ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಜೆಕರ್ಯ 11
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಜೆಕರ್ಯ ಮುಖ್ಯಾಂಶಗಳು

      • ದೇವರ ಸತ್ಯ ಕುರುಬನನ್ನ ತಿರಸ್ಕರಿಸಿದ್ದರ ಪರಿಣಾಮ (1-17)

        • “ಬಲಿ ಕೊಡೋಕೆ ಇಟ್ಟಿರೋ ಮಂದೆಯನ್ನ ಕಾಯಿರಿ” (4)

        • ಎರಡು ಕೋಲುಗಳು: ಹಿತಕರ ಮತ್ತು ಐಕ್ಯ (7)

        • ಕುರುಬನ ಸಂಬಳ: 30 ಬೆಳ್ಳಿ ಶೆಕೆಲ್‌ಗಳು (12)

        • ಹಣವನ್ನ ಆಲಯದ ಖಜಾನೆಯಲ್ಲಿ ಬಿಸಾಡಲಾಗುತ್ತೆ (13)

ಜೆಕರ್ಯ 11:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/1990, ಪು. 29

ಜೆಕರ್ಯ 11:4

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 34:8

ಜೆಕರ್ಯ 11:5

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 22:25
  • +ನೆಹೆ 5:8
  • +ಯೆಹೆ 34:2, 4

ಜೆಕರ್ಯ 11:7

ಮಾರ್ಜಿನಲ್ ರೆಫರೆನ್ಸ್

  • +ಜೆಕ 11:4
  • +ಜೆಕ 11:10, 14

ಜೆಕರ್ಯ 11:10

ಮಾರ್ಜಿನಲ್ ರೆಫರೆನ್ಸ್

  • +ಜೆಕ 11:7

ಜೆಕರ್ಯ 11:12

ಪಾದಟಿಪ್ಪಣಿ

  • *

    ಅಕ್ಷ. “ತೂಕಮಾಡಿ.”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 26:14, 15; 27:9; ಮಾರ್ಕ 14:10, 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಹೊಸ ಲೋಕ ಭಾಷಾಂತರ, ಪು. 15

    ಕಾವಲಿನಬುರುಜು,

    8/15/2011, ಪು. 13

ಜೆಕರ್ಯ 11:13

ಮಾರ್ಜಿನಲ್ ರೆಫರೆನ್ಸ್

  • +ವಿಮೋ 21:32
  • +ಮತ್ತಾ 27:5, 6; ಅಕಾ 1:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ, ಲೇಖನ 146

    ಹೊಸ ಲೋಕ ಭಾಷಾಂತರ, ಪು. 15

    ಕಾವಲಿನಬುರುಜು,

    8/15/2011, ಪು. 13

ಜೆಕರ್ಯ 11:14

ಮಾರ್ಜಿನಲ್ ರೆಫರೆನ್ಸ್

  • +ಜೆಕ 11:7
  • +1ಅರ 12:19, 20; ಯೆಹೆ 37:16

ಜೆಕರ್ಯ 11:15

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 34:2, 4

ಜೆಕರ್ಯ 11:16

ಮಾರ್ಜಿನಲ್ ರೆಫರೆನ್ಸ್

  • +ಯೆರೆ 23:2; ಯೆಹೆ 34:6; ಮತ್ತಾ 9:36
  • +ಯೆಹೆ 34:21
  • +ಆದಿ 31:38
  • +ಯೆಹೆ 34:3, 10

ಜೆಕರ್ಯ 11:17

ಪಾದಟಿಪ್ಪಣಿ

  • *

    ಅಕ್ಷ. “ಮಂಜಾಗುತ್ತೆ.”

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 10:12
  • +ಯೆರೆ 23:1; ಮತ್ತಾ 23:13

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಜೆಕ. 11:4ಯೆಹೆ 34:8
ಜೆಕ. 11:5ಯೆಹೆ 22:25
ಜೆಕ. 11:5ನೆಹೆ 5:8
ಜೆಕ. 11:5ಯೆಹೆ 34:2, 4
ಜೆಕ. 11:7ಜೆಕ 11:4
ಜೆಕ. 11:7ಜೆಕ 11:10, 14
ಜೆಕ. 11:10ಜೆಕ 11:7
ಜೆಕ. 11:12ಮತ್ತಾ 26:14, 15; 27:9; ಮಾರ್ಕ 14:10, 11
ಜೆಕ. 11:13ವಿಮೋ 21:32
ಜೆಕ. 11:13ಮತ್ತಾ 27:5, 6; ಅಕಾ 1:18
ಜೆಕ. 11:14ಜೆಕ 11:7
ಜೆಕ. 11:141ಅರ 12:19, 20; ಯೆಹೆ 37:16
ಜೆಕ. 11:15ಯೆಹೆ 34:2, 4
ಜೆಕ. 11:16ಯೆರೆ 23:2; ಯೆಹೆ 34:6; ಮತ್ತಾ 9:36
ಜೆಕ. 11:16ಯೆಹೆ 34:21
ಜೆಕ. 11:16ಆದಿ 31:38
ಜೆಕ. 11:16ಯೆಹೆ 34:3, 10
ಜೆಕ. 11:17ಯೋಹಾ 10:12
ಜೆಕ. 11:17ಯೆರೆ 23:1; ಮತ್ತಾ 23:13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಜೆಕರ್ಯ 11:1-17

ಜೆಕರ್ಯ

11 “ಲೆಬನೋನೇ, ನಿನ್ನ ಬಾಗಿಲುಗಳನ್ನ ತೆರಿ,

ಆಗ ಬೆಂಕಿ ಬಂದು ನಿನ್ನ ದೇವದಾರು ಮರಗಳನ್ನ ಸುಟ್ಟುಹಾಕುತ್ತೆ.

 2 ಜುನಿಪರ್‌ ಮರವೇ, ಗೋಳಾಡು! ಯಾಕಂದ್ರೆ, ದೇವದಾರು ಮರ ಬಿದ್ದಿದೆ.

ಶ್ರೇಷ್ಠ ವೃಕ್ಷಗಳು ನಾಶವಾಗಿವೆ!

ಬಾಷಾನಿನ ಓಕ್‌ ಮರಗಳೇ ಗೋಳಾಡಿ,

ಯಾಕಂದ್ರೆ ದಟ್ಟಕಾಡು ನೆಲಸಮವಾಗಿದೆ!

 3 ಕೇಳಿ! ಕುರುಬರ ಗೋಳಾಟ ಕೇಳಿ!

ಯಾಕಂದ್ರೆ ಅವ್ರ ವೈಭವ ಮಣ್ಣುಪಾಲಾಗಿದೆ.

ಕೇಳಿ! ಎಳೇ ಸಿಂಹಗಳ ಗರ್ಜನೆ ಕೇಳಿ,

ಯಾಕಂದ್ರೆ ಯೋರ್ದನಿನ ಉದ್ದಕ್ಕೂ ಇದ್ದ ದಟ್ಟ ಪೊದೆಗಳು ನಾಶ ಆಗಿವೆ.

4 ನನ್ನ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ಬಲಿ ಕೊಡೋಕೆ ಇಟ್ಟಿರೋ ಮಂದೆಯನ್ನ ಕಾಯಿರಿ.+ 5 ಖರೀದಿ ಮಾಡಿದವರು ಅವುಗಳನ್ನ ಕೊಂದ್ರೂ,+ ಅವ್ರನ್ನ ಅಪರಾಧಿಗಳ ತರ ನೋಡಲ್ಲ. ಅವುಗಳನ್ನ ಮಾರುವವರು+ “ಯೆಹೋವನನ್ನ ಹಾಡಿಹೊಗಳಿ. ಯಾಕಂದ್ರೆ ನಾವು ಶ್ರೀಮಂತರಾಗ್ತೀವಿ” ಅಂತಾರೆ. ಅವುಗಳ ಕುರುಬರಿಗೆ ಅವುಗಳ ಮೇಲೆ ಸ್ವಲ್ಪನೂ ಕನಿಕರ ಇಲ್ಲ.’+

6 ಯೆಹೋವ ಹೀಗೆ ಹೇಳ್ತಿದ್ದಾನೆ: ‘ಇನ್ಮುಂದೆ ನಾನು ದೇಶದ ನಿವಾಸಿಗಳಿಗೆ ಕನಿಕರ ತೋರಿಸಲ್ಲ. ಪ್ರತಿಯೊಬ್ಬ ಮನುಷ್ಯ ತನ್ನ ನೆರೆಯವನ ಮತ್ತು ತನ್ನ ರಾಜನ ಕೈಯಲ್ಲಿ ನಲುಗಿಹೋಗೋ ತರ ನಾನು ಮಾಡ್ತೀನಿ. ಅವರು ದೇಶವನ್ನ ನಾಶ ಮಾಡ್ತಾರೆ. ಅವ್ರ ಕೈಯಿಂದ ನಾನು ಆ ಜನ್ರನ್ನ ಕಾಪಾಡಲ್ಲ.’”

7 ಮಂದೆಯಲ್ಲಿರೋ ನೊಂದಿರೋ ಜನ್ರೇ, ಬಲಿ ಕೊಡೋಕೆ ಇಟ್ಟಿರೋ ನಿಮ್ಮನ್ನ ನಾನು ಕಾಯೋಕೆ ಶುರು ಮಾಡಿದೆ.+ ಹಾಗಾಗಿ ನಾನು ಎರಡು ಕೋಲುಗಳನ್ನ ತಗೊಂಡೆ. ಒಂದಕ್ಕೆ ನಾನು “ಹಿತಕರ” ಅಂತ, ಇನ್ನೊಂದಕ್ಕೆ “ಐಕ್ಯ”+ ಅಂತ ಹೆಸ್ರಿಟ್ಟೆ. ಆಮೇಲೆ ಮಂದೆಯನ್ನ ಕಾಯೋಕೆ ಶುರುಮಾಡಿದೆ. 8 ಒಂದೇ ತಿಂಗಳಲ್ಲಿ ಮೂರು ಕುರುಬರನ್ನ ತೆಗೆದುಬಿಟ್ಟೆ. ಯಾಕಂದ್ರೆ ನಾನು ತಾಳ್ಮೆ ಕಳ್ಕೊಳೋ ತರ ಅವರು ಮಾಡಿದ್ರು. ಅವರು ನನ್ನನ್ನ ದ್ವೇಷಿಸ್ತಿದ್ರು. 9 ಅದಕ್ಕೆ ನಾನು “ನಿಮ್ಮನ್ನ ನಾನು ಹೀಗೇ ಕಾಯ್ತಾ ಇರಲ್ಲ. ಸಾಯುವವರು ಸಾಯಲಿ, ನಾಶ ಆಗುವವರು ನಾಶವಾಗ್ಲಿ. ಯಾರು ಉಳ್ಕೊತಾರೋ ಅವರು ಒಬ್ಬರು ಇನ್ನೊಬ್ಬರ ಮಾಂಸವನ್ನ ನುಂಗಿಹಾಕಲಿ” ಅಂದೆ. 10 ಆಮೇಲೆ ನಾನು ಹಿತಕರ+ ಅನ್ನೋ ಕೋಲು ತಗೊಂಡು ಅದನ್ನ ಮುರಿದು, ಎಲ್ಲ ಜನ್ರ ಜೊತೆ ಮಾಡ್ಕೊಂಡಿದ್ದ ಒಪ್ಪಂದವನ್ನ ಮುರಿದುಹಾಕಿದೆ. 11 ಹಾಗಾಗಿ ಆ ದಿನ ಆ ಒಪ್ಪಂದ ಮುರಿದುಹೋಯ್ತು. ನನ್ನನ್ನ ನೋಡ್ತಿದ್ದ ಆ ಮಂದೆಯಲ್ಲಿನ ನೊಂದಿದ್ದ ಜನ್ರಿಗೆ ಆ ಸಂದೇಶ ಯೆಹೋವನಿಂದ ಬಂದಿದ್ದು ಅಂತ ಗೊತ್ತಿತ್ತು.

12 ಆಮೇಲೆ ನಾನು ಅವ್ರಿಗೆ “ನಿಮಗೆ ಸರಿ ಅನಿಸಿದ್ರೆ, ನನಗೆ ನನ್ನ ಸಂಬಳವನ್ನ ಕೊಡಿ, ಇಲ್ಲದಿದ್ರೆ ಕೊಡಬೇಡಿ” ಅಂದೆ. ಆಗ ಅವರು ನನಗೆ 30 ಬೆಳ್ಳಿ ಶೆಕೆಲ್‌ಗಳನ್ನ ಸಂಬಳವಾಗಿ* ಕೊಟ್ರು.+

13 ಆಮೇಲೆ ಯೆಹೋವ ನನಗೆ “ಅವರು ನನಗೆ ತುಂಬ ಬೆಲೆ ಕೊಟ್ಟಿದ್ದಾರೆ! ಹೋಗು, ಅದನ್ನ ಖಜಾನೆಯಲ್ಲಿ ಬಿಸಾಡು”+ ಅಂತ ಹೇಳಿದನು. ಆಗ ನಾನು ಆ 30 ಬೆಳ್ಳಿ ಶೆಕೆಲ್‌ಗಳನ್ನ ತಗೊಂಡು ಹೋಗಿ ಯೆಹೋವನ ಆಲಯದ ಖಜಾನೆಯಲ್ಲಿ ಬಿಸಾಡಿದೆ.+

14 ಆಮೇಲೆ ನಾನು ಐಕ್ಯ+ ಅನ್ನೋ ನನ್ನ ಎರಡನೇ ಕೋಲನ್ನ ಮುರಿದು ಯೆಹೂದ ಮತ್ತು ಇಸ್ರಾಯೇಲಿನ ಮಧ್ಯ ಇದ್ದ ಸಹೋದರತ್ವವನ್ನ ಕಡಿದುಹಾಕಿದೆ.+

15 ಯೆಹೋವ ನನಗೆ ಹೀಗಂದನು: “ಕೆಲಸಕ್ಕೆ ಬಾರದ ಕುರುಬನ ಸಲಕರಣೆಗಳನ್ನ ತಗೊ.+ 16 ಯಾಕಂದ್ರೆ ನಾನು ಈ ದೇಶದ ಮೇಲ್ವಿಚಾರಣೆ ಮಾಡೋಕೆ ಒಬ್ಬ ಕುರುಬನನ್ನ ನೇಮಿಸ್ತೀನಿ. ಅವನು ನಾಶವಾಗ್ತಿರೋ ಕುರಿಗಳ ಕಾಳಜಿ ಮಾಡಲ್ಲ.+ ಅವನು ಅವುಗಳ ಮರಿಗಳನ್ನ ಹುಡುಕೋದೂ ಇಲ್ಲ, ಅವುಗಳಿಗೆ ಗಾಯವಾದ್ರೆ ನೋಡ್ಕೊಳ್ಳೋದೂ ಇಲ್ಲ.+ ಅಷ್ಟೇ ಅಲ್ಲ ಆರೋಗ್ಯದಿಂದ ಇರುವವುಗಳಿಗೆ ಸಹ ಮೇವನ್ನ ಹಾಕಲ್ಲ. ಬದಲಿಗೆ ದಷ್ಟಪುಷ್ಟವಾಗಿರೋ ಕುರಿಗಳ ಮಾಂಸವನ್ನ ನುಂಗಿಹಾಕ್ತಾನೆ+ ಮತ್ತು ಅವುಗಳ ಗೊರಸುಗಳನ್ನ ಸೀಳಿಹಾಕ್ತಾನೆ.+

17 ಮಂದೆಯನ್ನ ತೊರೆದುಬಿಡೋ+ ಕೆಲಸಕ್ಕೆ ಬಾರದ ನನ್ನ ಕುರುಬನ ಗತಿಯನ್ನ ಏನು ಹೇಳಲಿ!+

ಒಂದು ಕತ್ತಿ ಅವನ ತೋಳನ್ನ ಕತ್ತರಿಸುತ್ತೆ, ಅವನ ಬಲಗಣ್ಣನ್ನ ಚುಚ್ಚುತ್ತೆ.

ಅವನ ತೋಳು ಸಂಪೂರ್ಣ ಬತ್ತಿಹೋಗುತ್ತೆ.

ಅವನ ಬಲಗಣ್ಣು ಪೂರ್ತಿ ಕುರುಡಾಗುತ್ತೆ.”*

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ