ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 29
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆರೆಮೀಯ ಮುಖ್ಯಾಂಶಗಳು

      • ಬಾಬೆಲಿನ ಜೈಲಲ್ಲಿ ಇದ್ದವ್ರಿಗೆ ಯೆರೆಮೀಯನ ಪತ್ರ (1-23)

        • 70 ವರ್ಷಗಳ ನಂತ್ರ ಇಸ್ರಾಯೇಲ್ಯರು ಹಿಂದೆ ಬರ್ತಾರೆ (10)

      • ಶೆಮಾಯನಿಗೆ ಸುದ್ದಿ (24-32)

ಯೆರೆಮೀಯ 29:2

ಪಾದಟಿಪ್ಪಣಿ

  • *

    ಬಹುಶಃ, “ಭದ್ರಕೋಟೆಗಳನ್ನ ಕಟ್ಟೋರು.”

ಮಾರ್ಜಿನಲ್ ರೆಫರೆನ್ಸ್

  • +2ಅರ 24:8; ಯೆರೆ 22:24
  • +ಯೆರೆ 22:26
  • +2ಅರ 24:15, 16; ಯೆರೆ 24:1

ಯೆರೆಮೀಯ 29:3

ಮಾರ್ಜಿನಲ್ ರೆಫರೆನ್ಸ್

  • +2ಅರ 24:18
  • +2ಅರ 22:8; ಯೆರೆ 26:24; 39:13, 14; ಯೆಹೆ 8:11

ಯೆರೆಮೀಯ 29:7

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 2:1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1996, ಪು. 11

ಯೆರೆಮೀಯ 29:8

ಮಾರ್ಜಿನಲ್ ರೆಫರೆನ್ಸ್

  • +ಯೆರೆ 14:14; 27:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1996, ಪು. 5-6

ಯೆರೆಮೀಯ 29:9

ಮಾರ್ಜಿನಲ್ ರೆಫರೆನ್ಸ್

  • +ಯೆರೆ 23:21; 28:15

ಯೆರೆಮೀಯ 29:10

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 36:20, 21; ಎಜ್ರ 1:1-3; ದಾನಿ 9:2; ಜೆಕ 1:12
  • +ಧರ್ಮೋ 30:3; ಎಜ್ರ 2:1; ಯೆರೆ 24:6

ಯೆರೆಮೀಯ 29:11

ಮಾರ್ಜಿನಲ್ ರೆಫರೆನ್ಸ್

  • +ಚೆಫ 3:15
  • +ಯೆರೆ 31:17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 2

    ಎಚ್ಚರ!,

    ನಂ. 3 2021 ಪು. 14

ಯೆರೆಮೀಯ 29:12

ಮಾರ್ಜಿನಲ್ ರೆಫರೆನ್ಸ್

  • +ದಾನಿ 9:3

ಯೆರೆಮೀಯ 29:13

ಪಾದಟಿಪ್ಪಣಿ

  • *

    ಅಕ್ಷ. “‘ನೀವು ನನ್ನನ್ನ ಹುಡುಕ್ತೀರ, ಪೂರ್ಣ ಹೃದಯದಿಂದ ನನ್ನನ್ನ ಹುಡುಕ್ತೀರ. ಹಾಗಾಗಿ ನಾನು ನಿಮಗೆ ಸಿಗ್ತೀನಿ.”

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:40
  • +ಧರ್ಮೋ 4:29; 30:1-4; 1ಅರ 8:47, 48; ಯೆರೆ 24:7

ಯೆರೆಮೀಯ 29:14

ಪಾದಟಿಪ್ಪಣಿ

  • *

    ಅಕ್ಷ. “ನಾನು ನಿಮಗೆ ಸಿಗೋ ತರ ಮಾಡ್ತೀನಿ.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 55:6
  • +ಯೆಶಾ 49:25; ಯೆರೆ 30:3; ಯೆಹೆ 39:28
  • +ಕೀರ್ತ 126:1; ಹೋಶೇ 6:11; ಆಮೋ 9:14; ಚೆಫ 3:20

ಯೆರೆಮೀಯ 29:16

ಮಾರ್ಜಿನಲ್ ರೆಫರೆನ್ಸ್

  • +ಯೆರೆ 28:1

ಯೆರೆಮೀಯ 29:17

ಪಾದಟಿಪ್ಪಣಿ

  • *

    ಅಥವಾ “ಕಾಯಿಲೆ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 24:10
  • +ಯೆರೆ 24:2, 8

ಯೆರೆಮೀಯ 29:18

ಮಾರ್ಜಿನಲ್ ರೆಫರೆನ್ಸ್

  • +ಯಾಜ 26:33
  • +ಧರ್ಮೋ 28:25; ಯೆರೆ 34:17
  • +1ಅರ 9:8; 2ಪೂರ್ವ 29:8; ಯೆರೆ 25:9; ಪ್ರಲಾ 2:15
  • +ಯೆರೆ 24:9

ಯೆರೆಮೀಯ 29:19

ಪಾದಟಿಪ್ಪಣಿ

  • *

    ಅಕ್ಷ. “ಬೆಳಿಗ್ಗೆ ಬೇಗ ಎದ್ದು.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 7:13
  • +ಯೆರೆ 6:19

ಯೆರೆಮೀಯ 29:21

ಪಾದಟಿಪ್ಪಣಿ

  • *

    ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.

ಮಾರ್ಜಿನಲ್ ರೆಫರೆನ್ಸ್

  • +ಯೆರೆ 14:14; 29:8; ಪ್ರಲಾ 2:14

ಯೆರೆಮೀಯ 29:23

ಮಾರ್ಜಿನಲ್ ರೆಫರೆನ್ಸ್

  • +ಯೆರೆ 7:9, 10; 27:15
  • +ಯೆರೆ 23:14
  • +ಯೆರೆ 16:17; 23:24

ಯೆರೆಮೀಯ 29:24

ಮಾರ್ಜಿನಲ್ ರೆಫರೆನ್ಸ್

  • +ಯೆರೆ 29:31, 32

ಯೆರೆಮೀಯ 29:25

ಮಾರ್ಜಿನಲ್ ರೆಫರೆನ್ಸ್

  • +2ಅರ 25:18, 21; ಯೆರೆ 21:1, 2; 37:3; 52:24, 27

ಯೆರೆಮೀಯ 29:26

ಪಾದಟಿಪ್ಪಣಿ

  • *

    ಹೀಬ್ರು ಭಾಷೆಯಲ್ಲಿ ಇಲ್ಲಿ ಎರಡು ಪದ ಬಳಸಿದ್ದಾರೆ. ಒಂದು ಪದದ ಅರ್ಥ ‘ಕಾಲಿಗೆ ಹಾಕೋ ಕೋಳ,’ ಇನ್ನೊಂದು ಪದದ ಅರ್ಥ ‘ಕುತ್ತಿಗೆಗೆ ಕೈಗಳಿಗೆ ಹಾಕೋ ಕೋಳ’ ಇರಬಹುದು.

ಮಾರ್ಜಿನಲ್ ರೆಫರೆನ್ಸ್

  • +ಯೆರೆ 20:2

ಯೆರೆಮೀಯ 29:27

ಮಾರ್ಜಿನಲ್ ರೆಫರೆನ್ಸ್

  • +ಯೆರೆ 1:1
  • +ಯೆರೆ 43:2

ಯೆರೆಮೀಯ 29:28

ಮಾರ್ಜಿನಲ್ ರೆಫರೆನ್ಸ್

  • +ಯೆರೆ 29:5

ಯೆರೆಮೀಯ 29:29

ಮಾರ್ಜಿನಲ್ ರೆಫರೆನ್ಸ್

  • +2ಅರ 25:18, 21

ಯೆರೆಮೀಯ 29:31

ಮಾರ್ಜಿನಲ್ ರೆಫರೆನ್ಸ್

  • +ಯೆರೆ 14:14; 28:15, 16; ಯೆಹೆ 13:8, 9

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆರೆ. 29:22ಅರ 24:8; ಯೆರೆ 22:24
ಯೆರೆ. 29:2ಯೆರೆ 22:26
ಯೆರೆ. 29:22ಅರ 24:15, 16; ಯೆರೆ 24:1
ಯೆರೆ. 29:32ಅರ 24:18
ಯೆರೆ. 29:32ಅರ 22:8; ಯೆರೆ 26:24; 39:13, 14; ಯೆಹೆ 8:11
ಯೆರೆ. 29:71ತಿಮೊ 2:1, 2
ಯೆರೆ. 29:8ಯೆರೆ 14:14; 27:14
ಯೆರೆ. 29:9ಯೆರೆ 23:21; 28:15
ಯೆರೆ. 29:102ಪೂರ್ವ 36:20, 21; ಎಜ್ರ 1:1-3; ದಾನಿ 9:2; ಜೆಕ 1:12
ಯೆರೆ. 29:10ಧರ್ಮೋ 30:3; ಎಜ್ರ 2:1; ಯೆರೆ 24:6
ಯೆರೆ. 29:11ಚೆಫ 3:15
ಯೆರೆ. 29:11ಯೆರೆ 31:17
ಯೆರೆ. 29:12ದಾನಿ 9:3
ಯೆರೆ. 29:13ಯಾಜ 26:40
ಯೆರೆ. 29:13ಧರ್ಮೋ 4:29; 30:1-4; 1ಅರ 8:47, 48; ಯೆರೆ 24:7
ಯೆರೆ. 29:14ಯೆಶಾ 55:6
ಯೆರೆ. 29:14ಯೆಶಾ 49:25; ಯೆರೆ 30:3; ಯೆಹೆ 39:28
ಯೆರೆ. 29:14ಕೀರ್ತ 126:1; ಹೋಶೇ 6:11; ಆಮೋ 9:14; ಚೆಫ 3:20
ಯೆರೆ. 29:16ಯೆರೆ 28:1
ಯೆರೆ. 29:17ಯೆರೆ 24:10
ಯೆರೆ. 29:17ಯೆರೆ 24:2, 8
ಯೆರೆ. 29:18ಯಾಜ 26:33
ಯೆರೆ. 29:18ಧರ್ಮೋ 28:25; ಯೆರೆ 34:17
ಯೆರೆ. 29:181ಅರ 9:8; 2ಪೂರ್ವ 29:8; ಯೆರೆ 25:9; ಪ್ರಲಾ 2:15
ಯೆರೆ. 29:18ಯೆರೆ 24:9
ಯೆರೆ. 29:19ಯೆರೆ 7:13
ಯೆರೆ. 29:19ಯೆರೆ 6:19
ಯೆರೆ. 29:21ಯೆರೆ 14:14; 29:8; ಪ್ರಲಾ 2:14
ಯೆರೆ. 29:23ಯೆರೆ 7:9, 10; 27:15
ಯೆರೆ. 29:23ಯೆರೆ 23:14
ಯೆರೆ. 29:23ಯೆರೆ 16:17; 23:24
ಯೆರೆ. 29:24ಯೆರೆ 29:31, 32
ಯೆರೆ. 29:252ಅರ 25:18, 21; ಯೆರೆ 21:1, 2; 37:3; 52:24, 27
ಯೆರೆ. 29:26ಯೆರೆ 20:2
ಯೆರೆ. 29:27ಯೆರೆ 1:1
ಯೆರೆ. 29:27ಯೆರೆ 43:2
ಯೆರೆ. 29:28ಯೆರೆ 29:5
ಯೆರೆ. 29:292ಅರ 25:18, 21
ಯೆರೆ. 29:31ಯೆರೆ 14:14; 28:15, 16; ಯೆಹೆ 13:8, 9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆರೆಮೀಯ 29:1-32

ಯೆರೆಮೀಯ

29 ನೆಬೂಕದ್ನೆಚ್ಚರ ಯೆರೂಸಲೇಮಿಂದ ಬಾಬೆಲಿಗೆ ಹಿಡ್ಕೊಂಡು ಹೋಗಿದ್ದ ಎಲ್ಲ ಜನ್ರಿಗೆ, ಅವ್ರಲ್ಲಿದ್ದ ಹಿರಿಯರಿಗೆ, ಪ್ರವಾದಿಗಳಿಗೆ, ಪುರೋಹಿತರಿಗೆ ಪ್ರವಾದಿ ಯೆರೆಮೀಯ ಯೆರೂಸಲೇಮಿಂದ ಒಂದು ಪತ್ರ ಕಳಿಸಿದ. 2 ಅಷ್ಟರಲ್ಲೇ ರಾಜ ಯೆಕೊನ್ಯ,+ ರಾಜಮಾತೆ,+ ಆಸ್ಥಾನದ ಅಧಿಕಾರಿಗಳು, ಯೆಹೂದದ ಮತ್ತು ಯೆರೂಸಲೇಮಿನ ಅಧಿಕಾರಿಗಳು, ಕರಕುಶಲಗಾರರು, ಲೋಹದ ಕೆಲಸಗಾರರು* ಯೆರೂಸಲೇಮಿಂದ ಕೈದಿಗಳಾಗಿ ಹೋಗಿದ್ರು.+ 3 ಯೆಹೂದದ ರಾಜ ಚಿದ್ಕೀಯ+ ಶಾಫಾನನ+ ಮಗನಾದ ಎಲ್ಲಾಸನಿಗೆ, ಹಿಲ್ಕೀಯನ ಮಗ ಗೆಮರ್ಯನಿಗೆ ಬಾಬೆಲಿನ ರಾಜ ನೆಬೂಕದ್ನೆಚ್ಚರನ ಹತ್ರ ಹೋಗೋಕೆ ಅಪ್ಪಣೆ ಕೊಟ್ಟಿದ್ದ. ಅವ್ರ ಕೈಯಲ್ಲೇ ಯೆರೆಮೀಯ ಆ ಪತ್ರ ಕಳಿಸಿದ. ಪತ್ರದಲ್ಲಿ ಏನು ಬರೆದಿತ್ತಂದ್ರೆ

4 “ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಯೆರೂಸಲೇಮಿಂದ ಬಾಬೆಲಿಗೆ ಕೈದಿಗಳಾಗಿ ಹೋಗೋ ತರ ಮಾಡಿದ ಎಲ್ಲ ಜನ್ರಿಗೆ ಹೇಳೋ ವಿಷ್ಯ ಏನಂದ್ರೆ 5 ‘ನೀವು ಅಲ್ಲಿ ಮನೆ ಕಟ್ಕೊಂಡು ವಾಸ ಮಾಡಿ. ತೋಟ ಮಾಡ್ಕೊಂಡು ಅದ್ರ ಫಲ ತಿನ್ನಿ. 6 ಮದ್ವೆ ಮಾಡ್ಕೊಳ್ಳಿ, ಮಕ್ಕಳು ಮಾಡ್ಕೊಳ್ಳಿ. ನಿಮ್ಮ ಗಂಡುಮಕ್ಕಳಿಗೆ ಮದುವೆ ಮಾಡಿಸಿ, ಹೆಣ್ಣುಮಕ್ಕಳನ್ನ ಮದುವೆ ಮಾಡ್ಕೊಡಿ. ಅವ್ರಿಗೂ ಗಂಡುಹೆಣ್ಣು ಮಕ್ಕಳಾಗಲಿ. ಅಲ್ಲಿ ನಿಮ್ಮ ಸಂಖ್ಯೆ ಕಡಿಮೆಯಾಗದೆ, ಹೆಚ್ಚಾಗ್ಲಿ. 7 ನಿಮ್ಮನ್ನ ನಾನು ಕೈದಿಗಳಾಗಿ ಕಳಿಸಿರೋ ಆ ಪಟ್ಟಣದಲ್ಲಿ ಶಾಂತಿ-ಸಮಾಧಾನವಾಗಿ ಇರಿ. ಆ ಪಟ್ಟಣಕ್ಕಾಗಿ ಯೆಹೋವನ ಹತ್ರ ಪ್ರಾರ್ಥನೆ ಮಾಡಿ. ಯಾಕಂದ್ರೆ ಆ ಪಟ್ಟಣದಲ್ಲಿ ಶಾಂತಿ ಇದ್ರೆ ನೀವೂ ಶಾಂತಿಯಿಂದ ಬದುಕ್ತೀರ.+ 8 ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ “ನಿಮ್ಮಲ್ಲಿರೋ ಪ್ರವಾದಿಗಳ, ಕಣಿ ಹೇಳುವವರ ಮಾತು ಕೇಳಿ ಮೋಸ ಹೋಗಬೇಡಿ.+ ಅವರು ತಾವು ನೋಡಿದ ಕನಸನ್ನ ನಿಮಗೆ ಹೇಳಿದ್ರೆ ಕೇಳಿಸ್ಕೊಳ್ಳಬೇಡಿ. 9 ಯಾಕಂದ್ರೆ ‘ಅವರು ನನ್ನ ಹೆಸ್ರಲ್ಲಿ ಸುಳ್ಳು ಭವಿಷ್ಯ ಹೇಳ್ತಿದ್ದಾರೆ. ನಾನು ಅವ್ರನ್ನ ಕಳಿಸಲಿಲ್ಲ’+ ಅಂತ ಯೆಹೋವ ಹೇಳ್ತಾನೆ.”’”

10 “ಯೆಹೋವ ಹೇಳೋದು ಏನಂದ್ರೆ ‘ನೀವು ಬಾಬೆಲಲ್ಲಿ 70 ವರ್ಷ ಕಳೆದ್ಮೇಲೆ ನಿಮಗೆ ಗಮನ ಕೊಡ್ತೀನಿ.+ ನಿಮಗೆ ಮಾತು ಕೊಟ್ಟ ಹಾಗೆ ನಿಮ್ಮನ್ನ ವಾಪಸ್‌ ಈ ಊರಿಗೆ ಕರ್ಕೊಂಡು ಬರ್ತಿನಿ.’+

11 ಯೆಹೋವ ಹೇಳೋದು ಏನಂದ್ರೆ ‘ನಿಮಗೆ ಒಳ್ಳೇದು ಮಾಡಬೇಕಂತ ಯೋಚ್ನೆ ಮಾಡಿದ್ದೀನಿ. ನೀವು ಶಾಂತಿ ನೆಮ್ಮದಿಯಿಂದ ಬದುಕಬೇಕು, ನಿಮಗೆ ಕೆಟ್ಟದು ಆಗಬಾರದು,+ ನಿಮ್ಮ ಭವಿಷ್ಯ ಚೆನ್ನಾಗಿರಬೇಕು, ನೀವು ಒಳ್ಳೇದನ್ನ ಎದುರುನೋಡಬೇಕು ಅನ್ನೋದೇ ನನ್ನ ಆಸೆ.+ 12 ನೀವು ನನ್ನನ್ನ ಬೇಡ್ಕೊಳ್ತೀರ, ನನ್ನ ಹತ್ರ ಬಂದು ಪ್ರಾರ್ಥನೆ ಮಾಡ್ತೀರ, ನಿಮ್ಮ ಪ್ರಾರ್ಥನೆ ಕೇಳ್ತೀನಿ.’+

13 ‘ನೀವು ನನ್ನ ಕಡೆ ತಿರುಗಿ ಬಂದು ನನ್ನನ್ನ ಆರಾಧನೆ ಮಾಡ್ತೀರ,+ ಯಾಕಂದ್ರೆ ನೀವು ಪೂರ್ಣ ಹೃದಯದಿಂದ ನನ್ನ ಮಾರ್ಗದರ್ಶನಕ್ಕಾಗಿ ಹುಡುಕ್ತೀರ.*+ 14 ನಿಮ್ಮ ಆರಾಧನೆಯನ್ನ ಸ್ವೀಕರಿಸ್ತೀನಿ’*+ ಅಂತ ಯೆಹೋವ ಹೇಳ್ತಾನೆ. ‘ನಿಮ್ಮಲ್ಲಿ ಕೈದಿಗಳಾಗಿ ಹೋದವ್ರನ್ನ ಒಟ್ಟುಸೇರಿಸ್ತೀನಿ. ನಿಮ್ಮನ್ನ ಯಾವ್ಯಾವ ಜನ್ರ ಮಧ್ಯ, ಯಾವ್ಯಾವ ಜಾಗಗಳಿಗೆ ಚದರಿಸಿಬಿಟ್ಟಿದ್ದೀನೋ ಆ ಎಲ್ಲ ಜನ್ರಿಂದ ಮತ್ತು ಜಾಗಗಳಿಂದ ನಿಮ್ಮನ್ನ ಒಟ್ಟುಸೇರಿಸ್ತೀನಿ.+ ನೀವು ಎಲ್ಲಿಂದ ಕೈದಿಗಳಾಗಿ ಹೋಗೋ ತರ ಮಾಡಿದ್ನೋ ಅಲ್ಲಿಗೆ ನಿಮ್ಮನ್ನ ವಾಪಸ್‌ ಕರ್ಕೊಂಡು ಬರ್ತಿನಿ’+ ಅಂತ ಯೆಹೋವ ಹೇಳ್ತಾನೆ.

15 ಆದ್ರೆ ನೀವು ‘ನಮಗಾಗಿ ಯೆಹೋವ ಬಾಬೆಲಲ್ಲೇ ಪ್ರವಾದಿಗಳನ್ನ ಕೊಟ್ಟಿದ್ದಾನೆ’ ಅಂತ ಹೇಳಿದ್ದೀರ.

16 ದಾವೀದನ ಸಿಂಹಾಸನದಲ್ಲಿ ಕೂತಿರೋ ರಾಜನ+ ಬಗ್ಗೆ, ನಿಮ್ಮ ಜೊತೆ ಕೈದಿಗಳಾಗಿ ಹೋಗದೆ ಈ ಪಟ್ಟಣದಲ್ಲೇ ವಾಸ ಮಾಡ್ತಿರೋ ನಿಮ್ಮೆಲ್ಲ ಸಹೋದರರ ಬಗ್ಗೆ ಯೆಹೋವ ಹೇಳೋದು ಏನಂದ್ರೆ 17 ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ “ಅವ್ರ ಮೇಲೆ ಕತ್ತಿ, ಬರಗಾಲ, ಅಂಟುರೋಗ*+ ಬರೋ ಹಾಗೆ ಮಾಡ್ತೀನಿ. ತಿನ್ನೋಕೆ ಆಗದಷ್ಟು ಕೆಟ್ಟುಹೋಗಿರೋ ಅಂಜೂರ ಹಣ್ಣುಗಳ ತರ ಅವ್ರನ್ನ ಮಾಡಿಬಿಡ್ತೀನಿ.”’+

18 ‘ಕತ್ತಿ,+ ಬರಗಾಲ, ಅಂಟುರೋಗದಿಂದ ಅವರು ಕಷ್ಟ ಪಡೋ ತರ ಮಾಡ್ತೀನಿ. ಅವ್ರ ಪಾಡು ನೋಡಿ ಭೂಮಿಯ ಎಲ್ಲ ರಾಜ್ಯಗಳಿಗೆ ಗಾಬರಿ ಆಗುತ್ತೆ.+ ನಾನು ಅವ್ರನ್ನ ಯಾವ ಜನ್ರ ಮಧ್ಯ ಕಳಿಸಿಬಿಟ್ಟಿದ್ದೀನೋ ಆ ಎಲ್ಲ ಜನ್ರು ಅವ್ರಿಗೆ ಶಾಪ ಹಾಕ್ತಾರೆ, ಅವ್ರನ್ನ ನೋಡಿ ಬೆಚ್ಚಿಬೀಳ್ತಾರೆ, ಸೀಟಿ ಹೊಡೆದು ಗೇಲಿ ಮಾಡ್ತಾರೆ,+ ಅವಮಾನ ಮಾಡ್ತಾರೆ.+ 19 ಯಾಕಂದ್ರೆ ನನ್ನ ಸೇವಕರಾದ ಪ್ರವಾದಿಗಳ ಮೂಲಕ ನನ್ನ ಮಾತುಗಳನ್ನ ಪದೇಪದೇ* ಹೇಳಿ ಕಳಿಸಿದ್ರೂ ಕಿವಿಗೇ ಹಾಕೊಳ್ಳಲಿಲ್ಲ’+ ಅಂತ ಯೆಹೋವ ಹೇಳ್ತಾನೆ.

‘ನೀವು ಕೂಡ ನನ್ನ ಮಾತು ಕೇಳಲಿಲ್ಲ’+ ಅಂತ ಯೆಹೋವ ಹೇಳ್ತಾನೆ.

20 ಹಾಗಾಗಿ ನಾನು ಯೆರೂಸಲೇಮಿಂದ ಬಾಬೆಲಿಗೆ ಕೈದಿಗಳಾಗಿ ಕಳಿಸಿದ ಎಲ್ಲ ಜನ್ರೇ, ಯೆಹೋವನಾದ ನನ್ನ ಮಾತು ಕೇಳಿ. 21 ನನ್ನ ಹೆಸ್ರಲ್ಲಿ ಸುಳ್ಳು ಭವಿಷ್ಯ ಹೇಳ್ತಿರೋ+ ಕೋಲಾಯನ ಮಗ ಅಹಾಬನ ಬಗ್ಗೆ, ಮಾಸೇಯನ ಮಗ ಚಿದ್ಕೀಯನ ಬಗ್ಗೆ ಸೈನ್ಯಗಳ ದೇವರೂ ಇಸ್ರಾಯೇಲಿನ ದೇವರೂ ಆದ ಯೆಹೋವ ಹೇಳೋದು ಏನಂದ್ರೆ ‘ನಾನು ಅವ್ರಿಬ್ರನ್ನ ಬಾಬೆಲಿನ ರಾಜ ನೆಬೂಕದ್ನೆಚ್ಚರನ* ಕೈಗೆ ಕೊಡ್ತೀನಿ. ಅವನು ಅವ್ರನ್ನ ನಿಮ್ಮ ಕಣ್ಮುಂದೆನೇ ಸಾಯಿಸ್ತಾನೆ. 22 ಅವ್ರಿಗೆ ಬರೋ ಗತಿ ಬಾಬೆಲಲ್ಲಿ ಕೈದಿಗಳಾಗಿರೋ ಯೆಹೂದದ ಜನ್ರೆಲ್ಲರ ಬಾಯಲ್ಲಿ ಶಪಿಸೋ ಮಾತಾಗುತ್ತೆ. ಶಾಪ ಹಾಕುವಾಗ ಅವರು “ಬಾಬೆಲಿನ ರಾಜ ಬೆಂಕಿಯಲ್ಲಿ ಸುಟ್ಟ ಚಿದ್ಕೀಯ, ಅಹಾಬನಿಗಾದ ಅದೇ ಗತಿಯನ್ನ ಯೆಹೋವ ನಿನಗೂ ತರಲಿ!” ಅಂತಾರೆ. 23 ಯಾಕಂದ್ರೆ ಅವರು ನೆರೆಯವರ ಹೆಂಡತಿಯರ ಜೊತೆ ವ್ಯಭಿಚಾರ ಮಾಡಿದ್ದಾರೆ, ನನ್ನ ಹೆಸ್ರಲ್ಲಿ ಸುಳ್ಳುಸುಳ್ಳು ವಿಷ್ಯಗಳನ್ನ ಹೇಳಿದ್ದಾರೆ. ಆದ್ರೆ ಆ ವಿಷ್ಯಗಳನ್ನ ಹೇಳಬೇಕಂತ ನಾನು ಅವ್ರಿಗೆ ಹೇಳಿರಲಿಲ್ಲ.+ ಹೀಗೆ ಅವರು ಇಸ್ರಾಯೇಲಲ್ಲಿ ನಾಚಿಕೆಗೆಟ್ಟ ಕೆಲಸಗಳನ್ನ ಮಾಡಿದ್ದಾರೆ.+

“ಇದೆಲ್ಲ ನನಗೆ ಗೊತ್ತು, ಇದಕ್ಕೆ ನಾನೇ ಸಾಕ್ಷಿ”+ ಅಂತ ಯೆಹೋವ ಹೇಳ್ತಾನೆ.’”

24 “ನೀನು ನೆಹೆಲಾಮಿನ ಶೆಮಾಯನಿಗೆ+ ಹೀಗೆ ಹೇಳು 25 ‘ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ “ನೀನು ಯೆರೂಸಲೇಮಲ್ಲಿರೋ ಎಲ್ಲ ಜನ್ರಿಗೆ, ಮಾಸೇಯನ ಮಗ ಪುರೋಹಿತನಾದ ಚೆಫನ್ಯನಿಗೆ,+ ಎಲ್ಲ ಪುರೋಹಿತರಿಗೆ ನಿನ್ನ ಹೆಸ್ರಲ್ಲಿ ಪತ್ರಗಳನ್ನ ಕಳಿಸಿದ್ದೀಯ. ಆ ಪತ್ರಗಳಲ್ಲಿ 26 ‘ಚೆಫನ್ಯ, ಪುರೋಹಿತ ಯೆಹೋಯಾದನ ಬದಲು ಯೆಹೋವ ನಿನ್ನನ್ನ ಪುರೋಹಿತ ಮಾಡಿದ್ದಾನೆ. ಹೀಗೆ ನಿನಗೆ ಯೆಹೋವನ ಆಲಯದ ಮೇಲ್ವಿಚಾರಣೆ ಮಾಡೋ, ಪ್ರವಾದಿ ತರ ನಟಿಸೋನನ್ನ ಹಿಡಿದು ಕೋಳಗಳನ್ನ*+ ಹಾಕೋ ಜವಾಬ್ದಾರಿ ಕೊಟ್ಟಿದ್ದಾನೆ. 27 ಹಾಗಿದ್ಮೇಲೆ ನಿಮ್ಮ ಪ್ರವಾದಿಯಾಗಿ ನಟಿಸ್ತಿರೋ ಅನಾತೋತಿನ+ ಯೆರೆಮೀಯನನ್ನ ನೀನ್ಯಾಕೆ ಗದರಿಸಲಿಲ್ಲ?+ 28 ಅವನು ಬಾಬೆಲಲ್ಲಿರೋ ನಮಗೆ ಕೂಡ ಸಂದೇಶ ಕಳಿಸಿ “ನೀವಲ್ಲಿ ತುಂಬ ವರ್ಷ ಇರ್ತಿರ, ಅಲ್ಲಿ ಮನೆ ಕಟ್ಕೊಂಡು ವಾಸ ಮಾಡಿ. ತೋಟ ಮಾಡ್ಕೊಂಡು ಅದ್ರ ಫಲ ತಿನ್ನಿ, ...”+ ಅಂದಿದ್ದಾನೆ!’ ಅಂತ ಬರಿದಿದ್ದೀಯ.”’”

29 ಶೆಮಾಯ ಬರೆದ ಪತ್ರವನ್ನ ಪುರೋಹಿತ ಚೆಫನ್ಯ+ ಪ್ರವಾದಿ ಯೆರೆಮೀಯನ ಮುಂದೆ ಓದಿದಾಗ 30 ಯೆಹೋವ ಯೆರೆಮೀಯನಿಗೆ ಹೇಳಿದ್ದೇನಂದ್ರೆ 31 “ಕೈದಿಗಳಾಗಿ ಹೋದವ್ರಿಗೆಲ್ಲ ಹೀಗೆ ಬರಿ ‘ನೆಹೆಲಾಮಿನ ಶೆಮಾಯನ ಬಗ್ಗೆ ಯೆಹೋವ ಹೇಳೋದು ಏನಂದ್ರೆ “ನಾನು ಶೆಮಾಯನನ್ನ ಕಳಿಸಲಿಲ್ಲ. ಆದ್ರೂ ಅವನು ಭವಿಷ್ಯವಾಣಿಗಳನ್ನ ಹೇಳಿ ನೀವು ಸುಳ್ಳು ಮಾತುಗಳನ್ನ ನಂಬೋ ತರ ಮಾಡೋಕೆ ಪ್ರಯತ್ನ ಮಾಡಿದ.+ 32 ಹಾಗಾಗಿ ಯೆಹೋವ ಹೀಗೆ ಹೇಳ್ತಾನೆ ‘ನಾನು ನೆಹೆಲಾಮಿನ ಶೆಮಾಯನಿಗೆ, ಅವನ ವಂಶದವರಿಗೆ ಶಿಕ್ಷೆ ಕೊಡ್ತೀನಿ. ಅವನ ವಂಶದವರಲ್ಲಿ ಒಬ್ಬ ಕೂಡ ಈ ಜನ್ರ ಮಧ್ಯ ಬದುಕಿ ಉಳಿಯಲ್ಲ. ನಾನು ನನ್ನ ಜನ್ರಿಗೆ ಮಾಡೋ ಒಳ್ಳೇ ವಿಷ್ಯಗಳನ್ನ ಅವನು ನೋಡಲ್ಲ. ಯಾಕಂದ್ರೆ ಯೆಹೋವನ ವಿರುದ್ಧ ತಿರುಗಿ ಬೀಳೋ ತರ ಅವನು ಜನ್ರನ್ನ ಪ್ರಚೋದಿಸಿದ್ದಾನೆ’ ಅಂತಾನೆ ಯೆಹೋವ.”’”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ