ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಪೂರ್ವಕಾಲವೃತ್ತಾಂತ 17
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

2 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ಯೆಹೋಷಾಫಾಟ ಯೆಹೂದದ ರಾಜನಾದ (1-6)

      • ನಿಯಮ ಪುಸ್ತಕ ಕಲಿಸೋ ಅಭಿಯಾನ (7-9)

      • ಯೆಹೋಷಾಫಾಟನ ಸೈನ್ಯದ ಶಕ್ತಿ (10-19)

2 ಪೂರ್ವಕಾಲವೃತ್ತಾಂತ 17:1

ಮಾರ್ಜಿನಲ್ ರೆಫರೆನ್ಸ್

  • +1ಅರ 15:24; 22:41

2 ಪೂರ್ವಕಾಲವೃತ್ತಾಂತ 17:2

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 15:8

2 ಪೂರ್ವಕಾಲವೃತ್ತಾಂತ 17:3

ಮಾರ್ಜಿನಲ್ ರೆಫರೆನ್ಸ್

  • +2ಸಮು 8:15

2 ಪೂರ್ವಕಾಲವೃತ್ತಾಂತ 17:4

ಪಾದಟಿಪ್ಪಣಿ

  • *

    ಅಕ್ಷ. “ನಡೆದ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:29; 2ಪೂರ್ವ 26:1, 5
  • +1ಅರ 12:28-30; 13:33

2 ಪೂರ್ವಕಾಲವೃತ್ತಾಂತ 17:5

ಮಾರ್ಜಿನಲ್ ರೆಫರೆನ್ಸ್

  • +1ಅರ 9:4, 5; ಕೀರ್ತ 132:12
  • +2ಪೂರ್ವ 18:1

2 ಪೂರ್ವಕಾಲವೃತ್ತಾಂತ 17:6

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +1ಅರ 22:42, 43
  • +ಧರ್ಮೋ 7:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/2009, ಪು. 12

2 ಪೂರ್ವಕಾಲವೃತ್ತಾಂತ 17:8

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 33:8, 10; ಮಲಾ 2:7

2 ಪೂರ್ವಕಾಲವೃತ್ತಾಂತ 17:9

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 31:11; ಯೆಹೋ 1:7, 8; ನೆಹೆ 8:7

2 ಪೂರ್ವಕಾಲವೃತ್ತಾಂತ 17:12

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 18:1
  • +2ಪೂರ್ವ 14:2, 6
  • +1ಅರ 9:19; 2ಪೂರ್ವ 8:3, 4

2 ಪೂರ್ವಕಾಲವೃತ್ತಾಂತ 17:14

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 13:3; 26:11-13

2 ಪೂರ್ವಕಾಲವೃತ್ತಾಂತ 17:17

ಮಾರ್ಜಿನಲ್ ರೆಫರೆನ್ಸ್

  • +ಆದಿ 49:27
  • +2ಪೂರ್ವ 14:8

2 ಪೂರ್ವಕಾಲವೃತ್ತಾಂತ 17:19

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 11:5, 23

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

2 ಪೂರ್ವ. 17:11ಅರ 15:24; 22:41
2 ಪೂರ್ವ. 17:22ಪೂರ್ವ 15:8
2 ಪೂರ್ವ. 17:32ಸಮು 8:15
2 ಪೂರ್ವ. 17:4ಧರ್ಮೋ 4:29; 2ಪೂರ್ವ 26:1, 5
2 ಪೂರ್ವ. 17:41ಅರ 12:28-30; 13:33
2 ಪೂರ್ವ. 17:51ಅರ 9:4, 5; ಕೀರ್ತ 132:12
2 ಪೂರ್ವ. 17:52ಪೂರ್ವ 18:1
2 ಪೂರ್ವ. 17:61ಅರ 22:42, 43
2 ಪೂರ್ವ. 17:6ಧರ್ಮೋ 7:5
2 ಪೂರ್ವ. 17:8ಧರ್ಮೋ 33:8, 10; ಮಲಾ 2:7
2 ಪೂರ್ವ. 17:9ಧರ್ಮೋ 31:11; ಯೆಹೋ 1:7, 8; ನೆಹೆ 8:7
2 ಪೂರ್ವ. 17:122ಪೂರ್ವ 18:1
2 ಪೂರ್ವ. 17:122ಪೂರ್ವ 14:2, 6
2 ಪೂರ್ವ. 17:121ಅರ 9:19; 2ಪೂರ್ವ 8:3, 4
2 ಪೂರ್ವ. 17:142ಪೂರ್ವ 13:3; 26:11-13
2 ಪೂರ್ವ. 17:17ಆದಿ 49:27
2 ಪೂರ್ವ. 17:172ಪೂರ್ವ 14:8
2 ಪೂರ್ವ. 17:192ಪೂರ್ವ 11:5, 23
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
2 ಪೂರ್ವಕಾಲವೃತ್ತಾಂತ 17:1-19

ಎರಡನೇ ಪೂರ್ವಕಾಲವೃತ್ತಾಂತ

17 ಆಸನ ಸ್ಥಾನದಲ್ಲಿ ಅವನ ಮಗ ಯೆಹೋಷಾಫಾಟ+ ರಾಜನಾದ. ಇಸ್ರಾಯೇಲ್ಯರ ಮೇಲಿನ ಅವನ ಸ್ಥಾನವನ್ನ ಅವನು ಬಲಪಡಿಸ್ಕೊಂಡ. 2 ಅವನು ಭದ್ರ ಕೋಟೆಗಳಿದ್ದ ಯೆಹೂದದ ಎಲ್ಲ ಪಟ್ಟಣಗಳಲ್ಲಿ ಸೈನಿಕರ ಗುಂಪುಗಳನ್ನ ಇಟ್ಟ. ಅವನ ತಂದೆ ಆಸ ವಶಮಾಡ್ಕೊಂಡಿದ್ದ ಯೆಹೂದ ದೇಶವನ್ನ ಮತ್ತು ಎಫ್ರಾಯೀಮಿನ ಪಟ್ಟಣಗಳನ್ನ+ ಕಾಯೋಕೆ ಜನ್ರನ್ನ ಇಟ್ಟ. 3 ಯೆಹೋಷಾಫಾಟ ಬಾಳ್‌ ದೇವರುಗಳನ್ನ ಆರಾಧಿಸದೆ ತನ್ನ ಪೂರ್ವಜನಾದ ದಾವೀದನ ದಾರಿಯಲ್ಲೇ ನಡೆದ.+ ಹಾಗಾಗಿ ಯೆಹೋವ ಅವನ ಜೊತೆ ಇದ್ದನು. 4 ಯೆಹೋಷಾಫಾಟ ತನ್ನ ತಂದೆಯ ದೇವರನ್ನ ಆರಾಧಿಸಿದ.+ ಇಸ್ರಾಯೇಲಿನ ಪದ್ಧತಿಗಳನ್ನ ಆಚರಿಸದೆ ದೇವರ ಆಜ್ಞೆಗಳನ್ನ ಪಾಲಿಸಿದ.*+ 5 ಯೆಹೋವ ಅವನ ಆಳ್ವಿಕೆಯನ್ನ ಬಲಪಡಿಸಿದನು.+ ಯೆಹೋಷಾಫಾಟನಿಗೆ ಯೆಹೂದದ ಜನ್ರೆಲ್ಲ ಉಡುಗೊರೆ ಕೊಡ್ತಾ ಇದ್ರು. ಅವನು ತುಂಬ ಐಶ್ವರ್ಯ ಮತ್ತು ಘನತೆಯನ್ನ ಗಳಿಸಿದ.+ 6 ಯೆಹೋವನ ದಾರಿಯಲ್ಲಿ ನಡೆಯೋಕೆ ಅವನ ಹೃದಯ ಹಿಂಜರಿಯಲಿಲ್ಲ. ಅಷ್ಟೇ ಅಲ್ಲ ಅವನು ಯೆಹೂದದಲ್ಲಿದ್ದ ದೇವಸ್ಥಾನಗಳನ್ನ+ ಮತ್ತು ಪೂಜಾಕಂಬಗಳನ್ನ*+ ತೆಗೆದುಹಾಕಿದ.

7 ತನ್ನ ಆಳ್ವಿಕೆಯ ಮೂರನೇ ವರ್ಷದಲ್ಲಿ ಯೆಹೋಷಾಫಾಟ ತನ್ನ ಅಧಿಕಾರಿಗಳಾದ ಬೆನ್‌-ಹೈಲ್‌, ಓಬದ್ಯ, ಜೆಕರ್ಯ, ನೆತನೇಲ್‌ ಮತ್ತು ಮೀಕಾಯನನ್ನ ಕರೆದು ಯೆಹೂದ ಪಟ್ಟಣದ ಜನ್ರಿಗೆ ಕಲಿಸೋಕೆ ಹೇಳಿ ಕಳಿಸಿದ. 8 ಅವ್ರ ಜೊತೆ ಲೇವಿಯರು ಇದ್ರು. ಅವರು ಯಾರಂದ್ರೆ: ಶೆಮಾಯ, ನೆತನ್ಯ, ಜೆಬದ್ಯ, ಅಸಾಹೇಲ್‌, ಶೆಮೀರಾಮೋತ್‌, ಯೆಹೋನಾತಾನ್‌, ಅದೋನೀಯ, ತೋಬೀಯ ಮತ್ತು ಟೋಬದೋನೀಯ. ಇವ್ರ ಜೊತೆ ಪುರೋಹಿತರಾದ ಎಲೀಷಾಮ ಮತ್ತು ಯೆಹೋರಾಮ ಇದ್ರು.+ 9 ಅವರು ಯೆಹೋವನ ನಿಯಮ ಪುಸ್ತಕವನ್ನ ತಗೊಂಡು ಹೋಗಿ ಯೆಹೂದದಲ್ಲಿ ಕಲಿಸೋಕೆ ಶುರುಮಾಡಿದ್ರು.+ ಅವರು ಯೆಹೂದದ ಪಟ್ಟಣಗಳಲೆಲ್ಲ ಸುತ್ತಾಡಿ ಜನ್ರಿಗೆ ಕಲಿಸಿದ್ರು.

10 ಯೆಹೂದದ ಸುತ್ತಮುತ್ತ ಇದ್ದ ಎಲ್ಲ ರಾಜ್ಯಗಳಿಗೆ ಯೆಹೋವನ ಭಯ ಇತ್ತು. ಹಾಗಾಗಿ ಅವರು ಯೆಹೋಷಾಫಾಟನ ವಿರುದ್ಧ ಯುದ್ಧಕ್ಕೆ ಬರಲಿಲ್ಲ. 11 ಫಿಲಿಷ್ಟಿಯರು ಕಪ್ಪವಾಗಿ ಉಡುಗೊರೆಗಳನ್ನ ಮತ್ತು ಹಣವನ್ನ ಯೆಹೋಷಾಫಾಟನಿಗೆ ತಂದು ಕೊಡ್ತಿದ್ರು. ಅರಬ್‌ ದೇಶದವರು 7,700 ಟಗರು ಮತ್ತು 7,700 ಗಂಡು ಆಡುಗಳನ್ನ ತಂದು ಕೊಟ್ರು.

12 ಯೆಹೋಷಾಫಾಟ ಪ್ರಸಿದ್ಧನಾಗ್ತಾ ಹೋದ.+ ಅವನು ಯೆಹೂದದಲ್ಲಿ ಭದ್ರ ಕೋಟೆಗಳಿದ್ದ ಪ್ರದೇಶಗಳನ್ನ,+ ಕಣಜದ ಪಟ್ಟಣಗಳನ್ನ+ ಕಟ್ತಾ ಹೋದ. 13 ಅವನು ಯೆಹೂದದ ಪಟ್ಟಣಗಳಲ್ಲಿ ದೊಡ್ಡದೊಡ್ಡ ಕೆಲಸಗಳನ್ನ ಮಾಡಿಸಿದ. ಯೆರೂಸಲೇಮಲ್ಲಿ ಅವನಿಗೆ ವೀರ ಸೈನಿಕರು ಇದ್ರು. 14 ಇವರನ್ನ ಅವರವರ ಮನೆತನದ ಪ್ರಕಾರ ಹೀಗೆ ವಿಂಗಡಿಸಿದ್ರು: ಯೆಹೂದ ಕುಲದ ಸಾವಿರ ಜನ್ರ ಮೇಲೆ ಪ್ರಧಾನನಾಗಿದ್ದ ಅಧಿಪತಿ ಅದ್ನ ಮತ್ತು ಅವನ ಜೊತೆ 3,00,000 ವೀರ ಸೈನಿಕರು.+ 15 ಅವನ ಕೈಕೆಳಗಿದ್ದ ಅಧಿಪತಿ ಯೆಹೋಹಾನಾನ್‌ ಮತ್ತು ಅವನ ಜೊತೆ 2,80,000 ಜನ. 16 ಅದ್ನನ ಕೈಕೆಳಗೆ ಜಿಕ್ರೀಯ ಮಗ ಅಮಸ್ಯನೂ ಇದ್ದ. ಇವನು ಯೆಹೋವನ ಸೇವೆ ಮಾಡೋಕೆ ಸ್ವಇಷ್ಟದಿಂದ ಮುಂದೆ ಬಂದಿದ್ದ. ಅವನ ಜೊತೆ 2,00,000 ವೀರ ಸೈನಿಕರು ಇದ್ರು. 17 ಬೆನ್ಯಾಮೀನ್‌+ ಕುಲದಿಂದ ಎಲ್ಯಾದ ಅನ್ನೋ ವೀರ ಸೈನಿಕನಿದ್ದ. ಅವನ ಜೊತೆ ಬಿಲ್ಲು ಮತ್ತು ಗುರಾಣಿಗಳನ್ನ ಹಿಡ್ಕೊಂಡು ಬಂದಿದ್ದ 2,00,000 ವೀರ ಸೈನಿಕರು ಇದ್ರು.+ 18 ಎಲ್ಯಾದನ ಕೈಕೆಳಗೆ ಯೆಹೋದಾಬಾದ್‌ ಮತ್ತು ಅವನ ಜೊತೆ 1,80,000 ಸೈನಿಕರಿದ್ರು. 19 ಭದ್ರ ಕೋಟೆಗಳಿದ್ದ ಯೆಹೂದದ ಎಲ್ಲ ಪಟ್ಟಣಗಳಲ್ಲಿ ರಾಜ ನೇಮಿಸಿದ್ದ ಸೈನಿಕರ ಜೊತೆ ಈ ಸೈನಿಕರೂ ರಾಜನಿಗೆ ಸೇವೆಮಾಡ್ತಿದ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ