ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೆಜ್ಕೇಲ 39
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೆಜ್ಕೇಲ ಮುಖ್ಯಾಂಶಗಳು

      • ಗೋಗ ಮತ್ತು ಅವನ ಸೈನ್ಯಗಳ ನಾಶ (1-10)

      • ಹಾಮೋನ್‌-ಗೋಗನ ಕಣಿವೆಯಲ್ಲಿ ಸಮಾಧಿ (11-20)

      • ಇಸ್ರಾಯೇಲ್ಯರು ಮತ್ತೆ ಸ್ವದೇಶಕ್ಕೆ ಹೋಗ್ತಾರೆ (21-29)

        • ಇಸ್ರಾಯೇಲ್ಯರ ಮೇಲೆ ಪವಿತ್ರಶಕ್ತಿ ಸುರಿಸ್ತೀನಿ (29)

ಯೆಹೆಜ್ಕೇಲ 39:1

ಪಾದಟಿಪ್ಪಣಿ

  • *

    ಅಥವಾ “ಮುಖ್ಯ ಅಧಿಕಾರಿಯಾದ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 38:2
  • +ಯೆಹೆ 27:13; 32:26

ಯೆಹೆಜ್ಕೇಲ 39:2

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 38:4, 15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ದಾನಿಯೇಲನ ಪ್ರವಾದನೆ, ಪು. 283

ಯೆಹೆಜ್ಕೇಲ 39:4

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 38:21
  • +ಪ್ರಕ 19:17, 18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 182

ಯೆಹೆಜ್ಕೇಲ 39:5

ಮಾರ್ಜಿನಲ್ ರೆಫರೆನ್ಸ್

  • +ಯೆರೆ 25:33

ಯೆಹೆಜ್ಕೇಲ 39:6

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 38:22

ಯೆಹೆಜ್ಕೇಲ 39:7

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 6:3
  • +ಯೆಹೆ 38:16

ಯೆಹೆಜ್ಕೇಲ 39:9

ಪಾದಟಿಪ್ಪಣಿ

  • *

    ಇದನ್ನ ಹೆಚ್ಚಾಗಿ ಬಿಲ್ಲುಗಾರರು ಹಿಡ್ಕೊಳ್ತಿದ್ರು.

  • *

    ಬಹುಶಃ, “ಕೈಮೇಕುಗಳು.” ಅಂದ್ರೆ ಚೂಪಾದ ಮೊನೆಯುಳ್ಳ ಆಯುಧಗಳು.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 46:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/1990, ಪು. 14

ಯೆಹೆಜ್ಕೇಲ 39:11

ಪಾದಟಿಪ್ಪಣಿ

  • *

    ಅಥವಾ “ಗೋಗನ ಸಮೂಹಗಳ ಕಣಿವೆ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 38:2
  • +ಯೆಹೆ 39:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಶುದ್ಧ ಆರಾಧನೆ, ಪು. 182

ಯೆಹೆಜ್ಕೇಲ 39:12

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 21:22, 23

ಯೆಹೆಜ್ಕೇಲ 39:13

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 38:16

ಯೆಹೆಜ್ಕೇಲ 39:15

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 39:11

ಯೆಹೆಜ್ಕೇಲ 39:16

ಪಾದಟಿಪ್ಪಣಿ

  • *

    ಅರ್ಥ “ಜನಸಮೂಹಗಳು.”

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 39:12

ಯೆಹೆಜ್ಕೇಲ 39:17

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 34:6-8; ಯೆರೆ 46:10; ಚೆಫ 1:7
  • +ಪ್ರಕ 19:17, 18

ಯೆಹೆಜ್ಕೇಲ 39:20

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 38:4-6; ಹಗ್ಗಾ 2:22; ಪ್ರಕ 19:17, 18

ಯೆಹೆಜ್ಕೇಲ 39:21

ಮಾರ್ಜಿನಲ್ ರೆಫರೆನ್ಸ್

  • +ವಿಮೋ 7:4; 14:4; ಯೆಶಾ 37:20; ಯೆಹೆ 38:16; ಮಲಾ 1:11

ಯೆಹೆಜ್ಕೇಲ 39:23

ಪಾದಟಿಪ್ಪಣಿ

  • *

    ಅಕ್ಷ. “ನಾನು ನನ್ನ ಮುಖವನ್ನ ಅವ್ರಿಂದ ಮರೆಮಾಡ್ಕೊಂಡೆ.”

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 7:21, 22
  • +ಧರ್ಮೋ 31:18; ಯೆಶಾ 59:2
  • +ಯಾಜ 26:24, 25; ಧರ್ಮೋ 32:30; ಕೀರ್ತ 106:40, 41

ಯೆಹೆಜ್ಕೇಲ 39:25

ಮಾರ್ಜಿನಲ್ ರೆಫರೆನ್ಸ್

  • +ಯೆರೆ 30:3; ಯೆಹೆ 34:13
  • +ಹೋಶೇ 1:11; ಜೆಕ 1:16
  • +ಯೆಹೆ 36:21

ಯೆಹೆಜ್ಕೇಲ 39:26

ಮಾರ್ಜಿನಲ್ ರೆಫರೆನ್ಸ್

  • +ದಾನಿ 9:16
  • +ಯಾಜ 26:5, 6

ಯೆಹೆಜ್ಕೇಲ 39:27

ಮಾರ್ಜಿನಲ್ ರೆಫರೆನ್ಸ್

  • +ಯೆರೆ 30:10; ಆಮೋ 9:14; ಚೆಫ 3:20
  • +ಯೆಶಾ 5:16; ಯೆಹೆ 36:23

ಯೆಹೆಜ್ಕೇಲ 39:28

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 30:4

ಯೆಹೆಜ್ಕೇಲ 39:29

ಪಾದಟಿಪ್ಪಣಿ

  • *

    ಅಥವಾ “ಅವ್ರಿಂದ ನನ್ನ ಮುಖ ಮರೆಮಾಡ್ಕೊಳ್ಳಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 45:17; 54:8; ಯೆರೆ 29:14
  • +ಯೆಶಾ 32:14, 15; ಯೋವೇ 2:28

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೆ. 39:1ಯೆಹೆ 38:2
ಯೆಹೆ. 39:1ಯೆಹೆ 27:13; 32:26
ಯೆಹೆ. 39:2ಯೆಹೆ 38:4, 15
ಯೆಹೆ. 39:4ಯೆಹೆ 38:21
ಯೆಹೆ. 39:4ಪ್ರಕ 19:17, 18
ಯೆಹೆ. 39:5ಯೆರೆ 25:33
ಯೆಹೆ. 39:6ಯೆಹೆ 38:22
ಯೆಹೆ. 39:7ಯೆಶಾ 6:3
ಯೆಹೆ. 39:7ಯೆಹೆ 38:16
ಯೆಹೆ. 39:9ಕೀರ್ತ 46:9
ಯೆಹೆ. 39:11ಯೆಹೆ 38:2
ಯೆಹೆ. 39:11ಯೆಹೆ 39:15
ಯೆಹೆ. 39:12ಧರ್ಮೋ 21:22, 23
ಯೆಹೆ. 39:13ಯೆಹೆ 38:16
ಯೆಹೆ. 39:15ಯೆಹೆ 39:11
ಯೆಹೆ. 39:16ಯೆಹೆ 39:12
ಯೆಹೆ. 39:17ಯೆಶಾ 34:6-8; ಯೆರೆ 46:10; ಚೆಫ 1:7
ಯೆಹೆ. 39:17ಪ್ರಕ 19:17, 18
ಯೆಹೆ. 39:20ಯೆಹೆ 38:4-6; ಹಗ್ಗಾ 2:22; ಪ್ರಕ 19:17, 18
ಯೆಹೆ. 39:21ವಿಮೋ 7:4; 14:4; ಯೆಶಾ 37:20; ಯೆಹೆ 38:16; ಮಲಾ 1:11
ಯೆಹೆ. 39:232ಪೂರ್ವ 7:21, 22
ಯೆಹೆ. 39:23ಧರ್ಮೋ 31:18; ಯೆಶಾ 59:2
ಯೆಹೆ. 39:23ಯಾಜ 26:24, 25; ಧರ್ಮೋ 32:30; ಕೀರ್ತ 106:40, 41
ಯೆಹೆ. 39:25ಯೆರೆ 30:3; ಯೆಹೆ 34:13
ಯೆಹೆ. 39:25ಹೋಶೇ 1:11; ಜೆಕ 1:16
ಯೆಹೆ. 39:25ಯೆಹೆ 36:21
ಯೆಹೆ. 39:26ದಾನಿ 9:16
ಯೆಹೆ. 39:26ಯಾಜ 26:5, 6
ಯೆಹೆ. 39:27ಯೆರೆ 30:10; ಆಮೋ 9:14; ಚೆಫ 3:20
ಯೆಹೆ. 39:27ಯೆಶಾ 5:16; ಯೆಹೆ 36:23
ಯೆಹೆ. 39:28ಧರ್ಮೋ 30:4
ಯೆಹೆ. 39:29ಯೆಶಾ 45:17; 54:8; ಯೆರೆ 29:14
ಯೆಹೆ. 39:29ಯೆಶಾ 32:14, 15; ಯೋವೇ 2:28
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೆಜ್ಕೇಲ 39:1-29

ಯೆಹೆಜ್ಕೇಲ

39 ಮನುಷ್ಯಕುಮಾರನೇ, ಗೋಗನ ವಿರುದ್ಧ ಭವಿಷ್ಯ ಹೇಳು.+ ನೀನು ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ಮೇಷೆಕ್‌ ಮತ್ತು ತೂಬಲಿನ+ ಮುಖ್ಯ ಪ್ರಧಾನನಾದ* ಗೋಗನೇ, ನಾನು ನಿನಗೆ ವಿರುದ್ಧವಾಗಿದ್ದೀನಿ. 2 ನೀನು ಬೇರೆ ದಿಕ್ಕಿಗೆ ಹೋಗೋ ಹಾಗೆ ನಾನು ಮಾಡ್ತೀನಿ. ನಿನ್ನನ್ನ ಉತ್ತರದ ತುಂಬ ದೂರದಿಂದ ಬರೋ ತರ ಮಾಡಿ+ ಇಸ್ರಾಯೇಲಿನ ಬೆಟ್ಟಗಳ ಮೇಲೆ ಕರ್ಕೊಂಡು ಬರ್ತಿನಿ. 3 ನಾನು ನಿನ್ನ ಎಡಗೈಯಲ್ಲಿರೋ ಬಿಲ್ಲಿಗೆ ಹೊಡೆದು ಬಲಗೈಯಲ್ಲಿರೋ ಬಾಣಗಳನ್ನ ಕೆಳಗೆ ಬೀಳಿಸ್ತೀನಿ. 4 ನೀನು, ನಿನ್ನ ಎಲ್ಲ ಸೈನ್ಯಗಳು ಮತ್ತು ನಿನ್ನ ಜೊತೆ ಇರೋ ಜನಾಂಗಗಳು ಎಲ್ರೂ ಇಸ್ರಾಯೇಲಿನ ಬೆಟ್ಟಗಳ ಮೇಲೆ ಬೀಳ್ತೀರ.+ ನಾನು ನಿನ್ನನ್ನ ಎಲ್ಲ ಜಾತಿಯ ಬೇಟೆ ಹಕ್ಕಿಗಳಿಗೆ, ಕಾಡುಪ್ರಾಣಿಗಳಿಗೆ ಆಹಾರವಾಗಿ ಕೊಡ್ತೀನಿ.”’+

5 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನು ಹೇಳ್ತಿದ್ದೀನಿ, ನೀನು ಬಟ್ಟಬಯಲಲ್ಲಿ ಬೀಳ್ತೀಯ.’+

6 ‘ನಾನು ಮಾಗೋಗ್‌ ದೇಶದ ಮೇಲೆ, ದ್ವೀಪಗಳಲ್ಲಿ ಸುರಕ್ಷಿತವಾಗಿ ವಾಸಿಸ್ತಾ ಇರುವವ್ರ ಮೇಲೆ ಬೆಂಕಿ ಕಳಿಸ್ತೀನಿ.+ ಆಗ, ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ. 7 ನನ್ನ ಜನ್ರಾದ ಇಸ್ರಾಯೇಲ್ಯರು ನನ್ನ ಪವಿತ್ರ ಹೆಸ್ರನ್ನ ತಿಳ್ಕೊಳ್ಳೋ ಹಾಗೆ ಮಾಡ್ತೀನಿ. ನನ್ನ ಪವಿತ್ರ ಹೆಸ್ರು ಅಪವಿತ್ರ ಆಗೋಕೆ ನಾನಿನ್ನು ಬಿಡಲ್ಲ. ಆಗ, ನಾನೇ ಯೆಹೋವ, ನಾನು ಇಸ್ರಾಯೇಲಲ್ಲಿ ಪವಿತ್ರ ದೇವರು+ ಅಂತ ಜನಾಂಗಗಳಿಗೆ ಗೊತ್ತಾಗುತ್ತೆ.’+

8 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಇದು ಬೇಗ ನಿಜ ಆಗುತ್ತೆ. ಇದು ನಡೆದೇ ನಡಿಯುತ್ತೆ. ನಾನು ಹೇಳಿದ ಆ ದಿನ ಇದೇ. 9 ಇಸ್ರಾಯೇಲ್ಯರು ಹೊರಗೆ ಹೋಗಿ ಆಯುಧಗಳಿಂದ ಅಂದ್ರೆ ಚಿಕ್ಕ ಗುರಾಣಿಗಳು,* ದೊಡ್ಡ ಗುರಾಣಿಗಳು, ಬಿಲ್ಲುಗಳು, ಬಾಣಗಳು, ಯುದ್ಧದ ದೊಣ್ಣೆಗಳು,* ಈಟಿಗಳು ಇದೆಲ್ಲದ್ರಿಂದ ಬೆಂಕಿ ಉರಿಸ್ತಾರೆ. ಅವರು ಬೆಂಕಿ ಉರಿಸೋಕೆ ಏಳು ವರ್ಷ ಇವನ್ನೇ ಬಳಸ್ತಾರೆ.+ 10 ಅವರು ಬಯಲಿಂದ ಕಟ್ಟಿಗೆ ತರಬೇಕಾಗಿರಲ್ಲ, ಕಾಡಿಗೆ ಹೋಗಿ ಸೌದೆ ಕೂಡಿಸಬೇಕಾಗಿರಲ್ಲ. ಯಾಕಂದ್ರೆ ಅವರು ಆ ಆಯುಧಗಳಿಂದಾನೇ ಬೆಂಕಿ ಉರಿಸ್ತಾರೆ.’

‘ತಮ್ಮನ್ನ ಕೊಳ್ಳೆ ಹೊಡೆದವ್ರನ್ನೇ ಅವರು ಕೊಳ್ಳೆ ಹೊಡಿತಾರೆ. ತಮ್ಮನ್ನ ಲೂಟಿ ಮಾಡಿದವ್ರನ್ನೇ ಲೂಟಿ ಮಾಡ್ತಾರೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.

11 ‘ಆ ದಿನ ಇಸ್ರಾಯೇಲಲ್ಲಿ ಅಂದ್ರೆ ಸಮುದ್ರದ ಪೂರ್ವಕ್ಕೆ ಪ್ರಯಾಣಿಕರು ಹಾದುಹೋಗೋ ಒಂದು ಕಣಿವೆಯಲ್ಲಿ ನಾನು ಗೋಗನಿಗೆ+ ಹೂಳೋ ಜಾಗವನ್ನ ಕೊಡ್ತೀನಿ. ಇದ್ರಿಂದಾಗಿ ಆ ದಾರಿ ಮುಚ್ಚಿಹೋಗುತ್ತೆ. ಅಲ್ಲೇ ಅವರು ಗೋಗನನ್ನ ಮತ್ತು ಅವನ ಎಲ್ಲ ಜನಸಮೂಹಗಳನ್ನ ಹೂಳ್ತಾರೆ. ಆ ಕಣಿವೆಗೆ ಹಾಮೋನ್‌-ಗೋಗನ ಕಣಿವೆ*+ ಅನ್ನೋ ಹೆಸ್ರಿಡ್ತಾರೆ. 12 ಅವ್ರನ್ನೆಲ್ಲ ಹೂಳಿಟ್ಟು ದೇಶವನ್ನ ಶುದ್ಧ ಮಾಡೋಕೆ ಇಸ್ರಾಯೇಲ್ಯರಿಗೆ ಏಳು ತಿಂಗಳು ಹಿಡಿಯುತ್ತೆ.+ 13 ಅವ್ರನ್ನ ಹೂಳಿಡೋ ಕೆಲಸವನ್ನ ದೇಶದಲ್ಲಿರೋ ಜನ್ರೆಲ್ಲ ಮಾಡ್ತಾರೆ. ಇದ್ರಿಂದಾಗಿ ನಾನು ನನ್ನನ್ನೇ ಮಹಿಮೆ ಪಡಿಸ್ಕೊಳ್ಳೋ ದಿನದಲ್ಲಿ ಅವ್ರಿಗೆ ಒಳ್ಳೇ ಹೆಸ್ರು ಬರುತ್ತೆ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.

14 ‘ಶವಗಳು ಎಲ್ಲಿ ಬಿದ್ದಿವೆ ಅಂತ ಹುಡುಕೋಕೆ ದೇಶದಲ್ಲೆಲ್ಲ ಯಾವಾಗ್ಲೂ ತಿರುಗಾಡೋಕೆ ಮತ್ತು ಭೂಮಿ ಮೇಲೆ ಉಳಿದಿರೋ ಶವಗಳನ್ನ ಹೂಳಿಟ್ಟು ದೇಶವನ್ನ ಶುದ್ಧಮಾಡೋಕೆ ಜನ್ರನ್ನ ನೇಮಿಸಲಾಗುತ್ತೆ. ಹೀಗೆ ಅವರು ಏಳು ತಿಂಗಳು ದೇಶದಲ್ಲೆಲ್ಲಾ ಹುಡುಕ್ತಾರೆ. 15 ದೇಶದಲ್ಲಿ ತಿರುಗಾಡೋರು ಎಲ್ಲಾದ್ರೂ ಮನುಷ್ಯನ ಮೂಳೆ ನೋಡಿದ್ರೆ ಅದ್ರ ಪಕ್ಕದಲ್ಲಿ ಒಂದು ಗುರುತನ್ನ ನಿಲ್ಲಿಸ್ತಾರೆ. ಆಮೇಲೆ ಹೂಳಿಡೋ ಕೆಲಸಕ್ಕೆ ನೇಮಕ ಆದವರು ಬಂದು ಅದನ್ನ ಹಾಮೋನ್‌-ಗೋಗನ ಕಣಿವೆಯಲ್ಲಿ ಹೂಳಿಡ್ತಾರೆ.+ 16 ಅಲ್ಲಿ ಹಮೋನ* ಅನ್ನೋ ಪಟ್ಟಣನೂ ಇರುತ್ತೆ. ಅವರು ದೇಶವನ್ನ ಶುದ್ಧಮಾಡ್ತಾರೆ.’+

17 ಮನುಷ್ಯಕುಮಾರನೇ, ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನೀನು ಎಲ್ಲ ತರದ ಪಕ್ಷಿಗಳಿಗೆ, ಎಲ್ಲ ಕಾಡುಪ್ರಾಣಿಗಳಿಗೆ ಹೀಗೆ ಹೇಳು: “ನೀವೆಲ್ಲ ಒಟ್ಟಾಗಿ ಬನ್ನಿ. ನಾನು ನಿಮಗಾಗಿ ಸಿದ್ಧ ಮಾಡ್ತಿರೋ ಬಲಿಯ ಸುತ್ತ ಬನ್ನಿ. ಇದು ಇಸ್ರಾಯೇಲಿನ ಬೆಟ್ಟಗಳ ಮೇಲೆ ನಾನು ಸಿದ್ಧ ಮಾಡ್ತಿರೋ ಮಹಾ ಬಲಿಯಾಗಿದೆ.+ ಅಲ್ಲಿ ನೀವು ಮಾಂಸ ತಿಂದು ರಕ್ತ ಕುಡಿತೀರ.+ 18 ನೀವು ಶಕ್ತಿಶಾಲಿಗಳ ಮಾಂಸ ತಿಂತೀರ, ಭೂಮಿಯ ಪ್ರಧಾನರ ರಕ್ತ ಕುಡೀತೀರ. ಅವ್ರೆಲ್ಲ ಬಾಷಾನಿನ ಕೊಬ್ಬಿದ ಪ್ರಾಣಿಗಳಾದ ಟಗರು, ಕುರಿ, ಆಡು ಮತ್ತು ಹೋರಿಗಳ ತರ ಇದ್ದಾರೆ. 19 ನಾನು ನಿಮಗಾಗಿ ಸಿದ್ಧ ಮಾಡಿರೋ ಬಲಿಯ ಕೊಬ್ಬನ್ನ ನೀವು ಕಂಠಪೂರ್ತಿ ತಿಂದು, ರಕ್ತವನ್ನ ಮತ್ತೇರೋ ತನಕ ಕುಡಿತೀರ.”’

20 ‘ಕುದುರೆಗಳ, ಸಾರಥಿಗಳ, ಶಕ್ತಿಶಾಲಿಗಳ ಮತ್ತು ಎಲ್ಲ ತರದ ವೀರರ ಮಾಂಸ ನನ್ನ ಮೇಜಿನ ಮೇಲೆ ತುಂಬಿರುತ್ತೆ. ನೀವು ಅದನ್ನ ಹೊಟ್ಟೆ ತುಂಬ ತಿಂತೀರ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.

21 ‘ನಾನು ಜನಾಂಗಗಳಿಗೆ ನನ್ನ ಮಹಿಮೆಯನ್ನ ತೋರಿಸ್ತೀನಿ. ನಾನು ಎಲ್ಲ ಜನಾಂಗಗಳಿಗೆ ಕೊಟ್ಟಿರೋ ತೀರ್ಪನ್ನ ಹೇಗೆ ಜಾರಿ ಮಾಡಿದ್ದೀನಿ ಅಂತ ಮತ್ತು ನನ್ನ ಶಕ್ತಿಯನ್ನ ಹೇಗೆ ತೋರಿಸಿದ್ದೀನಿ ಅಂತ ಆ ಜನಾಂಗಗಳು ನೋಡುತ್ತೆ.+ 22 ಆ ದಿನ ಇಸ್ರಾಯೇಲ್ಯರಿಗೆ ಯೆಹೋವನಾದ ನಾನೇ ಅವ್ರ ದೇವರು ಅಂತ ಗೊತ್ತಾಗುತ್ತೆ. 23 ಜನಾಂಗಗಳು ಈ ವಿಷ್ಯವನ್ನ ತಿಳ್ಕೊಬೇಕಾಗುತ್ತೆ, ಏನಂದ್ರೆ ಇಸ್ರಾಯೇಲ್ಯರು ಪಾಪ ಮಾಡಿದ್ರಿಂದ, ನನಗೆ ನಂಬಿಕೆ ದ್ರೋಹ ಮಾಡಿದ್ರಿಂದ ಕೈದಿಗಳಾಗಿ ಹೋದ್ರು.+ ನಾನು ಅವ್ರನ್ನ ಬಿಟ್ಟುಬಿಟ್ಟೆ,*+ ಶತ್ರುಗಳ ಕೈಗೆ ಕೊಟ್ಟೆ.+ ಹಾಗಾಗಿ ಅವರು ಕತ್ತಿಯಿಂದ ಸತ್ತುಹೋದ್ರು. 24 ಅವ್ರ ಅಶುದ್ಧತೆ ಮತ್ತು ಅಪರಾಧಗಳಿಗೆ ತಕ್ಕ ಹಾಗೆ ನಾನು ಅವ್ರಿಗೆ ಶಿಕ್ಷೆ ಕೊಟ್ಟೆ ಮತ್ತು ನಾನು ಅವ್ರನ್ನ ಕೈಬಿಟ್ಟುಬಿಟ್ಟೆ.’

25 ಹಾಗಾಗಿ ವಿಶ್ವದ ರಾಜ ಯೆಹೋವ ಹೀಗಂತಾನೆ: ‘ಕೈದಿಗಳಾಗಿ ಹೋದ ಯಾಕೋಬನ ಜನ ಅವ್ರ ದೇಶಕ್ಕೆ ವಾಪಸ್‌ ಬರೋ ಹಾಗೆ ನಾನು ಮಾಡ್ತೀನಿ.+ ಇಸ್ರಾಯೇಲ್ಯರಿಗೆ ಕರುಣೆ ತೋರಿಸ್ತೀನಿ.+ ನಾನು ತುಂಬ ಉತ್ಸಾಹದಿಂದ ನನ್ನ ಪವಿತ್ರ ಹೆಸ್ರನ್ನ ಕಾಪಾಡ್ತೀನಿ.+ 26 ಅವರು ನನಗೆ ನಂಬಿಕೆ ದ್ರೋಹ ಮಾಡಿದ್ರಿಂದ ಅವಮಾನ ಅನುಭವಿಸಿ+ ಆಮೇಲೆ ತಮ್ಮ ದೇಶದಲ್ಲಿ ಸುರಕ್ಷಿತವಾಗಿ ವಾಸಿಸ್ತಾರೆ. ಅವ್ರನ್ನ ಹೆದರಿಸೋರು ಯಾರೂ ಇರಲ್ಲ.+ 27 ಬೇರೆ ಜನಾಂಗಗಳಿಂದ, ಶತ್ರುಗಳ ದೇಶಗಳಿಂದ ನಾನು ಅವ್ರನ್ನ ಒಟ್ಟುಸೇರಿಸಿ ಅವ್ರ ದೇಶಕ್ಕೆ ವಾಪಸ್‌ ಕರ್ಕೊಂಡು ಬರ್ತಿನಿ.+ ನಾನು ಅವ್ರಿಗೆ ಏನು ಮಾಡ್ತೀನೋ ಅದ್ರ ಮೂಲಕ ನಾನು ಪವಿತ್ರನು ಅಂತ ತುಂಬ ಜನಾಂಗಗಳಿಗೆ ತೋರಿಸ್ತೀನಿ.’+

28 ‘ನಾನು ಅವ್ರನ್ನ ಬೇರೆ ದೇಶಗಳಿಗೆ ಕೈದಿಗಳಾಗಿ ಕಳಿಸಿ, ಆಮೇಲೆ ಅವ್ರಲ್ಲಿ ಒಬ್ಬರನ್ನೂ ಬಿಡದೆ ಎಲ್ಲರನ್ನೂ ಒಟ್ಟುಸೇರಿಸಿ ಅವ್ರ ದೇಶಕ್ಕೆ ಕರ್ಕೊಂಡು ಬಂದಾಗ ಯೆಹೋವನಾದ ನಾನೇ ಅವ್ರ ದೇವರು ಅಂತ ಅವ್ರಿಗೆ ಗೊತ್ತಾಗುತ್ತೆ.+ 29 ಅದಾದ್ಮೇಲೆ ನಾನು ಅವ್ರನ್ನ ಇನ್ಯಾವತ್ತೂ ಬಿಟ್ಟುಬಿಡಲ್ಲ.*+ ಯಾಕಂದ್ರೆ ಇಸ್ರಾಯೇಲ್ಯರ ಮೇಲೆ ನಾನು ನನ್ನ ಪವಿತ್ರಶಕ್ತಿಯನ್ನ ಸುರಿತೀನಿ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ