇ ತುಂಬಿದ್ರಿಂದ ದೇಶದಲ್ಲೆಲ್ಲ ಕೆಟ್ಟ ವಾಸನೆ ಹೆಚ್ಚಾಯ್ತು. 15 ಫರೋಹ ಕಪ್ಪೆಗಳ ಕಾಟ ನಿಂತದ್ದನ್ನ ನೋಡಿ ಹೃದಯ ಕಲ್ಲು ಮಾಡ್ಕೊಂಡ.+ ಯೆಹೋವ ಈ ಮುಂಚೆ ಹೇಳಿದ್ದ ಹಾಗೇ ಅವನು ಮೋಶೆ ಆರೋನರ ಮಾತು ಕೇಳಲಿಲ್ಲ.

16 ಆಗ ಯೆಹೋವ ಮೋಶೆ ಜೊತೆ ಮಾತಾಡಿ “ಕೋಲು ಚಾಚಿ ನೆಲದ ಧೂಳನ್ನ ಹೊಡಿಬೇಕಂತ ಆರೋನನಿಗೆ ಹೇಳು. ಆಗ ಆ ಧೂಳು ಸೊಳ್ಳೆಗಳಾಗಿ* ಈಜಿಪ್ಟಲ್ಲೆಲ್ಲ ತುಂಬಿಕೊಳ್ಳುತ್ತೆ” ಅಂದನು. 17 ಅವರು ಹಾಗೇ ಮಾಡಿದ್ರು. ಆರೋನ ಕೋಲು ತಗೊಂಡು ಕೈಚಾಚಿ ನೆಲದ ಮೇಲಿದ್ದ ಧೂಳನ್ನ ಹೊಡೆದ. ಆಗ ಈಜಿಪ್ಟ್‌ ದೇಶದಲ್ಲಿದ್ದ ಧೂಳೆಲ್ಲ ಸೊಳ್ಳೆಗಳಾಗಿ ಮನುಷ್ಯರನ್ನ, ಪ್ರಾಣಿಗಳನ್ನ ಕಚ್ಚಿತು.+ 18 ಮಂತ್ರವಾದಿಗಳು ತಮ್ಮ ರಹಸ್ಯ ವಿದ್ಯೆಗಳಿಂದ ಅದೇ ರೀತಿ ಮಾಡಿ ಸೊಳ್ಳೆಗಳನ್ನ ತರೋಕೆ ಪ್ರಯತ್ನಿಸಿದ್ರು.+ ಆದ್ರೆ ಅವರಿಂದ ಆಗಲಿಲ್ಲ. ಸೊಳ್ಳೆಗಳು ಮನುಷ್ಯರನ್ನ, ಪ್ರಾಣಿಗಳನ್ನ ಕಚ್ತಾ ಇತ್ತು. 19 ಅದಕ್ಕೆ ಮಂತ್ರವಾದಿಗಳು ಫರೋಹನಿಗೆ “ಇದು ದೇವರ ಶಕ್ತಿಯಿಂದಾನೇ* ಆಗಿರೋ ಕೆಲಸ!”+ ಅಂದ್ರು. ಆದ್ರೆ ಫರೋಹನ ಹೃದಯ ಕಲ್ಲಾಗೇ ಇದ್ದಿದ್ರಿಂದ ಯೆಹೋವ ಹೇಳಿದ ಹಾಗೇ ಅವನು ಅವರ ಮಾತು ಕೇಳಲಿಲ್ಲ.

20 ಆಮೇಲೆ ಯೆಹೋವ ಮೋಶೆಗೆ ಹೀಗಂದನು: “ನೀನು ಬೆಳಿಗ್ಗೆ ಬೇಗ ಎದ್ದು ಫರೋಹ ನದಿ ಹತ್ರ ಬರೋ ಮುಂಚೆ ಅಲ್ಲಿಗೆ ಹೋಗು. ಅವನು ಬಂದಾಗ ಅವನಿಗೆ ‘ಯೆಹೋವ ಹೀಗೆ ಹೇಳ್ತಾನೆ: “ನನ್ನ ಜನ್ರು ನನ್ನ ಆರಾಧನೆ ಮಾಡಬೇಕು, ಅವರನ್ನ ಬಿಡು. 21 ಬಿಡದಿದ್ರೆ ನಾನು ನಿನ್ನ ಮೇಲೆ, ನಿನ್ನ ಸೇವಕರ ಮೇಲೆ, ನಿನ್ನ ಜನ್ರ ಮೇಲೆ, ನಿನ್ನ ಮನೆ ಒಳಗೆ ರಕ್ತ ಹೀರೋ ನೊಣಗಳನ್ನ ಕಳಿಸ್ತೀನಿ. ಈಜಿಪ್ಟ್‌ ಜನ್ರ ಮನೆಲೆಲ್ಲ ಆ ನೊಣ ತುಂಬ್ಕೊಳ್ಳುತ್ತೆ, ಅವರಿರೋ ನೆಲವನ್ನ ಸಹ ಮುಚ್ಚಿಬಿಡುತ್ತೆ. 22 ಆದ್ರೆ ನನ್ನ ಜನ ವಾಸಿಸೋ ಗೋಷೆನ್‌ ಪ್ರದೇಶದಲ್ಲಿ ಮಾತ್ರ ರಕ್ತಹೀರೋ ನೊಣ ಇರಲ್ಲ.+ ಆ ದಿನ ನನ್ನ ಜನ್ರನ್ನ ಖಂಡಿತ ರಕ್ಷಿಸ್ತೀನಿ. ಇದ್ರಿಂದ ನಾನೇ ಯೆಹೋವ, ನನಗೆ ಇಡೀ ಭೂಮಿ ಮೇಲೆ ಅಧಿಕಾರ ಇದೆ ಅಂತ ನಿಂಗೆ ಗೊತ್ತಾಗುತ್ತೆ.+ 23 ನನ್ನ ಜನ್ರ ಮತ್ತು ನಿನ್ನ ಜನ್ರ ಮಧ್ಯ ವ್ಯತ್ಯಾಸ ತೋರಿಸ್ತೀನಿ. ನಾಳೆ ಈ ಅದ್ಭುತ ನಡಿಯುತ್ತೆ”’ ಅನ್ನಬೇಕು.”

24 ಯೆಹೋವ ತಾನು ಹೇಳಿದ ಹಾಗೆ ರಕ್ತಹೀರೋ ನೊಣಗಳು ಬರೋ ಹಾಗೆ ಮಾಡಿದನು. ಅವು ದಂಡುದಂಡಾಗಿ ಬಂದು ಫರೋಹನ ಮನೆ, ಸೇವಕರ ಮನೆ, ಇಡೀ ಈಜಿಪ್ಟ್‌ ದೇಶ ತುಂಬಿಕೊಳ್ತು.+ ಆ ನೊಣಗಳು ದೇಶನೇ ಹಾಳು ಮಾಡಿಬಿಡ್ತು.+ 25 ಕೊನೆಗೆ ಫರೋಹ ಮೋಶೆ ಮತ್ತು ಆರೋನನನ್ನ ಕರೆದು “ಹೋಗಿ, ನಿಮ್ಮ ದೇವರಿಗೆ ಬಲಿ ಅರ್ಪಿಸಿ. ಆದ್ರೆ ಅದನ್ನ ಈ ದೇಶದಲ್ಲೇ ಅರ್ಪಿಸಬೇಕು” ಅಂದ. 26 ಆಗ ಮೋಶೆ “ಹಾಗೆ ಮಾಡಕ್ಕಾಗಲ್ಲ. ಯಾಕಂದ್ರೆ ನಾವು ನಮ್ಮ ದೇವರಾದ ಯೆಹೋವನಿಗೆ ಏನನ್ನ ಬಲಿಯಾಗಿ ಅರ್ಪಿಸ್ತೀವೋ ಅದನ್ನ ಈಜಿಪ್ಟ್‌ ಜನ ನೋಡಿದ್ರೆ ನಮ್ಮ ಮೇಲೆ ಸಿಟ್ಟು ಮಾಡ್ಕೊಳ್ತಾರೆ.+ ಅವರ ಕಣ್ಮುಂದೆನೇ ಅಂಥ ಬಲಿ ಅರ್ಪಿಸಿದ್ರೆ ನಮ್ಮನ್ನ ಖಂಡಿತ ಕಲ್ಲೆಸೆದು ಕೊಲ್ತಾರೆ. 27 ಹಾಗಾಗಿ ನಮ್ಮ ದೇವರಾದ ಯೆಹೋವ ಹೇಳಿದ ಹಾಗೇ ಮೂರು ದಿನ ಪ್ರಯಾಣ ಮಾಡಿ ಕಾಡಿಗೆ ಹೋಗಿ ಅಲ್ಲಿ ಆತನಿಗೆ ಬಲಿ ಅರ್ಪಿಸ್ತೀವಿ”+ ಅಂದ.

28 ಅದಕ್ಕೆ ಫರೋಹ “ಸರಿ, ಕಾಡಿಗೆ ಹೋಗಿ ನಿಮ್ಮ ದೇವರಾದ ಯೆಹೋವನಿಗೆ ಬಲಿ ಅರ್ಪಿಸಿ. ಆದ್ರೆ ತುಂಬ ದೂರ ಹೋಗಬಾರದು. ನನಗೋಸ್ಕರನೂ ನಿಮ್ಮ ದೇವರ ಹತ್ರ ಬೇಡ್ಕೊಳಿ”+ ಅಂದ. 29 ಆಗ ಮೋಶೆ “ನಾನೀಗ ಹೋಗಿ ಯೆಹೋವನ ಹತ್ರ ಬೇಡ್ತೀನಿ. ರಕ್ತಹೀರೋ ನೊಣಗಳು ನಾಳೆ ಫರೋಹನಾದ ನಿನ್ನನ್ನ, ನಿನ್ನ ಸೇವಕರನ್ನ, ನಿನ್ನ ಜನ್ರನ್ನ ಬಿಟ್ಟುಹೋಗುತ್ತೆ. ಆದ್ರೆ ನೀನು ಮತ್ತೆ ನಮಗೆ ಮೋಸ ಮಾಡಬಾರದು.* ಯೆಹೋವನಿಗೆ ಬಲಿ ಅರ್ಪಿಸೋಕೆ ಇಬ್ರಿಯರನ್ನ ಕಳಿಸಲ್ಲ ಅಂತ ಹೇಳಬಾರದು”+ ಅಂದ. 30 ಆಮೇಲೆ ಮೋಶೆ ಹೋಗಿ ಯೆಹೋವನ ಹತ್ರ ಬೇಡಿದ.+ 31 ಮೋಶೆ ಕೇಳಿದ ಹಾಗೆ ಯೆಹೋವ ಮಾಡಿದನು. ರಕ್ತಹೀರೋ ನೊಣಗಳು ಫರೋಹನನ್ನ, ಅವನ ಸೇವಕರನ್ನ, ಅವನ ಜನ್ರನ್ನ ಬಿಟ್ಟುಹೋಯ್ತು. ಒಂದೇ ಒಂದು ನೊಣ ಕೂಡ ದೇಶದಲ್ಲಿ ಉಳಿಲಿಲ್ಲ. 32 ಆದ್ರೆ ಫರೋಹ ಮತ್ತೆ ಹೃದಯ ಕಲ್ಲು ಮಾಡ್ಕೊಂಡು ಇಸ್ರಾಯೇಲ್ಯರನ್ನ ಬಿಡಲಿಲ್ಲ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ